ವಿಷಯಕ್ಕೆ ಹೋಗು

ದಿಮ್ಸಾಲೆ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿಮ್ಸಾಲೆ ಕುಣಿತವನ್ನು ಆಸಾದಿ ಕುಣಿತ ಎಂದೂ ಕರೆಯುತ್ತಾರೆ. ಆಸಾದಿ ಕುಣಿತವು ಮಾರಮ್ಮ ದೇವಿಯ ಆರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ವಿಶಿಷ್ಟವಾದ ಜನಪದ ಕಲೆ ಮತ್ತು ನೃತ್ಯ ಪ್ರಕಾರವಾಗಿದೆ.[೧][೨] ಈ ಕುಣಿತವು ಊರಿನ ಮಾರಿ ಹಬ್ಬದ ದಿನ ಅಭೀಪ್ಸೆ ಅಥವಾ ಪ್ರತಿಭಟನೆಯನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಒಂದು ಆಚರಣಾತ್ಮಕ ಕಲೆಯಾಗಿದೆ.

ದಿಮ್ಸಾಲೆ ಕುಣಿತ ಎಂಬುದು ಮಂಡ್ಯ ಜಿಲ್ಲೆಯ ಅರೆಕೆರೆ ಹಾಗೂ ಕಿಕ್ಕೇರಿಗಳಲ್ಲಿ ಮಾರಿಹಬ್ಬದ ಸಂದರ್ಭಗಳಲ್ಲಿ ಪ್ರದರ್ಶಿತವಾಗುವ ಒಂದು ಕಲೆ. ದಿಮ್ಸಾಲೆ ಕುಣಿತವನ್ನು ಆಸಾದಿ ಕುಣಿತದ ಮುಂದಿನ ಹಂತ ಎಂದು ಹೇಳಲಾಗಿದೆ. ಆಸಾದಿ ಕುಣಿತದಲ್ಲಿ ನಾಲಿಗೆಯ ಮೂಲಕ ಅಸಹನೆಯನ್ನು ವ್ಯಕ್ತಪಡಿಸುಸುತ್ತಿದರು ಆದರೆ ದಿಮ್ಸಾಲೆ ಕುಣಿತದಲ್ಲಿ ಕ್ರಿಯೆಯ ಮೂಲಕ ವ್ಯಕ್ತಪಡಿಸಲಾಗುತ್ತದೆ.

ಜಾತಿ ಮತ್ತು ಧಾರ್ಮಿಕ ಆಚರಣೆ

[ಬದಲಾಯಿಸಿ]

ಶೂಲ ಹಬ್ಬ ಎಂಬುದು ೩ ಅಥವಾ ୭ ವರ್ಷಗಳಿಗೊಮ್ಮೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತದೆ.[೩] ಈ ಹಬ್ಬದ ಸಮಯದಲ್ಲಿ ಮಾರಮ್ಮನಿಗೆ ಪೂಜೆಸಲ್ಲಿಸುತ್ತಾರೆ. ಮಾರಮ್ಮನ ಪೂಜಾರಿಯಾದ ಬೆಸ್ತ ಜನಾಂಗದ ವ್ಯಕ್ತಿಯೊಬ್ಬರು ಈ ಕುಣಿತವನ್ನು ನೆರವೇರಿಸುತ್ತಾರೆ. ಊರಿನಲ್ಲಿ ನಡೆಯುವ ಕೆಟ್ಟ ಹಾಗೂ ಒಳ್ಳೆಯ ವಿಷಯಗಳ ಹಿನ್ನಲೆಯಲ್ಲಿ ಯಾವಾಗ ನಡೆಯಬೇಕೆಂದು ಹಿರಿಯರು ನಿರ್ಧಾರಿಸುತ್ತಾರೆ.

