ನವೋದಯದ ನಾಲ್ಕನೆಯ ಕೇಂದ್ರ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ತಮ್ಮ ಸಂಶೋಧನೆ ಬಗ್ಗೆ ತಾನೇ ಬರೆದುಕೊಂಡ ಲೇಖನ


ಹೊಸ ಸಂಶೋಧನೆ :ನವೋದಯ ಕಾವ್ಯ[ಬದಲಾಯಿಸಿ]

'‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಕುರಿತು ಡಾ.ಪ್ರಕಾಶ ಗ.ಖಾಡೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರೋ ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ 2005 ರಲ್ಲಿ ಕೈಕೊಂಡ ಪಿಎಚ್.ಡಿ. ಪದವಿ ಅಧ್ಯಯನದ ಮೂಲಕ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಿದ್ದಾರೆ.2007ರಲ್ಲಿ ಇವರ ಸಂಶೋಧನಾ ಮಹಾಪ್ರಬಂಧ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಪ್ರಕಟವಾಗಿದೆ. ಇದುವರೆಗಿನ ನವೋದಯ ಕಾವ್ಯದ ಬಗೆಗಿನ ಅಧ್ಯಯನ ವಿಮರ್ಶೆ ಚರ್ಚೆಗಳೆಲ್ಲ ಮೈಸೂರು ಕರ್ನಾಟಕದ ಪರಂಪರೆಯ ಸುತ್ತ ನಡೆದು ‘ನವೋದಯ ಕಾವ್ಯ’ವೆಂದರೆ ಅದಷ್ಟೇ ಎಂಬ ಭಾವನೆ ಮೂಡಿರುವ ಹೊತ್ತಿನಲ್ಲಿ ಧಾರವಾಡ ಹಲಸಂಗಿ ನೆಲೆಗಳಿಂದ ಜಾನಪದದಿಂದ ಪ್ರಭಾವಿತ ನವೋದಯ ಕಾವ್ಯ ಕನ್ನಡವನ್ನು ಹೇಗೆ ಪ್ರವೇಶ ಮಾಡಿತು ಎಂಬುದನ್ನು ಈ ಅಧ್ಯಯನದಿಂದ ಡಾ.ಖಾಡೆಅವರು ಸ್ಪಷ್ಟಪಡಿಸಿದ್ದಾರೆ. ಇಂಗ್ಲಿಷ್ ಕಲಿತವರಿಂದಲೇ ಹಾಗೂ ಸಂಸ್ಕೃತ ಮಾರ್ಗ ಅರಿತವರಿಂದಲೇ ‘ನವೋದಯ’ ಚಳವಳಿ ಪ್ರಭಾವಶಾಲಿಯಾಯಿತು ಎನ್ನುವುದೆಷ್ಟು ನಿಜವೋ ಇಂಗ್ಲಿಷ್ ಕಲಿಯದ ಅದರ ಸೋಂಕಿಲ್ಲದ ಸ್ವಂತಿಕೆ, ಆಂತರಿಕ ಒತ್ತಡಗಳಿಂದ ಬರೆದ ಆನಂದಕಂದ, ಮಧುರಚೆನ್ನ (ಇವರಿಗೆ ಇಂಗ್ಲಿಷ್ ಬರುತ್ತಿತ್ತು ಆದರೆ ಪ್ರಭಾವದಿಂದ ದೂರವಿದ್ದರು) ಬೇಂದ್ರೆ, ಶ್ರೀಧರ, ಖಾನೋಳಕರ, ಶಾಂತಕವಿ ಮತ್ತಿತರರು 1900 ರಿಂದ 1925-30ರ ಅವದಿsಯಲ್ಲಿ ಬರೆದ ಕಾವ್ಯ ಕನ್ನಡ ಜಾನಪದವನ್ನು ಧ್ವನಿಸಿದ ಶಿಷ್ಟ ಕಾವ್ಯ ಮುಂದೆ ಕಂಬಾರ, ಕಣವಿ, ಇಮ್ರಾಪುರ, ವಾಲೀಕಾರ ಅವರು ಇದನ್ನು ಮುಂದುವರೆಸಿದ್ದು ಕೂಡ ಚಾರಿತ್ರಿಕ ಸಂಗತಿ. ಹೀಗಾಗಿ ಈವರೆಗಿನ ನವೋದಯ ಕಾವ್ಯ ಬಗೆಗಿನ ವಿಮರ್ಶೆ, ಅವಲೋಕನ, ಅಧ್ಯಯನಗಳಿಂದ ತೀವ್ರತರವಾಗಿ ಉಪೇಕ್ಷೆಗೆ ಒಳಗಾಗಿರುವ ಸಾಂಸ್ಕøತಿಕ ಸತ್ಯವನ್ನು ಶೋದಿsಸಿ ಮರು ವಿಮರ್ಶೆಗೆ ಓಳಪಡಿಸಿದ ಈ ಅಧ್ಯಯನವುಅತ್ಯಂತ ಮಹತ್ವದ್ದಾಗಿದೆ .

