ನಗುವನಹಳ್ಳಿ

ವಿಕಿಪೀಡಿಯ ಇಂದ
Jump to navigation Jump to search
ನಗುವನಹಳ್ಳಿ[ಬದಲಾಯಿಸಿ]

ನಗುವನಹಳ್ಳಿ( ಇಂಗ್ಲೀಷ್ - Naguvanahalli) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದೆ. ಪಕ್ಷಿ ವೀಕ್ಷಣೆಗೆ ಇದು ಪ್ರಸಿದ್ದಿ ಹೊಂದಿದೆ.

ನಗುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಪುಟ್ಟಗ್ರಾಮವಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ , ಬೆಳಗೊಳ ಹೋಬಳಿ ಹಾಗು ಜಿಲ್ಲೆ ಕೇಂದ್ರದಿಂದ ೪೦ ಕಿಲೋ ಮೀಟರ್ , ತಾಲೂಕ್ ಕೇಂದ್ರದಿಂದ ೩ ಕಿಲೋ ಮೀಟರ್ ಹಾಗು ಮೈಸೂರಿನಿಂದ ೧೦ ಕಿಲೋ ಮೀಟರ್ ದೂರದಲ್ಲಿರುತ್ತದೆ (ಮಂಡ್ಯ ಹಾಗು ಮೈಸೂರು ಜಿಲ್ಲೆಯ ಬಾರ್ಡರ್ ಹಳ್ಳಿ ಆಗಿರುತ್ತದೆ)

ಗ್ರಾಮದಲ್ಲಿ ಪ್ರತಿ ಮಂಗಳವಾರ ಇಲ್ಲಿ ಗ್ರಾಮೀಣ ಸಂತೆ ನಡೆಯುತ್ತದೆ. ನಗುವನಹಳ್ಳಿ ಮಾತ್ರವಲ್ಲದೆ, ಚಂದಗಾಲು, ಬ್ರಹ್ಮಪುರ, ನಾಗಯ್ಯನಹುಂಡಿ, ರಾಜೀವ್‌ನಗರ, ಬೆಳವಾಡಿ, ಮೇಳಾಪುರ ಹಾಗೂ ಇತರ ಗ್ರಾಮಗಳ ಜನರು ಈ ಸಂತೆಗೆ ಬರುತ್ತಾರೆ

ಪಂಚಾಯಿತಿ ಮುಖ್ಯಕೇಂದ್ರ

ನಗುವನಹಳ್ಳಿ ಪಂಚಾಯಿತಿಗೆ ಇತರ ಹಳ್ಳಿಗಳು, ಬೊಮ್ಮಾರು ಅಗ್ರಹಾರ, ಬ್ರಹ್ಮಪುರ, ಚಂದಗಾಲು, ರಾಜೀವನಗರ , ಕುವೆಂಪು ಬಡಾವಣೆ, ಬೆಳವಾಡಿ. ಪಂಚಾಯಿತಿಯ ಒಟ್ಟು ಜನಸಾಂದ್ರತೆ ಸುಮಾರು ೧೫ ಸಾವಿರ, ನಗುವನಹಳ್ಳಿ ಜನಸಂಖ್ಯೆ ಸುಮಾರು ೭೦೦೦.

ವಿದ್ಯಾಭ್ಯಾಸದ ಸೌಲಭ್ಯಗಳು[ಬದಲಾಯಿಸಿ]

ವಿವಿಧ ರೀತಿಯ ವಿದ್ಯಾಭ್ಯಾಸದ ಸೌಲಭ್ಯಗಳನ್ನು ನಗುವನಹಳ್ಳಿಯಲ್ಲಿ ಕಲ್ಪಿಸಲಾಗಿದೆ. ಸರ್ಕಾರೀ ಹಾಗು ಖಾಸಗಿಗಳು ಸೇರಿ, ನರ್ಸರಿ ಶಾಲೆಗಳು, ರೆಸಿಡೆನ್ಸಿ ಶಾಲೆಗಳು, ಪ್ರೈಮರಿ ಸ್ಕೂಲ್ಗಳಿಂದ,P.U.C ಕಾಲೇಜಿನವರೆಗೂ ಸೌಲಭ್ಯ ಇದೆ.

