ದಿಲೀಪ್ ಶಾಂಘ್ವಿ

ವಿಕಿಪೀಡಿಯ ಇಂದ
Jump to navigation Jump to search
ದಿಲೀಪ್ ಶಾಂಘ್ವಿ

ದಿಲೀಪ್ ಶಾಂಘ್ವಿ ರವರು ಒಬ್ಬ ಭಾರತೀಯ ಉದ್ಯಮಿ ಮತ್ತು ಭಾರತದಲ್ಲಿ ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿದ್ದಾರೆ. ಇವರು ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರು . ೨೦೧೫ ಫೋರ್ಬ್ಸ್ ನೈಜ ಸಮಯದಲ್ಲಿ ಶ್ರೇಣಿಯ, ಇವರು ಭಾರತದ ಶ್ರೀಮಂತರಲ್ಲಿ ಮುಕೇಶ್ ಅಂಬಾನಿಯನ್ನು ಮೀರಿಸಿದ್ದಾರೆ.

ಜನನ[ಬದಲಾಯಿಸಿ]

ದಿಲೀಪ್ ಅವರು ಅಕ್ಟೋಬರ್ ೧, ೧೯೫೫ ಯಲ್ಲಿ ಗುಜರಾತ್ಅಲ್ಲಿರುವ ಅಮರೇಲಿ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಇವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಪದವಿಯನ್ನು ಗಳಿಸಿದರು.

ವೃತ್ತಿ ಜೀವನ[ಬದಲಾಯಿಸಿ]

ಕೊಲ್ಕತಾದಲ್ಲಿ, ದಿಲೀಪ್ ಅವರು ಅವರ ತಂದೆಗೆ ಸೇರಿರುವ ಜೆನೆರಿಕ್ ಔಷದಿಗಳ ಸಗಟಿನ ಮೂಲಕ ಆರಂಭಿಸಿದರು. ಇದೆ ಸಮಯದಲ್ಲಿ, ಬೇರೆಯವರ ಔಷದಿಗಳನ್ನು ಮಾರುವ ಬದಲು, ಅವರದ್ದೇ ಒಂದು ಸ್ವಂತ ಔಷದಿ ಉತ್ಪಾದನಾವನ್ನು ತೆರೆಯಲು ನಿರ್ಧರಿಸಿದರು. ದಿಲೀಪ್ ಶಾಂಘ್ವಿಯವರು ವಾಪಿ ನಲ್ಲಿ ೧೯೮೨ರಲ್ಲಿ ರೂ೧೦,೦೦೦ ಬಂಡವಾಳದೊಂದಿಗೆ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ಯನ್ನು ಪ್ರಾರಂಭಿಸಿದರು. ಶಾಂಘ್ವಿಯವರು, ಐದು ಮನೋವೈದ್ಯಶಾಸ್ತ್ರದ ಉತ್ಪನ್ನದಳೊಂದಿಗೆ, ೧೯೮೩ರಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್ಯನ್ನು ಸ್ಥಾಪಿಸಿದರು. ಇಂದು, ಇದು ಭಾರತದ ಅತಿ ದೊಡ್ಡ ಔಷಧ ತಯಾರಕ ಮತ್ತು ಒಂದು ಅತ್ಯಮೂಲ್ಯವಾದ ಔಷಧ ಸಂಸ್ಥೆ. ಸನ್ ಫಾರ್ಮಾಸ್ಯುಟಿಕಲ್ ಷೇರುಗಳ ಹೆಚ್ಚುಗಳಿಕೆ ಇಂದ, ತಮ್ಮ ವೈಯಕ್ತಿಕ ಸಂಪತ್ತು ೫೦% ಹೆಚ್ಚಿತು, ಹಾಗೂ ಅದರ ಬೆಲೆ ೪.೭ ಬಿಲಿಯನ್ ಡಾಲರ್ಸ್ ಯಂದು ತಿಳಿಸಿದರು. ಆಗಸ್ಟ್ ೨೦೧೪ ರಂತೆ, ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ , ಇವರು $ ೧೭.೨ ಬಿಲಿಯನ್ ನಷ್ಟು ನಿವ್ವಳ ಬೆಲೆ ಹೊಂದಿದ್ದಾರೆ. ವೆಲ್ತ್-ಎಕ್ಸ್ ಪ್ರಕಾರ, ಏಷ್ಯಾದ ಅಗ್ರ ಹತ್ತು ಶ್ರೀಮಂತರಾಗಿರುವ ಸ್ವಯಂ ನಿರ್ಮಿತರಾದ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಇವರನ್ನು ಹೆಸರಿಸಲಾಯಿತು. ಶಾಂಘ್ವಿಯವರು ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಕಂಪನಿ ಮತ್ತು ಶಾಂತಿಲಾಲ್ ಶಾಂಘ್ವಿ ಪ್ರತಿಷ್ಠಾನದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಆಗಿದ್ದಾರೆ. ಅಮೆರಿಕದಲ್ಲಿ ಈಗ ಸನ್ ಫಾರ್ಮಾಸ್ಯುಟಿಕಲ್ಸ್ ಆದಾಯ ೬೦% ಎಂದು ನಷ್ಟಿದೆ. ಅವರು ೨೦೦೭ ರಲ್ಲಿ ಇಸ್ರೇಲ್ನ ಟಾರೋ ಫಾರ್ಮಾವನ್ನು ಸ್ವಾಧೀನಪಡಿಸಿಕೊಂಡರು. ಅವರು ಜಾಗತಿಕ ಸಾರ್ವತ್ರಿಕ ಔಷಧಿಗಳ ಮಾರುಕಟ್ಟೆಯಲ್ಲಿ ಸನ್ ಫಾರ್ಮಾವನ್ನು ಐದನೇ ಸ್ಥಾನಕ್ಕೆ ತಂದರು. ದಿಲೀಪ್ ಶಾಂಘ್ವಿಯವರು ತೊಂದರೆಯಲ್ಲಿರುವ ಕಂಪನಿಗಳ್ಳನ್ನು ತಿರುವಿಸುವುದರಲ್ಲಿ ಪ್ರತಿಭೆಯನ್ನು ಹೊಂದಿದ್ದಾರೆ . ತನ್ನ ಯೋಜನೆಗಳ್ಳನ್ನು ವಿಸ್ತಾರಗೋಣಿಸುವುದರಲ್ಲಿ ಅನುಷ್ಠಾನ ಸ್ಥಿರ ಮತ್ತು ಸಮತೋಲಿತವನ್ನು ಇವರು ತಂದಿದ್ದಾರೆ.