ನಗೆನಾಣ್ಯ

ವಿಕಿಪೀಡಿಯ ಇಂದ
Jump to navigation Jump to search

ದುಗುಡ ತುಂಬಿದ ಮನಕ್ಕೆ ಸಂತಸದ ಅಮೃತಧಾರೆ ನೀಡುವ ಈ ಸಣ್ಣ ನಗೆ ಚುಟುಕಗಳ `ರಿಸರ್ವ್ ಬ್ಯಾಂಕ್' ಪ್ರತಿಯೊಬ್ಬರ ಕಿಸೆಯನ್ನಲಂಕರಿಸಲರ್ಹವಾಗಿದೆ (`ನಗೆ ನಾಣ್ಯ').

ಹಾಸ್ಯಗಳು ಒಪ್ಪವಾಗಿ, ವಿಂಗಡಿಸಿ ಕೊಡಲಾಗಿದೆ. ಚಿತ್ರಗಳು ಮತ್ತು ಮುದ್ರಣ ಉತ್ತಮವಾಗಿದ್ದರೆ ಪುಸ್ತಕದ ಕಳೆ ಇನ್ನಷ್ಟು ಹೆಚ್ಚುತ್ತಿತ್ತು. ನಗೆಸಾಹಿತ್ಯಕ್ಕೆ `ಅಭಾವ'ವಿರುವ ಕನ್ನಡದಲ್ಲಿ, ಶ್ರೀ ನಾಗೇಶರಾಯರ ಪ್ರಯತ್ನ ಅಭಿನಂದನೀಯ. `ನಗೆ ನಾಣ್ಯ' ಒಂದು ವಿಶಿಷ್ಟ ಕೃತಿ. ಬೇರೆ ಭಾಷೆಗಳಲ್ಲಿ ನಗೆ ಹನಿಗಳ ಪುಸ್ತಕಗಳು ಅನೇಕವಾಗಿದ್ದರೂಕನ್ನಡದಲ್ಲಿ ಇಂಥ ಸಂಕಲನಗಳು ಸಾಕಷ್ಟು ಬಂದಿಲ್ಲ.ಇಂಥ ನಗೆಹನಿಗಳಿಗೆ ಪತ್ರಿಕೆಗಳು ಮೂಲವಾಗಿರುತ್ತವೆ. ರಸಿಕ ಓದುಗರು ತಮ್ಮ ಜೀವನದಲ್ಲೊದಗುವ ರಸ ನಿಮಿಷಗಳ ಸನ್ನಿವೇಶಗಳನ್ನು ಪತ್ರಿಕೆಗಳ ಮೂಲಕ ಪ್ರಕಟಿಸಿ ಉಳಿದವರೂ ಆ ವಿನೋದದ ಸವಿಯುಣ್ಣುವಂತೆ ಮಾಡಬಲ್ಲದು.ಪ್ರಕೃತ ಪುಸ್ತಕದಲ್ಲಿ ಸಂಗ್ರಾಹಕರು ನಗೆ ನಾಣ್ಯಗಳನ್ನು ಆರಿಸುವಾಗ ಒಳ್ಳೆಯ ಜಾಣ್ಮೆಯನ್ನು ತೋರಿಸಿದ್ದಾರೆ. ವಿವೇಚನೀಯ ಭಾಷೆಗಳಿಂದ ಅವನ್ನು ಎತ್ತುವಾಗ ಮೂಲದ ಅರ್ಥವನ್ನು ಚೆನ್ನಾಗಿ ಗಮನಿಸಿದ್ದಾರೆ.ಎಲ್ಲರೂ ಸಂಗ್ರಹಿಸಬೇಕಾದ ಪುಸ್ತಕ ಇದು.