 1. ಸರ್ಕಾರಿ ಹಿರಿಯ ಪ್ರಾಥಮಿಕೆ ಪಾಠಶಾಲೆ (೧ನೇ ತರಗತಿ ಇಂದ ೧೦ನೇ ತರಗತಿ - ಸಂಪೂರ್ಣ ಕನ್ನಡ ಮಾಧ್ಯಮ)
 2. ಕಾವೇರಿ ಕಾನ್ವೆಂಟ್ ಸ್ಕೂಲ್ ಸುಮಾರು ೨೫ ವರ್ಷಗಳಿಂದ ಕಾರ್ಯ ಮಾಡುತ್ತಿದ್ದು, ಶಾಲೆಯಿಂದ ತೇರ್ಗಡೆಯಾದ ವಿದ್ಯಾರ್ಥಿಗಳು ಇಂಜಿನಿಯರ್ಗಳು, ಡಾಕ್ಟರ್ ಗಳು , ಎ೦ಬಿಎ , ಎ೦ಸಿಎ ಮುಂತಾದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಾ ಇದ್ದಾರೆ.
 3. ಎ೦.ಐ ಟಿ ಇಂಜಿನಿಯರಿಂಗ್ ಕಾಲೇಜು ಇರುತ್ತದೆ
 1. ನಗುವನಹಳ್ಳಿಯಲ್ಲಿ ಹಾಲಿ ಇರುವ ಹೈಸ್ಕೂಲ್ ಬಗ್ಗೆ ಒಂದು ಸಂಗತಿ ಪ್ರಚಲಿತವಾಗಿದೆ - ಸದರಿ ಹೈಸ್ಕೂಲನ್ನು ಸ್ಥಾಪಿಸಲು ೫೦ ವರ್ಷಗಳ ಹಿಂದೆ ದಿವಂಗತ ಶ್ರೀಮತಿ ಜಯಲಲಿತ (ಮಾಜಿ ಮುಖ್ಯಮಂತ್ರಿ , ತಮಿಳುನಾಡು )ರವರ ನೃತ್ಯ ಪ್ರದರ್ಶನ ಕೊಟ್ಟು ಬಂದ ಹಣವನ್ನು ಹೈಸ್ಕೂಲ್ ನಿರ್ಮಾಣಕ್ಕೆ ಸಹಾಯ ಮಾಡಿರುತ್ತಾರೆ

ನಗುವನಹಳ್ಳಿಯಲ್ಲಿ ತುಂಬಾ ಜನ ವಿದ್ಯಾವಂತರಿದ್ದು ಗಂಡುಮಕ್ಕಳಿಗೆ ಸಮಾನಾಂತರವಾಗಿ ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸದ ಅವಕಾಶವಿರುತ್ತದೆ . ಊರಿನವರಲ್ಲಿ ಸುಮಾರು ಜನ ಸರ್ಕಾರಿ ಹಾಗು ಖಾಸಗೀ ಕ್ಷೆತ್ರದಲ್ಲಿ ಕೆಲಸನಿರ್ವಹಿಸುತ್ತಾ ಇದ್ದಾರೆ. ಇದರಲ್ಲಿ ೩ ಜನ ನ್ಯಾಯಾಧೀಶರುಗಳು, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿಗಳು (ಎನ್. ಎಸ್. ರಾಮೇಗೌಡರು), ಪ್ರೊಫೆಸರ್ಗಳು (ಪಿ. ಜಯರಾಮಯ್ಯ (ನಿ) ಹಾಗು ಪ್ರೊ ಪಿ. ಶಿವರಾಂ ಹಾಗು ಕರ್ನಾಟಕ ಸರ್ಕಾರದಲ್ಲಿ ಹಾಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ( ನಗುವನ ಹಳ್ಳಿ ವಿಶುಕುಮಾರ್ ) ಕಾರ್ಯ ನಿರ್ವಹಿಸುತ್ತಾ ಇದ್ದಾರೆ ಹಾಗು ಕರ್ನಾಟಕ ಸರ್ಕಾರದ ನೀರಾವರಿ, ಪಿ.ಡಬ್ಲು.ಡಿ. ಇಲಾಖೆಯಲ್ಲಿ ಅಧೀಕ್ಷರ ಅಭಿಯಂತರರು (ಶ್ರೀ, ಬಿ . ಶಿವಣ್ಣ ನಿವೃತ್ತ) ರಿಂದ ಸಹಾಯಕ ಅಭಿಯಂತರು, ಸಾಫ್ಟ್ವೇರ್ ಅಭಿಯಂತರಗಳಾಗಿ ದೇಶವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ ಹಾಗೇನೇ ವೈದ್ಯರು ದೇಶ ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.

