ವಿಷಯಕ್ಕೆ ಹೋಗು

ನಿಕಿತ ಸೆರ್ಗೆವಿಚ್ ಕ್ರುಶ್ಚಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nikita Khrushchev
Никита Хрущёв
Khrushchev in 1954

ಅಧಿಕಾರ ಅವಧಿ
7 September 1953  14 October 1964
ಪೂರ್ವಾಧಿಕಾರಿ Georgy Malenkov (de facto)
ಉತ್ತರಾಧಿಕಾರಿ Leonid Brezhnev

ಅಧಿಕಾರ ಅವಧಿ
27 March 1958  14 October 1964
ರಾಷ್ಟ್ರಪತಿ Kliment Voroshilov
Leonid Brezhnev
Anastas Mikoyan
First Deputies
ಪೂರ್ವಾಧಿಕಾರಿ Nikolai Bulganin
ಉತ್ತರಾಧಿಕಾರಿ Alexei Kosygin

ಅಧಿಕಾರ ಅವಧಿ
26 December 1947  16 December 1949
ಪೂರ್ವಾಧಿಕಾರಿ Lazar Kaganovich
ಉತ್ತರಾಧಿಕಾರಿ Leonid Melnikov
ಅಧಿಕಾರ ಅವಧಿ
27 January 1938  3 March 1947
ಪೂರ್ವಾಧಿಕಾರಿ Stanislav Kosior
ಉತ್ತರಾಧಿಕಾರಿ Lazar Kaganovich
ವೈಯಕ್ತಿಕ ಮಾಹಿತಿ
ಜನನ (೧೮೯೪-೦೪-೧೫)೧೫ ಏಪ್ರಿಲ್ ೧೮೯೪
Kalinovka, Dmitriyevsky Uyezd, Russia
ಮರಣ 11 September 1971(1971-09-11) (aged 77)
Moscow, Soviet Union
ಸಮಾಧಿ ಸ್ಥಳ Novodevichy Cemetery
ರಾಜಕೀಯ ಪಕ್ಷ CPSU
ಸಂಗಾತಿ(ಗಳು)
  • Yefrosinia Pisareva(m. ೧೯೧೪
died೧೯೧೯)
ಮಕ್ಕಳು 5, including Leonid and Sergei
ಅಭ್ಯಸಿಸಿದ ವಿದ್ಯಾಪೀಠ Industrial Academy
ಸಹಿ A scrawled "Н Хрущёв"
ಮಿಲಿಟರಿ ಸೇವೆ
Allegiance Russian SFSR
Soviet Union
ಸೇವೆ/ಶಾಖೆ Red Army
ವರ್ಷಗಳ ಸೇವೆ 1918–1921; 1941–1945
Rank Lieutenant general
Commands Soviet Armed Forces
Battles/wars ಟೆಂಪ್ಲೇಟು:Tree list

ಟೆಂಪ್ಲೇಟು:Tree list/end

ಪ್ರಶಸ್ತಿಗಳು Full list
Central institution membership

Other offices held

ನಿಕಿತ ಸೆರ್ಗೆವಿಚ್ ಕ್ರುಶ್ಚಾಫ್ 1894-1971. ಸೋವಿಯೆತ್ ರಾಜಕಾರಣಿ, ಸೋವಿಯೆತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿ (1953-64) ಮತ್ತು ಸೋವಿಯೆತ್ ಒಕ್ಕೂಟದ ಪ್ರಧಾನಿ (1958-64).

