ನಡುಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊಂಟದ ಸುತ್ತ ನಡುಕಟ್ಟನ್ನು ಧರಿಸಿರುವ ಕ್ರೈಸ್ತ ಪಾದ್ರಿ

ನಡುಕಟ್ಟು ಪದವು ಅನೇಕ ಕ್ರೈಸ್ತ ಪಂಥಗಳಲ್ಲಿ ಸಾಮಾನ್ಯವಾಗಿ ಬಿಳಿ ನಿಲುವಂಗಿಯನ್ನು ಮಾಮೂಲಾಗಿ ಮುಚ್ಚುವ ಧರ್ಮಾಚರಣೆಯ ಉಡುಪನ್ನು ಸೂಚಿಸುತ್ತದೆ.[೧]

ಪುರುಷರಿಗೆ ನಡುಕಟ್ಟು ಸೇವೆ ನೀಡಲು ತಯಾರಿ ಮತ್ತು ಸಿದ್ಧತೆಯನ್ನು ಸಂಕೇತಿಸುತ್ತದೆ, ಮತ್ತು ಮಹಿಳೆಯರಿಗೆ ನಡುಕಟ್ಟು ಪವಿತ್ರತೆ ಹಾಗೂ ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಸಾಹಿತ್ಯದಲ್ಲಿ ರುಜುಪಡಿಸಿದಂತೆ, ಮಧ್ಯಯುಗದಲ್ಲಿ ಇದನ್ನು ಜನಸಾಮಾನ್ಯರು ಕೂಡ ಧರಿಸುತ್ತಿದ್ದರು.

ಕೆಲವು ಬ್ರಿಟನ್ನರು ಬೊಜ್ಜನ್ನು ತಡೆಗಟ್ಟಲು ಕಬ್ಬಿಣದ ನಡುಕಟ್ಟುಗಳನ್ನು ಧರಿಸುತ್ತಿದ್ದರು. ಡ್ರೂಯಿಡಿಕಲ್ ಯುಗದಿಂದ, ರೋಗಗಳ ಗುಣವಾಗುವಿಕೆ, ವಿಶೇಷವಾಗಿ ಕಷ್ಟದ ಹೆರಿಗೆಯ ಗುಣವಾಗುವಿಕೆಯು ಕೆಲವು ನಡುಕಟ್ಟುಗಳನ್ನು ಧರಿಸುವುದರಿಂದ ಆಗುತ್ತಿತ್ತು ಎಂದು ಹೇಳಲಾಗಿದೆ. ಆ್ಯಂಗ್ಲೋ-ಸ್ಯಾಕ್ಸನ್ನರಲ್ಲಿ, ಇದನ್ನು ಎರಡೂ ಲಿಂಗದವರು ಬಳಸುತ್ತಿದ್ದರು. ಪುರುಷರು ಟ್ಯೂನಿಕ್‍ನ್ನು ಹಿಡಿದಿಡಲು ಮತ್ತು ಕತ್ತಿಗೆ ಆಧಾರ ಒದಗಿಸಲು ಇದನ್ನು ಬಳಸುತ್ತಿದ್ದರು. ಇದು ಸಮೃದ್ಧವಾಗಿ ಕಸೂತಿ ಹಾಕಲ್ಪಡುತ್ತಿತ್ತು ಮತ್ತು ಬಿಳಿ ಚಕ್ಕಡದ್ದಾಗಿರುತ್ತಿತ್ತೆಂದು ಕಂಡುಬಂದಿದೆ. ಚಕ್ಕಡದ ಪಟ್ಟಿಯನ್ನು ಮುಖ್ಯವಾಗಿ ಸಂನ್ಯಾಸಿಗಳು ಧರಿಸುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. Moore, Stephen E. (1996). Church Words: Origins and Meanings. Forward Movement Publications. p. 53. ISBN 9780880281720. Generally an alb is closed with a girdle, an Anglican-style double-breasted cassock is closed with a cincture, and a Roman cassock is closed with either one.