ನೀರಾವರಿ ಆಣೆಕಟ್ಟು[ಬದಲಾಯಿಸಿ]

ನೀರಾವರಿ ಸೌಲಭ್ಯಗಳು ಪ್ರಸಿದ್ಧವಾದ ಕೃಷ್ಣರಾಜಸಾಗರ ಆಣೆಕಟ್ಟು (ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟು), ವಿಂಜಾನಾಲೆ , ಬಂಗಾರದೊಡ್ಡಿನಾಲೆ , ಚಿಕ್ಕದೇವರನಾಲೆ , ವರುಣಾನಾಲೆ (ಎಲ್ಲದಕ್ಕೂ ಕಾವೇರಿ ನದಿಯೇ ಮೂಲ)

ಕೃಷಿ ಮತ್ತು ಬೆಳೆಗಳು[ಬದಲಾಯಿಸಿ]

ಈ ಪಂಚಾಯಿತಿಯ ಮೇಲಿನ ಅಣೆಕಟ್ಟೆಗಳಿoದ ನೀರಾವರಿಗೆ ಸೌಲಭ್ಯವಿದ್ಧು, ಇದರಲ್ಲಿ ಶೇಕಡಾ ೯೦ ಭಾಗದಲ್ಲಿ ಭತ್ತ ಮತ್ತು ಕಬ್ಬನ್ನು ರೈತರು ಬೆಳೆಯುವರು. ಉಳಿದ ಶೇಕಡಾ ೧೦ ರಲ್ಲಿ ತೋಟಗಾರಿಕೆ, ರಾಗಿ, ತರಕಾರಿ, ಹೂವನ್ನು ಬೆಳೆಯುತ್ತಾರೆ.

ಕಾವೇರಿ ನದಿಯ ಉಪನದಿಯಾದ ಚಿಕ್ಕ ಹೊಳೆ ದಡದಲ್ಲಿ ಊರಿನವರಿಗೆ ಸಾರ್ವಜನಿಕ ಸ್ಮಶಾನವಿರುತ್ತದೆ (ಸುಮಾರು ೧ ಕಿಲೋಮೀಟರ್ ದೂರದಲ್ಲಿ ) ಹಾಗೇನೆ ಸುಮಾರು ೧. ೫ ಕಿಲೋಮೀಟರು ದೂರದಲ್ಲಿ (ಚಂದಗಾಲು ಹತ್ತಿರ ) ಕಾವೇರಿಯ ದಡದಲ್ಲಿ ಮತ್ತೊಂದು ಸ್ಮಶಾನವಿರುತ್ತದೆ. ಪಕ್ಕದಲ್ಲಿ ಅನಿಲ್ ಕುಂಬ್ಳೆ (ಕ್ರಿಕೆಟಿಗರು) ಅಧ್ಯಕ್ಷರಾಗಿದ್ದಾಗ ನಿರ್ಮಿತವಾದ "ಪಕ್ಷಿಧಾಮ" ವಿರುತ್ತದೆ. ಇಲ್ಲಿಗೆ ಮೈಸೂರು, ಬೆಂಗಳೂರಿಂದ ಪಕ್ಷಿಪ್ರಿಯರು ಪ್ರವಾಸಕ್ಕೆ ಬರುತ್ತಾರೆ.

ದೇವಸ್ಥಾನಗಳು[ಬದಲಾಯಿಸಿ]

ಶ್ರೀರಾಮ ದೇವಸ್ಥಾನ, ರಾಮಮಂದಿರ , ಕಿರೀಟ ದೇವಸ್ಥಾನ, ಆಂಜುನೇಯ ಸ್ವಾಮಿ ದೇವಸ್ಥಾನ, ಗ್ರಾಮ ದೇವತೆ ಮಾರಮ್ಮನ ದೇವಸ್ಥಾನ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಶ್ರೀ ಕಾಲಬೈರವಸ್ವಾಮಿ ದೇವಸ್ಥಾನ,ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನ, ಬೊಮ್ಮರಮ್ಮನ ದೇವಸ್ಥಾನಗಳು ಪ್ರಮುಖವಾಗಿ ಇರುತ್ತವೆ.

