ದಿವ್ಯಾ ದೇಶ್ಮುಖ್
| ದಿವ್ಯಾ ದೇಶ್ಮುಖ್ | |
|---|---|
೨೦೨೫ರಲ್ಲಿ ದಿವ್ಯಾ ದೇಶ್ಮುಖ್ | |
| Country | |
| Born | December 9, 2005[Parameter df=no is invalid][೧] ನಾಗಪುರ, ಭಾರತ |
| Title |
|
| FIDE rating | 2443 (ಮೇ 2024) |
| Peak rating | 2501 (October 2024) |
ದಿವ್ಯಾ ದೇಶ್‌ಮುಖ್ (ಜನನ 9 ಡಿಸೆಂಬರ್ 2005) ಒಬ್ಬ ಭಾರತೀಯ ಚೆಸ್ ಆಟಗಾರ್ತಿಯಾಗಿದ್ದು, ಅವರು ಮಹಿಳಾ ಗ್ರ್ಯಾಂಡ್ ಮಾಸ್ಟರ್ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ ಶ್ರೇಣಿಯನ್ನು ಹೊಂದಿದ್ದಾರೆ .[೨]. ಆಕೆ ಚೆಸ್ ಒಲಿಂಪಿಯಾಡ್ನಲ್ಲಿ ಮೂರು ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ. ದೇಶ್ಮುಖ್ ಅವರು ಏಷ್ಯನ್ ಚಾಂಪಿಯನ್ಶಿಪ್, ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ಮತ್ತು ವಿಶ್ವ ಯುವ ಚಾಂಪಿಯನ್ಶಿಪ್ಗಳಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.[೩]
ಆರಂಭಿಕ ಜೀವನ
[ಬದಲಾಯಿಸಿ]ದೇಶಮುಖ್ ಅವರು ನಾಗ್ಪುರದಲ್ಲಿ ಮರಾಠಿ ಕುಟುಂಬದಲ್ಲಿ ಜನಿಸಿದರು[೪]. ಆಕೆಯ ಪೋಷಕರಾದ ಜಿತೇಂದ್ರ ದೇಶ್ಮುಖ್ ಮತ್ತು ನಮ್ರತಾ ದೇಶ್ಮುಖ್ ಅವರು ವೈದ್ಯರು.[೫] ಆಕೆ ತನ್ನ ಆರಂಭಿಕ ಶಿಕ್ಷಣವನ್ನು ಭವಾನ್ ಸಂಸ್ಥೆಯ ಭಗವಾನ್ ದಾಸ್ ಪುರೋಹಿತ್ ವಿದ್ಯಾ ಮಂದಿರದಿಂದ ಪಡೆದರು.[೬]
ವೃತ್ತಿಜೀವನ
[ಬದಲಾಯಿಸಿ]ದೇಶ್ಮುಖ್ 2021ರಲ್ಲಿ ಭಾರತದ 21ನೇ ಮಹಿಳಾ ಚೆಸ್ ಗ್ರ್ಯಾಂಡ್ ಮಾಸ್ಟರ್ ಆದರು[೪]. ಆಕೆ 2022ರಲ್ಲಿ ನಡೆದ ಮಹಿಳೆಯರ ಭಾರತೀಯ ಚೆಸ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಗೆದ್ದರು. 2022ರ ಚೆಸ್ ಒಲಿಂಪಿಯಾಡ್ನಲ್ಲಿ ಅವರು ವೈಯಕ್ತಿಕ ಕಂಚಿನ ಪದಕವನ್ನೂ ಗೆದ್ದರು. ಅವರು ಚಿನ್ನದ ಪದಕ ಗೆದ್ದ ಫಿಡೆ ಆನ್ಲೈನ್ ಚೆಸ್ ಒಲಿಂಪಿಯಾಡ್ 2020 ತಂಡದ ಭಾಗವಾಗಿದ್ದರು.[೭][೮] ಡಿಸೆಂಬರ್ 2024 ರ ಹೊತ್ತಿಗೆ ಅವರು ಭಾರತದ 2 ನೇ ಶ್ರೇಯಾಂಕದ ಮಹಿಳಾ ಚೆಸ್ ಆಟಗಾರ್ತಿಯಾಗಿದ್ದಾರೆ.[೯]
