ನಿಧಿ ಎಂ. ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಕುಮಾರಿ ನಿಧಿ ಶೆಟ್ಟಿ ಮುಂಬಯಿನ ೯ ನೆ ಇಯತ್ತೆಯಲ್ಲಿ ಕಲಿಯುತ್ತಿರುವ, ೧೪ ವರ್ಷ ಪ್ರಾಯದ ಹದಿಹರೆಯದ ಬಾಲೆ. ಈ ಪುಟ್ಟ ವಯಸ್ಸಿನಲ್ಲೇ ಭರತ ನಾಟ್ಯ ಕಲಿತು ಆ ಕ್ಷೇತ್ರದಲ್ಲೇ ಶ್ರಮಿಸುತ್ತಾ ಒಳ್ಳೆಯ ಸಾಧನೆಯನ್ನು ಮಾಡಿ ಉತ್ತಮ ಕಲಾವಿದೆಯೆಂದು ಗುರುತಿಸಿಕೊಂಡಿರುವ ಕು.ನಿಧಿ ಎಂ.ಶೆಟ್ಟಿ, ಮುಂಬಯಿನ ಪಶ್ಚಿಮ ಬಡಾವಣೆಯ ಮೀರಾರೋಡ್ ಉಪನಗರದ ನಿವಾಸಿಯಾಗಿದ್ದಾಳೆ. ಈ ಬಾಲಕಲಾವಿದೆಯ ನೃತ್ಯಕ್ಕೆ ತಕ್ಕ ಸದೃಢ ಶಾರೀರ, ಆಸಕ್ತಿ, ಏನನ್ನಾದರೂ ಸಾಧಿಸುವ ಹುಮ್ಮಸ್ಸು ಅದಕ್ಕೆ ತಕ್ಕ ಪರಿಶ್ರಮ, ಮತ್ತು ಸರ್ವತೋಮುಖ ಪ್ರಗತಿಯನ್ನು ಮೆಚ್ಚಿ, ಉಡುಪಿ ಮಠದ ಸ್ವಾಮಿಗಳು, ಕೇಮಾರು ಈಶ ವಿಠಲದಾಸ ಸ್ವಾಮಿಜಿಯವರ ಮೆಚ್ಚುಗೆಯ ಆಶೀರ್ವಾದ ಪಡೆದಿದ್ದಾಳೆ. ಮೀರಾರೋಡ್ ಶಿಬಿರದ ಚಿಣ್ಣರ ಬಿಂಬದ ಪ್ರತಿಭಾನ್ವಿತ ಜಾಣಮಕ್ಕಳ ಸಾಲಿನಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಾಳೆ. ಮನೆಯಲ್ಲಿ ತುಳು ಮಾತಾಡುವ ಪರಿವಾರದಲ್ಲಿ ಜನಿಸಿದ ನಿಧಿ,ಕನ್ನಡ ಕಲಿತು, ಸೆಮಿಸ್ಟರ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದಾಳೆ. ನೃತ್ಯ, ಜಾನಪದ ಸಮೂಹಗೀತೆ, ಭಜನೆ, ಏಕಪಾತ್ರಾಭಿನಯ, ಇತ್ಯಾದಿ ಕಲಾಪ್ರಕಾರಗಳಲ್ಲಿ ನಿರಂತರ ತನ್ನನ್ನು ಸಕ್ರಿಯವಾಗಿರಿಸಿಕೊಂಡು ಮುನ್ನುಗ್ಗುತ್ತಿರುವ ಬಾಲಪ್ರತಿಭೆಯಾಗಿದ್ದಾಳೆ. ಶ್ರೀ.ಸದಾನಂದ ಶೆಟ್ಟಿಯವರ ಗರಡಿಯಲ್ಲಿ ಯಕ್ಷಗಾನ ಕಲಿತು, ಕಟೀಲು ಕ್ಷೇತ್ರ ಮಹಿಮೆ ಎಂಬ ಯಕ್ಷಗಾನ ಪ್ರಸಂಗದಲ್ಲಿ ಅಭಿನಯಿಸಿ, ಒಳ್ಳೆಯ ಯಕ್ಷಗಾನ ಬಾಲಕಲಾವಿದೆ ಎಂದು ಗುರುತಿಸಿಕೊಂಡಿದ್ದಾಳೆ.