ಈ ದೇವಸ್ಥಾನಗಳ ವಿಶೇಷವೇನೆಂದರೆ, ವರ್ಷಕ್ಕೆ ಒಂದು ಬಾರಿ ಯುಗಾದಿ ಹಬ್ಬಕ್ಕೆ ಮುಂಚಿತವಾಗಿ ನಗುವನಹಳ್ಳಿ ಗ್ರಾಮ ದೇವತೆಯಾದ ಮಾರಿಹಬ್ಬವನ್ನು ಬಹಳ ಭಕ್ತಿ , ವಿಜೃಂಭಣೆಯಿಂದ ಆಚರಿಸಲಾಗುತ್ತದೆ . ಊರಿನ ಪ್ರತಿ ಮನೆಯವರು "ವರಿ " ರೂಪದಲ್ಲಿ ಚಂದವನ್ನು ವಸೂಲಿ ಮಾಡಿಕೊಂಡು ರಾತ್ರಿಯಿಂದ ಬೆಳಗಿನ ಜಾವದವರೆಗೆ ಶ್ರದ್ಧೆ, ಭಕ್ತಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಅಲಂಕಾರ,ಡೋಲು ಡಂಗುರ ಸಮೇತ , ಗ್ರಾಮದೇವತೆಯನ್ನು ೦.೫ ಕಿ ಮೀ ದೂರದಿಂದ (ಹೆಂಗಸರು , ಗಂಡಸರು, ಮಕ್ಕಳು ಬಾಯಿಬೀಗವನ್ನು ಹಾಕಿಸಿಕೊಂಡು , ಹರಸಿಕೊಂಡವರು, ಮೆರವಣಿಗೆಯಲ್ಲಿ ಊರಿನ ದೇವಸ್ಥಾನಕ್ಕೆ ತಂದು ಪೂಜಿಸುತ್ತಾರೆ. ಮಾರ್ಗದಲ್ಲಿ ಕುರಿ , ಕೋಳಿಗಳನ್ನು ಅವರವರ ಮನೆಯ ಮುಂದೆ, ಗ್ರಾಮ ದೇವತೆಗೆ ಬಲಿಕೊಡುತ್ತಾರೆ ಹಾಗು ವಿಷೇಶವಾಗಿ ನೆಂಟರು ಮಿತ್ರರನ್ನು ಆಹ್ವಾನಿಸಿ , ಮಾಂಸಾಹಾರ ಊಟವನ್ನು ಶಕ್ತಿಯನುಸಾರ ಅವರವರ ಮನೆಯಲ್ಲಿ ಬಡಿಸುತ್ತಾರೆ.

ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ವಿಷೇಶ - ಇದು ಶ್ರೀ ಎನ್. ವಿ. ಬಸವರಾಜುರವರು ಸ್ವಂತ ಖರ್ಚಿನಿಂದ ನಿರ್ಮಿಸಿದ ದೇವಸ್ಥಾನ. ಕಾರಾಣಾಂತರದಿಂದ ಈ ದೇವಸ್ಥಾನವನ್ನು, ಇದಕ್ಕೆ ಸಂಬಂಧಿಸಿದಅ ನೀರಾವರಿ ಗದ್ದೆ, ಅಂಗಡಿಗಳನ್ನು ಶ್ರೀ ಸಚ್ಚಿದಾನಂದ ಸ್ವಾಮಿ ಮೈಸೂರುರವರಿಗೆ ವಹಿಸಿಕೊಟ್ಟಿರುತ್ತಾರೆ . ಸದರಿ ದೇವಸ್ಥಾನವು ಹಾಗು ಅದರ ಆದಾಯಗಳನ್ನು ಶ್ರೀ ಸಚ್ಚಿದಾನಂದ ಸ್ವಾಮಿ ಆಶ್ರಮದವರು ಅನುಭವಿಸುತ್ತಿದ್ದಾರೆ .

ನ್ಯಾಯ ಪಂಚಾಯಿತಿ ಕಟ್ಟೆ[ಬದಲಾಯಿಸಿ]

ಊರಿನಲ್ಲಿ ನ್ಯಾಯ ಪಂಚಾಯಿತಿ ವ್ಯವಸ್ಥೆ ಇದ್ಧು , ಗ್ರಾಮ ದೇವತೆ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ವಿಚಾರಣೆ ಹಾಗು ತೀರ್ಪನ್ನು ನೀಡಲಾಗುವುದು, ಇಲ್ಲಿ ದೊಡ್ಡ ಯಜಮಾನರು , ಚಿಕ್ಕ ಯಜಮಾನರು ಹಾಗು ಸದಸ್ಯರುಗಳಿರುತ್ತಾರೆ. ಇವರೂ ವಿಚಾರಣೆ ಮಾಡಿ ತೀರ್ಪು ನೀಡಿ ತಪ್ಪಿತಸ್ಥರಿಗೆ ದಂಡ ವಿಧಿಸುತ್ತಾರೆ. ಇದೇ ಅಂತಿಮ.