2023ರಲ್ಲಿ, ಅಲ್ಮಾಟಿ ಅಲ್ಲಿ ನಡೆದ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ಶಿಪ್ ಗೆದ್ದರು. ೨೦೨೩ರಲ್ಲಿ ಟಾಟಾ ಸ್ಟೀಲ್ ಇಂಡಿಯಾ ಚೆಸ್ ಟೂರ್ನಮೆಂಟ್ನ ಮಹಿಳೆಯರ ರ್ಯಾಪಿಡ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು. ಪಂದ್ಯಾವಳಿಯಲ್ಲಿ ಅವರು ಹರಿಕಾ ದ್ರೋಣವಲ್ಲಿ, ವಂತಿಕಾ ಅಗ್ರವಾಲ್, ಕೋನೇರು ಹಂಪಿ, ಸವಿತಾ ಶ್ರೀ ಬಿ, ಐರಿನಾ ಕ್ರುಶ್ ಮತ್ತು ನಿನೋ ಬತ್ಸಿಯಾಶ್ವಿಲಿ ಅವರನ್ನು ಸೋಲಿಸಿದರು. ಈ ಪಂದ್ಯಾವಳಿಯಲ್ಲಿ ಮಹಿಳಾ ವಿಶ್ವ ಚಾಂಪಿಯನ್ ಜು ವೆಂಜುನ್ ಮತ್ತು ಅನ್ನಾ ಉಶೆನಿನಾ ವಿರುದ್ಧ ಡ್ರಾ ಸಾಧಿಸಿದರು ಮತ್ತು ಪೊಲಿನಾ ಶುವಲೋವಾ ವಿರುದ್ಧ ಸೋಲನ್ನು ಅನುಭವಿಸಿದರು.
೨೦೨೩ ರಲ್ಲಿ ನಡೆದ ಕಾತಾರ್ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಇವರು ಭಾರತದವರೇ ಆದ ವೈಶಾಲಿ ರಮೇಶ್ ಬಾಬು ಅವರಷ್ಟೇ ಅಂಕಗಳನ್ನು ಪಡೆದಿದ್ದರೂ ಟೈ ಬ್ರೇಕರ್ ನಲ್ಲಿನ ಉತ್ತಮ ಪ್ರದರ್ಶನದ ಆಧಾರದ ಮೇಲೆ ವೈಶಾಲಿ ಅವರು ಅರ್ಗ ಮಹಿಳಾ ಸ್ಪರ್ಧಿಯ ಗೌರವವನ್ನು ಪಡೆದರು.
ಮೇ 2024 ರಲ್ಲಿ ದೇಶ್ಮುಖ್ ಅವರು ಶಾರ್ಜಾ ಚಾಲೆಂಜರ್ಸ್ ಚಾಂಪಿಯನ್ ಆಗಿದ್ದರು. ಇದು ಇವರು ಇಲ್ಲಿಯವರೆಗೆ ಗೆದ್ದ ಮುಕ್ತ ಪಂದ್ಯಾವಳಿಗಳಲ್ಲಿ ಹೆಚ್ಚಿನ ಶ್ರೇಯಾಂಕದ ಪಂದ್ಯಾವಳಿ. ಈ ಗೆಲುವಿನ ಮೂಲಕ ಇವರು ಮುಂದಿನ ವರ್ಷದ ಶಾರ್ಜಾ ಮಾಸ್ಟರ್ಸ್ನ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಗಳಿಸಿದರು.[೧೦] ಜೂನ್ ನಲ್ಲಿ ಅವರು 2024 ರ ಫಿಡೆ ವಿಶ್ವ ಯು20 ಬಾಲಕಿಯರ ಚೆಸ್ ಚಾಂಪಿಯನ್ ಆದರು. 2001ರಲ್ಲಿ ಕೋನೇರು ಹಂಪಿ, 2008ರಲ್ಲಿ ಹರಿಕಾ ದ್ರೋಣವಲ್ಲಿ ಮತ್ತು 2009ರಲ್ಲಿ ಸೌಮ್ಯಾ ಸ್ವಾಮಿನಾಥನ್ ನಂತರ ವಿಶ್ವ ಜೂನಿಯರ್ ಬಾಲಕಿಯರ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ಭಾರತೀಯೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಅಂತಿಮ ಸುತ್ತಿನಲ್ಲಿ ಗೆಲುವಿನ ಅಗತ್ಯವಿದ್ದಾಗ ಅವರು ಬಲ್ಗೇರಿಯಾದ ಮೂರನೇ ಶ್ರೇಯಾಂಕದ ಬೆಲೋಸ್ಲಾವಾ ಕ್ರಾಸ್ಟೇವ ಅವರನ್ನು ಐದು ಗಂಟೆಗಳ ಸುಧೀರ್ಘ ಪಂದ್ಯದಲ್ಲಿ ಸೋಲಿಸಿ ಸಂಭವನೀಯ 11ರಲ್ಲಿ 10 ಅಂಕಗಳನ್ನು ಗಳಿಸಿ ಚಿನ್ನದ ಪದಕವನ್ನು ಗೆದ್ದರು.[೫]
ಸೆಪ್ಟೆಂಬರ್ 2024 ರಲ್ಲಿ ಅವರು 2024 ರಲ್ಲಿ ನಡೆದ 45 ನೇ ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು. ಈ ಪಂದ್ಯಾವಳಿಯಲ್ಲಿ ಇವರು ವೈಯಕ್ತಿಕ ಚಿನ್ನದ ಪದಕವನ್ನೂ ಗೆದ್ದರು.[೧೧]
ಉಲ್ಲೇಖಗಳು
[ಬದಲಾಯಿಸಿ]- ↑ "Divya Deshmukh FIDE profile". Retrieved 8 December 2020.
