ನವಿಲು ನೃತ್ಯ
ನವಿಲು ನೃತ್ಯವು ಸಾಂಪ್ರದಾಯಿಕ ಏಷ್ಯಾ ಜಾನಪದ ನೃತ್ಯವಾಗಿದ್ದು, ನವಿಲುಗಳ ಸೌಂದರ್ಯ ಮತ್ತು ಚಲನೆಯನ್ನು ವಿವರಿಸುತ್ತದೆ. ಮ್ಯಾನ್ಮಾರ್, ಕಾಂಬೋಡಿಯಾದ ಪಶ್ಚಿಮ ಮತ್ತು ಉತ್ತರ ಭಾಗ, ಇಂಡೋನೇಷ್ಯಾದ ಪಶ್ಚಿಮ ಜಾವಾ, ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನವಿಲು ನೃತ್ಯಗಳು ಸೇರಿದಂತೆ, ಏಷ್ಯಾದಲ್ಲಿ ಹಲವಾರು ರೀತಿಯ ನವಿಲು ನೃತ್ಯ ಸಂಪ್ರದಾಯಗಳು ಚಾಲನೆಯಲ್ಲಿವೆ.
ಚೀನಾ
[ಬದಲಾಯಿಸಿ]ಚೀನಾದ 56 ಜನಾಂಗೀಯ ಗುಂಪುಗಳಲ್ಲಿ ಒಂದಾದ ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ದೈದಾಯ್ ಜನರು ಕುಲದಲ್ಲಿ ನವಿಲು ಒಂದು ಪ‍್ರಮುಖ ಅಂಗವಾಗಿದೆ. ಇದು ದೈ ಜನರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಅತ್ಯಗತ್ಯ ಭಾಗವಾಗಿದೆ. ದೈ ಜನರ ಜಾನಪದ ನೃತ್ಯಗಳಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಸಾಂಪ್ರದಾಯಿಕ ಪ್ರದರ್ಶನವಾದ ನವಿಲು ನೃತ್ಯವು ಡೆಹೊಂಗ್ ದೈ ಮತ್ತು ಜಿಂಗ್ಪೋ ಸ್ವಾಯತ್ತ ಪ್ರಾಂತ್ಯದಲ್ಲಿರುವ ರುಯಿಲಿ, ಲಕ್ಸಿಯಲ್ಲಿ ಬಹು ಪ್ರಚಲಿತವಾಗಿದೆ. ಮೆಂಗ್ಡಿಂಗ್, ಮೆಂಗ್ಡಾ, ಜಿಂಗು ಡೈ ಮತ್ತು ಯಿ ಸ್ವಾಯತ್ತ ಕೌಂಟಿ, ಕಾಂಗ್ಯುವಾನ್ ವಾ ಸ್ವಾಯತ್ತ ಕೌಂಟಿ ಮತ್ತು ಡೈ ಜನರ ಇತರ ವಾಸಸ್ಥಳಗಳಲ್ಲಿಯೂ ಇದಕ್ಕೆ ಪ್ರಮುಖ ಸ್ಥಾನವಿದೆ.[೧]
ದೈ ಜನಾಂಗೀಯ ಗುಂಪಿನ ನವಿಲು ನೃತ್ಯವು ಸುದೀರ್ಘ ವಾದ ಇತಿಹಾಸವನ್ನು ಹೊಂದಿದೆ. ಈ ನೃತ್ಯವು ಅವರ ವಿಶಿಷ್ಟ ಜನಾಂಗೀಯ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ವಾರ್ಷಿಕ ಜಲ ಉತ್ಸವ ಮತ್ತು ಗೇಟ್ ಕ್ಲೋಸಿಂಗ್/ಓಪನಿಂಗ್ ಫೆಸ್ಟಿವಲ್ನಂತಹ ಯಾವುದೇ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಜನರು ನವಿಲು ನೃತ್ಯದ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.
ಸಾಮಾನ್ಯವಾಗಿ, ಚೀನಾದಲ್ಲಿ ದೈ ಜನಾಂಗೀಯ ಗುಂಪಿನ ನವಿಲು ನೃತ್ಯದಲ್ಲಿ ಎರಡು ವಿಭಿನ್ನ ವಿಧಗಳಿವೆ. ಅವುಗಳಲ್ಲಿ ಒಂದು ನವಿಲಿನ ನೃತ್ಯವಾಗಿದ್ದು, ಇದು ಬಿದಿರು, ರೇಷ್ಮೆ ಮತ್ತು ನವಿಲಿನ ಹಿಗ್ಗಿದ ಗರಿಗಳನ್ನು ಅನುಕರಿಸುವ ಇತರ ವಸ್ತುಗಳನ್ನೊಳಗೊಂಡ ಭಾರವಾದ ಸ್ಟ್ಯಾಂಡ್ ಅನ್ನು ಒಳಗೊಂಡಿರುತ್ತದೆ. ಇದರ ಒಂದು ಸ್ಟ್ಯಾಂಡ್ 20 ಕಿಲೋಗಳಷ್ಟು ತೂಕವಿರಬಹುದು. ಪ್ರದರ್ಶಕರ ಹಿಂಭಾಗ ಮತ್ತು ಸೊಂಟಕ್ಕೆ ಅದನ್ನು ಜೋಡಿಸಲಾಗುತ್ತದೆ. ಇನ್ನೊಂದು ವಿಧ "ನಿಶ್ಶಸ್ತ್ರ ನವಿಲು ನೃತ್ಯ", ಇದರಲ್ಲಿ ಕಲಾವಿದರು ಭಾರವಾದ ಸ್ಟ್ಯಾಂಡನ್ನು ಹೊತ್ತುಕೊಳ್ಳುವ ಅಗತ್ಯವಿಲ್ಲ. ಆನೆ-ಕಾಲು ಡ್ರಮ್ ಗಳು, ಜಾಗಟೆಗಳು ಮತ್ತು ತಾಳಗಳು ನವಿಲು ನೃತ್ಯಕ್ಕೆ ಸಾಮಾನ್ಯವಾಗಿ ಬಳಸುವ ವಾದ್ಯಗಳಾಗಿವೆ.
