ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
North America Vishwa Kannada Association
Founded March 26, 2009 (2009-03-26)
Type Non profit organization
Location
Origins Broke away from AKKA
Area served
North America
Website navika.org Archived 2021-12-08 ವೇಬ್ಯಾಕ್ ಮೆಷಿನ್ ನಲ್ಲಿ.


ಸಾಮಾನ್ಯವಾಗಿ NAVIKA ಎಂದು ಕರೆಯಲ್ಪಡುವ ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟವು ಉತ್ತರ ಅಮೆರಿಕಾದಲ್ಲಿರುವ ಕನ್ನಡಿಗರ ಸಂಘವಾಗಿದೆ. ಇದು ಫ್ಲೋರಿಡಾದಲ್ಲಿ ಲಾಭಕ್ಕಾಗಿ ನೋಂದಾಯಿಸಲಾದ ಸಂಘವಾಗಿರದೆ [೧] ಮಾರ್ಚ್ 2009 ರಲ್ಲಿ, ಯುಗಾದಿ (ಕನ್ನಡ ಹೊಸ ವರ್ಷ) ದಿನದಂದು , ಅಮೆರಿಕದ ಕನ್ನಡ ಕೂಟಗಳ ಸಂಘದ (AKKA) ಕೆಲವು ಸದಸ್ಯರೊಂದಿಗಿನ ಅಭಿಪ್ರಾಯ ಭೇದಗಳಿಂದ ಮುರಿದುಕೊಂಡಿದ್ದರಿಂದ NAVIKA ಅನ್ನು ರಚಿಸಲಾಯಿತು.

ಇತಿಹಾಸ[ಬದಲಾಯಿಸಿ]

NAVIKA ದ ಇತಿಹಾಸವು ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಕನ್ನಡಿಗ ಸಂಘವಾದ ಅಮೆರಿಕದ ಕನ್ನಡ ಕೂಟಗಳ ಸಂಘ (AKKA) ದೊಂದಿಗೆ NAVIKA ದ ಇತಿಹಾಸವು ಬೆಸೆದುಕ್ಕೊಂಡಿದೆ. 26 ಮಾರ್ಚ್ 2011 ರಂದು (ಕನ್ನಡ ಹೊಸ ವರ್ಷದ ದಿನ), AKKA ದ ಏಳು ಸಂಸ್ಥಾಪಕ ಸದಸ್ಯರು AKKA ದಿಂದ ಬೇರ್ಪಟ್ಟುಇತರೇ 25 ಮಂದಿಯೊಂದಿಗೆ ಸೇರಿ NAVIKA ಅನ್ನು ರಚಿಸಿದರು. ಇದು ಪ್ರಪಂಚದಾದ್ಯಂತದ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. [೨]

ವಿಶ್ವ ಕನ್ನಡ ಸಮ್ಮೇಳನ 2010[ಬದಲಾಯಿಸಿ]

ಜುಲೈ 2010 ರಲ್ಲಿ, NAVIKA ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ವಿಶ್ವ ಕನ್ನಡ ಶೃಂಗಸಭೆ 2010 ಅನ್ನು ನಡೆಸಿತು. [೩] ಕಾರ್ಯಕ್ರಮದ ಉದ್ಘಾಟನೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. [೪] ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜಕುಮಾರ್, ನಟಿಯರಾದ ಜೆನ್ನಿಫರ್ ಕೊತ್ವಾಲ್ ಮತ್ತು ಶರ್ಮಿಳಾ ಮಾಂಡ್ರೆ ಕೂಡ ಭಾಗವಹಿಸಿದ್ದರು. [೫] ನಟ ಗಣೇಶ್ ಅವರು ವೃತ್ತಿಪರ ಕಾರಣಗಳನ್ನು ಉಲ್ಲೇಖಿಸಿ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಿರುವುದು, ಕರ್ನಾಟಕ ಸರ್ಕಾರ ಒದಗಿಸಿದ ಸೌಲಭ್ಯಗಳ ಬಗ್ಗೆ ಅಸಮಾಧಾನದಿಂದವೆಂದೂ ಹೇಳುತ್ತಾರೆ. [೬]

ಈ ಸಮ್ಮೇಳನದಲ್ಲಿ ಭಾಗವಹಿಸಲು 48 ಸದಸ್ಯರ ನಿಯೋಗವನ್ನು ಕರ್ನಾಟಕ ಸರ್ಕಾರವು ಕಳುಹಿಸಿತ್ತು..ಸರಿಯಾದ ಆಯ್ಕೆ ಪ್ರಕ್ರಿಯೆಯಿಲ್ಲದೆ ಸರ್ಕಾರವು ನಿರಂಕುಶವಾಗಿ ಆಯ್ಕೆ ಮಾಡಿದ ನಿಯೋಗವನ್ನು ಕಳುಹಿಸಿದನ್ನು ಪ್ರಶ್ನಿಸಿದ ಟೀಕಾಕಾರರು ಸರ್ಕಾರವು ಸಾರ್ವಜನಿಕ ಹಣವನ್ನು ಈ ರೀತಿ ಪೋಲು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದರು. [೭]

ಉಲ್ಲೇಖಗಳು[ಬದಲಾಯಿಸಿ]

  1. "NAVIKA Charter". North America Vishwa Kannada Association. Archived from the original on 25 ಆಗಸ್ಟ್ 2011. Retrieved 7 September 2011.
  2. "NAVIKA, Kannada org takes birth in US". One India. Archived from the original on 13 ಅಕ್ಟೋಬರ್ 2012. Retrieved 7 September 2011.
  3. "NAVIKA meet in July". The Hindu. 29 April 2010. Archived from the original on 4 May 2010. Retrieved 7 September 2011.
  4. "Navika to hold world Kannada meet in Los Angeles". newKerala.com. Retrieved 7 September 2011.
  5. "Curtains fall on World Kannada Summit 2010". Oneindia. 6 July 2010. Retrieved 7 September 2011.
  6. "Ganesh not attending Navika's World Kannada Summit". One India. 17 June 2010. Archived from the original on 23 ಅಕ್ಟೋಬರ್ 2012. Retrieved 7 September 2011.
  7. Rao, K.N. Venkatasubba (12 June 2010). "Choice of delegation for NAVIKA draws flak". The Hindu. Archived from the original on 17 June 2010. Retrieved 7 September 2011.