ನವೋದಯದ ನಾಲ್ಕನೆಯ ಕೇಂದ್ರ[ಬದಲಾಯಿಸಿ]

ಕನ್ನಡ ನವೋದಯ ಸಾಹಿತ್ಯ ಚರಿತ್ರೆಕಾರರು ಮುಖ್ಯವಾಗಿ ಮೈಸೂರು, ಮಂಗಳೂರು, ಧಾರವಾಡ ಮೂರು ನವೋದಯ ಕೇಂದ್ರಗಳನ್ನು ಗುರುತಿಸಿದ್ದಾರೆ. ಆದರೆ ಡಾ.ಪ್ರಕಾಶ ಖಾಡೆ ಅವರು ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸಿಕೊಂಡು ನವೋದಯ ಕಾವ್ಯಕ್ಕೆ ಜಾನಪದದ ಶಕ್ತಿ ತುಂಬಿ ಹೊಸದೊಂದು ಕಾವ್ಯ ಮಾರ್ಗವನ್ನು ತೆರೆದು ತೋರಿದ ಮಧುರಚೆನ್ನರ ‘ಹಲಸಂಗಿ’ಯನ್ನು ನಾಲ್ಕನೆಯ ಕೇಂದ್ರವಾಗಿ ಸೃಜಿಸಿ ಇದು ಕನ್ನಡ ನವೋದಯದ ದೇಸಿಯತೆಗೆ ಸಾಕ್ಷಿಯಾದ ಸಾಂಸ್ಕøತಿಕ ಸಂದರ್ಭವನ್ನು ಈ ಅಧ್ಯಯನದಿಂದ ರೂಪಿಸಿಕೊಟ್ಟಿದ್ದಾರೆ.

ಕನ್ನಡ ನವೋದಯ ಪೂರ್ವ ಮೈಸೂರು ಕರ್ನಾಟಕದಲ್ಲಿದ್ದ ಸ್ಥಿತಿಗೂ ಉತ್ತರ ಕರ್ನಾಟಕದಲ್ಲಿದ್ದ ಪರಿಸ್ಥಿತಿಗೂ ಗಮನಾರ್ಹ ವೆತ್ಯಾಸಗಳಿದ್ದವು. ಶಾಸ್ತ್ರ ಪರಂಪರೆ ಮತ್ತು ಪ್ರಭುತ್ವ ಪರಂಪರೆ ಮೇಲಾಗಿದ್ದ ಮೈಸೂರು ಕರ್ನಾಟಕಭಾಗದಲ್ಲಿ ಬಿ.ಎಂ.ಶ್ರೀ ಅವರ ‘ಅವಳ ತೊಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು ನೋಡ ಬಯಸಿ, ಹಾಡ ಬಯಸಿ’ ಕನ್ನಡ ನುಡಿಗೆ ತಂದ ಇಂಗ್ಲಿಷ್ ರಚನೆಗಳು ಆ ಕಾಲಕ್ಕೆ ಪಡೆದ ಜನಪ್ರಿಯತೆ ಎಲ್ಲರ ಪ್ರಶಂಸೆಗೆ ಪಾತ್ರವಾದವು. ಮೈಸೂರು ಭಾಗದಲ್ಲಿ ನಡೆಯುತ್ತಿದ್ದ ಈ ಕೆಲಸಕ್ಕೆ ಹಿನ್ನೆಲೆಯಾಗಿ ಕನ್ನಡತನದ ಗಟ್ಟಿಯಾದ ಭಾಷಾ ನೆಲೆ ಇತ್ತು. ಬೆನ್ನು ತಟ್ಟಿ ಪೆÇ್ರೀತ್ಸಾಹಿಸಲು ಕನ್ನಡ ರಾಜ ಮನೆತನದ ಮೈಸೂರು ಅರಸರಿದ್ದರು. ಬರಹದ ಶ್ರೇಷ್ಠತೆಯನ್ನು ಗುರುತಿಸಲು ಪಂಡಿತ ಮಂಡಳಿ ಇತ್ತು. ಹೀಗಾಗಿ ಮೈಸೂರು ಭಾಗದಲ್ಲಿ ಬಂದ ಸಾಹಿತ್ಯ ಈ ನಾಡಿನ ಕೀರ್ತಿಗೆ ಭಾಜನವಾಗಲು ಕಾಯಬೇಕಿರಲಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಇತ್ತು. ಈ ನೆಲವನ್ನಾಳುವ ಪ್ರಭುಗಳ ಭಾಷೆ ಬೇರೆ ಬೇರೆಯಾಗಿದ್ದವು, ಮೊಗಲರ ಕಾಲಕ್ಕೆ ಉರ್ದು ಫಾರಸಿ ಭಾಷೆಗಳು, ಪೇಶವೆಯರ ಕಾಲಕ್ಕೆ ಮರಾಠಿ ರಾಜ ಭಾಷೆಗಳಾಗಿದ್ದವು. ಅದರಂತೆ ಬ್ರಿಟಿಷರ ಕಾಲಕ್ಕೆ ಇಂಗ್ಲಿಷ್ ರಾಜ ಭಾಷೆಯಾಯಿತು. ಹೀಗೆ ನೆಲಕಚ್ಚಿದ ಕನ್ನಡವನ್ನು ತನ್ನೆಲ್ಲಾ ಶಕ್ತಿಯೊಂದಿಗೆ ಎದ್ದುನಿಲ್ಲಿಸಬೇಕಾದ ಜರೂರು ಇತ್ತು. ಈ ಕೆಲಸದಲ್ಲಿ ನಿಂತ ಕನ್ನಡ ಕೈಂಕರ್ಯದ ಬಂಟರು ಕೆಲವು ಕನ್ನಡ ಪ್ರೇಮಿ ಆಂಗ್ಲ ವಿದ್ವಾಂಸರೊಂದಿಗೆ ಕನ್ನಡ ಶಾಲೆಗಳನ್ನು ತೆರೆದರು. ಕನ್ನಡ ಪಠ್ಯಪುಸ್ತಕ ರಚಿಸಿದರು. ಮರಾಠಿ ಝಳಕ್ಕೆ ಬಾಡಿ ಹೋಗುತ್ತಿದ್ದ ಕನ್ನಡವನ್ನು ನಳನಳಿಸುವಂತೆ ಮಾಡಿದರು. ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ,ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕಕ್ಕೆ ದೇಸೀ ಕಾವ್ಯದ ಉತ್ಕøಷ್ಟ ಸ್ಥಾನ ನೀಡಿದರು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರ ಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಈ ಸಾಧನೆಯ ಪ್ರತೀಕವಾಗಿ ಹೊರಬಂದ ‘ಗರತಿಯ ಹಾಡು’(1931), ಜೀವನ ಸಂಗೀತ(1933), ಮಲ್ಲಿಗೆ ದಂಡೆ(1935), ಜನಪದ ಗೀತ ಸಂಕಲನಗಳು ಕನ್ನಡ ಕಾವ್ಯಲೋಕದಲ್ಲಿ ಸಂಚಲನ ಉಂಟುಮಾಡಿದವು. ಹಲಸಂಗಿ ಗೆಳೆಯರ ‘ಜೀವನ ಸಂಗೀತ’ ಲಾವಣಿ ಸಂಕಲನವು ಹಲವು ನೆಲೆಯಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಇಲ್ಲಿನ ಖಾಜಾಭಾಯಿಯ ಲಾವಣಿಗಳು ಮಧುರಚೆನ್ನರ ಕಾವ್ಯಕ್ಕೆ ಸ್ಪೂರ್ತಿ ನೀಡಿದವು. ‘ಜೀವನ ಸಂಗೀತ’ವು ಕನ್ನಡ ಲಾವಣಿ ಸಾಹಿತ್ಯದ ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧ ಉಂಟು. ರಗಳೆಯ ಲಯ, ಅಂಶ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತೆಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು ಡಾ.ಪ್ರಕಾಶ ಖಾಡೆ ಸ್ಪಷ್ಟಪಡಿಸಿದ್ದಾರೆ.

