ನವದೀಪ್ ಸೈನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವದೀಪ್ ಸೈನಿ
ವಯಕ್ತಿಕ ಮಾಹಿತಿ
ಹುಟ್ಟು (1992-11-23) ೨೩ ನವೆಂಬರ್ ೧೯೯೨ (ವಯಸ್ಸು ೩೧)
ಕರ್ನಾಲ್, ಹರಿಯಾಣ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ವೇಗಿ
ಪಾತ್ರಬೌಲರ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2013–presentಡೆಲ್ಲಿ ಕ್ರಿಕೆಟ್ ಟೀಮ್
2018–presentರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೂಲ: Cricinfo, ೨೧ ಜುಲೈ ೨೦೧೯

ನವದೀಪ್ ಸೈನಿ (ಜನನ ೨೩ ನವೆಂಬರ್ ೨೯೯೨). ಇವರು ದೆಹಲಿ ಪರ ಆಡುವ ಭಾರತೀಯ ಕ್ರಿಕೆಟಿಗ.[೧]

ಆರಂಭಿಕ ಜೀವನ[ಬದಲಾಯಿಸಿ]

ನವದೀಪ್ ಸೈನಿ ೨೩ ರ ನವೆಂಬರ್ ೧೯೯೨ ರಲ್ಲಿ ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದರು.[೨] ಇವರ ತಂದೆ ಚಾಲಕ, ಹರಿಯಾಣ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದರು. ಇವರ ಅಜ್ಜ ಕರಮ್ ಸಿಂಗ್, ಸ್ವಾತಂತ್ರ್ಯ ಕಾರ್ಯಕರ್ತ, ಸುಭಾಸ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಭಾಗವಾಗಿದ್ದರು.[೩][೪]

ದೇಶೀಯ ವೃತ್ತಿ[ಬದಲಾಯಿಸಿ]

೨೦೧೫-೧೬ ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನವದೀಪ್ ಸೈನಿಯವರು ೨ ಜನವರಿ ೨೦೧೬ ರಂದು ಟ್ವೆಂಟಿ-೨೦ ಗೆ ಪಾದಾರ್ಪಣೆ ಮಾಡಿದರು.[೫] ಫೆಬ್ರವರಿ ೨೦೧೭ ರಲ್ಲಿ, ಇವರನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ೨೦೧೭ ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ 10 ಲಕ್ಷಕ್ಕೆ ಖರೀದಿಸಿತು.[೬] ಜನವರಿ ೨೦೧೮ ರಲ್ಲಿ, ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦೧೮ ರ ಐಪಿಎಲ್ ಹರಾಜಿನಲ್ಲಿ ೩ ಕೋಟಿಗೆ ಖರೀದಿಸಿತು. ಐಪಿಎಲ್ ೨೦೧೯ ರಲ್ಲಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಇವರು ೨೦೧೭-೧೮ ರ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದರು. ಇವರು ೨೦೧೮-೧೯ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ ಹದಿನಾರು ೧೬ ವಿಕೆಟ್ ಪಡೆದಿದ್ದರು.[೭] ಅಕ್ಟೋಬರ್ ೨೦೧೮ ರಲ್ಲಿ ಇವರು ೨೦೧೮-೧೯ ರ ದಿಯೋಧರ್ ಟ್ರೋಫಿಗೆ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದರು.[೮] ಮುಂದಿನ ತಿಂಗಳು, ೨೦೧೮-೧೯ ರಣಜಿ ಟ್ರೋಫಿಗೆ ಮುಂಚಿತವಾಗಿ ವೀಕ್ಷಿಸಿದ ಎಂಟು ಆಟಗಾರರಲ್ಲಿ ಒಬ್ಬನೆಂದು ಅವರನ್ನು ಹೆಸರಿಸಲಾಯಿತು.[೯]

ಅಂತರರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

ಜೂನ್ ೨೦೧೮ ರಲ್ಲಿ, ಮೊಹಮ್ಮದ್ ಶಮಿಯ ಬದಲಿಯಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕಾಗಿ ಇವರನ್ನು ಭಾರತದ ಟೆಸ್ಟ್ ತಂಡಕ್ಕೆ ಸೇರಿಸಲಾಯಿತು, ಆದರೆ ಇವರು ಆಡಲಿಲ್ಲ.[೧೦] ೨೦೧೯ ರ ಏಪ್ರಿಲ್‌ನಲ್ಲಿ ಇವರನ್ನು ೨೦೧೯ ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಟ್ಯಾಂಡ್‌ಬೈ ಬೌಲರ್ ಎಂದು ಹೆಸರಿಸಲಾಯಿತು.[೧೧] ಜುಲೈ ೨೦೧೯ ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ಏಕದಿನ ಅಂತರಾಷ್ಟ್ರೀಯ (ಒಡಿಐ) ಮತ್ತು ಟ್ವೆಂಟಿ -20 ಅಂತರಾಷ್ಟ್ರೀಯ (ಟಿ 20 ಐ) ತಂಡಗಳಲ್ಲಿ ಇವರನ್ನು ಹೆಸರಿಸಲಾಯಿತು.[೧೨]

ಉಲ್ಲೇಖಗಳು[ಬದಲಾಯಿಸಿ]

  1. "Navdeep Saini". ESPN Cricinfo. Retrieved 7 November 2015.
  2. Jain, Sahil (11 June 2018). "Navdeep Saini: India's latest pace sensation". Sportskeeda (in ಇಂಗ್ಲಿಷ್). Retrieved 22 July 2019.
  3. Venugopal, Arun (19 December 2017). "The making of Navdeep Saini". ESPNcricinfo (in ಇಂಗ್ಲಿಷ್). Retrieved 22 July 2019.
  4. "Whenever I speak about Gautam Gambhir, I get emotional, says Navdeep Saini". The Indian Express (in Indian English). Press Trust of India. 11 June 2018. Retrieved 22 July 2019.
  5. "Syed Mushtaq Ali Trophy, Group C: Delhi v Railways at Vadodara, Jan 2, 2016". ESPN Cricinfo. Retrieved 10 January 2016.
  6. "List of players sold and unsold at IPL auction 2017". ESPN Cricinfo. Retrieved 20 February 2017.
  7. "Vijay Hazare Trophy, 2018/19 - Delhi: Batting and bowling averages". ESPN Cricinfo. Retrieved 20 October 2018.
  8. "Rahane, Ashwin and Karthik to play Deodhar Trophy". ESPN Cricinfo. Retrieved 19 October 2018.
  9. "Eight players to watch out for in Ranji Trophy 2018-19". ESPN Cricinfo. Retrieved 3 November 2018.
  10. "Shami out of Afghanistan Test after failing fitness Test". ESPN Cricinfo. Retrieved 11 June 2018.
  11. "Navdeep Saini named standbys for World Cup". ESPN Cricinfo. Retrieved 24 April 2019.
  12. "MS Dhoni out of West Indies tour, Hardik Pandya rested". ESPN Cricinfo. Retrieved 21 July 2019.