ದಿವ್ಯಾನಿ ಗಂಗ್ವಾಲ್
ದಿವ್ಯಾನಿ ಗಂಗ್ವಾಲ್ (ಜನನ ೨ ಜೂನ್ ೨೦೦೦) [೧] ಅವರು ಮಧ್ಯಪ್ರದೇಶದ ಭಾರತೀಯ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ. ಅವರು ಭಾರತದ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಶೂಟಿಂಗ್ ಗಾರ್ಡ್ ಆಗಿ ಆಡುತ್ತಾರೆ. ಅವರು ದೇಶೀಯ ಪಂದ್ಯಾವಳಿಗಳಲ್ಲಿ ಮಧ್ಯಪ್ರದೇಶ ಪರ ಆಡುತ್ತಿದ್ದರು. ೨೦೨೩ ರಿಂದ ಅವರು ಛತ್ತೀಸ್‌ಗಢ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.[೨]
ಆರಂಭಿಕ ಜೀವನ
[ಬದಲಾಯಿಸಿ]ಗಂಗ್ವಾಲ್ ಅವರು ಮಧ್ಯಪ್ರದೇಶದ ಮಾಲ್ವಾ ಪ್ರದೇಶದ ನೀಮುಚ್‌ನಲ್ಲಿ ಜನಿಸಿದರು.[೩]
ಅಂತರರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]ಗಂಗ್ವಾಲ್ ಅವರು ೨೦೨೫ ರಲ್ಲಿ, ಫೆಬ್ರವರಿ ೨೩ ರಿಂದ ೨೬ ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ೩ ನೇ ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಮಹಿಳಾ ಚಾಂಪಿಯನ್‌ಶಿಪ್ ೨೦೨೫ ಅರ್ಹತಾ ಪಂದ್ಯಗಳನ್ನು ಆಡಲು ಭಾರತೀಯ ತಂಡಕ್ಕೆ ಆಯ್ಕೆಯಾದರು.[೪][೫] ಎಫ್‌ಐಬಿಎ(FIBA) ಮಹಿಳಾ ಏಷ್ಯಾಕಪ್‌ನಲ್ಲಿ ಸ್ಥಾನ ಪಡೆಯಲು ಭಾರತ ತಂಡ ಮಾಲ್ಡೀವ್ಸ್ ಮತ್ತು ನೇಪಾಳ ವಿರುದ್ಧ ಆಡಿತು. ಗಂಗ್ವಾಲ್ ಅವರು ಫೆಬ್ರವರಿ ೨೩, ೨೦೨೫ ರಂದು ದೆಹಲಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಸೀನಿಯರ್ ಭಾರತಕ್ಕೆ ಪಾದಾರ್ಪಣೆ ಮಾಡಿದರು.[೬][೭] ನಂತರ, ಅವರು ದೆಹಲಿಯಲ್ಲಿ ಮಾಲ್ಡೀವ್ಸ್ ವಿರುದ್ಧದ ಫೈನಲ್ ಸೇರಿದಂತೆ ಇತರ ಎರಡೂ ಪಂದ್ಯಗಳನ್ನು ಆಡಿದರು.[೮]
ದೇಶೀಯ ವೃತ್ತಿಜೀವನ
[ಬದಲಾಯಿಸಿ]ಗಂಗ್ವಾಲ್ ಅವರು ಜೂನಿಯರ್ ಆಟಗಾರಳಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ೨೦೨೧೨ ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ, ೨೦೧೩ ರಲ್ಲಿ ರಾಜಸ್ಥಾನದ ಗೋಟನ್‌ನಲ್ಲಿ ಮತ್ತು ೨೦೧೪ ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನ್ಯಾಷನಲ್ಸ್‌ನಲ್ಲಿ ಭಾಗವಹಿಸಿದರು.[೯] ೨೦೧೩ ರಲ್ಲಿ, ಬಿಹಾರದ ಪಾಟ್ನಾದಲ್ಲಿ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಧ್ಯಪ್ರದೇಶ ತಂಡದ ಪರವಾಗಿ ಆಡಿ ಕಂಚಿನ ಪದಕವನ್ನು ಗೆದ್ದರು. ಅವರು ೨೦೧೬ ಮತ್ತು ೨೦೧೭ ರಲ್ಲಿ ಕೆವಿ ನ್ಯಾಷನಲ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ತಂಡದ ಭಾಗವಾಗಿದ್ದರು. ೨೦೧೯ ರಲ್ಲಿ ಲುಧಿಯಾನದಲ್ಲಿ ತಮ್ಮ ಮೊದಲ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಅನ್ನು ಆಡಿದರು. ಅಲ್ಲಿ ಅವರು ಕಂಚಿನ ಪದಕವನ್ನು ಪಡೆದರು.[೯][೧೦] ೨೦೨೫ ರಲ್ಲಿ, ಅವರು ಛತ್ತೀಸ್‌ಗಢ ಪರ ಹಿರಿಯ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಅನ್ನು ಆಡಿದರು.[೧೧]
