ದಿವ್ಯಾ ಸತ್ಯರಾಜ್
ದಿವ್ಯಾ ಸತ್ಯರಾಜ್ | |
---|---|
![]() ೨೦೧೪ ರಲ್ಲಿ, ದಿವ್ಯಾರವರು | |
ಜನನ | |
ಶಿಕ್ಷಣ | ಮದ್ರಾಸ್ ವಿಶ್ವವಿದ್ಯಾಲಯ |
ವೃತ್ತಿ | ಪೌಷ್ಟಿಕತಜ್ಞ |
ರಾಜಕೀಯ ಪಕ್ಷ | ಡಿಎಮ್ಕೆ |
ಸಂಬಂಧಿಕರು | ಸತ್ಯರಾಜ್ (ತಂದೆ) ಸಿಬಿರಾಜ್ (ಸಹೋದರ) |
ದಿವ್ಯಾ ಸತ್ಯರಾಜ್ ಇವರು ಭಾರತೀಯ ಪೌಷ್ಟಿಕತಜ್ಞೆಯಾಗುದ್ದು, ನಟ ಸತ್ಯರಾಜ್ ಅವರ ಪುತ್ರಿ ಮತ್ತು ಸಿಬಿ ಅವರ ಸಹೋದರಿಯಾಗಿದ್ದಾರೆ. ದಿವ್ಯಾ ಅವರು ಶಾಲಾ ಮಕ್ಕಳಿಗಾಗಿ ಭಾರತ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಎನ್‌ಜಿಒ ದಿ ಅಕ್ಷಯ ಪಾತ್ರಾ ಫೌಂಡೇಶನ್ (ಟಿಎಪಿಎಫ್) ನ ಸದ್ಭಾವನಾ ರಾಯಭಾರಿಯಾಗಿದ್ದಾರೆ. ಅಪೌಷ್ಟಿಕತೆ ಮತ್ತು ಸೌಲಭ್ಯ ವಂಚಿತರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಉಚಿತವಾಗಿ ಒದಗಿಸುವ ಉಪಕ್ರಮವಾದ ಮಹಿಲ್ಮಧಿ ಇಯಕ್ಕಂ ಎಂಬ ಆಂದೋಲನವನ್ನು ಅವರು ೨೦೨೦ ರಲ್ಲಿ, ಪ್ರಾರಂಭಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ದಿವ್ಯಾರವರು ನಟ ಸತ್ಯರಾಜ್ ಮತ್ತು ಮಹೇಶ್ವರಿ ದಂಪತಿಯ ಪುತ್ರಿ. ದಿವ್ಯಾ ಅವರ ಹಿರಿಯ ಸಹೋದರ ನಟ ಸಿಬಿ.[೧][೨] ತಮ್ಮ ತಂದೆ ಮತ್ತು ಹಿರಿಯ ಸಹೋದರನಂತಲ್ಲದೆ, ದಿವ್ಯಾರವರು ನಟನೆಯಿಂದ ದೂರವಿದ್ದರು.[೩] ಬದಲಿಗೆ ಪೌಷ್ಠಿಕಾಂಶದ ವೃತ್ತಿಜೀವನವನ್ನು ಮುಂದುವರಿಸಿದರು. ೨೦೧೬ ರಲ್ಲಿ, ಮೂಲತಃ ಅವರು ಸಸ್ಯಾಹಾರಿಯಾದರು.[೪]
ವೃತ್ತಿಜೀವನ
[ಬದಲಾಯಿಸಿ]ದಿವ್ಯಾರವರು ಮದ್ರಾಸ್ ವಿಶ್ವವಿದ್ಯಾಲಯದಿಂದ[೫] ಪೋಷಣೆಯಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿ ಪಡೆದರು.[೬] ಅವರು ಆರೋಗ್ಯ ಸಂಬಂಧಿತ ವಿಷಯಗಳು, ಬಾಲಕಾರ್ಮಿಕ ಪದ್ಧತಿ ಮತ್ತು ಮಹಿಳೆಯರಿಗೆ ಸ್ವರಕ್ಷಣೆ ಮತ್ತು ಶ್ರೀಲಂಕಾ ನಿರಾಶ್ರಿತರಿಗೆ ಸಮಾಲೋಚನೆ ಅಧಿವೇಶನಗಳ ಬಗ್ಗೆ ಕಾರ್ಯಾಗಾರಗಳನ್ನು ನಡೆಸುತ್ತಾರೆ.[೭] ವೈದ್ಯಕೀಯ ಕ್ಷೇತ್ರದಲ್ಲಿನ ದುಷ್ಕೃತ್ಯಗಳು ಮತ್ತು ನಿರ್ಲಕ್ಷ್ಯವನ್ನು ಎತ್ತಿ ತೋರಿಸಲು ಮತ್ತು ನೀಟ್ ಪರೀಕ್ಷೆಗಳನ್ನು ಪ್ರಶ್ನಿಸಿ[೮] ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.[೯] ಅವರು ವಿಶ್ವದ ಅತಿದೊಡ್ಡ ಮಧ್ಯಾಹ್ನದ ಊಟದ ಕಾರ್ಯಕ್ರಮವಾದ ಅಕ್ಷಯ ಪಾತ್ರಾ ಫೌಂಡೇಶನ್‌ನ ಸದ್ಭಾವನಾ ರಾಯಭಾರಿಯಾಗಿದ್ದಾರೆ.[೧೦][೧೧] ಅವರು ವರ್ಲ್ಡ್ ವಿಷನ್ ಇಂಡಿಯಾದೊಂದಿಗೆ ಪಾಲುದಾರರಾಗಿದ್ದಾರೆ. ಅಲ್ಲಿ, ಅವರು ನಾಲ್ಕು ಯುವತಿಯರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.[೫][೧೨]
