ದಾಕ್ಷಾಯಿಣಿ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಕ್ಷಾಯಿಣಿ ಭಟ್ ಎ, ಕನ್ನಡ ರಂಗಭೂಮಿಯ ಹೆಸರಾಂತ ನಿರ್ದೇಶಕಿ, ರಂಗಭೂಮಿಯನ್ನೇ ಉಸಿರಾಗಿಸಿಕೊಂಡ, ಸೌಮ್ಯ ಮತ್ತು ವಿನಯ ಸ್ವಭಾವದ ದಾಕ್ಷಾಯಿಣಿ ಭಟ್ ಅವರು ಕನ್ನಡ ರಂಗಭೂಮಿಯ ಭರವಸೆಯ ನಿರ್ದೇಶಕಿ ಮತ್ತು ಉತ್ತಮ ನಟಿ. ಹೆಗ್ಗೋಡಿನ ನೀನಾಸಂ ಪದವಿಧರೆ. ಜೊತೆಗೆ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ನಾತಕೋತ್ತರ ಪದವಿಧರೆ ರಂಗನಿರ್ದೇಶನಕ್ಕೆಂದು ಇವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವಾ ಪುರಸ್ಕಾರ್ Archived 2019-12-13 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಶಸ್ತಿಯಿಂದ ಪುರಸ್ಕರಿಸಲಾಗಿದೆ,.

ಜನನ, ಊರು, ವಿದ್ಯಾಭ್ಯಾಸ[ಬದಲಾಯಿಸಿ]

೧೯೭೭, ನವೆಂಬರ್ ೭ರಂದು ಶಿಕಾರಿಪುರದಲ್ಲಿ ಜನಿಸಿದ ದಾಕ್ಷಾಯಿಣಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕಡಂದಲೆಯವರು. ಇವರ ತಂದೆ ಶ್ರೀ.ಅನಂತಪದ್ಮನಾಭ ಭಟ್, ತಾಯಿ ಶ್ರೀಮತಿ ಚಂದ್ರಮತಿ.
ದಾಕ್ಷಾಯಿಣಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿಕಾರಿಪುರದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಆಗುಂಬೆಯಲ್ಲಿ ಮತ್ತು ಕಾಲೇಜು ವಿದ್ಯಾಭಾಸವನ್ನು ಮತ್ತೆ ಶಿಕಾರಿಪುರದಲ್ಲಿ ಪೂರೈಸಿದ್ದಾರೆ. ಬಳಿಕ ಹೆಗ್ಗೋಡಿನ ನಿನಾಸಂನ ರಂಗಶಿಕ್ಷಣದಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ಪಡೆದ ಹೆಮ್ಮೆಯ ಗರಿ, ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ದಾಕ್ಷಾಯಿಣಿ ಭಟ್ ಅವರು ಆಧುನಿಕ ರಂಗಭೂಮಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಬಿ.ವಿ.ಕಾರಂತ, ಚಸಿ.ಆರ್.ಜಂಬೆ, ಕೆ.ವಿ.ಅಕ್ಷರ, ಸಿ.ಬಸವಲಿಂಗಯ್ಯ (ಬಸು), ವೆಂಕಟರಮಣ ಐತಾಳ್, ರಘುನಂದನ್, ಇಕ್ಬಾಲ್ ಅಹಮದ್, ಪ್ರೇಮಾ ಕಾರಂತ, ಗೋಪಾಲಕೃಷ್ಣ ನಾಯರಿ, ವಿ.ರಾಮಮೂರ್ತಿ, ಶ್ರೀನಿವಾಸ.ಜಿ.ಕಪ್ಪಣ್ಣ ಮತ್ತು ಪಣಿಕ್ಕರ್ ಅವರೊಂದಿಗೆ ಕೆಲಸ ಮಾಡಿದ ಹೆಮ್ಮೆ ದಾಕ್ಷಾಯಿಣಿಯವರಿಗಿದೆ.

ದಾಕ್ಷಾಯಿಣಿ ಭಟ್ ಅವರ ಪ್ರಮುಖ ಕೆಲಸಗಳು[ಬದಲಾಯಿಸಿ]

  • ಆರ್ಥಿಕವಾಗಿ ಹಿಂದುಳಿದ ಮಕ್ಕಳ ಆತ್ಮೋನ್ನತಿಗಾಗಿ ಹಾಗೂ ಬೆಳವಣಿಗಾಗಿ ಮತ್ತು ಕಲಾಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ದಾಕ್ಷಾಯಿಣಿ ಭಟ್ ಕೆಲಸ ಮಾಡಿದ್ದಾರೆ.
