ನಿರುಪಮ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿರುಪಮ ರಾವ್

ಯು.ಎಸ್.ಎ.ಗೆ ಭಾರತೀಯ ವಿದೇಶಾಂಗ ರಾಯಭಾರಿ
ಹಾಲಿ
ಅಧಿಕಾರ ಸ್ವೀಕಾರ 
೧ ಆಗಸ್ಟ್ ೨೦೧೧
ಪೂರ್ವಾಧಿಕಾರಿ ಮೀರಾ ಶಂಕರ್

ಭಾರತೀಯ ವಿದೇಶಾಂಗ ಕಾರ್ಯದರ್ಶಿ
ಅಧಿಕಾರ ಅವಧಿ
೩೧ ಜುಲೈ ೨೦೦೯-೩೧ ಜುಲೈ ೨೦೧೧
ಪೂರ್ವಾಧಿಕಾರಿ ಶಿವಶಂಕರ್ ಮೆನನ್
ಉತ್ತರಾಧಿಕಾರಿ ರಂಜನ್ ಮಾಥೈ
ವೈಯಕ್ತಿಕ ಮಾಹಿತಿ
ಜನನ ೬/೧೨/೧೯೫೦
ಮಲಪ್ಪುರಂ, ಕೇರಳ, ಭಾರತ
ರಾಷ್ಟ್ರೀಯತೆ ಭಾರತೀಯ

ನಿರುಪಮ ಮೆನನ್ ರಾವ್ ೧೯೭೩ ಬ್ಯಾಚಿನ ಐ.ಎಫ್.ಎಸ್ (ಭಾರತೀಯ ವಿದೇಶಾಂಗ ಕಾರ್ಯ-ಇಂಡಿಯನ್ ಫಾರಿನ್ ಸರ್ವಿಸ್) ಕಾರ್ಯಕರ್ತೆ ಹಾಗೂ ಯು.ಎಸ್.ಎ.ಗೆ ಹೋಗಿರುವ ಪ್ರಸ್ತುತ ಭಾರತೀಯ ರಾಯಭಾರಿ.ಇದರ ಮುನ್ನ ಎರಡು ವರ್ಷದ ಅವಧಿಗೆ ಇವರು ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಜುಲೈ ೨೦೦೯ರಲ್ಲಿ ಭಾರತದಲ್ಲಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ದರ್ಜೆಯನ್ನು ಹಿಡಿದ ಎರಡನೇ ಮಹಿಳೆ. ಪೆರು, ಚೀನಾ ದೇಶಗಳಿಗೂ ಭಾರತೀಯ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.[೧]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ನಿರುಪಮಾ ರಾವ್ ಅವರು ಕೇರಳದ ಮಲಪ್ಪುರಂನಲ್ಲಿ ೧೯೫೦ರ ಡಿಸೆಂಬರ್ ೬ರಂದು ಜನಿಸಿದರು. ಆಕೆಯ ತಂದೆ ಲೆಫ್ಟಿನೆಂಟ್ ಕರ್ನಲ್ ಪಿ.ವಿ.ಎನ್ ಮೆನನ್ ಭಾರತೀಯ ಸೇನೆಯಲ್ಲಿದ್ದರು. ತಾಯಿ ಮೀಂಪತ್ ನಾರಾಯಣಿಕುಟ್ಟಿ ಅವರ ಕುಟುಂಬದಲ್ಲಿ ಮೊದಲ ಮಹಿಳಾ ಕಾಲೇಜು ಪದವೀಧರರಾಗಿದ್ದರು.ತನ್ನ ತಂದೆಯ ವೃತ್ತಿಯಿಂದಾಗಿ ನಿರುಪಮ ರಾವ್ ಅವರು ಬೆಂಗಳೂರು, ಪುಣೆ, ಲಕ್ನೋ, ಮತ್ತು ಕೂನೂರು ಸೇರಿದಂತೆ ವಿವಿಧ ನಗರಗಳಲ್ಲಿ ಶಿಕ್ಷಣ ಪಡೆದರು. ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ೧೯೭೦ ರಲ್ಲಿ ಇಂಗ್ಲಿಷ್‌ನಲ್ಲಿ ಬಿ.ಎ. ಪದವಿ ಪಡೆದರು[೨]೧೯೭೦ರ ಸೆಪ್ಟೆಂಬರ್ ನಂತರ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಹಾರಾಷ್ಟ್ರದ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಪಡೆದರು. ೧೯೭೩ ರಲ್ಲಿ ನಿರುಪಮ ರಾವ್ ಅವರು ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಆಡಳಿತ ಸೇವೆ ಎರಡಕ್ಕೂ ನಡೆಸಿದ ಅಖಿಲ ಭಾರತ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ಭಾರತೀಯ ವಿದೇಶಿ ಸೇವೆಗೆ ಸೇರಿದರು.[೩]