ಊರಿನಲ್ಲಾಗಲಿ , ಗದ್ಧೆಗಳಲಾಗಲಿ, ಕಳ್ಳತನದ ದೂರನ್ನು ಪಂಚಾಯಿತಿ ಸದಸ್ಯರಿಗೆ ನೀಡಬಹುದು. ದೂರು ಸ್ವೀಕರಿಸಿ, ಯಜಮಾನರು, ಸದಸ್ಯರುಗಳು ಎರಡು ಕಡೆಯವರಿಂದ ವಿಚರಣೆ ಮಾಡಿ ತಪ್ಪಿತಸ್ಥರಿಗೆ ದಂಡ ವಿಧಿಸುತ್ತಾರೆ. ಪಂಚಾಯಿತಿಯವರ ತೀರ್ಮಾನವೇ ಅಂತಿಮವಾಗಿದ್ದು, ತಪ್ಪದೆ ದಂಡ ಕಟ್ಟಿಸುತ್ತಾರೆ, ಇಲ್ಲದಿದ್ದಲ್ಲಿ ಊರಿನಿಂದ ಬಹಿಸ್ಕಾರಕ್ಕೆ ಒಳಪಡುತ್ತಾರೆ. ಹಾಗಾಗಿ ಊರಲ್ಲಿ ಕಳ್ಳತನ, ಕಾನೂನು ಬಾಹಿರ ಚಟುವಟಿಕೆಗಳು ಇರುವುದಿಲ್ಲ. ಊರಿನ ದೊಡ್ಡವರ ಪ್ರಕಾರ ತಾಲ್ಲೂಕ್ನಲ್ಲಿ ಇದೆ ಪಂಚಾಯಿತಿಯಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ

ಬ್ಯಾಂಕ್ ಸೌಲಭ್ಯ[ಬದಲಾಯಿಸಿ]

ಗ್ರಾಮದಲ್ಲಿ ಎಂ.ಡಿ .ಸಿ .ಸಿ ಬ್ಯಾಂಕ್, ನಗುವನಹಳ್ಳಿ ಸೇವ ಸಹಕಾರ ಸಂಘ , ಎಸ್. ಬಿ. ಐ ಬ್ಯಾಂಕ್ ಸೌಲಭ್ಯವಿರುತ್ತದೆ

ಅಂಚೆ ವ್ಯವಸ್ಥೆ[ಬದಲಾಯಿಸಿ]

ಗ್ರಾಮ ಪಂಚಾಯಿತಿಗೆ ಅನುಕೂಲವಾಗಲು ನಗುವಿನಹಳ್ಳಿಯಲ್ಲಿ ಅಂಚೆ ಇಲಾಖೆ ಕಚೇರಿ ಇರುತ್ತದೆ. ಪೋಸ್ಟ್ ಮ್ಯಾನ್ ಪಂಚಾಯಿತಿಯ ಎಲ್ಲ ಊರುಗಳಿಗೆ ಹಂಚುತ್ತಾರೆ

ಹಾಲು ಉತ್ಪಾದಕರ ಸಹಕಾರ ಸಂಘ[ಬದಲಾಯಿಸಿ]

ಗ್ರಾಮದಲ್ಲಿ ರೈತರು ಸಾಕಿದ ಹಸು ಹಾಗು ಎಮ್ಮೆ ಕರೆದ ಹಾಲನ್ನು ಮಾರಲು, ಹಾಲು ಮಾರಾಟ ಕೇಂದ್ರವಿದ್ದು, ರೈತರಿಗೆ ಜೀವನೋಪಾಯಕ್ಕೆ ಅನುಕೂಲವಾಗುತ್ತ ಇದೆ. ಪ್ರತಿದಿನ ನಿಗದಿತ ಸಮಯದಲ್ಲಿ ಬೆಳಿಗ್ಗೆ ಹಾಗು ಸಾಯಂಕಾಲ ರೈತರುಗಳು ತಮ್ಮಲ್ಲಿ ಉತ್ಪತ್ತಿಯಾದ ಹಾಲನ್ನು ಹಾಲಿನ ಡೈರಿಗೆ ತಂದು ಹಾಕುತ್ತಾರೆ ಹಾಗು ವಾರಕ್ಕೊಮ್ಮೆ ತಮ್ಮ ಹಣವನ್ನು ಪಡೆಯುತ್ತಾರೆ.ಹಾಲು ಶುದ್ಧೀಕರಣ ಸೌಲಭ್ಯ ತೆರೆದಿರುತ್ತದೆ.

