ನಿಲೋಫ‌ರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಬ್ಬಿ ಸಮುದ್ರದಲ್ಲಿ ಕೇಂದ್ರೀಕೃತಗೊಂಡಿರುವ ನಿಲೋಫರ್ ಚಂಡಮಾರುತ ಬಲಗೊಳ್ಳುವ ಸಾಧ್ಯತೆ ಇದ್ದು, ಗುಜರಾತ್‌ನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಇದು ಶುಕ್ರವಾರ ಕಛ್ ಜಿಲ್ಲೆಯ ನಲಿಯಾ ಗ್ರಾಮದ ಸಮೀಪ ಅಪ್ಪಳಿಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸೌರಾಷ್ಟ್ರ ಮತ್ತು ಕಛ್ಕರಾವಳಿ ಪ್ರದೇಶಗಳಿಗೆ ಬಿರುಸಿನ ಬಿರುಗಾಳಿ ಜತೆಗೆ ಭಾರಿ ಮಳೆಯನ್ನು ನಿಲೋಫರ್ ಹೊತ್ತು ತರಲಿದೆ. ಯಾವುದೇ ಸನ್ನಿವೇಶವನ್ನಾದರೂ ಎದುರಿಸಲು ಆಡಳಿತ ಸನ್ನದ್ಧಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಲೋಫರ್ ಮಾರುತವು ನಲಿಯಾ ಗ್ರಾಮದಿಂದ 1,170 ಕಿ.ಮೀ ದೂರದ ಅರಬ್ಬಿ ಸಮುದ್ರದ ಪಶ್ಚಿಮ ಕೇಂದ್ರ ಭಾಗದಲ್ಲಿ ಕೇಂದ್ರೀಕೃತಗೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸಿದ್ಧತೆ ಪರಿಶೀಲನೆ : ಚಂಡಮಾರುತ ಎದುರಿಸಲು ಗುಜರಾತ್ ಸರಕಾರ ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ‌್ಯಾಚರಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಕೇಂದ್ರವು ಸೋಮವಾರ ಪರಿಶೀಲನೆ ನಡೆಸಿತು. ಸಂಪುಟ ಕಾರ‌್ಯದರ್ಶಿ ಅಜಿತ್ ಸೇಠ್ ನೇತೃತ್ವದ ರಾಷ್ಟ್ರೀಯ ವಿಕೋಪ ನಿರ್ವಹಣೆ ಸಮಿತಿ ತುರ್ತು ಸಭೆ ಸೇರಿ ಕೇಂದ್ರ ಸಚಿವರು,ಇಲಾಖೆ ಮುಖ್ಯಸ್ಥರು, ರಾಜ್ಯ ಸರಕಾರದ ಪ್ರತಿನಿಧಿಗಳ ಜತೆ ಪರಿಹಾರ ಮತ್ತು ರಕ್ಷಣಾ ಕಾರ‌್ಯಾಚರಣೆ ಸಿದ್ಧತೆಗಳನ್ನು ಪರಿಶೀಲಿಸಿತು. ಪರಿಸ್ಥಿತಿ ಎದುರಿಸಲು ರಾಜ್ಯ ಸರಕಾರಕ್ಕೆ ಸಂಪೂರ್ಣ ಅಗತ್ಯ ನೆರವು ನೀಡುವುದಾಗಿ ಕೇಂದ್ರವು ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ಮೂಲ -http://vijaykarnataka.indiatimes.com/articleshow/44952990.cms