೨೦೧೬ ರಲ್ಲಿ ಉತ್ತರ ಪ್ರದೇಶದ ಗಾಂಧಿನಗರದಲ್ಲಿ ನಡೆದ ಸಬ್ ಜೂನಿಯರ್ ಇಂಡಿಯಾ ರಾಷ್ಟ್ರೀಯ ಶಿಬಿರ ಮತ್ತು ಯೂತ್ ಇಂಡಿಯಾ ಶಿಬಿರಕ್ಕೆ ಆಯ್ಕೆಯಾದರು. ಅವರು ೨೦೧೭ ರಲ್ಲಿ ಭಾರತೀಯ ಶಾಲಾ ಬ್ಯಾಸ್ಕೆಟ್‌ಬಾಲ್ ಶಿಬಿರದಲ್ಲೂ ಸಹ ಪಾಲ್ಗೊಂಡಿದ್ದರು. ಅವರು ಶಾಲಾ ಲೀಗ್‌ನಲ್ಲಿ ಸಹ ಆಡಿದರು.[೯]
ಉಲ್ಲೇಖಗಳು
[ಬದಲಾಯಿಸಿ]- ↑ "Divyani Gangwal (India) - Basketball Stats, Height, Age | FIBA Basketball". www.fiba.basketball (in ಇಂಗ್ಲಿಷ್). 2025-02-26. Retrieved 2025-02-26.
- ↑ "basketball.data4sports". data4basketball.com. Archived from the original on 2025-02-26. Retrieved 2025-02-26.
- ↑ "FIBA Basketball 3x3 - Confirmed profile - Divyani Gangwal". FIBA3x3.com. Retrieved 26 February 2025.
- ↑ "Know Your Squad: Indian women's basketball team for SABA Women's Championship 2025". Khel Now (in ಅಮೆರಿಕನ್ ಇಂಗ್ಲಿಷ್). Retrieved 2025-02-26.
- ↑ "Sreekala to lead Team India in SABA qualifiers, two other Keralites in squad". OnManorama.com (in ಇಂಗ್ಲಿಷ್). Retrieved 2025-02-26.
- ↑ "FIBA LiveStats India vs. Nepal". geniussports.com. Retrieved 2025-02-26.
- ↑ "FIBA LiveStats India vs. Maldives". geniussports.com. Retrieved 2025-02-26.
- ↑ "FIBA LiveStats - Final - India vs. Maldives". geniussports.com. Retrieved 2025-02-26.
- 1 2 3 "FIBA Basketball 3x3 - Confirmed profile - Divyani Gangwal". FIBA3x3.com. Retrieved 26 February 2025."FIBA Basketball 3x3 - Confirmed profile - Divyani Gangwal". FIBA3x3.com. Retrieved 26 February 2025.
- ↑ "Keralasportsdesk". multisports.in. Retrieved 2025-02-26.
- ↑ "National Championships: Delhi takes on Karnataka in men's quarterfinals". The Hindu (in Indian English). 2025-01-09. ISSN 0971-751X. Retrieved 2025-02-26.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- FIBA ನಲ್ಲಿ ದಿವ್ಯಾನಿ ಗಂಗ್ವಾಲ್