ಜನನ ಮತ್ತು ಬಾಲ್ಯ

[ಬದಲಾಯಿಸಿ]

ರಷ್ಯ ಮತ್ತು ಉಕ್ರೇನ್‍ಗಳ ಎಲ್ಲೆಯಲ್ಲಿ, ಕುರ್ಸ್ಕ್ ಪ್ರಾಂತ್ಯದ ಕಾಲಿನೋವ್ಕ್‍ನಲ್ಲಿ ರಷ್ಯದ ಗಣಿ ಕೆಲಸಗಾರನೊಬ್ಬನ ಮಗನಾಗಿ ೧೫,ಎಪ್ರಿಲ್ ೧೮೯೪ರಂದು ಹುಟ್ಟಿದ[]. ಬಾಲ್ಯದಲ್ಲಿ ವಿದ್ಯಾಭ್ಯಾಸವಿಲ್ಲದೆ ಕುರಿಗಳನ್ನು ಕಾಯ್ದ. ತರುಣನಾದ ಮೇಲೆ ಯಂತ್ರಾಗಾರಗಳಲ್ಲಿ, ಗಣಿಗಳಲ್ಲಿ ದುಡಿದ; ದಕ್ಷ, ಬುದ್ಧಿವಂತ ಎಂದು ಹೆಸರು ಗಳಿಸಿದ. ಉಚ್ಚ ವೃತ್ತಿ ಶಿಕ್ಷಣ ಮತ್ತು ರಾಜಕೀಯ ಶಿಕ್ಷಣ ಪಡೆಯಲು ಈತ ಆಯ್ಕೆ ಹೊಂದಿ ಅವುಗಳ ಲಾಭ ಪಡೆದ.

ರಾಜಕೀಯ ಜೀವನ

[ಬದಲಾಯಿಸಿ]

1917ರ ಕ್ರಾಂತಿಯ ಸಮಯದಲ್ಲಿ ಯುಜೊóೀವ್ಕಪ್ರಾಂತ್ಯದ ರೆಡ್ ಗಾಡ್ರ್ಸ್ ಪಡೆ ಸೇರಿದ. 1918ರಲ್ಲಿ, ಸಾಮಾನ್ಯ ಸದಸ್ಯನಾಗಿ ಕಮ್ಯೂನಿಸ್ಟ್ ಪಕ್ಷವನ್ನು ಸೇರಿದ ಸುಮಾರು ಇಪ್ಪತ್ತು ವರ್ಷಗಳ ದುಡಿಮೆಯಿಂದಾಗಿ ಪಕ್ಷದಲ್ಲಿ ಈತನ ಪ್ರಭಾವ ಬೆಳೆಯಿತು. ಅಂದಿನ ರಷ್ಯದ ಅತ್ಯಂತ ಬಲಿಷ್ಠ ವ್ಯಕ್ತಿ ಸರ್ವಾಧಿಕಾರಿ ಸ್ಟಾಲಿನನ ಮೆಚ್ಚುಗೆಗೆ ಪಾತ್ರನಾದ. 1938ರಲ್ಲಿ ಉಕ್ರೇನಿನ ಕಮ್ಯೂನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿ ಸ್ಥಾನ ಇವನಿಗೆ ದೊರಕಿತು. 1939ರ ಮಾರ್ಚ್ ತಿಂಗಳಲ್ಲಿ ಪಕ್ಷದ ಅತ್ಯುನ್ನತ ಕಾರ್ಯಮಂಡಲಿಯ ಸದಸ್ಯತ್ವವೂ ಇವನ ಪಾಲಿಗೆ ಬಂದು, ಪಕ್ಷದ ಗಣ್ಯ ವ್ಯಕ್ತಿಗಳಲ್ಲಿ ಈತ ಸೇರುವಂತಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಉಕ್ರೇನಿನಲ್ಲಿ ಪಕ್ಷದ ಮತ್ತು ಸರ್ಕಾರದ ನಾಯಕನಾಗಿದ್ದು ಸ್ಟಾಲಿನ್‍ಗ್ರಾಡಿನ ರಕ್ಷಣೆಯ ವ್ಯವಸ್ಥೆ ಮಾಡಿದ್ದೇ ಅಲ್ಲದೆ, ಯುದ್ಧಾನಂತರ ಜರ್ಮನ್ ಸೈನ್ಯಗಳು ವಾಪಸಾದಾಗ ಅಲ್ಲಿಯ ಪಕ್ಷದ ಮತ್ತು ಸರ್ಕಾರದ ಕಾರ್ಯಗಳನ್ನು ನಿರ್ವಹಿಸಿದ. 1952ರಲ್ಲಿ ಪಕ್ಷದ ಅಧ್ಯಕ್ಷ ಮಂಡಲಿ ರೂಪುಗೊಂಡಾಗ ಅದರ ಸದಸ್ಯತ್ವವೂ ಇವನಿಗೆ ಲಭಿಸಿತು.