  • 'ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ' ಸಂಸ್ಥೆ ’ ಯಿಂದ ಹಾಗೂ '‘ಜನಾಧಿಕಾರ ಜನಾಲೋಂದನ ಜಾಥಾ' ದಿಂದ ಗ್ರಾಮೀಣ ಮಹಿಳೆಯರಲ್ಲಿ ಪರಿಸರ ನೈರ್ಮಲ್ಯದ ಜಾಗೃತಿ ಮೂಡಿಸಲು ಮತ್ತು ಅವರ ಉನ್ನತಿಗಾಗಿ ಅನೇಕ ಬೀದಿ ನಾಟಕಗಳನ್ನು ಮಾಡಿಸಿದ್ದಾರೆ.
  • ಎಚ್.ಡಿ.ಕೋಟೆ ಯಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಅನೇಕ ‘ರಂಗ ಕಾರ್ಯಾಗಾರಗಳನ್ನು ನಿರ್ವಹಿಸಿದ್ದಾರೆ.
  • ಕೇಂದ್ರ ಸಂಗೀತ ನಾಟಕ ಅಕಾಡಮಿ ಆಯೋಜಿಸಿದ `ಯುವ ನಿರ್ದೇಶಕರ ನಾಟಕೋತ್ಸವ`ದಲ್ಲಿ ಇವರ ನಿರ್ದೇಶನದ ನಾಟಕ ಪ್ರದರ್ಶನಗೊಂಡಿದೆ.
  • ವಿಶ್ವ ರಂಗಭೂಮಿ ದಿನಾಚರಣೆಯ ದಿನ, ಕರ್ನಾಟಕ ನಾಟಕ ಅಕಾಡಮಿ ಆಯೋಜಿಸಿದ `ನಿರ್ದೇಶಕಿಯರ ನಾಟಕೋತ್ಸವ'ದಲ್ಲಿ ದಾಕ್ಷಾಯಿಣಿ ಭಟ್ ಅವರು ನಿರ್ದೇಶಿಸಿದ ಮೂರು ನಾಟಕಗಳು ಪ್ರದರ್ಶನಗೊಂಡಿವೆ.

ದಾಕ್ಷಾಯಿಣಿ ಭಟ್ ಅವರು ನಿರ್ದೇಶಿಸಿದ ನಾಟಕಗಳು[ಬದಲಾಯಿಸಿ]

  1. ಗುಣಮುಖ -(೧೯೯೯-೨೦೦೦ರಲ್ಲಿ ಕೆಳದಿಯ ತಂಡಕ್ಕಾಗಿ )
  2. ಸೂರ್ಯ ಬಂದ -(೨೦೦೦ರಲ್ಲಿ ಧಾರವಾಡದ ತಂಡಕ್ಕಾಗಿ )
  3. ದಲಿತ ಲೋಕ (ಸಹನಿರ್ದೇಶನ) -(೧೯೯೯ರಲ್ಲಿ ಸಾಗರದ ತಂಡಕ್ಕಾಗಿ)
  4. ಅದಲು ಬದಲು ಕಂಚಿ ಕದಲು -(೨೦೦೩ರಲ್ಲಿ, ಬೆಂಗಳೂರಿನ ಕೆ ಎಚ್ ಬಿ ಕಾಲನಿಯ ತಂಡಕ್ಕಾಗಿ)
  5. ಎ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ -(೨೦೦೪ರಲ್ಲಿ ಬೆಂಗಳೂರಿನ ಕೆ ಆರ್ ಪುರಂ ಕಾಲೇಜಿನ ತಂಡಕ್ಕಾಗಿ)
  6. ರಂಗದಲ್ಲಿ ರಾಮಾಯಣ -(೨೦೦೪ರಲ್ಲಿ ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ ಕಾಲೇಜಿನ ತಂಡಕ್ಕಾಗಿ)
  7. ಗೋಕರ್ಣದ ಗೌಡಶಾನಿ -(೨೦೦೪ರಲ್ಲಿ ಸಂತೆ ಶಿವಾರದ ತಂಡಕ್ಕಾಗಿ)
  8. ರಂಗದಲ್ಲಿ ರಾಮಾಯಣ -(೨೦೦೪ರಲ್ಲಿ ಮುದ್ರಾಡಿ ಡಿಕೆ ತಂಡಕ್ಕಾಗಿ)
  9. ಕತ್ತೆ ಬಾಲ ಕುದುರೆ ಜುಟ್ಟು (೨೦೦೪ರಲ್ಲಿ ಎಚ್.ಡಿ.ಕೋಟೆಯಲ್ಲಿನ ತಂಡಕ್ಕಾಗಿ)
