ನಂದಿಮರ

ವಿಕಿಪೀಡಿಯ ಇಂದ
Jump to navigation Jump to search
ನಂದಿಮರ

ನಂದಿ (Benteak)ಮುಖ್ಯವಾಗಿ ದಕ್ಷಿಣಎಷಿಯಾದ ಮರ.ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಮಲೆನಾಡು ಪ್ರದೇಶದಲ್ಲಿ ಮುಖ್ಯಮರವಾಗಿದೆ.

ನಂದಿಮರದ ಹೂವು
ನಂದಿಮರ ಎಲೆ ಮತ್ತು ಕಾಯಿ

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಲೈತ್ರಾಸಿಯೆ ಕುಟುಂಬದಲ್ಲಿದೆ.ಸಸ್ಯ ಶಾಸ್ತ್ರೀಯ ಹೆಸರು:ಲಾಗೆರ್ಸ್ಟ್ರೊಮಿಯ ಲನ್ಸಿಯೋಲಟ ಎಂಬುದಾಗಿದೆ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಇದು ಬಿಳಿ ಬಣ್ಣದಾಗಿದ್ದು,ತೆಳು ತೊಗಟೆ ಹಾಳೆಯಂತೆ ಕಳಚುವುದು.ಬೇಸಿಗೆಯಲ್ಲಿ ಎಲೆ ಉದುರಿಸಿ ಹೂಗಳು ಮೂಡುತ್ತದೆ.ಇದರ ದಾರುವು ಗಡುಸಾಗಿದ್ದು,ತಿಳಿ ಕಂದು ಬಣ್ಣವಿದೆ.ನಯ ಸಮ ಕಣರಚನೆ ಹೊಂದಿದೆ.ಹೊಳಪು ಬರುತ್ತದೆ.ದಾರುವು ಸೀಳಿಕೆ ಸ್ವಭಾವದ್ದಾಗಿದೆ.

ಉಪಯೋಗಗಳು[ಬದಲಾಯಿಸಿ]

ಇದು ಒಂದು ಮುಖ್ಯ ಚೌಬೀನೆ ಮರ.ಗೃಹ ನಿರ್ಮಾಣ,ಹಲಗೆಗಳಿಗೆ,ಗಾಡಿಗಳ ತಯಾರಿಕೆಗೆ,ಪದರಹಲಗೆ ತಯಾರಿಸಲು ಮುಂತಾಗಿ ಉಪಯೋಗವಾಗುತ್ತದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ನಂದಿಮರ&oldid=1000680" ಇಂದ ಪಡೆಯಲ್ಪಟ್ಟಿದೆ