ಪರಿವಾರ[ಬದಲಾಯಿಸಿ]

ಕರಂದಾಡಿ ಬರ್ಪಾಣಿ ಮೋಹನ್ ಶೆಟ್ಟಿ, ಮತ್ತು ಬೆಳ್ಳಂಪಳ್ಳಿ ಹಳೆಮನೆ ವೀಣಾ ಎಂ.ಶೆಟ್ಟಿ ದಂಪತಿಗಳ ಪ್ರೀತಿಯ ಪುತ್ರಿ. ಮೀರಾರೊಡ್‍ನಲ್ಲಿ ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ಕಲಿಯುತ್ತಿದ್ದಾಳೆ.

ಭರತನಾಟ್ಯದ ಗುರುಗಳು[ಬದಲಾಯಿಸಿ]

 • ಕು.ನಿಧಿ ಶೆಟ್ಟಿಯ ಭರತನಾಟ್ಯ ನೃತ್ಯಾಭ್ಯಾಸ, ಕಾಂದೀವಲಿಯ ಚಾರ್ಕೊಪ್ ನ, ನೃತ್ಯ ನಿಕೇತನದ ಗುರು, ಶೈಲಜಾ ಮೆನನ್ ರವರ ತರಬೇತಿಯಿಂದ ಪ್ರಾರಂಭವಾಯಿತು. ನಂತರ,
 • ಮೀರಾರೋಡ ನ ನೃತ್ಯ ಶಿಕ್ಷಕಿ, ರಾಧಾಕೃಷ್ಣ ನೃತ್ಯ ಅಕಾಡೆಮಿಯ ಸಂಚಾಲಕಿ, ಗುರು ಸುಕನ್ಯಾ ಭಟ್‍ರವರ ಶಿಷ್ಯತ್ವದಲ್ಲಿ ಮುಂದುವರೆಯುತ್ತಿದೆ. ನಿಧಿ, ಭರತ ನಾಟ್ಯದ ಜೊತೆಗೆ ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ, ನಾಟಕ, ಹಾಗೂ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಹಲವಾರು ಪಾರಿತೋಷಕಗಳನ್ನು ಗೆದ್ದಿದ್ದಾಳೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