- ↑ Ahmed, Shahid (19 October 2021). "Divya Deshmukh becomes the 22nd Woman Grandmaster of India". Chessbase India. Retrieved 27 February 2022.
Divya Deshmukh scored her final WGM-norm in her first tournament in over 17 months at First Saturday GM October 2021.
- ↑ Raghavan, R. Srinivasa (2024-06-20). "Divya Deshmukh, India's new chess star, looks set to checkmate the world". thefederal.com (in ಇಂಗ್ಲಿಷ್). Retrieved 2024-06-20.
- ↑ ೪.೦ ೪.೧ "Meet Divya Deshmukh: All You Need To Know About Indian Chess Player Who Faced Sexism From Fans - In Pics". Zee News (in ಇಂಗ್ಲಿಷ್). Retrieved 2024-06-20.
- ↑ ೫.೦ ೫.೧ "Nagpur's queen India's pride: Divya Deshmukh is world junior chess champion". The Times of India. 2024-06-14. ISSN 0971-8257. Retrieved 2024-06-20.
- ↑ Shekhawat, Meemansa. "Meet Divya Deshmukh, grandmaster who helped India clinch gold medal at Budapest Chess Olympiad at age of..." DNA India (in ಇಂಗ್ಲಿಷ್). Retrieved 2024-12-24.
- ↑ "India – FIDE Online Olympiad 2020". FIDE Online Olympiad 2020 / 24 July - August 30. Archived from the original on 18 ನವೆಂಬರ್ 2022. Retrieved 27 February 2022.
- ↑ "Who is Divya Deshmukh? Nagpur chess prodigy bags World U-20 Chess Championship title - CNBC TV18". CNBCTV18 (in ಇಂಗ್ಲಿಷ್). 2024-06-14. Retrieved 2024-06-20.
- ↑ "FIDE Ratings". Retrieved 2 September 2023.
- ↑ Ahmed, Shahid (23 May 2024). "Divya Deshmukh wins Sharjah Challengers 2024". ChessBase India. Retrieved 23 June 2024.
- ↑ Burtasova, Anna (2024-09-22). "India triumphs at 45th Chess Olympiad, winning both Open and Women's competitions". www.fide.com (in ಇಂಗ್ಲಿಷ್). Archived from the original on 2024-09-22. Retrieved 2024-09-22.