ರಾಜಕೀಯ ಉನ್ನತಿ

[ಬದಲಾಯಿಸಿ]

1953ರಲ್ಲಿ ಸ್ಟಾಲಿನನ ಸಾವು ಸಂಭವಿಸಿತು. ಅದರ ಪರಿಣಾಮವಾದ ರಾಜಕೀಯ ಬದಲಾವಣೆಗಳಲ್ಲಿ ಕ್ರುಶ್ಚಾಫ್ ಪಕ್ಷದ ಅತ್ಯಂತ ಪ್ರಭಾವಶಾಲಿ ಸ್ಥಾನವಾದ ಪ್ರಥಮ ಕಾರ್ಯದರ್ಶಿ ಪದವಿಗೇರಿದ. ಹೊಸ ಹೊಸ ಕಾರ್ಯಕ್ರಮ ಮತ್ತು ಕಾರ್ಯನೀತಿ ಮಂಡಿಸಿದ. ಇದರಿಂದಾಗಿ ಇತರ ನಾಯಕರೊಡನೆ ಘರ್ಷಣೆ ಉಂಟಾಯಿತು. ದೀರ್ಘಕಾಲದ ಹೋರಾಟದ ಅನಂತರ ಕ್ರುಶ್ಚಾಫನ ಕೈಮೇಲಾಯಿತು. 1958ರ ಮಾರ್ಚ್ ತಿಂಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯ ಜೊತೆಗೆ ರಾಷ್ಟ್ರದ ಪ್ರಧಾನಿಯೂ ಆದ. ಸುಮಾರು ಆರೂವರೆ ವರ್ಷಗಳ ಕಾಲ ಈ ಎರಡೂ ಅಧಿಕಾರಗಳನ್ನು ತನ್ನ ಕೈಯಲ್ಲಿಟ್ಟುಕೊಂಡು, ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬನಾಗಿ ಬಾಳಿದ ; ಆದರೂ 1964ರ ಅಕ್ಟೋಬರ್ 15ರಂದು ವಿರೋಧಿಗಳಿಗೆ ಮಣಿದು ತನ್ನ ಅಧಿಕಾರ ಸ್ಥಾನಗಳಿಂದ ಕೆಳಗಿಳಿಯಬೇಕಾಯಿತು.

1971ರ ಸೆಪ್ಟೆಂಬರ್ 11ರಂದು ಕ್ರುಶ್ಚಾಫ್ ಮರಣ ಹೊಂದಿದ.

ಆಡಳಿತ ಮತ್ತು ಅಭಿವೃದ್ಧಿ

[ಬದಲಾಯಿಸಿ]

