ದಾಲ್ ಬಾಟಿ

ವಿಕಿಪೀಡಿಯ ಇಂದ
Jump to navigation Jump to search

ದಾಲ್ ಬಾಟಿ ದಾಲ್ (ತೊವ್ವೆ) ಮತ್ತು ಬಾಟಿ (ಗಟ್ಟಿಯಾದ ಗೋಧಿಯ ಉಂಡೆಗಳು) ಜೊತೆಗೂಡಿರುವ ಒಂದು ಭಾರತೀಯ ಖಾದ್ಯವಾಗಿದೆ.[೧] ಇದು ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ (ವಿಶೇಷವಾಗಿ ಬ್ರಜ್, ನೀಮರ್ ಮತ್ತು ಮಾಲ್ವಾ ಪ್ರದೇಶಗಳಲ್ಲಿ) ಜನಪ್ರಿಯವಾಗಿದೆ.

ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಮಡಿಕೆ ಕಾಳು ಅಥವಾ ಉದ್ದಿನ ಬೇಳೆಯನ್ನು ಬಳಸಿ ದಾಲ್‍ನ್ನು ತಯಾರಿಸಲಾಗುತ್ತದೆ. ಬೇಳೆಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬೇಯಿಸಿಕೊಳ್ಳಲಾಗುತ್ತದೆ. ಆಮೇಲೆ ಒಂದು ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು, ಮೆಣಸಿನಕಾಯಿ, ಬೆಳ್ಳುಳ್ಳಿ, ಕೆಲವು ಸಂಬಾರ ಪದಾರ್ಥಗಳನ್ನು ಸೇರಿಸಿ ನಂತರ ಬೆಂದ ಬೇಳೆಗಳನ್ನು ಸೇರಿಸಿ ದಾಲ್‍ನ್ನು ತಯಾರಿಸಲಾಗುತ್ತದೆ.

ಬಾಟಿಯನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಉಪ್ಪು, ಮೊಸರು, ನೀರು ಸೇರಿಸಿ ನಾದಿಕೊಂಡು ಟೆನಿಸ್ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಚೆನ್ನಾಗಿ ಬಿಸಿಯಾದ ಸಾಂಪ್ರದಾಯಿಕ ಒಲೆಯಲ್ಲಿ ಇವನ್ನು ಬೇಯಿಸಲಾಗುತ್ತದೆ. ಬಂಗಾರ ಕಂದು ಬಣ್ಣ ಬಂದಾಗ ಬಾಟಿಯನ್ನು ಹೊರತೆಗೆದು ಅದಕ್ಕೆ ತುಪ್ಪ ಹಚ್ಚಿ ದಾಲ್‍ನೊಂದಿಗೆ ಬಡಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Dinesh Sharma & Madalsa Sharma (16 May 2014). The Science and Art of Indian Cooking: Indian Cooking. p. 20. ISBN 978-1-4828-2215-1.