  10. ಜಾತಿ ಮಾಡಬ್ಯಾಡ್ರಣ್ಣ (ಬೀದಿ ನಾಟಕ) -(೨೦೦೪ರಲ್ಲಿ ಬೆಂಗಳೂರಿನಲ್ಲಿ)
  11. ಸಾಹೇಬರು ಬರುತ್ತಾರೆ -(೨೦೦೪-೨೦೦೫ರಲ್ಲಿ ಬೆಂಗಳೂರಿನ ಎಮ್.ಇ.ಎಸ್ ಕಾಲೇಜಿನ ತಂಡಕ್ಕಾಗಿ)
  12. ಒಳ್ಳೆಯದು ಒಳ್ಳೆಯದು -(೨೦೦೪-೨೦೦೫ರಲ್ಲಿ ಬೆಂಗಳೂರಿನ ಎಮ್.ಇ.ಎಸ್ ಕಾಲೇಜಿನ ತಂಡಕ್ಕಾಗಿ)
  13. ತೆರೆಗಳು -(೨೦೦೪-೨೦೦೫ರಲ್ಲಿ ಬೆಂಗಳೂರಿನ ನೋವ್ಕೀಸ್ ತಂಡಕ್ಕಾಗಿ)
  14. ಮನಿಹಾಳ್ ಮಗ -(೨೦೦೫ರಲ್ಲಿ ಕಾವೇರಿನಗರದ ಕೊಳಚೆ ಪ್ರದೇಶದವರಿಗಾಗಿ)ದಾಕ್ಷಾಯಿಣಿ ಭಟ್ ಎ.jpg
  15. ಸಾಯೊ ಆಟ -(೨೦೦೫ರಲ್ಲಿ ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ ಕಾಲೇಜಿನ ತಂಡಕ್ಕಾಗಿ)
  16. ಪಂಪನ ರಂಗರೂಪಗಳು (೨೦೦೫ರಲ್ಲಿ ಸಾಣೇಹಳ್ಳಿಯ ಶಿವಸಂಚಾರ ತಂಡಕ್ಕಾಗಿ)
  17. ಜಲಸ್ಥಂಬ -(೨೦೦೫ರಲ್ಲಿ ಕುಡೂರು ಕಾಜಲೇಜಿನ ತಂಡಕ್ಕಾಗಿ)
  18. ಪಂಪನಿಗೆ ಬಿದ್ದ ಕನಸುಗಳು -(೨೦೦೬ರಲ್ಲಿ ಮುದ್ರಾಡಿ ಡಿಕೆ ತಂಡಕ್ಕಾಗಿ)
  19. ಬಿರುಗಾಳಿ(ಟೆಂಪೆಸ್ಟ್) -(೨೦೦೬ರಲ್ಲಿ ಹರಪನಹಳ್ಳಿಯ ತಂಡಕ್ಕಾಗಿ)
  20. ಕಲಾಪುರದ ಕಲ್ಲೇಶಿ (ತುಳು) -(೨೦೦೬ರಲ್ಲಿ ಮುದ್ರಾಡಿ ಡಿಕೆ ತಂಡಕ್ಕಾಗಿ)
  21. ಕಾಂಚಿಪುರದ ಮಕ್ಕಳು -(೨೦೦೬ರಲ್ಲಿ ಗ್ರೀನ್ ಕಂಟ್ರಿ ಪಬ್ಲಿಕ್ ಸ್ಕೂಲ್ ನ ಮಕ್ಕಳಿಗಾಗಿ)
  22. ಕುಂಟಾ ಕುಂಟಾ ಕುರವತ್ತಿ -(೨೦೦೬ರಲ್ಲಿ ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ ಕಾಲೇಜಿನ ತಂಡಕ್ಕಾಗಿ)
  23. ಭಾರತಾಂಬೆ -(೨೦೦೬ರಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ)
  24. ಚಕ್ರವ್ಯೂಹ -(೨೦೦೬ರಲ್ಲಿ ಬೆಂಗಳೂರಿನ ಪ್ರಯೋಗರಂಗ ತಂಡಕ್ಕಾಗಿ)
  25. ದೂತ ಘಟೋತ್ಕಜ -(೨೦೦೬ರಲ್ಲಿ ಮಲ್ಲೇಶ್ವರಂನ ಸರಕಾರಿ ಶಾಲೆಗಾಗಿ)
  26. ಕೋತಿ ಕತೆ -(೨೦೦೭ರಲ್ಲಿ ಬೆಂಗಳೂರಿನ ಬಾಲಭವನದ ಮಕ್ಕಳಿಗಾಗಿ)