ಕುಡಿಯುವ ನೀರಿನ ವ್ಯವಸ್ಥೆ[ಬದಲಾಯಿಸಿ]

ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಸರ್ಕಾರದ ವತಿಯಿಂದ ಮಾಡಿರುತ್ತಾರೆ. ನೀರಿನ ಆಸರೆಯಾಗಿ ಸದ್ಯಕ್ಕೆ ೬ ಕೊಳವೆ ಬಾವಿಯಿಂದ, ನಾಲ್ಕು ಎತ್ತರದ ನೀರಿನ ತೊಟ್ಟಿಗೆ ನೀರನ್ನು ತುಂಬಿಸಿ, ನೀರಿನ ತೊಟ್ಟಿಯಿಂದ ಊರಿನ ಜನರಿಗೆ ಕೊಳವೆ (ಪೈಪ್) ಮುಖಾಂತರ, ಸಾರ್ವಜನಿಕ ನಲ್ಲಿಗಳು ಹಾಗು ಮನೆಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಇರುತ್ತದೆ . ಇದರ ಜೊತೆಗೆ ಕುಡಿಯುವ ನೀರಿನ ಶುದ್ಧಿಕರಣ ಘಟಕವಿದ್ದು,ಹಣ ಪಾವತಿಸಿ ನೀರನ್ನು ತುಂಬಿಸಿಕೊಂಡು ಹೋಗುವ ಅನುಕೂಲವನ್ನು ಸರ್ಕಾರದ ವತಿಯಿಂದ ಮಾಡಲಾಗಿರುತ್ತದೆ. ಹಾಗು ಸುಮಾರು ೧೦ ಕೊಳವೆ ಬಾವಿಗೆ ಕೈ ಪಂಪುಗಳನ್ನು ಮುಖ್ಯವಾದ ಬೀದಿಗಳಲ್ಲಿ ಹಾಕಿಸಿ, ಅದರಿಂದಲೂ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿರುತ್ತದೆ.

ಆರೋಗ್ಯ[ಬದಲಾಯಿಸಿ]

 • ಸರ್ಕಾರಿ ಆರೂಗ್ಯ ಕೇಂದ್ರ
 • ಹಲವು ಖಾಸಗೀ ತಪಾಸಣಾ ಕೇಂದ್ರಗಳು
 • ಪಶು ವೈಧ್ಯಶಾಲೆ - ಊರಿನ ಜಾನುವಾರುಗಳಿಗೆ ಅನುಕೂಲವಾಗಲು ಪಶು ವೈಧ್ಯಶಾಲೆ ಇರುತ್ತದೆ.

ಸರ್ಕಾರಿ ಪಶು ವೈಧ್ಯರು , ಸಹಾಯಕ ಸಿಬಂದಿ (ಕಾಂಪೌಂಡರ್) ಕಾರ್ಯ ನಿರ್ವಹಿಸುತ್ತಾರೆ ತುರ್ತು ಸ್ಥಿತಿ ಬಂದಾಗ, ಹೆರಿಗೆ ಮಾಡಿಸಲು ಸೂಲಗಿತ್ತಿ (ಮಿಡ್ ವೈಫ್ ) ಕೇಂದ್ರ ಸ್ಥಾನ ಗ್ರಾಮದಲ್ಲಿದ್ದು , ಸರ್ಕಾರೀ ಸೂಲಗಿತ್ತಿ ಕಾರ್ಯ ನಿರ್ವಹಿಸುತ್ತಾರೆ. ಸುಮಾರು ೪ ಖಾಸಗಿ ವ್ಯದ್ಯರುಗಳು ಬಂದು ದಿನಾಲೂ, ರೋಗಿಗಳ ತಪಾಸಣೆ ಮಾಡುವ ವ್ಯವಸ್ಥೆಯ ಸೌಲಭ್ಯವಿರುತ್ತದೆ. ಜೊತೆಯಲ್ಲಿ ಬೇಕಾದ ಮೆಡಿಕಲ್ ಶಾಪ್ ಗಳು ಇರುತವೆ.