ಹಲಸಂಗಿ ಜಾನಪದದ ‘ಮಕ್ಕಾ’[ಬದಲಾಯಿಸಿ]

  • ನವೋದಯ: ಹಲಸಂಗಿ ಕೇಂದ್ರ’ವನ್ನು ಈ ಅಧ್ಯಯನದಲ್ಲಿ ಹೊಸದಾಗಿ ಸೃಷ್ಟಿಸಿಕೊಂಡು ಈ ಕೇಂದ್ರವು ನವೋದಯ ಕಾವ್ಯಕ್ಕೆ ಜಾನಪದ ಸತ್ವ, ಸೌಂದರ್ಯ ತುಂಬಿ ಅಪ್ಪಟ ದೇಸೀ ಕವಿತೆಗಳನ್ನು ನೀಡಿದ ಆಧುನಿಕ ಕನ್ನಡ ಕಾವ್ಯದ ಶ್ರೇಷ್ಠತೆಯನ್ನು ಗುರುತಿಸಲಾಗಿದೆ. ಹಲಸಂಗಿ ಗೆಳೆಯರು ಹೊಸಗನ್ನಡ ಕಾವ್ಯದ ಪೂವಾರ್ಧದಲ್ಲಿಯೇ ಜನಪದ ಕಾವ್ಯದ ಅನಘ್ರ್ಯ ರತ್ನತ್ರಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಲ್ಲದೆ ಆ ಮೂಲಕ ನೆಲದ ಬದುಕು, ಭಾಷೆ, ಭಾವ, ನಾದ ಆಡುನುಡಿಯ ಮೋಡಿಗಳಿಗಾಗಿ ಪರಿತಪಿಸುತ್ತಿದ್ದ ಕನ್ನಡ ಶಿಷ್ಟ ಕಾವ್ಯದ ಹೊಸತನಕ್ಕೆ ಹೊಸ ರಕ್ತ ಮಾಂಸಕೊಟ್ಟ ಶ್ರೇಯಸ್ಸಿಗೂ ಕಾರಣರಾದರು. ಹಲಸಂಗಿ ಎಂದರೆ ಕರ್ನಾಟಕದಲ್ಲಿ ಜಾನಪದದ ‘ಮಕ್ಕಾ’ ಎಂಬಷ್ಟು ಪ್ರಸಿದ್ದಿಯಾಯಿತು. (ಸೋಮಶೇಖರ ಇಮ್ರಾಪುರ, ಜಾನಪದ ಆಲೋಕನ, 2002) ಹಲಸಂಗಿ ಹಲವು ಸಂಸ್ಕøತಿಗಳ ಸಂಗಮ ಸ್ಥಾನ. ಸೂಪಿsೀ, ಮರಾಠಿ ಭಕ್ತಿ ಕಾವ್ಯ ವಚನ ಸಾಹಿತ್ಯ ಹಾಗೂ ಹಲಸಂಗಿ ಜಾನಪದ ಹೀಗೆ ಕನ್ನಡಕ್ಕೆ ಇದು ಈ ಎಲ್ಲದರ ಶ್ರೇಷ್ಠತೆಯನ್ನು ಜಾನಪದ ಮೂಲವಾಗಿ ತಂದಿದೆ. ಸಿದ್ದಯ್ಯ ಪುರಾಣಿಕರು ‘ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವವರು ಹಲಸಂಗಿಯ ಹೆಸರನ್ನು ಮರೆಯುವಂತಿಲ್ಲ. ಕನ್ನಡ ನುಡಿಯ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಅದೊಂದು ಎಂದಿದ್ದಾರೆ.’
