ನರವಲು(ಅಗ್ನಿಮಂಥ)

ವಿಕಿಪೀಡಿಯ ಇಂದ
Jump to navigation Jump to search

ಸುಮಾರು ಎತ್ತರ ಬೆಳೆಯುವ ಪೊದೆ, ಮೃದುವಾದ ಮತ್ತು ನೀಳವಾದ ರೋಮಗಳಿಂದ ಕವಲುಗಳು ಕೂಡಿರುತ್ತವೆ. ಎಲೆಗಳು ಸುಂದರವಾಗಿದ್ದು ಅಂಚು ಚಿತ್ತಾಕಾರವಾಗಿರುತ್ತದೆ. ಎಲೆ ಕವಲೊಡನೆ ಕೂಡುವ ಕಡೆ ಬಗ್ಗಿರುವ ಅಂಗವಿರುತ್ತದೆ ಮತ್ತು ಈ ಭಾಗದಿಂದ ಪುಷ್ಪಗುಚ್ಛ ಹುಟ್ಟುತ್ತದೆ. ಕೇಸರಗಳು ಹೂದಳಕ್ಕಿಂತ ಚಿಕ್ಕದಾಗಿರುತ್ತದೆ ಮತ್ತು ಬಂಗಾರದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹೂವುಗಳ ಒಗರು, ಕಾಯಿಯಲ್ಲಿ ಸಾಮಾನ್ಯವಾಗಿ ನಾಲ್ಕು ಬೀಜಗಳು ಇರುತ್ತದೆ. ಇವುಗಳು ನುಣುಪಾಗಿದ್ದು ಚೂಪಾದ ಮೂಲೆಗಳನ್ನು ಹೊಂದಿ ಕಂದು ಬಣ್ಣದ್ದಾಗಿರುತ್ತವೆ. ಈ ಬೀಜದಲ್ಲಿ ಅತಿ ಸುವಾಸನೆಯುಳ್ಳ ಮತ್ತು ಶೀಘ್ರವಾಗಿ ಹಾನಿಯಾಗಿ ಹೋಗುವ ತೈಲವಿರುತ್ತದೆ. ಅಗ್ನಿಮಂಥವನ್ನು ಅಗ್ನಿಮಂಥಕ್ವಾಥ ಮತ್ತು ದಶಮೂಲಾರಿಷ್ಟದಲ್ಲಿ ಉಪಯೋಗಿಸುತ್ತಾರೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಎಲ್ಲಾ ವ್ಯಾಧಿಗಳನ್ನು ಶಮನಗೊಳಿಸುವ ಹಾಗೂ ಪಿತ್ತವನ್ನು ಶಾಂತ ಗೊಳಿಸುವ ಗುಣವಿದೆ. ರುಚಿ, ಕಾಸಾ, ಶ್ವಾಸ, ಅಜೀರ್ಣ, ಹೊಟ್ಟೆಶೂಲೆ, ವಾತ, ಮೂತ್ರದಲ್ಲಿ ಕಲ್ಲು ಪ್ರಮೇಹ, ಸನ್ನಿವಾತ ಮುಂತಾದ ವ್ಯಾಧಿಗಳನ್ನು ಪರಿಹರಿಸುವುದರಲ್ಲಿ ದಶಮೂಲಾರಿಷ್ಟದ ಪಾತ್ರ ಮಹತ್ವವಾದುದು. ಇದರ ಕ್ರಮಬದ್ದವಾದ ಸೇವನೆಯಿಂದ ಶರೀರದಲ್ಲಿ ವರ್ಣ ಮತ್ತು ಜಲ ವೃದ್ಧಿಯಾಗುತ್ತದೆ.[೧]

ಮೂತ್ರನಾಳದಲ್ಲಿ ಕಲ್ಲು[ಬದಲಾಯಿಸಿ]

ನೆಗ್ಗಿಲ ಮುಳ್ಳು, ಶುಂಟಿ, ನರವಲು ಚಕ್ಕೆ, ಪಾಷಾಣ ಬೇಧಿ, ಇವುಗಳ ಸಮತೂಕ ಹಾಕಿ ಅಷ್ಟಾಂಶ ಕಷಾಯ ಮಾಡುವುದು. ಈ ಕಷಾಯ ಎರಡು ಟೀ ಚಮಚದಲ್ಲಿ ಯವಕ್ಷಾರ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದು.

ಸಕಲ ವಿಧವಾದ ಶುಲೆಗಳಿಗೆ[ಬದಲಾಯಿಸಿ]

ನೆಲಗುಳ್ಳದ ಎಲೆ, ನರವಲು ಚಕ್ಕೆ ಸಮಪ್ರಮಾಣದಲ್ಲಿ ಸೇರಿಸಿ ನುಣ್ಣಗೆ ಅರೆದು ಸೇರಿಸಿ ಚತುರಾಂಶ ಕಷಾಯ ಮಾಡುವುದು. ಈ ಕಷಾಯಕ್ಕೆ ಸ್ವಲ್ಪ ಸೈಂಧವ ಲವಣ ಮತ್ತು ಎಳ್ಳೆಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ನಿಧಾನವಾಗಿ ಕಾಯಿಸುವುದು. ನೀರೆಲ್ಲಾ ಇಂಗಿ ಹೋದ ಮೇಲೆ ಎಣ್ಣೆಯನ್ನು ಶೋಧಿಸಿ ಶೇಖರಿಸುವುದು. ಇದರಿಂದ ಮೂತ್ರನಾಳದಲ್ಲಿರುವ ಕಲ್ಲು ಬಿದ್ದು ಹೋಗುತ್ತದೆ.