ಭಾರತ
[ಬದಲಾಯಿಸಿ]ಮಯಿಲಾಟ್ಟಂ (ತಮಿಳು), ಅನ್ನು ನವಿಲು ನೃತ್ಯ ಎಂದೂ ಕರೆಯುತ್ತಾರೆ. ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಇದನ್ನು ಥಾಯ್ ಪೊಂಗಲ್ ಸುಗ್ಗಿಯ ಹಬ್ಬದ ಸಮಯದಲ್ಲಿ ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಲ್ಲಿ ಹುಡುಗಿಯರು ನವಿಲಿನ ತರದ ಉಡುಪನ್ನು ಧರಿಸುತ್ತಾರೆ.[೨]
ಇಂಡೋನೇಷ್ಯಾ
[ಬದಲಾಯಿಸಿ]
ಇಂಡೋನೇಷ್ಯಾದಲ್ಲಿ ಇದನ್ನು ನವಿಲು ನೃತ್ಯ (ಮೆರಾಕ್ ನೃತ್ಯ ಅಥವಾ ತಾರಿ ಮೆರಾಕ್) ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಜಾವಾದಲ್ಲಿ ಹುಟ್ಟಿಕೊಂಡಿತು. ನವಿಲಿನ ಗರಿಗಳು ಮತ್ತು ನವಿಲಿನ ಚಲನೆಗಳಿಂದ ಸ್ಫೂರ್ತಿ ಪಡೆದ ಮಹಿಳಾ ನೃತ್ಯಗಾರರು ಇದನ್ನು ಸುಂದನೀಸ್ ನೃತ್ಯ ಶಾಸ್ತ್ರೀಯ ಚಲನೆಗಳೊಂದಿಗೆ ಬೆರೆತು ಪ್ರದರ್ಶಿಸುತ್ತಾರೆ. ಇದು 1950ರ ದಶಕದಲ್ಲಿ ಸುಂದನೀಸ್ ಕಲಾವಿದ ಮತ್ತು ನೃತ್ಯ ಸಂಯೋಜಕ ರಾಡೆನ್ ಟಿಜೆಜೆ ಸೊಮಂಟ್ರಿ ಸಂಯೋಜಿಸಿದ ಹೊಸ ಸೃಷ್ಟಿ ನೃತ್ಯಗಳಲ್ಲಿ ಒಂದಾಗಿದೆ. ಈ ನೃತ್ಯವನ್ನು ಗೌರವಾನ್ವಿತ ಅತಿಥಿಗಳನ್ನು ಸ್ವಾಗತಿಸಲು ದೊಡ್ಡ ಸಮಾರಂಭಗಳಲ್ಲಿ ಪ್ರದರ್ಶಿಸುತ್ತಾರೆ, ಸಾಂದರ್ಭಿಕವಾಗಿ ಸುಂದನೀಸ್ ವಿವಾಹ ಸಮಾರಂಭಗಳಲ್ಲಿ ಸಹ ಇದನ್ನು ಪ್ರದರ್ಶಿಸಲಾಗುತ್ತದೆ. ಶ್ರೀಲಂಕಾ ಪೆರಹಾರಾ ಉತ್ಸವಗಳಂತಹ ಅನೇಕ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುವ ಇಂಡೋನೇಷ್ಯಾದ ನೃತ್ಯಗಳಲ್ಲಿ ಈ ನೃತ್ಯವೂ ಒಂದಾಗಿದೆ.
ಗ್ಯಾಲರಿ
[ಬದಲಾಯಿಸಿ]- ನವಿಲು ನೃತ್ಯಗಳು
-
ಕಾಂಬೋಡಿಯನ್ನವಿಲು ನೃತ್ಯ
-
ಶಾನ್ ನವಿಲು ನೃತ್ಯಮ್ಯಾನ್ಮಾರ್
-
ನೃತ್ಯಗಾರರುಚಿಯಾಂಗ್ ಮಾಯ್, ಎಂದುಥೈಲ್ಯಾಂಡ್
-
ಥೈಲ್ಯಾಂಡ್ ನ ಚಿಯಾಂಗ್ ಮಾಯಿಯಲ್ಲಿ ನೃತ್ಯಗಾರರು
ಇದನ್ನೂ ನೋಡಿ
[ಬದಲಾಯಿಸಿ]- ಕಾಂಬೋಡಿಯಾದಲ್ಲಿ ನೃತ್ಯ
- ಚೀನಾದಲ್ಲಿ ನೃತ್ಯ
- ಭಾರತದಲ್ಲಿ ನೃತ್ಯ
- ಇಂಡೋನೇಷ್ಯಾದಲ್ಲಿ ನೃತ್ಯ
- ಸುಂದನೀಸ್ ನೃತ್ಯ
ಉಲ್ಲೇಖಗಳು
[ಬದಲಾಯಿಸಿ]- ↑ "傣族孔雀舞 - 中国非物质文化遗产网·中国非物质文化遗产数字博物馆".
- ↑ Folk Dances of Tamil Nadu at carnatica.net.