  27. ಹರಪನಹಳ್ಳಿ ವೀರ ಪಾಳೇಗಾರ -(೨೦೦೭ರಲ್ಲಿ ಹರಪನಹಳ್ಳಿಯ ತಂಡಕ್ಕಾಗಿ)
  28. ಗಾಜಿಪುರದ ಹಜಾಮ -(೨೦೦೭ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  29. ಬೋಳೆಶಂಕರ -(೨೦೦೭ರ ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ತಂಡಕ್ಕಾಗಿ)
  30. ದೇವರ ಹೆಸರಲ್ಲಿ -(೨೦೦೭ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  31. ಪಂಜರ ಶಾಲೆ -(೨೦೦೭ರಲ್ಲಿ ಧಾರವಾಡದ ನವೋದಯ ಶಾಲೆಯ ಮಕ್ಕಳಿಗಾಗಿ)
  32. ಕೊಳ್ಳಿ -(೨೦೦೮ರಲ್ಲಿ ಬೆಂಗಳೂರಿನ ಅನೇಕ ತಂಡಕ್ಕಾಗಿ)
  33. ಅಜ್ಜಿ ಕತೆ -(೨೦೦೮ರಲ್ಲಿ ದಾವಣಗೆರೆಯ ಶಿವಕುಮಾರ ಕಲಾ ಸಂಘಕ್ಕಾಗಿ)
  34. ಒಳ್ಳೇಯದು ಒಳ್ಳೆಯದು -(೨೦೦೮ರಲ್ಲಿ ಬೆಂಗಳೂರಿನ ಚಿರಂಜೀವಿ ಸಂಘಕ್ಕಾಗಿ)
  35. ಹಣ ಬಣ್ಣ -(೨೦೦೮ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  36. ಪುಣ್ಯಕೋಟಿ -(೨೦೦೮ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  37. ಕಂಬಳಿ ಸೇವೆ -(೨೦೦೯ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  38. ಸ್ವಪ್ನ ವಾಸವದತ್ತ -(೨೦೦೮ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  39. ಅಲಿಬಾಬಾ ಮತ್ತು ನಾಲವತ್ತು ಮಂದಿ ಕಳ್ಳರು -(೨೦೦೯ರಲ್ಲಿ ವಸ್ವಾಮಿ ವಿವೇಕಾನಂದ ಯುತ್ ಮೂವ್^ಮೆಂಟ್ ತಂಡಕ್ಕಾಗಿ)
  40. ಢಾಮ್ ಢೂಮ್ ಡಮಾರ್ -(೨೦೦೯ರಲ್ಲಿ ಬೆಂಗಳೂರಿನ ಚಿರಂಜೀವಿ ತಂಡಕ್ಕಾಗಿ)
  41. ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕತೆ -(೨೦೧೦ರಲ್ಲಿ ಹೆಗ್ಗೋಡಿನ ಊರುಮನೆ ತಂಡಕ್ಕಾಗಿ)
  42. ಹಕ್ಕಿ ಹಾಡು -(೨೦೧೦ರಲ್ಲಿ ಬೆಂಗಳೂರಿನ ಬಾಲಭವನದ ಮಕ್ಕಳಿಗಾಗಿ)
  43. ಸ್ಮಶಾನ ಕುರುಕ್ಷೇತ್ರಂ -(೨೦೧೦ರಲ್ಲಿ ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಯ ತಂಡಕ್ಕಾಗಿ)
