ನಕ್ಷತ್ರ ಸಮೂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಇದು ಆಧಾರ-ಕೊಂಡಿಗಳಿಲ್ಲದ ಲೇಖನ; ಇದೇ ವಿಷಯಕ್ಕೆ - ನಕ್ಷತ್ರಪುಂಜ ಎಂಬ ಲೇಖನ ಇದೆ. (ವಿಲೀನಗೊಳಿಸಲೂ ಯೊಗ್ಯವಾಗಿಲ್ಲ!)

ನಕ್ಷತ್ರಗಳ ಹುಟ್ಟು,ವಿಕಾಸ ಮತ್ತು ಅವಸಾನದ ಅವಧಿಗಳು ಅತಿ ಧೀರ್ಘ.ಹೀಗಾಗಿ ಈ ಕ್ರಯೆಗಳನ್ನು ನಮ್ಮ ಜಿವಿತಾವಧಿಯಲ್ಲಿ ಗಮನಿಸಿ ನಮ್ಮ ಸಿದ್ಧಾಂತಗಳ ತಪ್ಪು ಒಪ್ಪುಗಳನ್ನು ಪರಿಶೀಲಿಸುವುದಂತೂ ಆಗದ ಮಾತು.ವೈಜ್ಷಾನಿಕ ಪ್ರಗತಿ,ದೂರದರ್ಶಕಗಳ ಆಗಮನ ಎಲ್ಲವನ್ನೂ ಬಳಸಿಕೊಂಡರೂ ಕಳೆದ ೨-೩ ಶತಮಾನಗಳಲ್ಲಿ ಒಂದೇ ಒಂದು ಸೂಪರ್ ನೋವಾ ಸಹ ವೀಕ್ಷಣೆಗೆ ದೊರಕಿಲ್ಲವಂದಾಗ ಈ ಅವಧಿ ಎಷ್ಟು ಅತ್ಯಲ್ಪ ಎಂದು ತಿಳಿಯುತ್ತದೆ. ೧೯೮೭ರಲ್ಲಿ ಸೂಪರ್ ನೋವಾ ಒಂದು ಸಿಡಿಯಿತು,ನಮ್ಮ ಗ್ಯಾಲಕ್ಸಿಯ ಸಪೀಪದ ಲಾರ್ಜ್ ಮ್ಯಾಜಲಾನಿಕ್ ಕ್ಲೌಡ್ ಎಂಬ ಗ್ಯಾಲಕ್ಸಿಯಲ್ಲಿ.ದೂರ ೧,೮೬,೦೦೦ ಬೆಳಕಿನ ವರ್ಷಗಳು. ಈ ಅವಕಾಶವನ್ನು ಎಲ್ಲಾ ಖಗೋಳಜ್ಞರೂ ಉಪಯೋಗಿಸಿಕೋಂಡರು.ಅದರ ಕೇಂದ್ರದ ದ್ರವ್ಯ ರಾಶಿ, ಸಿಡಿದು ಹೊರ ಚೆಲ್ಲಿದ ಭಾಗ,ಒಟ್ಟು ಶಕ್ತಿ ಎಲ್ಲವನ್ನೂ ಲೆಕ್ಕಹಾಕುವುದು ಸಾಧ್ಯವಾಯಿತು. ಈ ಭಗೆಯ ಸೈಧಾಂತಿಕ ಲೆಕ್ಕಾಚಾರಗಳನ್ನು ಪರಿಶೀಲಿಸಲು ಪಕೃತಿ ಕೆಲವು ವಿಸ್ಮಯಕರ ಪ್ರಯೋಗ ಶಾಲೆಗಳನ್ನೊದಗಿಸಿದೆ.ಅದೇ ನಕ್ಷತ್ರ ಸಮೂಹಗಳು. ಇವುಗಳಲ್ಲಿ ಎರಡು ವಿಧ-ಮುಕ್ತ ಅಥವಾ ತೆರೆದ ಹಾಗೂ ಗೋಳಾಕಾರದ ಗುಚ್ಚಹಳು.ನಕ್ಷತ್ರಗಳ ಹರಡುವಿಕೆಯ ಆಧಾರದ ಮೇಲೆ ಹೀಗೆ ವರ್ಗೀಕರಿಸಲಾಗಿದೆ.ಇವುಗಳಲ್ಲಿ ಅನೇಕವನ್ನು (ಶುಭ್ರ ಆಕಾಶದಲ್ಲಿ ಬರಿಗಣ್ಣಿನಂದ),ದುರ್ಬೀನು,ದೂರದರ್ಶಕಗಳಿಂದ ನೋಡಬಹುದು. ನಮ್ಮ ಗ್ಯಾಲಕ್ಸಿಗೆ ಸೇರಿದ ಈ ಗುಚ್ಚಗಳ ಒಂದೊಂದು ನಕ್ಷತ್ರದ ಕಾಂತಿಮಾನ ಹಾಗು ವರ್ಣಸೂಚಕವನ್ನು ಅಳತೆ ಮಾಡಿ ಅವುಗಳ ಎಚ್ ಆರ್ ನಕ್ಷೆ ತಯಾರಿಸಬಹುದು. ಇದರಂದ ಕೆಲವು ಗುಚ್ಚೆಗಳಲ್ಲಿ ನೀಲಿ ನಕ್ಷತ್ರಗಳ ಕೊರತೆ ಇರುವುದು ಕಂಡು ಬರುತ್ತದೆ.ಕೆಲವು ಗಚ್ಚಗಳಲ್ಲಿ ನೀಲಿ ನಕ್ಷತ್ರಗಳ ಬದಲಾಗಿ ಕೆಂಪು ದೈತ್ಯಗಳಿರುವುದು ಕಂಡು ಬರುತ್ತದೆ.ಹೀಗೆ ಇವುಗಳ ವೈವಿಧ್ಯದಿಂದ, ಇವುಗಳ ದೂರ, ವಯಸ್ಸು ಮಾತ್ರವಲ್ಲದೆ,ಗ್ಯಲಕ್ಸಿಯಲ್ಲಿ ಇವು ಹರಡಿರುವ ವಿನ್ಯಸವನ್ನು ಗುರುತಿಸಬಹುದು.ಈ ಬಗೆಯ ಅಧ್ಯಯನದಿಂದ ಶಾಪ್ಲೆ ಎಂಬ ವಿಜ್ಞಾನಿಗೆ ನಮ್ಮ ಸೌರಮಂಡಲವು ಆಕಾಶಗಂಗೆಯ ಕೇಂದ್ರದಲ್ಲಿಲ್ಲ ಎಂಬ ಅಂಶವನ್ನು ತಿಳಿಯುವುದು ಸಾಧ್ಯವಾಯಿತು.ಉದಾಹರಣೆಗೆ ಗ್ಯಲಕ್ಸಿಯ ತೋಳುಗಳಲ್ಲಿ (ಮುಕ್ತ) ಗುಚ್ಚಗಳೇ ಸೇರಿವೆ.ಅವುಗಳಲ್ಲಿ ಕೆಲವು ಕೇವಲ ಮಿಲಿಯನ್ ವರ್ಷಗಳಷ್ಟು ಎಳೆಯವು.ಹೀಗೆ ಗ್ಯಾಲಕ್ಸಿಯ ರಚನೆಯನ್ನು ತಿಳಯುವುದೂ ಇವುಗಳಿಂದ ಸಾಧ್ಯವಾಯಿತು.