ನಿದ್ರೆಯ ಹೊರೆ ತಿಳಿಸುವ ಜೊಲ್ಲು

ವಿಕಿಪೀಡಿಯ ಇಂದ
Jump to navigation Jump to search


ನಿದ್ರೆ ಎಲ್ಲರಿಗೂ ಅವಶ್ಯಕವಾದ ವಿಷಯ.ಪ್ರಾಣಿಗಳಿಗೂ ಕೂಡ ಇದು ಅವಶ್ಯಕ ಎಂದ ವಿಜ್ಞಾನಿಗಳು ತಿಳಿಸಿದ್ದಾರೆ.ನಾವು,ನೀವು ನಂಬಿದಂತೆ ಆನೆ,ಕುದುರೆಗಳು ಯಾವಾಗಲೂ ಎಚ್ಚರವಾಗಿರುವುದಿಲ್ಲ.ಅವುಗಳೂ ನಿತ್ಯ ನಿದ್ರಾದೇವಿಯನ್ನು ಆಲಂಗಿಸುತ್ತದೆ.ಕೀಟಗಳೂ ನಿದ್ರೆ ಮಾಡುತ್ತವೆ ಎಂದರೆ ಖಂಡಿತ ಅಚ್ಚರಿಪಡುತ್ತೀರಿ.ವಿಚಿತ್ರವಾದರೂ ಇದು ನಿಜ.ವಿಜ್ಞಾನಿಗಳು ನಿದ್ರೆ ಅತ್ಯಂತ ಅವಶ್ಯಕ ಹಾಗು ಸ್ವಾಭಾವಿಕ ಎನ್ನುತ್ತಾರೆ.ಅಷ್ಟೇ ಅಲ್ಲ ನಿತ್ಯವೂ ಇಂತಿಷ್ಟು ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕವಂತೆ.ಹಾಗೆಂದು ಯಾವಾಗೆಂದರೆ ಆವಾಗ ನಿದ್ರೆ ಮಾಡಲಾಗದು.ರಾತ್ರಿಯ ಹೊತ್ತು ಬರುವಷ್ಟು ಸಹಜವಾಗಿ ಬೆಳಗಿನ ಹೊತ್ತು ಬರುವುದಲ್ಲ.ಇದನ್ನು ವಿಜ್ಞಾನಿಗಳು ನಿದ್ರೆಯ ಚಕ್ರ ಎಂದು ಕರೆದಿದ್ದಾರೆ.ಹೆಚ್ಚೆಚ್ಚು ನಿದ್ರೆಗೆಟ್ಟಷ್ಟೂ,ಹೆಚ್ಚೆಚ್ಚು ಹೊರೆಯಾಗುತ್ತದೆ.ಕೊನೆಗೊಮ್ಮೆ ಈ ಹೊರೆ ಎಷ್ಟು ಭಾರವಾಗುತ್ತದೆಂದರೆ,ಅದು ರಾತ್ರಿ ಇರಲಿ,ಹಗಲೇ ಇರಲಿ,ನಮ್ಮ ಶರೀರ ನಿದ್ರಾವಶವಾಗಿ ಬಡುತ್ತದೆ.ನಿದ್ರೆಯ ಹೊರೆ ಇದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ? ನಿದ್ರೆಯ ಹೊರೆ ಎಷ್ಟಿದೆ ಎಂದು ಗುರುತಿಸುವುದು ಹೇಗೆ?ಈ ಪ್ರಶ್ನಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಪಾಲ್ ಶಾರವರ ತಂಡ ಸಂಶೋಧನೆ ನಡೆಸಿತು.ಜೊಲ್ಲಿನಲ್ಲಿ ನಿದ್ರೆಯ ಹೊರೆಯನ್ನು ತಿಳಿಸಿಕೊಡುವಂತಹ ವಸ್ತುವೊಂದಿದೆ ಎಂದು ಪತ್ತೆ ಹಚ್ಚಿದೆ. ಶಾರವರ ತಂಡ ಡ್ರೊಸೊಫಿಲಗಳ ನಿದ್ರೆಗೆಡಿಸಿ ಅವುಗಳ ತಲೆಯನ್ನು ಅರೆದು ,ನಿದ್ರೆಗೆಟ್ಟ ನೊಣಗಳ ತಲೆಯಲ್ಲಿ ಇರಬಹುದಾದ ವ್ಯತ್ಯಸಗಳನ್ನು ಪತ್ತೆ ಮಾಡಿತು. ಇದರಲ್ಲಿ ಪ್ರಮುಖವಾದುದು ಜೊಲ್ಲಿನಲ್ಲಿ ಇರುವ ಅಮೈಲೇಸ್ ಎನ್ನುವ ಕಿಣ್ವ,ಅಕ್ಕಿ ,ಅವಲಕ್ಕಿಯನ್ನು ತಿಂದಾಗ ಬಾಯಿ ಸಿಹಿ ಮಾಡುವ ಈ ಕಿಣ್ವ ಸಾಮಾನ್ಯವಾಗಿ ಪಿಷ್ಟ ಪದಾರ್ಥಗಳನ್ನು ಜೀರ್ಣಿಸುವ ರಾಸಾಯನಿಕ.ಆದರೆ ನಿದ್ರೆಯ ಹೊರೆ ಇರುವ ನೊಣಗಳಲ್ಲಿ ಇದರೆ ಪ್ರಮಾಣ ಸಾಧಾರಣಕ್ಕಿಂತಲೂ ಹೆಚ್ಚಿತ್ತು.ಮಾನವನಲ್ಲಿಯೂ ಇದು ಹೆಚ್ಚಿರಬಹುದೇ ಎಂದು ಪರೀಕ್ಷಿಸಲು ಶಾರವರ ತಂಡ ೯ ಜನರ ಮೇಲೆ ಪ್ರಯೋಗ ಮಾಡಿತು.ಇವರನ್ನು ಸುಮಾರು ೨೮ ಗಂಟೆಗಳ ಕಾಲ ನಿದ್ರೆಯಿಲ್ಲದಂತೆ ಮಾಡಿ,ಅವರ ಜೊಲ್ಲಿನಲ್ಲಿರುವ ಅಮೈಲೇಸ್ ಅಂಶವನ್ನು ಪರೀಕ್ಷೀಸಿತು.ನಿದ್ರೆಗೆಟ್ಟವರಲ್ಲಿ ಅಮೈಲೇಸ್ ಕಿಣ್ವ ಹಾಗು ಅದರ ತಯಾರಿಕೆಯಲ್ಲಿ ಪ್ರಮುಖವಾದ ಅಮೈಲೇಸ್ ಎಂ.ಆರ್.ಎನ್.ಎ ಇಮ್ಮಡಿ ಪ್ರಮಾಣದಲ್ಲಿದ್ದುವು ಎಂದು ಶಾರವರ ತಂಡ ವರದಿ ಮಾಡಿದೆ.