ಇತರೆ ಸೌಲಭ್ಯಗಳು[ಬದಲಾಯಿಸಿ]

 • ಗ್ರಾಮದ ರೈತರುಗಳಿಗೆ ವ್ಯವಸಾಯಕ್ಕೆ ಬೇಕಾದ ನೇಗಿಲು, ನೊಗ, ಗಾಡಿ ಇತ್ಯಾದಿ ಉಪಕರಣ ಮಾಡಲು ಆಚಾರಿಗಳ ಸೌಲಭ್ಯವಿರುತ್ತದೆ

ಗ್ರಾಮದ ಜನತೆಗೆ ಅನುಕೂಲಕ್ಕಾಗಿ ಅಗಸರು, ಹಜಾಮರ ಕುಳಗಳ ಹಾಗೂ ಊರಿನಲ್ಲಿ ಹಬ್ಬ ಆಚರಣೆಗೆ ಪೂಜೆ ಪುರಸ್ಕಾರ ಮಾಡಲು, ನಾಲ್ಕು, ಐದು ಪುರೋಹಿತ ಕುಟುಂಬದವರಿರುತ್ತಾರೆ

 • ವಿದ್ಯುಚ್ಛಕ್ತಿ - ಗ್ರಾಮಸ್ಥರಿಗೆ ಅನುಕೂಲಕ್ಕೆ ನೂರಕ್ಕೆ ನೂರುಭಾಗ ವಿದ್ಯುಚ್ಛಕ್ತಿ ಸರಬರಾಜು ಇರುತ್ತದೆ, ಇದರಿಂದ ಊರಿನವರು ಅಕ್ಕಿಗಿರಿಣಿ, ಫ್ಲೋರ್ ಮಿಲ್ ಗಳಿಗೆ ಅನುಕೂಲವಾಗಿರುತ್ತದೆ
 • ಸಮುದಾಯ ಭವನ - ಗ್ರಾಮಸ್ಥರ ಸೌಕರ್ಯಕ್ಕಾಗಿ ಸಂಸದರ ನಿಧಿಯಿಂದ (ಶ್ರೀ ಅಂಬರೀಷ್ ) ಊರಿನ ೦.೫ ಕಿ. ಮೀ ಸಮೀಪದ ಒಂದು ಸುಂದರವಾದ ಸಮುದಾಯ ಭವನ ನಿರ್ಮಿಸಿದ್ದಾರೆ. ಇದು ಊರಿನ ಸ್ಮಶಾನಕ್ಕೆ ಸಮೀಪವಿದ್ದು,೧೧ನೇ ದಿವಸದ ಕಾರ್ಯವನ್ನು ಮಾಡಿ, ಇಲ್ಲಿ ಭೋಜನ ವ್ಯವಸ್ಥೆ ಮಾಡುತ್ತಾರೆ (ನೀರು ಮತ್ತು ವಿದ್ಯುಚ್ಛಕ್ತಿಸೌಲಭ್ಯ ವಿರುತ್ತದೆ)

ಸಂಪರ್ಕ[ಬದಲಾಯಿಸಿ]

ರಸ್ತೆಯಮೂಲಕ ಇಲ್ಲಿಗೆ ತಲುಪಬಹುದಾಗಿದೆ.

 • ಮಂಡ್ಯದಿಂದ ೪೦ ಕಿ.ಮೀ
 • ಶ್ರೀರಂಗಪಟ್ಟಣದಿಂದ ೩ ಕಿ.ಮೀ
 • ಮೈಸೂರಿನಿಂದ ೧೦ ಕಿ.ಮೀ

ಕಕ್ಷೆಗಳು: ೧೨°೨೨'೫೧"N ೭೬°೪೧'೧೧"E

(ಸಹಾಯ - ಕರ್ನಾಟಕ ಸರ್ಕಾರದ ನೀರಾವರಿ , ಪಿ. ಡಬ್ಲು.ಡಿ. ಇಲಾಖೆಯಲ್ಲಿ ಅಧೀಕ್ಷರ ಅಭಿಯಂತರು (ಶ್ರೀ, ಬಿ . ಶಿವಣ್ಣ (ನಿ) )