ನವ ವೇದಾಂತ

ವಿಕಿಪೀಡಿಯ ಇಂದ
Jump to navigation Jump to search

ಹಿಂದೂ ಆಧುನಿಕತಾವಾದ, ಜಾಗತಿಕ ಹಿಂದೂ ಧರ್ಮ, ಹಿಂದೂ ಸರ್ವಮುಕ್ತಿತತ್ವ ಎಂದೂ ಕರೆಯಲ್ಪಡುವ ನವ ವೇದಾಂತ ೧೯ನೇ ಶತಮಾನದಲ್ಲಿ ಪಾಶ್ಚಾತ್ಯ ವಸಾಹತುಶಾಹಿ ಮತ್ತು ಪೌರಸ್ತ್ಯತೆಗೆ ಪ್ರತಿಯಾಗಿ ಬೆಳವಣಿಗೆಯಾದ ಹಿಂದೂ ಧರ್ಮದ ಒಂದು ಆಧುನಿಕ ವ್ಯಾಖ್ಯಾನವಾಗಿದೆ. ಅದು ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಒಂದು ಆಧುನಿಕ, ಸಹಿಷ್ಣು ಹಾಗು ಸ್ವತಂತ್ರ ರಾಷ್ಟ್ರವಾಗಿ ಭಾರತದ ಗುರುತಿಗೆ ಕೊಡುಗೆ ನೀಡಿತು. ಅದು ಹಿಂದೂ ಧರ್ಮವನ್ನು ಅದ್ವೈತ ವೇದಾಂತವನ್ನು ಅದರ ಕೇಂದ್ರ ಸಿದ್ಧಾಂತವಾಗಿ ಹೊಂದಿದ ಹಿಂದೂ ಧರ್ಮದ ಏಕರೂಪವಾಗಿಸಿದ ಆದರ್ಶವಾಗಿ ಪ್ರಸ್ತುತಪಡಿಸುತ್ತದೆ.