ವಿಷಯಕ್ಕೆ ಹೋಗು

ನಿತ್ಯಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jasminum flexile
ವೈಜ್ಞಾನಿಕ ವರ್ಗೀಕರಣ Edit this classification
Kingdom: ಪ್ಲಾಂಟೇ
Clade: ಹೂಬಿಡುವ ಸಸ್ಯ
Clade: ಯೂಡಿಕಾಟ್‌ಗಳು
Clade: ಆಸ್ಟರಿಡ್ಸ್
Order: ಲ್ಯಾಮಿಯೇಲ್ಸ್
Family: ಓಲಿಯೇಸೀ
Genus: ಜಾಸ್ಮಿನಮ್
Species:
J. flexile
ದ್ವಿನಾಮ ಪದ್ಧತಿ
Jasminum flexile

ನಿತ್ಯಮಲ್ಲಿಗೆ ಜಾಸ್ಮಿನಮ್ ಫ್ಲೆಕ್ಸೈಲ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಮಲ್ಲಿಗೆಯ ಒಂದು ಪ್ರಭೇದ.[೧][೨] ಅಸ್ಸಾಮಿನ ಹಾಗೂ ದಕ್ಷಿಣ ಭಾರತದ ಮೈದಾನದಿಂದ ಹಿಡಿದು ಸು.1500 ಮೀ ಎತ್ತರದ ಪ್ರದೇಶಗಳಲ್ಲಿ ಸಾಮಾನ್ಯ.

ಗುಣಲಕ್ಷಣಗಳು

[ಬದಲಾಯಿಸಿ]

ಹಂಬಿನ ರೂಪದಲ್ಲಿ ಬೆಳೆಯುತ್ತದೆ. ಎಲೆಗಳು ಸಂಯುಕ್ತ ರೀತಿಯವು; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದರಲ್ಲೂ 3 ಪತ್ರಕಗಳಿದ್ದು ತುದಿಯಲ್ಲಿರುವ ಪತ್ರಕ ಉಳಿದವಕ್ಕಿಂತ ದೊಡ್ಡದಾಗಿರುತ್ತದೆ. ಹೂಗಳು ಸೀಮಾಕ್ಷಿ ರೀತಿಯ ಮಂಜರಿಗಳಲ್ಲಿ ಅರಳುವುವು. ದಳಗಳು ಚೂಪು ತುದಿಯುಳ್ಳವು. ಇದು ಸಹ ವರ್ಷವಿಡೀ ಹೂಬಿಡುವುದಾದರೂ ಚಳಿಗಾಲದಲ್ಲಿ ಹೂಗಳ ಸಮೃದ್ಧಿ ಹೆಚ್ಚು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: