ನೀತು ಡೇವಿಡ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ನೀತು ಲಾರೆನ್ಸ್ ಡೇವಿಡ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಕಾನ್ಪುರ್, ಉತ್ತರ ಪ್ರದೇಶ, ಭಾರತ | 1 September 1977|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ನಿಧಾನಗತಿಯ ಎಡಗೈ ಆರ್ಥೊಡಾಕ್ಸ್ | |||||||||||||||||||||||||||||||||||||||||||||||||||||||||||||||||
ಪಾತ್ರ | ಚೆಂಡು ಎಸೆಯುವವರು | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೩೯) | ೭ ಫೆಬ್ರವರಿ ೧೯೯೫ v ನ್ಯೂಜಿಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೧೮ ಫೆಬ್ರವರಿ ೨೦೦೬ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೪೩) | ೧೨ ಫೆಬ್ರವರಿ ೧೯೯೫ v ನ್ಯೂಜಿಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೭ ಸೆಪ್ಟೆಂಬರ್ ೨೦೦೮ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೧೯೯೨/೯೩–೧೯೯೪/೯೫ | ಉತ್ತರ ಪ್ರದೇಶ | |||||||||||||||||||||||||||||||||||||||||||||||||||||||||||||||||
೧೯೯೬/೯೭–೨೦೧೨/೧೩ | ರೈಲ್ವೆಗಳು | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: CricketArchive, 15 August 2022 | ||||||||||||||||||||||||||||||||||||||||||||||||||||||||||||||||||
Medal record
|
ನೀತು ಲಾರೆನ್ಸ್ ಡೇವಿಡ್ (ಜನನ ೧ ಸೆಪ್ಟೆಂಬರ್ ೧೯೭೭) ಇವರು ಭಾರತೀಯ ಮಾಜಿ ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.[೧] ಇವರು ನಿಧಾನಗತಿಯ ಎಡಗೈ ಆರ್ಥೊಡಾಕ್ಸ್ ಬೌಲರ್ ಆಗಿ ಆಡಿದರು. ೧೯೯೫ ಮತ್ತು ೨೦೦೮ ರ ನಡುವೆ ಅವರು ಭಾರತಕ್ಕಾಗಿ ೧೦ ಟೆಸ್ಟ್ ಪಂದ್ಯಗಳು ಮತ್ತು ೯೭ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಅವರು ಉತ್ತರ ಪ್ರದೇಶ ಮತ್ತು ರೈಲ್ವೆಗಾಗಿ ದೇಶೀಯ ಕ್ರಿಕೆಟ್ ಆಡಿದರು.[೨][೩]
ನವೆಂಬರ್ ೧೯೯೫ ರಲ್ಲಿ, ಇಂಗ್ಲೆಂಡ್ ವಿರುದ್ಧ ೮/೫೩ ವಿಕೆಟ್ ಪಡೆಯುವ ಮೂಲಕ ಡೇವಿಡ್‌ರವರು ಮಹಿಳಾ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ.[೪] ಈ ಪಂದ್ಯದಲ್ಲಿ ಅವರ ಬೌಲಿಂಗ್ ಅಂಕಿಅಂಶಗಳು ೯/೯೦ ಆಗಿತ್ತು.[೫] ಇದರಲ್ಲಿ, ಭಾರತವು ಎರಡು ರನ್‌ಗಳಿಂದ ಸೋತಿತು.[೬] ಇವು ಮಹಿಳಾ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳಾಗಿವೆ.[೭][೮] ಅವರು ವಿಶ್ವ ಟಿ ಕ್ರಿಕೆಟ್‍ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ಸಾರ್ವಕಾಲಿಕ ವಿಕೆಟ್ ಪಡೆದವರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಎರಡನೇ ಅತಿ ಹೆಚ್ಚು ಸಾರ್ವಕಾಲಿಕ ವಿಕೆಟ್ ಪಡೆದವರು. ಅವರು ೧೦೦ ಏಕದಿನ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆಗಿದ್ದರು.[೯]
೨೦೦೬ ರ ರಾಣಿ ಝಾನ್ಸಿ ಟ್ರೋಫಿಯ ನಂತರ, ಡೇವಿಡ್‌ರವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು..[೧೦][೧೧] ಫೈನಲ್‌ನಲ್ಲಿ ಏರ್ ಇಂಡಿಯಾ ವಿರುದ್ಧ ರೈಲ್ವೇಸ್ ಪರ ೩/೧೯ ಪಂದ್ಯ ವಿಜೇತ ಅಂಕಿಅಂಶಗಳೊಂದಿಗೆ ಗೆದ್ದರು. ಆದರೆ, ಅವರು ೨೦೦೮ ರಲ್ಲಿ, ಈ ನಿರ್ಧಾರವನ್ನು ಬದಲಾಯಿಸಿದರು. ತರುವಾಯ ಭಾರತದ ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾದರು. ಅವರು ೨೦೦೮ ರಲ್ಲಿ, ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು.[೧೨] ಅವರು ೨೦೧೩ ರಲ್ಲಿ, ತಮ್ಮ ಕೊನೆಯ ದೇಶೀಯ ಪಂದ್ಯವನ್ನು ಆಡಿದರು. ರೈಲ್ವೆಯೊಂದಿಗೆ ೨೦೧೨–೧೩ ರ ಹಿರಿಯ ಮಹಿಳಾ ಟಿ ೨೦ ಲೀಗ್‌ನ ಫೈನಲ್ ಗೆದ್ದರು.[೧೩]
ಸೆಪ್ಟೆಂಬರ್ ೨೦೨೦ ರಲ್ಲಿ, ಭಾರತದ ಮಹಿಳಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಡೇವಿಡ್ ಅವರ ನೇಮಕವನ್ನು ಘೋಷಿಸಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Neetu David to lead new Indian women's selection committee". ESPNcricinfo. Retrieved 15 August 2022.
- ↑ "Player Profile: Neetu David". ESPNcricinfo. Retrieved 15 August 2022.
- ↑ "Player Profile: Neetu David". CricketArchive. Retrieved 15 August 2022.
- ↑ "Records/Women's Test Matches/Bowling Records/Best Figures in an Innings". ESPNcricinfo. Retrieved 15 August 2022.
- ↑ "Full Scorecard of ENG Women vs IND Women 2nd Test 1995/96 - Score Report". ESPNcricinfo. Retrieved 2022-11-19.
- ↑ "Records. Women's Test matches. Bowling records. Best figures in a match when on the losing side". ESPNcricinfo. Retrieved 2022-11-19.
- ↑ "Records/Women's Test Matches/Bowling Records/Most wickets". ESPNcricinfo. Retrieved 15 August 2022.
- ↑ "Records/Women's One Day Internationals/Bowling Records/Most wickets". ESPNcricinfo. Retrieved 15 August 2022.
- ↑ "Leading Ladies: First to 100 ODI wickets from each team". Women's CricZone. Archived from the original on 9 ಫೆಬ್ರವರಿ 2022. Retrieved 6 June 2020.
- ↑ "CA details". CricketArchive. Retrieved 2022-11-24.
- ↑ "Neetu David retires from international cricket". ESPNcricinfo. Archived from the original on 27 ಮೇ 2008. Retrieved 15 August 2022.
- ↑ "England Women v India Women, 7th September 2008". CricketArchive. Retrieved 15 August 2022.
- ↑ "Hyderabad Women v Railways Women, 14th March 2013". CricketArchive. Retrieved 15 August 2022.