ದಿವ್ಯಾರವರು ೨೦೨೦ ರಲ್ಲಿ, ಮಹಿಲ್ಮಧಿ ಇಯಕ್ಕಂ ಎಂಬ ಆಂದೋಲನವನ್ನು ಪ್ರಾರಂಭಿಸಿದರು. ಈ ಆಂದೋಲನದ ಬಗ್ಗೆ ಅವರು ಹೀಗೆ ಹೇಳುತ್ತಾರೆ, "ನಗರದಲ್ಲಿ ಪೌಷ್ಟಿಕ ಆಹಾರದ ಕೊರತೆಯಿರುವ ಪ್ರದೇಶಗಳನ್ನು ಗುರುತಿಸುವುದು ಮತ್ತು ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಈ ಆಂದೋಲನದ ಉದ್ದೇಶವಾಗಿದೆ. ಪ್ರದೇಶಗಳನ್ನು ಗುರುತಿಸಿ ಸಮುದಾಯದ ಸದಸ್ಯರನ್ನು ನಿರ್ಣಯಿಸಿದ ನಂತರ, ಅಗತ್ಯವಿರುವ ನೆರೆಹೊರೆಯವರಿಗೆ, ಕೊರತೆಗಳ ಆಧಾರದ ಮೇಲೆ ಉಚಿತವಾಗಿ ಆರೋಗ್ಯಕರ ಆಹಾರವನ್ನು ನೀಡಲಾಗುವುದು".[೧೩] ೨೦೧೯ ರಲ್ಲಿ, ದಿವ್ಯಾರವರು ೨೦೨೧ ರಂದು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸಿದರು.[೧೪]
ಪ್ರಶಸ್ತಿಗಳು
[ಬದಲಾಯಿಸಿ]೨೦೧೯ ರಲ್ಲಿ, ಮಾಧ್ಯಮ ಮತ್ತು ಮನರಂಜನೆಯ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡುವ ಯುವ-ಆಧಾರಿತ ಸಾಮಾಜಿಕ ಸಂಸ್ಥೆಯಾದ ರೇನ್‌ಡ್ರಾಪ್ಸ್‌ನಿಂದ ಸಮುದಾಯ ಸೇವೆಯಲ್ಲಿ ಶ್ರೇಷ್ಠತೆಗಾಗಿ ದಿವ್ಯಾ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿಯನ್ನು ನೀಡಲಾಯಿತು. ೨೦೨೦ ರಲ್ಲಿ, ಪೌಷ್ಠಿಕಾಂಶ ಚಿಕಿತ್ಸಾ ಕ್ಷೇತ್ರದಲ್ಲಿ ಅವರ ಕೊಡುಗೆಗಳಿಗಾಗಿ ಅಮೆರಿಕದ, ಅಂತರರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು.[೧೫]
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]ಡಿಸೆಂಬರ್ ೧೯ ರಂದು ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ದಿವ್ಯಾರವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗೆ ಸೇರಿದರು.[೧೬]
ಉಲ್ಲೇಖಗಳು
[ಬದಲಾಯಿಸಿ]- ↑ "நடிகர் சத்யராஜ் திருமணம் நடந்தது" [Actor Sathyaraj was married]. Maalai Malar. 23 July 2013. Archived from the original on 28 July 2013. Retrieved 26 February 2021.