ದಿಮ್ಸಾಲೆ ಕುಣಿತವನ್ನು ಮಾರಮ್ಮನ ಗಂಡ ಎಂದು ನಂಬಲಾಗುತ್ತದೆ. ಇವರು ಹೆಚ್ಚು ಕಡಿಮೆ ಆಸಾದಿ ಕುಣಿತದವರಂತೆಯೆ ವೇಷ ಧರಿಸುತ್ತಾರೆ. [೪]ಇವರು ಸಾಮಾನ್ಯವಾಗಿ ಕಡುಕಾವಿ ಬಟ್ಟೆ, ಹೊಂಬಾಳ ಟೋಪಿ, ಕೊರಳಿಗೆ ಅಡಿಕೆಕಾಯಿಸರ ಹಾಕಿಕೊಳ್ಳುತ್ತಾರೆ.[೫] ನಡುವಿಗೆ ಒಂದು ಪಟ್ಟಿ ಕಟ್ಟಿ ಆ ಪಟ್ಟಿಗೆ ಸೇರಿದಂತೆ ಮರದಲ್ಲಿ ಮಾಡಿದ ಸುಮಾರು ಎರಡು ಅಡಿ ಉದ್ದದ ಶಿಶ್ನ ಕಟ್ಟಿಕೊಂಡಿರುತ್ತಾರೆ ಹಾಗೆಯೇ ಕಟ್ಟಿಕೊಂಡ ಶಿಶ್ನವನ್ನು ಹಿಂದೆ,ಮುಂದೆ ಎತ್ತಿ ಹಿಡಿಯುತ್ತಾ ಇರುತ್ತಾರೆ.

ಹಾಡು ಮತ್ತು ಕುಣಿತ

[ಬದಲಾಯಿಸಿ]

ದಿಮ್ಸಾಲೆ ವೇಷ ಧರಿಸಿದ ವ್ಯಕ್ತಿ ಹಾಗೂ ಆತನ ಜೊತೆ ಒಬ್ಬಿಬ್ಬರು ಸೇರಿ ಸಂಪೂರ್ಣ ಲೈಂಗಿಕವಾಗಿ ಹಾಡುಗಳನ್ನು ಹಾಡುತ್ತಾರೆ.ಈತನ ಬಾಯಿ ಚಪಲಕ್ಕೆ ಊರಿನ ಹೆಣ್ಣು ಮಕ್ಕಳು ಸಿಕ್ಕಿಕೊಳ್ಳುತ್ತಾರೆ. ದಿಮ್ಸಾಲೆ ಕುಣಿತದ ಸಮಯದಲ್ಲಿ ನಗಾರಿ ಹಾಗೂ ತಮಟೆಗಳನ್ನು ಬಳಸುತ್ತಾರೆ. ಇದರ ಶಬ್ದದಲ್ಲಿ ಕೆಲವೊಮ್ಮೆ ಹಾಡುಗಳು ಸ್ಪಷ್ಟವಾಗಿ ಕೇಳುವುದಿಲ್ಲ, ಆದರೆ ಇವನ ಕ್ರಿಯೆಯಿಂದಲೇ ತಿಳಿದುಕೊಳ್ಳಬಹುದು ಇವರು ಯಾರನ್ನು ಕುರಿತು ಹಾಡುತಿದ್ದಾರೆ ಎಂಬುದನ್ನು. ಇವರು ಹಬ್ಬ ಮತ್ತು ಜಾತ್ರೆಯಲ್ಲಲ್ಲದೆ, ಆಯಾ ಊರಿನ ಮಾರಿ ಗುಡಿಯ ಮುಂದು ಈ ಶಿಶ್ನ ನ್ನತ್ಯವನ್ನು ನಡೆಸುತ್ತಾರೆ. ಇವರು ಹಾಡುವ ಹಾಡುಗಳು ಲೈಂಗಿಕ ಅರ್ಥವನ್ನು ತುಂಬಿಕೊಂಡಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ↑ ಗೊ.ರು.ಚನ್ನಬಸಪ್ಪ.ಕರ್ನಾಟಕ ಜನಪದ ಕಲೆಗಳು.ಕನ್ನಡ ಸಾಹಿತ್ಯ ಪರಿಷತ್ತು.೧೯೯୭୭.
  2. ↑ ಹಿ.ಚಿ.ಬೋರಲಿಂಗಯ್ಯ.ಕರ್ನಾಟಕ ಜನಪದ ಕಲೆಗಳ ಕೋಶ.ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.೧೯೯೬.
  3. ↑ https://mandya.nic.in/.
  4. ↑ "ಆರ್ಕೈವ್ ನಕಲು" (PDF). Archived from the original (PDF) on 2022-07-02. Retrieved 2025-10-12.
  5. ↑ https://kn.wiktionary.org/wiki/%E0%B2%95%E0%B2%BE%E0%B2%B5%E0%B2%BF%E0%B2%AF_%E0%B2%AC%E0%B2%9F%E0%B3%8D%E0%B2%9F%E0%B3%86