ವಿಷಯಕ್ಕೆ ಹೋಗು

ನಾಗರಾಜ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗರಾಜ ಕೋಟೆ
ಜನನ
ನಾಗರಾಜ್ ಕೋಟೆ

೩೦ ಡಿಸೆಂಬರ್ ೧೯೬೩
ಚನ್ನರಾಯಪಟ್ಟನ,ಹಾಸನ ಜಿಲ್ಲೆ ಕರ್ನಾಟಕ
ರಾಷ್ಟ್ರೀಯತೆಭಾರತ
ವೃತ್ತಿ(ಗಳು)ಸಿನಿಮಾ ನಟರು, ಹಾಸ್ಯ ನಟರು,ನಿರ್ದೇಶಕರು ಮತ್ತು ಲೇಖರು.
ಸಂಗಾತಿಗಾಯತ್ರಿ ಕೋಟೆ
ಮಕ್ಕಳುನಿಶಂತ್ ಕೋಟೆ ಮತ್ತು ಯಶ್ವಂತ್ ಕೋಟೆ

ನಾಗರಾಜ್ ಕೋಟೆ ಅವರು ೩೦ ಡಿಸೆಂಬರ್ ೧೯೬೩ ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟದಲ್ಲಿ ಜನಿಸಿದರು ತಂದೆ ಜವರಪ್ಪ, ಮತ್ತು ತಾಯಿ ರಂಗಮ್ಮ ಇವರ ಪತ್ನಿ ಹೆಸರು ಗಾಯತ್ರಿ ಕೋಟೆ. ಇವರಿಗೆ ಇಬ್ಬರು ಗಂಡು ಮಕ್ಕಳು ನಿಶಾಂತ್ ಕೋಟೆ ಮತ್ತು ಯಶ್ವಂತ್ ಕೋಟೆ.ಅವರು ಸದಾ ಹೇಳುವುದು ತಮ್ಮ ಬಲ ಕೈ ತಮ್ಮ ಮೊದಲ ಮಗ, ತಮ್ಮ ಎಡ ಕೈ ಎರಡನೇ ಮಗ. ಕೋಟೆವರಿಗೆ ಬಾಲ್ಯದಿಂದೆಲೇ ಕಲೆ- ಸಾಹಿತ್ಯ ಆಸಕ್ತಿ ಇತ್ತು ಅದರಿಂದ ಊರಿಗೆ ಬರುತ್ತಿದ್ದ ವೃತ್ತಿ ನಾಟಕ ಕಂಪನಿಗಳಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಸೇರಿ ನಾಟಕಾಭಿನಯದತ್ತ ಆಕರ್ಷಿತರಾಗಿ ೧೯೮೩ರಲ್ಲಿ ಹವ್ಯಾಸಿ ನಾಟಕಗಳಲ್ಲಿ ಅಭಿನಯ ಪ್ರಾರಂಭಿಸಿದರು,ಈ ರೀತಿ ರಂಗಭೂಮಿಗೆ ಪ್ರವೇಶ ಮಾಡಿದರು.ಇವರು ರಂಗಭೂಮಿ - ಕಿರುತೆರೆ - ಚಲನಚಿತ್ರರಂಗ ಮೂರು ವಿಭಾಗಗಳಲ್ಲಿ ನಟ,ಹಾಸ್ಯ ನಟ,ನಿರ್ದೇಶಕರಾಗಿ ತಮ್ಮ ಸೇವೆ ನೀಡಿದ್ದಾರೆ.[]

ರಂಗಭೂಮಿ

[ಬದಲಾಯಿಸಿ]