- ↑ "Cine Biography: Sathyaraj (Part-2)". Dinakaran. Archived from the original on 2 December 2000. Retrieved 26 February 2021.
- ↑ "Divya Sathyaraj: Not interested in acting in films". The Times of India. 13 February 2018. Archived from the original on 10 March 2021. Retrieved 26 February 2021.
- ↑ Mathew, Thushara Ann (14 February 2018). "Being vegan has given me a burst of energy: Divya Sathyaraj". The New Indian Express. Archived from the original on 17 December 2020. Retrieved 9 December 2020.
- ↑ ೫.೦ ೫.೧ "Dr. Divya Sathyaraj". sumanclinic.com. 5 March 2020. Archived from the original on 17 December 2020. Retrieved 9 December 2020.
- ↑ Rangarajan, Malathi (5 September 2013). "The healthy plate". The Hindu. Archived from the original on 17 December 2020. Retrieved 8 December 2020.
- ↑ Thirumurthy, Priyanka (17 July 2017). "Foreign drug marketers out to cheat Indian customers? Sathyaraj's daughter Divya writes to PM". The News Minute. Archived from the original on 17 December 2020. Retrieved 8 December 2020.
- ↑ "Sathyaraj's daughter divya's press note on her political journey". Behindwoods. 25 October 2020. Archived from the original on 17 December 2020. Retrieved 9 December 2020.
- ↑ "The Akshaya Patra Foundation Appoints Nutritionist Ms. Divya Sathyaraj as its Goodwill Ambassador". PR.com. 8 April 2018. Retrieved 9 December 2020.
- ↑ Srividya, R. K. (5 June 2018). "No diet can equate with healthy eating: Chennai based nutritionist Divya Sathyaraj". The New Indian Express. Archived from the original on 17 December 2020. Retrieved 8 December 2020.
- ↑ Anand, Apoorva (17 July 2018). "IISc Bangalore alumnus-run Akshaya Patra is the world's largest mid-day meal provider, feeds 1.7 million children across India". India Today. Archived from the original on 17 December 2020. Retrieved 8 December 2020.
- ↑ Subramanian, Anupama (24 August 2019). "Divya Sathyaraj bats for basic rights of children". Deccan Chronicle. Archived from the original on 17 December 2020. Retrieved 9 December 2020.
- ↑ Balasubramanian, Roshne (6 August 2020). "A diet for the deprived". The New Indian Express. Archived from the original on 17 December 2020. Retrieved 8 December 2020.
- ↑ "I will get into politic, soon: Divya". The Times of India. 26 June 2019. Archived from the original on 17 December 2020. Retrieved 9 December 2020.
- ↑ "Divya Sathyaraj to start a political movement?". Behindwoods. 20 June 2020. Archived from the original on 17 December 2020. Retrieved 9 December 2020.
- ↑ "Actor Sathyaraj's daughter Divya joins DMK" (in Indian English). The Hindu. 19 January 2025. Archived from the original on 22 January 2025. Retrieved 22 January 2025.