  44. ಕುಣಿಕುಣಿ ನವಿಲೆ -(೨೦೧೦ರಲ್ಲಿ ಕೋಣನಕುಂಟೆಯ ಸರಕಾರಿ ಶಾಲೆಯ ಮಕ್ಕಳಿಗಾಗಿ)
  45. ಪೇಯಿಂಗ್ ಗೆಸ್ಟ್ -(೨೦೧೦ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  46. ಅಜ್ಜಿ ಕತೆ -(೨೦೧೧ರಲ್ಲಿ ಬೆಂಗಳೂರಿನ ಬಾಲಭವನದ ಮಕ್ಕಳಿಗಾಗಿ)
  47. ರಾಜಾ ಸೋಮಶೇಖರ ನಾಯಕ -(೨೦೧೧ರಲ್ಲಿ ಹರಪನಹಳ್ಳಿಯ ತಂಡಕ್ಕಾಗಿ)
  48. ಮರುಗಾಡುಗಳು -(೨೦೧೧ರಲ್ಲಿ ಬೆಂಗಳೂರಿನ ದೃಶ್ಯ ತಂಡಕ್ಕಾಗಿ)
  49. ಗಂಧವಲ್ಲಿ- (೨೦೧೨ರಲ್ಲಿ, ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜ್, ಬೆಂಗಳೂರು)
  50. ನನಗ್ಯಾಕೋ ಡೌಟು - ( ೨೦೧೨ ರಲ್ಲಿ ಬಾ‍ಷ್ ಲಲಿತ ಕಲಾ ಸಂಘ)
  51. ಸಮಾನತೆ- (೨೦೧೨, ದೃಶ್ಯ ®, ಬೆಂಗಳೂರು)
  52. ನಾನು ಮತ್ತು ಹೆಣ್ಣು (೨೦೧೨, ದ್ರುಶ್ಯ, ಬೆಂಗಳೂರು)
  53. ಚಾಳೇಶ ( ೨೦೧೨, ದೃಶ್ಯ, ಬೆಂಗಳೂರು)
  54. ಅಳಿಲು ರಾಮಾಯಣ (೨೦೧೨, ಬಾಲ ಭವನ, ಬೆಂಗಳೂರು)
  55. ಕುಂಭಕರ್ಣನ ನಿದ್ದೆ (೨೦೧೨, ಕೋಟ, ಕುಂದಾಪುರ)
  56. ಭಗವದಜ್ಜುಕೀಯಂ- (೨೦೧೨, ಮಹಿಲಾ ಶಿಕ್ಷಕರ ಸಂಘ, ಬೆಂಗಳೂರು)
  57. ಬಸ್ತಿ (೨೦೧೨, ದೃಶ್ಯ, ಬೆಂಗಳೂರು)
  58. ಗಾಳಿಯ ಉಡುಗೊರೆ- (೨೦೧೩, ಸಿರಿಗೆರೆ, ಚಿತ್ರದುರ್ಗ)
  59. ಪ್ರೀತಿಯ ಕಾಳು - (೨೦೧೩, ಸಿರಿಗೆರೆ, ಚಿತ್ರದುರ್ಗ)
  60. ಹಕ್ಕಿ ಹಾಡು- (೨೦೧೩, ಬಾಲ ಭವನ, ಬೆಂಗಳೂರು)
  61. ಆಮ್ರಪಾಲಿ- (೨೦೧೪, ನಾಟಕ ಮನೆ, ತುಮಕೂರು)
  62. ಭಾವ್ರಿ ದೇವಿ -(೨೦೧೪, ಎಲ್. ಐ. ಸಿ, ಮಹಿಳಾ ಸಿಬ್ಬಂಧಿ, ಬೆಂಗಳೂರು)
  63. ಪೋಲೀ ಕಿಟ್ಟೀ- (೨೦೧೪, ದೃಶ್ಯ ಬೆಂಗಳೂರು)
  64. ಬಸ್ತಿ (೨೦೧೪, ಬಾಶ್ ಲಲಿತ ಕಲಾ ಸಂಘ, ಬೆಂಗಳೂರು)
  65. ಅಗ್ನಿವರ್ಣ- (೨೦೧೪, ದೃಶ್ಯ, ಬೆಂಗಳೂರು)
  66. ಟ್ವೆಲ್ಫ್ತ್ ನೈಟ್- (೨೦೧೪, ದೃಶ್ಯ, ಬೆಂಗಳೂರು)
  67. ಪ್ರಸ್ತುತ್ತ ಶೇಖ್ಸ್ಫಿಯರ್- (೨೦೧೫, ಆವಿಶ್ಕಾರ, ಬೆಂಗಳೂರು)