ವೃತ್ತಿ ಜೀವನ[ಬದಲಾಯಿಸಿ]

ಮಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ೧೯೭೬ರಿಂದ ೧೯೭೭ರವರೆಗೆ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಅವರು ತಮ್ಮ ಜರ್ಮನ್ ಭಾಷಾ ತರಬೇತಿಯನ್ನು ಪೂರ್ಣಗೊಳಿಸಿದರು. ೧೯೭೮ ರಿಂದ ೧೯೮೧ರವರೆಗೆ ನವದೆಹಲಿಯ ವಿದೇಶಾಂಗ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದರು.[೪]೧೯೮೧ ರಲ್ಲಿ ನಿರುಪಮ ರಾವ್ ಅವರನ್ನು ಶ್ರೀಲಂಕಾದ ಭಾರತೀಯ ಹೈಕಮಿಷನ್ನಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ನೇಮಿಸಲಾಯಿತು.[೫]ದೆಹಲಿಗೆ ಹಿಂದಿರುಗಿದ ನಂತರ ೧೯೮೪ ರಿಂದ ೧೯೯೨ರವರೆಗೆ ಸತತ ವಿದೇಶಾಂಗ ಸಚಿವಾಲಯದಲ್ಲಿ ೮ ವರ್ಷಗಳ ಕಾಲ ಪೂರ್ವ ಏಷ್ಯಾ ವಿಭಾಗದಲ್ಲಿ ಸೇವೆ ಸಲ್ಲಿಸಿದರು ಅಂತಿಮವಾಗಿ ೧೯೮೦ರ ದಶಕದ ಕೊನೆಯಲ್ಲಿ ವಿಭಾಗದ ಜಂಟಿ ಕಾರ್ಯದರ್ಶಿಯಾದರು.[೬] ೧೯೮೮ ರ ಡಿಸೆಂಬರ್‌ನಲ್ಲಿ ಬೀಜಿಂಗ್‌ಗೆ ಐತಿಹಾಸಿಕ ಭೇಟಿ ನೀಡಿದಾಗ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ನಿಯೋಗದಲ್ಲಿ ಅವರು ಸದಸ್ಯರಾಗಿದ್ದರು.[೭]

ಭಾರತೀಯ ವಿದೇಶಾಂಗ ಕಾರ್ಯದರ್ಶಿ[ಬದಲಾಯಿಸಿ]

ನಿರುಪಮ ರಾವ್ ಅವರು ೨೦೦೯ನೇ ಆಗಸ್ಟ್ ೧ರಂದು ಶಿವಶಂಕರ್ ಮೆನನ್ ನಂತರ ಭಾರತದ ಎರಡನೇ ಮಹಿಳಾ ವಿದೇಶಾಂಗ ಕಾರ್ಯದರ್ಶಿಯಾದರು.

ಉಲ್ಲೇಖ[ಬದಲಾಯಿಸಿ]

  1. www.business-standard.com/india/news/nirupama-rao-takes-over-as-foreign-secy/69625/on
  2. "Nirupama Rao To Replace Menon As Foreign Secretary". The Economic Times. ET Bureau. 1 July 2009.
  3. "Ex-Foreign Secretary Visits Bamu". The Times of India. Times News Network. 24 June 2016.
  4. Matt Bewig (2 November 2011). "Ambassador From India: Who Is Nirupama Rao". All Gov.
  5. V.S. Sambandan (18 September 2004). "Nirupama Rao presents credentials to Chandrika". The Hindu. Archived from the original on 18 ಜನವರಿ 2015. Retrieved 23 ಜೂನ್ 2019.
  6. C. Raja Mohan (13 June 2001). "Nirupama Rao Takes Over". The Hindu.
  7. "Nirupama Rao awarded Jawaharlal Nehru Fellowship". The Economic Times. PTI. 12 November 2014.