೧೧೯೮೯ರಲ್ಲಿ ಸ್ವಂತ ನಾಟಕ ತಂಡವನ್ನು ಕಟ್ಟಿ 'ಮುದುಕನ ಮದುವೆ' ನಾಟಕದಲ್ಲಿ ಮುದುಕನ ಪಾತ್ರದಲ್ಲಿ ನಟಿಸಿ,ತಾವೇ ಸ್ವತಂತ್ರವಾಗಿ ಆ ' ನಾಟಕದ ನಿರ್ದೇಶನ ಮಾಡಿದರು.ನಾಟಕಗಳು (ನಾ ಮೆಚ್ಚಿದ ಹುಡುಗಿ) ೧೯೮೪ (ಮರದ ಮೇಲೆ ನಾಟಕ) ೨೦೦೫ ಕಸಿನವರು, ಜೋಗಿಯ ಕನಸು, ಶೋಧನೆ ತನು-ಮನ ಕನ್ನಡ, ಶ್ಯುನ್ಯ,ದ್ವಂದ್ವ ,ತತ್ತ ಬಂದ್ರು, ಇನ್ನು ನೂರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿ,೧೯೯೮ ರಲ್ಲಿ "ಭವಿಷ್ಯ" ಎಂಬ ನಾಟಕವನ್ನು ರಚೆಸಿಸುವ ಮೂಲಕ ಸಾಹಿತಿಯಾಗಿ ೨೦ಕ್ಕು ನಾಟಕಗಳನ್ನು ರಚೆಸಿ,೨ ಹನಿಗವನ ಕವನ ಸಂಕಲನ ಬರದಿದಾರೆ,ನೂರಕ್ಕು ಹೆಚ್ಚು ಹಾಸ್ಯ ಪ್ರಹಸಗಳು ರಚೆಸಿದರೆ. ಇವರಿಗೆ ಎಲ್ಲಾರೂ ಚನ್ನರಾಯಪಟ್ಟದ ಚನ್ನಗಿರಿ ರಾಯಾ ಎಂದು ಕರೆಯುತರೆ . ಕಿಲಕಿಲಹಾಸ್ಯ, ಚೌಚೌಕಾಮಿಡಿ, ನಗೆಟಾನಿಕ್ ಎಂಬ ಹಾಸ್ಯ ಕಾರ್ಯಕ್ರಮವನ್ನು ಅವರೇ ಅಭಿನಿಸಿ ಹಾಗೂ ನಿರ್ದೇಶಿಸಿ ಅದನ್ನು ವಿ.ಸಿ.ಡಿ ಮಾಡಿ ಜನರಿಗೆ ನೀಡಿದ್ದಾರೆ. "ನಗೆಲೋಕ" ತಂಡ ಕಟ್ಟಿ, ಕನ್ನಡ ರಾಜ್ಯೋತ್ಸವ, ಗಣೇಶ್ಯೋತ್ಸವಗಳಲ್ಲಿ ೨೦೦೦ಕ್ಕು ಹೆಚ್ಚು ಹಾಸ್ಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪ್ರದರ್ಶನ ನೀಡಿದರರೆ. ಕಳೆದ ವರ್ಷ ಕರ್ನಾಟಕ ರಾಜ್ಯದ್ಯಂತ ೩ ದಿನ ನಗೆಲೋಕ ತಂಡದಿಂದ "ಗೋವಿಂದ್ರ...!ಗೋವಿಂದ್ರ...!" ಎಂಬ ಇನ್ನು ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ಮಾಡಿದರು. ೧೯೮೫ರಿಂದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದರೆ.

ಚಲನಚಿತ್ರರಂಗ

[ಬದಲಾಯಿಸಿ]

೧೯೯೫ರಲ್ಲಿ "ಸಾಕಿದ ಗಿಣಿ" ಚಿತ್ರದೊಂದಿಗೆ ಪ್ರಥಮ ಭಾರೀ ಚತ್ರರಂಗಕ್ಕೆ ಪ್ರವೇಶಿಸಿದರು. ನಿರ್ಣಿಯ, ನೋಡು ಬಾ ನಮ್ಮೂರ, ಜಗತ್ ಕಿಲಾಡಿ, ಜೋಗುಳ, ಗೌಡ್ರು, ನನ್ನ ಕನಸಿನ ಹೂವ, ಪಿ.ಎ.ಪಿ ೫, ಈವರು ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಹಲವಾರು ಚಲನಚಿತ್ರರಂಗ ಕಲಾವಿದರು ಜೊತೆ ಅಭಿನಯ (ಅಂಬರೀಶ್ , ಸಾಧು ಕೋಕಿಲ, ಬುಲೆಟ್ ಪ್ರಾಕಶ್, ರಂಗಯಣ ರಘು, ಕಿಚ್ಚ ಸುದೀಪ್) . ಇವರು ಅಭಿನಯ ಅಲ್ಲದೆ ಹಲವಾರು ಚಿತ್ರಗಳ ತಮ್ಮ ಧ್ವನಿ ನೀಡಿದರೆ.