  • ಜಿ.ಎಸ್.ಶಿವರುದ್ರಪ್ಪನವರು ‘ನವೋದಯದ ಮೂರು ಕೇಂದ್ರಗಳ ಜೊತೆಗೆ ಮಧುರಚೆನ್ನರ ಗೆಳೆಯರ ಬಳಗದ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ.ಧೂಲಾ ಇವರನ್ನು ಒಳಗೊಂಡ ಹಲಸಂಗಿಯನ್ನು ನವೋದಯದ ನಾಲ್ಕನೆಯ ಕೇಂದ್ರವೆಂದು ಪರಿಗಣಿಸುವುದು ಅಗತ್ಯವಾಗಿದೆ’ (ಜಿ.ಎಸ್.ಶಿವರುದ್ರಪ್ಪ, 2003) ಎಂದಿದ್ದಾರೆ. ಈ ನಾಲ್ಕನೆಯ ಕೇಂದ್ರ ಕನ್ನಡ ನವೋದಯಕ್ಕೆ ಅನುಭಾವ ಕಾವ್ಯಧಾರೆಯೊಂದನ್ನು ಸೇರಿಸಿದ್ದಲ್ಲದೆ ಜಾನಪದ ಜೀವಸತ್ವವನ್ನು ತುಂಬುವ ಜನಪದ ಸಾಹಿತ್ಯ ಸಂಗ್ರಹ ಹಾಗೂ ಆ ಕುರಿತ ಅಧ್ಯಯನವನ್ನು ಕನ್ನಡದ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಮಾಡಿತು. ಹೀಗಾಗಿ ನವೋದಯ ಕುರಿತು ಈ ಹೊತ್ತು ವಿಚಾರ ಮಾಡುವ ಈ ಸಂದರ್ಭದಲ್ಲಿ ಅದರ ಬಹುಮುಖತ್ವವನ್ನು ಇಲ್ಲಿ ಮೊದಲ ಬಾರಿಗೆ ವಿಸ್ತೃತವಾಗಿ ಡಾ.ಖಾಡೆ ಕಟ್ಟಿಕೊಟ್ಟಿದ್ದಾರೆ.
  • ಹಲಸಂಗಿ ಗೆಳೆಯರ ಗುಂಪು ಧಾರವಾಡ ಗೆಳೆಯರ ಗುಂಪಿನಿಂದ ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳುವ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ. ಹಲಸಂಗಿ ಗೆಳೆಯರು ಕೈಕೊಂಡ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯದ ಮಹತ್ವ ಸಾರಲಾಗಿದೆ. ಹಲಸಂಗಿಯ ಜಾನಪದ ಪರಿಸರ, ಖಾಜಾಬಾಯಿಯ ಲಾವಣಿಗಳ ಮೋಡಿ, ಹಲಸಂಗಿ ಕಡೆಗೆ ಆಕರ್ಷಿತರಾದ ಗಣ್ಯ ಕವಿಗಳ ಸದಾಶಯಗಳನ್ನು ದಾಖಲಿಸಲಾಗಿದೆ. ಹಲಸಂಗಿ ಗೆಳೆಯರು ಸಂಪಾದಿಸಿದ ‘ಗರತಿಯ ಹಾಡು’ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಇದಕ್ಕೆ ಪ್ರಸ್ತಾವನೆ ಬರೆದ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ. ಅದು ಬೆಳೆದು ಪರಿಷ್ಕøತವಾಗಿ ವೃದ್ಧಿಯಾದುದು ಕವಿವಾಣಿ. ‘‘ಜನವಾಣಿ ಬೇರು, ಕವಿವಾಣಿ ಹೂವು’ ಎಂದು ಸಾರಿದರು. ‘ಗರತಿಯ ಹಾಡು’ ಸಂಕಲನದ ಪರಿಚಯದಲ್ಲಿ ಬೇಂದ್ರೆಯವರು ‘ಗರತಿಯರ ಹಾಡುಗಳೇ ನಿಜವಾದ ಕಾವ್ಯ, ಉಳಿದದು ಕಾವ್ಯ ಛಾಯೆ’ ಎಂದಿದ್ದಾರೆ. ಡಾ.ಗುರುಲಿಂಗ ಕಾಪಸೆ ಅವರು ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವಿತೀಯವಾದ ಸಂಗ್ರಹವೂ ಅಹುದು ಎಂದಿದ್ದಾರೆ. ಜೊತೆಗೆ ಕಾಪಸೆ ರೇವಪ್ಪನವರು ಸಂಪಾದಿಸಿದ ‘ಮಲ್ಲಿಗೆ ದಂಡೆ’ ಜನಪದ ಹಬ್ಬ, ಆಚರಣೆಗಳ ಸಾಂದಬಿರ್sಕ ಹಾಡುಗಳ ಕೃತಿ ನವೋದಯ ಕಾವ್ಯಕ್ಕೆ ನೀಡಿದ ಪ್ರೇರಣೆ, ಪ್ರಭಾವಗಳನ್ನು ಅವುಗಳ ವಿಶಿಷ್ಟ ಜಾನಪದೀಯ ನೆಲೆಯಲ್ಲಿ ತುಂಬಾ ಮೌಲಿಕವಾಗಿ ಇಲ್ಲಿ ಡಾ.ಖಾಡೆ ವಿಶ್ಲೇಷಿಸಿದ್ದಾರೆ.