 • ಟ್ಯಾಗ್ ಟ್ರವರ್ಡ್ ಅಕ್ಯಾಡೆಮಿಯ, ಕಂಪ್ಯೂಟರ್ ಪ್ರತಿಭಾ ಸ್ಪರ್ಧೆಯಲ್ಲಿ ಉತ್ತಮ ವಿದ್ಯಾರ್ಥಿನಿ,
 • ದಾದರ್ ನ, ಲಲಿತ ಕಲಾ ಮಹೋತ್ಸವದವರು ಆಯೋಜಿಸಿದ ಇಂಗ್ಲೀಷ್ ನಾಟಕದಲ್ಲಿ ದ್ವಿತೀಯ ಬಹುಮಾನ,
 • ಕಾಂದೀವಲಿ ಬೋಯ್ಸರ್ ಜಮ್ಖಾನದಲ್ಲಿ ಜರುಗಿದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ,
 • ೧೦೦ ಮೀಟರ್ ಸ್ಪ್ರಿಂಟ್ ಓಟದಲ್ಲಿ ದ್ವಿತೀಯ ಬಹುಮಾನ,
 • ೨೦೦ ಮೀಟರ್ ಓಟದ ಕ್ರೀಡೆಯಲ್ಲಿ ತೃತೀಯ ಬಹುಮಾನ,
 • ೨೦೦೮ ರಲ್ಲಿ ಮುಂಬಯಿ ಅಂತರ ಶಾಲಾ ಫೋಕ್ ಡಾನ್ಸ್ ಆಫ್ ಇಂಡಿಯ ಸ್ಪರ್ಧಾಕೂಟದಲ್ಲಿ ಪ್ರಾಥಮಿಕ ವಲಯದಲ್ಲಿ ದ್ವಿತೀಯ ಬಹುಮಾನ.
 • ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ನ ಸಮೂಹ ನೃತ್ಯದಲ್ಲಿ ಪ್ರಥಮ, ದ್ವಿತೀಯ ಬಹುಮಾನ.
 • ಬೋರಿವಲಿಯ ವಿಶ್ವ ಮಹಿಳಾ ದಿನಾಚರಣೆಯಂದು ದಹಿಸರ್ ಕರ್ನಾಟಕ ಸಂಘ ಆಯೋಜಿಸಿದ ಮನಿಕಂಠ ಮಹಿಮೆ ಪ್ರಸಂಗದಲ್ಲಿ ಮೋಹಿನಿಯ ಪಾತ್ರವಹಿಸಿದ್ದಳು.
 • ರಾಧಾಕೃಷ್ಣ ನೃತ್ಯ ನಿಕೇತನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಣಿಕಂಠ ಮಹಿಮೆ ಪ್ರಸಂಗದಲ್ಲಿ ಈ ಬಾರಿ, ಮಹಿಷಾಸುರನ ಪಾತ್ರವಹಿಸಿ ಜನರ ಪ್ರೀತಿಗೆ ಪಾತ್ರಳಾದಳು.
 • ವಾರ್ಷಿಕೋತ್ಸವದಲ್ಲಿ ಶನೀಶ್ಚರ ಮಹಾತ್ಮೆ ನೃತ್ಯ ರೂಪಕದಲ್ಲಿ ಶನೀಶ್ಚರನ ಪ್ರಮುಖ ಪಾತ್ರವಹಿಸಿದ್ದಳು.
 • ಬೋಯ್ಸರ್ ನ ಮೀರಾ-ದಹಾನು ಬಂಟ್ಸ್ ಸಂಘ ಸಮೂಹನೃತ್ಯದಲ್ಲಿ ದ್ವಿತೀಯ ಬಹುಮಾನ ಗಳಿಸಿದಳು.
 • ಮದರ್ ಇಂಡಿಯ ಫ್ರೀ ನೈಟ್ ಹೈಸ್ಕೂಲ್ ಹಳೆಯ ವಿದ್ಯಾರ್ಥಿ ಸಂಘ ಮತ್ತು ಜನತಾ ಶಿಕ್ಷಣ ಸಂಘ ಜಂಟಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಭಾರತ ನಾಟ್ಯ ಸಮೂಹ ನೃತ್ಯದಲ್ಲಿ ದ್ವಿತೀಯ ಬಹುಮಾನ ಪಡೆದಳು.
 • ಇರ್ಮಾಡಿಯಲ್ಲಿ ಬಂಟರ ಸಂಘದ ಉದ್ಘಾಟನಾ ಸಮಾರಂಭ ವಿವಿಧ ನೃತ್ಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರಳಾದಳು.
 • ಮುಂಬಯಿನ ಪದ್ಮನಾಭ ಸಸಿಹಿತ್ಲು ಮತ್ತು ರಂಗನಾಥ ಕೃಷ್ಣರಾಜ ಶೆಟ್ಟಿ ನಿರ್ದೇಶಿಸಿದ, ಕಲಾಸೌರಭ ದಿವ್ಯ ದರ್ಶ ಆಲ್ಬಮ್ ನಲ್ಲಿ ಕೆಲಸಮಾಡಿದಳು.
 • ೨೦೧೧ ರ ಸಾಲಿನ, ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಅಕಾಡೆಮಿಯವರು ನೀಡುವ ಅರಳು ಮಲ್ಲಿಗೆ ಪ್ರಶಸ್ತಿಗೆ ಪಾತ್ರಳಾದಳು.
 • ಬೈಂದರ್ ಮೀರಾರೊಡ್, ಯಕ್ಷ ಕಲಾವೇದಿಕೆ,
 • ಬೈಂದರ್ ನ ಕರ್ನಾಟಕ ಸಂಘ,
 • ಮಾಟುಂಗಾದ ಕನ್ನಡ ಸೇವಾಸಂಘ,
 • ಭಾರತ ವಿಕಾಸ ರತ್ನ, ಹಾಗೂ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ.

ಮೇಲೆ ತಿಳಿಸಿದ ಪ್ರಶಸ್ತಿಗಳನ್ನು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ ಆಯೋಜಿಸಿದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ಸಮಾವೇಶ ಮತ್ತು ಸಾಂಸ್ಕೃತಿಕ ಪ್ರತಿಭೋತ್ಸವಲ್ಲಿ ವೇದಿಕೆಯ ಮೇಲಿದ್ದ ಗಣ್ಯ ಅತಿಥಿಗಳ ಹಸ್ತದಿಂದ ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.