ಕಿರುತೆರೆ

[ಬದಲಾಯಿಸಿ]

೧೯೯೮ ರಲ್ಲಿ ಟಿ.ಎಸ್.ನಾಗಾಭರಣವರ ನಿರ್ದೇಶನದ "ಸಂಕ್ರಾಂತಿ" ಧಾರಾವಾಹಿಯಲ್ಲಿ ಟ್ರೈಲರ್ ಚಿನ್ನೋಜಿ ಪಾತ್ರದ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ್ದಾರು ಮತ್ತು ೨೦೦೫ ರಿಂದ ೨೦೧೧ ವರೆಗೂ ರಂಗೋಲಿ ಧಾರಾವಾಹಿಯಲ್ಲಿ ರಾಜೇಂದ್ರ ಮಾಮ ಪಾತ್ರ ಮತ್ತು ಶಿವಮಣಿವರ ನಿರ್ದೇಶನದ ಮಾಡಿದ "ಕ್ಲಾಸ್ ಮೇಟ್ಸ್" ಧಾರಾವಾಹಿಯಲ್ಲಿ ಹಾಸ್ಯ ಪ್ರಾಧ್ಯಾಪಕ ಪಾತ್ರ ಅಭಿನಸಿದ್ದಾರೆ.ಟಿ.ಎಸ್.ನಾಗಾಭರಣವರ ನಾಗರಾಜವರ ಅಭಿನಯ ನೋಡಿ ಅವರ ಕೈಯಿಂದಲ್ಲೆ "ಸಂಕ್ರಾಂತಿ" ಧಾರಾವಾಹಿಗೆ ಹಲವಾರು ಹಾಸ್ಯ ದೃಶ್ಯಗಳನ್ನೂ ರಚಿಸಿಲು ಪ್ರೋತ್ಸಾಹಿಸಿದರು. ಇನ್ನು ೧೫೦ಕ್ಕು ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.೧೯೯೯ ರಲ್ಲಿ ೧೯೯೫ ರಲ್ಲಿ ಕಾರ್ಗಿಲ್ ವೀರ ಯೋಧರ ಸಮಯದಲ್ಲಿ ಒಂದು ವಾ‌ರ ಹಾಸನ ಜಿಲ್ಲದ್ಯಾಂತ "ಭವಿಷ್ಯ" ಎಂಬ ಬೀದಿ ನಾಟಕ ಪ್ರದರ್ಶಿಸುವುದರ ಮೂಲಕ ೫೦ ಸಹಸ್ರ ರೂಪಯಿ ಸಂಗ್ರಹಿಸಿ ನೀಡಿದ್ದಾರೆ.ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ೨೦೦೫ರಲ್ಲಿ ವಿಶ್ವರ೦ಗಭೂಮಿ ದಿನವನ್ನು ತಾವೇ ರಚೆಸಿ, "ನಲೆ" ಎಂಬ ನಾಟಕವನ್ನು ಪರಿಸರ ಅರಿವು ಪ್ರಕರ ನಾಟಕವನ್ನು ಮರದ ಮೇಲೆ ಪ್ರದರ್ಶಿಸಿನ ಮಾಡಿದ್ದರು ಇದ್ದು ವಿಶ್ವದಾಖಾಲೆಯಾಗಿತ್ತು. ಇತೀಚೆಗೆ ೯೧.೧ ಎಫ್.ಎಂ ರೇಡಿಯೋನಲ್ಲಿ ಇವರ "ಪಂಚ್ ಪಟೇಲ"ಜನಪ್ರಿಯ ಕಾರ್ಯಕ್ರಮ ಪ್ರತಿ ದಿನ ಗಂಟೆಗೊಮ್ಮೆ ಪ್ರಸವಾಗುದ್ದು .ಹಾಗೂ ಇಚೀಚೆಗೆ ಬೆಂಗಳೂರಿನಲ್ಲಿ ನಡದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಸಾಧನೆಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದರೆ.[]

ಬಣ್ಣ ಅಭಿನಯ ಶಾಲೆ

[ಬದಲಾಯಿಸಿ]