  • ಒಟ್ಟಾರೆ,ಬಿ.ಎಂ.ಶ್ರೀ ಅವರನ್ನು ಈ ಹೊತ್ತಿಗೂ ನವೋದಯ ಕಾವ್ಯದ ಅಧ್ವರ್ಯು ಎಂಬ ಗೃಹಿತದಿಂದಲೇ ವಿಶ್ಲೇಷಣೆ ಮಾಡುತ್ತಿರುವುದನ್ನು ಬದಿಗಿಟ್ಟು ಹತ್ತೊಂಬತ್ತನೆಯ ಶತಮಾನದಿಂದಲೇ ಈ ದಿಕ್ಕಿನಲ್ಲಿ ತೊಡಗಿಕೊಂಡ ಹಲವಾರು ಕವಿಗಳನ್ನು ಮೊದಲ ಬಾರಿಗೆ ಇಲ್ಲಿ ಒಂದೆಡೆ ತಂದು ಅವರ ಕಾವ್ಯಸಿದ್ದಿಯನ್ನು ಪ್ರಕಟಪಡಿಸಿ ‘ಅಕೆಡೆಮಿಕ್’ ಆದ ಮನೋಧರ್ಮದಿಂದ ರೂಪುಗೊಂಡ ಕಾವ್ಯದಿಂದಲೇ ‘ಆಧುನಿಕ ಕನ್ನಡ ಕಾವ್ಯದ ಹೆಬ್ಬಾಗಿಲು’ ತೆರೆಯಿತೆಂಬ ವಾದವನ್ನು ಅಲ್ಲಗಳೆದು ನವೋದಯ ಆರಂಭದ ಕನ್ನಡ ಕಾವ್ಯದ ಕೃಷಿಕಾರರು ಜಾನಪದ ಸತ್ವವನ್ನು ಮೈಗೂಡಿಸಿಕೊಂಡ ಲಾವಣಿಕಾರರು, ತತ್ತ್ವಪದಕಾರರು ಹಾಗೂ ಈ ಬಗೆಯ ರಚನಾಕಾರರು ಎಂಬುದನ್ನು ತಮ್ಮ ಅಧ್ಯಯನದ ಮೂಲಕ ಡಾ.ಪ್ರಕಾಶ ಖಾಡೆ ಸಾದಿsಸಿ ತೋರಿಸುವದರೊಂದಿಗೆ ಜಾನಪದ,ಅನುಭಾವ,ವಚನ ಹಾಗೂ ಸೂಫೀ ಸಾಹಿತ್ಯದ ಸಮನ್ವತೆಯ ಸಂಗಮವಾದ ಹಲಸಂಗಿ ಮೂಲಕ ಕನ್ನಡ ಸಾಹಿತ್ಯದ ಹೊಸ ಚರಿತ್ರೆಯನ್ನು ದಾಖಲಿಸಲು ರಾಜಮಾರ್ಗ ಹಾಕಿಕೊಟ್ಟಿದ್ದಾರೆ.ಸರಕಾರವು ಈಗ ಹಲಸಂಗಿ ಕೇಂದ್ರ ಒಳಗೊಂಡು ಮಧುರಚೆನ್ನ,ಸಿಂಪಿ ಲಿಂಗಣ್ಣವರ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಸ್ಥಾಪಿಸಿ ಆದೇಶ ಹೊರಡಿಸಿರುವುದು ಈ ಭಾಗದ ಅಧ್ಯಯನಕ್ಕೆ ಮತ್ತಷ್ಟು ವ್ಯಾಪಕತೆ ಪ್ರಾಪ್ತವಾದಂತಾಗಿದೆ. ವಿಕ್ರಮ ಬಸನಗೌಡರ.-[೧]

ಉಲ್ಲೇಖ[ಬದಲಾಯಿಸಿ]

  1. ವಿಕ್ರಮ ಬಸನಗೌಡರ--ಹೊಸ ಸಂಶೋಧನೆ :ನವೋದಯ ಕಾವ್ಯ;. ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಕುರಿತು ಡಾ.ಪ್ರಕಾಶ ಗ.ಖಾಡೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರೋ ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ 2005 ರಲ್ಲಿ ಕೈಕೊಂಡ ಪಿಎಚ್.ಡಿ.