ವಿಷಯಕ್ಕೆ ಹೋಗು

ದ್ವಿಗು ಸಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. (೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)

 • ಎರಡು+ಕೆಲ=ಇಕ್ಕೆಲ
 • ಮೂರು+ಮಡಿ=ಮುಮ್ಮಡಿ

ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು ಸಂಖ್ಯಾವಾಚಕವಾಗಿರಲೇ ಬೇಕು.

 • ಕನ್ನಡ - ಕನ್ನಡ ಪದಗಳು
 1. ಒಂದು+ಕಟ್ಟು = ಒಗ್ಗಟ್ಟು
 2. ಎರಡು+ಮಡಿ = ಇಮ್ಮಡಿ
 3. ನಾಲ್ಕು+ಮಡಿ = ನಾಲ್ವಡಿ
 4. ಐದು+ಮಡಿ = ಐವಡಿ
 5. ಎರಡು+ಬಾಳ್ = ಇರ್ವಾಳ್
 6. ಮೂರು+ಗಾವುದ = ಮೂಗಾವುದ
 7. ಒಂದು+ಕಣ್ಣು = ಒಕ್ಕಣ್ಣು
 • ಸಂಸ್ಕೃತ - ಸಂಸ್ಕೃತ ಪದಗಳು
 1. ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು
 2. ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು
 3. ದಶಗಳಾದ+ಮುಖಗಳು = ದಶಮುಖಗಳು
 4. ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು
 5. ಏಕವಾದ+ಅಂಗ = ಏಕಾಂಗ