೨೦೧೧ ರಲ್ಲಿ ಬಣ್ಣ ಅಭಿನಯ ಶಾಲೆ ಎಂಬ ರಂಗ ತರಬೇತಿ ಶಾಲೆಯನ್ನು ಸಂಸ್ಥಾಪಿಸಿ ಕಳೆದ ೫ ವರ್ಷಗಳಿಂದ ಉದಯೋನ್ಚುಖ ಕಲಾವಿದರನ್ನು ಕಲಾ ರಂಗಕ್ಕೆ ಪರಿಚಯ ಮಾಡಿ ರಂಗಭೂಮಿ - ಕಿರುತೆರೆ - ಚಲನಚಿತ್ರರಂಗ ಬಗ್ಗೆ ತರಬೇತಿ ನೀಡಿ ಅವರ ಪ್ರತಿಭೆ ತೋರಿಸಲು ಕಲಾ ಲೋಕಕ್ಕೆ ಹೊಸ ಕಲಾವಿದರಗೆ ಅವಕಾಶ ನೀಡಿದ್ದಾರೆ. ಆ ಶಾಲೆಯಲ್ಲಿ ಹಲವಾರು ರಂಗಭೂಮಿ ಮತ್ತು ಚಲನಚಿತ್ರರಂಗ ಕಲಾವಿದರು ತರಬೇತಿ ನೀಡುತ್ತಾರೆ.

ನಿರ್ದೇಶನ

[ಬದಲಾಯಿಸಿ]

೨೦೧೪ ರಲ್ಲಿ ಪ್ರಪ್ರಥಮ ಬಾರಿ ಬಾನಾಡಿ ವೆಬ ಮಕ್ಳ ಚಿತ್ರ ಸ್ವತಂತ್ರವಾಗಿ ಅವರೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಮತ್ತು ಅವರೇ ನಿರ್ದೇಶನ ಮಾಡಿದರು.೧೦ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ " ಅತ್ಯುತ್ತಮ ಭಾರತಿಯ ಪ್ರಶಿಸ್ತಿ" ಮತ್ತು ಕರ್ನಾಟಕ ರಾಜ್ಯದಿಂದ " ಅತ್ಯುತ್ತಮ ಮಕ್ಕಳ ಚಿತ್ರ" ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ,ಗೌರವಗಳು

[ಬದಲಾಯಿಸಿ]

ಇವರಿಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದೆ ೨೦೦೭ರಲ್ಲಿ ಚನ್ನರಾಯಪ್ಪಣ್ಣದ ಯುವಕರ ಬಳಗದ ವತಿಯಿಂದ "ಹಾಸ್ಯಚಾಣಕ್ಯ" ಪ್ರಶಸ್ತಿ, ೨೦೦೯ ರಲ್ಲಿ ಮೈಸೂರಿನ ದೇ.ಜ.ಗೌ.ಅಕಾಡಮಿಯಿಂದ "ಹಾಸ್ಯಶ್ರೀ" ಪ್ರಶಸ್ತಿ, ೨೦೦೮ರಲ್ಲಿ ಹೈದರಾಬಾದ್-ಕರ್ನಾಟಕ ಸಾಂಸ್ಕೃತಿ ವೇದಿಕೆ ಹೂಸಪೇಟೆದಿಂದ "ಬೀಚೆ ಪ್ರಶಸ್ತಿ", ರಂಗಬಳಗ ಸಿರ್ಸಿ ಇವರಿಂದ "ರಂಗಶ್ರೀಪ್ರಶಸ್ತಿ" , ೨೦೧೦ ರಲ್ಲಿ ಕರ್ನಾಟಕ ಸರ್ಕಾರದಿಂದ " ರಾಜ್ಯೋತ್ಸವ ಪ್ರಶಸ್ತಿ" ೨೦೦೯ರಲ್ಲಿ ಕರ್ನಾಟಕ ನಾಟಕ ಆಕೆಡೆಮಿಯಿಂದ ಮರದ ಮೇಲಿನ ನಾಟಕಕ್ಕವಿಶೇಷ "ಸುವರ್ಣ ಕರ್ನಾಟಕ ಪ್ರಶಸ್ತಿ" ಕುಪೂರು ಶ್ರೀ ಮಠದ ವತಿಯಿಂದ "ವೃತ್ತಿಶ್ಚೈತನ ಪ್ರಶಸ್ತಿ" ,ಶಿವಮೊಗ್ಗ ಹಾರನಹಳ್ಳಿ ಶ್ರೀ ಮಠದ ವತಿಯಿಂದ "ಕಲಾ ರತ್ನ ಪ್ರಶಸ್ತಿ" ಇನ್ನು ಹೆಚ್ಚು ಪ್ರಶಸ್ತಿ ಪಡೆದ್ದಾರೆ. ಇವರು ಹಲವಾರು ಕನ್ನಡ ಹೋರಟದಲ್ಲಿ ಭಾಗವಹಿಸಿ,ಕನ್ನಡ ಸೇವೆ ನೀಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-08-15. Retrieved 2016-09-15.
  2. http://www.nagarajkote.com/