ತಲೆ ಶೂಲೆ ಮತ್ತು ಪೀನಸಿ ರೋಗ(ಮೂಗಿಗೆ ವಾಸನೆ ತಿಳಿಯದೇ ಇರುವುದು)[ಬದಲಾಯಿಸಿ]

ಚಿತ್ರಮೂಲದ ಬೇರು, ಉತ್ತರಾಣಿ ಬೇರು, ತಗ್ಗಿ ಚಕ್ಕೆ, ನರವಲು ಚಕ್ಕೆ, ಹೊಂಗೆ ಚಕ್ಕೆ ಮತ್ತು ಶತಾವರಿ ತಲಾ 5-5 ಗ್ರಾಂ ಸೇರಿಸಿ ಚೆನ್ನಾಗಿ ಜಜ್ಜಿ ಚತುರಾಂಶ ಕಷಾಯ ಮಾಡಿ ವೇಳೆಗೆ ನಾಲ್ಕು ಟೀ ಚಮಚ ಸೇವಿಸುವುದು.

ಮಕ್ಕಳ ಜ್ವರ ಮತ್ತು ಕೆಮ್ಮಿನಲ್ಲಿ[ಬದಲಾಯಿಸಿ]

ಮಲೆನಾಡಿನಲ್ಲಿ ಹಳ್ಳಿಗಳ ಕಡೆ ನರವಲು ಗಿಡ ಎಲೆಗಳನ್ನು ಬಟ್ಟೆಯಲ್ಲಿ ಬಿಗಿಯಾಗಿ ಗಂಟು ಕಟ್ಟಿ ಕೊರಳಿಗೆ ಹಾಕುತ್ತಾರೆ. ಇದರಿಂದ ಮಕ್ಕಳಿಗೆ ಕೆಮ್ಮು ಮತ್ತು ಜ್ವರ ಬರುವುದಿಲ್ಲ ಎಂಬ ನಂಬಿಕೆ ಇದೆ.

ಮಕ್ಕಳ ಹೊಟ್ಟೆ ಉಬ್ಬರಕ್ಕೆ[ಬದಲಾಯಿಸಿ]

ನರವಲು ಗಿಡದ ಹಸಿ ಎಲೆಗಳನ್ನು ತಂದು ಚೆನ್ನಾಗಿ ಜಜ್ಜಿ ಮಗುವಿನ ಮೂಗಿಗೆ ವಾಸನೆ ಹಿಡಿಯುವುದು.

ಕಘದ ಜ್ವರದಲ್ಲಿ[ಬದಲಾಯಿಸಿ]

ನರವಲು ಮರದ ಚಕ್ಕೆಯನ್ನು ತಂದು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಕಷಾಯ ಮಾಡುವುದು. ಎರಡು ಟೀ ಚಮಚ ಈ ಕಷಾಯಕ್ಕೆ ಎರಡು ಟೀ ಚಮಚ ಜೇನು ಸೇರಿಸಿ ದಿನಕ್ಕೆ ಒಂದು ವೇಳೆ ಸೇವಿಸುವುದು.

ದಶಮೂಲಾರಿಷ್ಟ[ಬದಲಾಯಿಸಿ]

ಪ್ರಸಿದ್ದ ಆಯುರ್ವೇದ ಔಷಧಿ ತಯಾರಕರಿಂದ ತಯಾರಾದ ದಶಮೂಲಾರಿಷ್ಟವು ಔಷಧಿ ಅಂಗಡಿಗಳಲ್ಲಿ ದೊರೆಯುವುದು. ಇದರ ಸೇವನೆಯಿಂದ ಸಂಗ್ರಹಿಣಿ, ಅರುಚಿ, ಕೆಮ್ಮು, ದಮ್ಮು, ಶೀತ, ಅಜೀರ್ಣ ಪರಿಹಾರವಾಗಿ ಬಲ ಮತ್ತು ಶಕ್ಥಿ ನೀಡುವುದು. ಎಲ್ಲಾ ವಯಸ್ಸಿನವರು ಉಪಯೋಗಿಸಬಹುದಾದ ಸರಳ ಮತ್ತು ಪರಿಣಾಮಕಾರಿ ಔಷಧಿ.


ಉಲೇಖ[ಬದಲಾಯಿಸಿ]

  1. ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ಎ. ಆರ್. ಎಂ. ಸಾಹೇಬ್, ದಿವ್ಯಚಂದ್ರ ಪ್ರಕಾಶನ, ಪರಿಷ್ಕೃತ ಮುದ್ರಣ-೨೦೦೨, ಪುಟ ೧೨೪