ಕ್ರುಶ್ಚಾಫನ ಯೋಜನೆಗಳೂ ಸಾಧನೆಗಳೂ ಗಣನೀಯವಾದವು; ಕೆಲವು ದೃಷ್ಟಿಗಳಿಂದ ಕ್ರಾಂತಿಕಾರಕವಾದವು ಕೂಡ. ಇವನು ದಕ್ಷ ವ್ಯವಸ್ಥಾಪಕನೂ ಕಾರ್ಯ ಸಾಧಕನೂ ಆಗಿದ್ದ. ಆದರೂ ಅವನ ಕೆಲವು ಯೋಜನೆಗಳು-ಮುಖ್ಯವಾಗಿ ವ್ಯವಸಾಯೋತ್ಪಾದನೆ ಹೆಚ್ಚಿಸುವ ಕಾರ್ಯಕ್ರಮ-ವಿಫಲವಾದ್ದು ಇವನ ವಿರೋಧಿಗಳ ಕೈ ಬಲಪಡಿಸಿತೆಂದರೆ ತಪ್ಪಲ್ಲ. ತನ್ನ ಹಿಂದೆ ಸ್ಟಾಲಿನನ ಕಾಲದಿಂದ ಬೆಳೆದು ಬಂದಿದ್ದ ರಾಜಕೀಯ ಭಯಗ್ರಸ್ತತೆಯಿಂದ ಜನತೆಯನ್ನು ಪಾರು ಮಾಡಲೂ ಜನರ ಉಪಯೋಗಕ್ಕಾಗಿ ದಿನಬಳಕೆಯ ವಸ್ತುಗಳನ್ನೂ ವಾಸದ ಮನೆಗಳನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಒದಗಿಸಲೂ ಕ್ರುಶ್ಚಾಫ್ ನಿಷ್ಠೆಯಿಂದ ಪ್ರಯತ್ನಿಸಿದ. ಆಕಾಶಯಾನ ಮತ್ತು ಸಂಶೋಧನೆಯ ರಂಗದಲ್ಲಿ ಸೋವಿಯೆತ್ ದೇಶ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದು ಇವನು ಪ್ರಧಾನಿಯಾಗಿದ್ದ ಕಾಲದಲ್ಲಿ. ಸೋವಿಯೆತ್ ವಿದೇಶಾಂಗ ನೀತಿಗೆ ಅಂಟಿಕೊಂಡಿದ್ದ ಏಕಾಕಿತನವನ್ನು ಕಳೆದು, ಇತರ ರಾಷ್ಟ್ರಗಳೊಡನೆ ಸಹಬಾಳ್ವೆ ನಡೆಸುವ ಆವಶ್ಯಕತೆಯನ್ನು ಮನಗಂಡು, ಆ ನೀತಿಗೆ ಪೋಷಕವಾಗಿ ಪ್ರವಾಸ ಸಂಧಾನಾದಿಗಳನ್ನು ಕೈಗೊಂಡ ಕೀರ್ತಿ ಇವನಿಗೆ ಸಲ್ಲುತ್ತದೆ.

ವ್ಯಕ್ತಿತ್ವ

[ಬದಲಾಯಿಸಿ]

ಕ್ರುಶ್ಚಾಫ್ ಒಳ್ಳೆಯ ಮಾತುಗಾರ ; ವಿನೋದಪ್ರಿಯ, ಹತ್ತು ಜನರ ಕೂಟದಲ್ಲಿ ಸಂತೋಷವಾಗಿ ಕಾಲ ಕಳೆಯುವುದರಲ್ಲಿ ಅವನಿಗೆ ಆಸಕ್ತಿಯಿತ್ತು. ಇಂಥ ಸಂದರ್ಭಗಳಲ್ಲಿ ಅವನು ಸರಸವಾಗಿರುತ್ತಿದ್ದ. ಥಟ್ಟನೆ ಅವನಿಗೆ ಕೋಪವೂ ಬರುತ್ತಿತ್ತು. ಆಗ ಇವನ ಮಾತು, ನಡವಳಿಕೆ ಎರಡೂ ಒರಟು ಎನ್ನುವಷ್ಟು ಉಗ್ರವಾಗಿರುತ್ತಿದ್ದುವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. While he was unable to consolidate control over the party apparatus, Malenkov was still recognized as "first among equals" for over a year after Stalin's death. As late as March 1954, he was listed as first in the Soviet leadership and continued to chair meetings of the Politburo.[]
ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found.
  1. Brown 2009, pp. 232–233.
  2. Tompson 1995, p. 2.