  68. ಸಂಸಾರದಲ್ಲಿ ಸನಿದಪ- (೨೦೧೫, ಹಿರೇಕೇರೂರು)
  69. ಡಾಣಾ ಡಂಗೂರ- (೨೦೧೫, ಸಾಣೇ ಹಳ್ಳಿ)
  70. ಕೆಂಪು ಕಣಗಿಲೆ- (೨೦೧೫ ದೃಶ್ಯ, ಬೆಂಗಳೂರು)
  71. ರಕ್ತವರ್ಣೆ- (೨೦೧೬, ದೃಶ್ಯ, ಬೆಂಗಳೂರು)
  72. ಆಲಿ ಬಾಬಾ ಮತ್ತು ನಲವತ್ತು ಮಂದಿ ಕಳ್ಳರು- (೨೦೧೬, ಅಲ್ಲಮ್ಮ ಕಲಾ ಶಾಲೆ, ಕನ್ನಳ್ಳಿ)
  73. ಅಭಿಯಾನ- (೨೦೧೬, ದೃಶ್ಯ ಬೆಂಗಲಳೂರು)
  74. ಚೋರ ಚರಣ ದಾಸ- (೨೦೧೬, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು)
  75. ನಾಯಿಮರಿ- (೨೦೧೭, ಬಣ್ಣ ಮಕ್ಕಳ ರಂಗತಂಡ, ಬೆಂಗಳೂರು)
  76. ಸಾಯೋ ಆಟ- (೨೦೧೭, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು)
  77. ಡಾಣಾ ಡಂಗೂರ- (೨೦೧೭, ಬಾಲ ಭವನ, ಬೆಂಗಳೂರು)
  78. ನಾಯಿಮರಿ- (೨೦೧೭, ಬಾಲ ಭವನ, ಬೆಂಗಳೂರು)
  79. ಪ್ರತಿಜ್ಞಾ ಯೌಗಂಧರಾಯಣ- (೨೦೧೭, ದೃಶ್ಯ, ಬೆಂಗಳೂರು)
  80. ವಿನಾಶಕಾಲೆ- (೨೦೧೮, ದೃಶ್ಯ ಬೆಂಗಳೂರು)
  81. ಹಾನೂಶ್- (೨೦೧೮, ದೃಶ್ಯ ಬೆಂಗಳೂರು)
  82. ಕಸ! ಕಸ! ಕಸ.!.. -(ಬೀದಿ ನಾಟಕ, ೨೦೧೮, ದೃಶ್ಯ ಬೆಂಗಳೂರು)
  83. ಬಿದ್ದರೆ ಚಟಕ್ಕೆ, ಏರುವೆ ಚಟ್ಟಕ್ಕೆ- (ಬೀದಿ ನಾಟಕ, ೨೦೧೮, ದೃಶ್ಯ ಬೆಂಗಳೂರು)
  84. ಕುಣಿ ಕುಣಿ ನವಿಲೆ- (೨೦೧೯, ಸುಂಕೇನಹಳ್ಳಿ ಸರ್ಕಾರಿ ಶಾಲೆ, ಬೆಂಗಳೂರು)
  85. ಹಕ್ಕಿ ಹಾಡು- (೨೦೧೯, ಚೆಂಬೂರ್ ಕರ್ನಾಟಕ ಶಾಲೆ, ಮುಂಬೈ)
  86. ಅಭಿಯಾನ- (ಕುಕ್ಕೆ ಸುಭ್ರಮಣ್ಯ ಕಾಲೇಜು, ಸುಭ್ರಮಣ್ಯ)
  87. ಮಾಲವಿಕಾಗ್ನಿಮಿತ್ರ- (೨೦೧೯, ದೃಶ್ಯ ಬೆಂಗಳೂರು)

ಅಭಿನಯಿಸಿದ ನಾಟಕಗಳು[ಬದಲಾಯಿಸಿ]

  1. ಮಹಾ ಸತಿ -(ನಿರ್ದೇಶನ: ವೆಂಕಟರಮಣ ಐತಾಳ್, ೧೯೯೮-೧೯೯೯ರಲ್ಲಿ)
  2. ಭಟ್ಟರ ಮಗಳು -(ನಿರ್ದೇಶನ: ವೆಂಕಟರಮಣ ಐತಾಳ್, ೧೯೯೮-೧೯೯೯ರಲ್ಲಿ)
  3. ಮಣ್ಣಿನ ಬಂಡಿ -(ನಿರ್ದೇಶನ: ಚನ್ನಕೇಶವ, ೧೯೯೮-೧೯೯೯ರಲ್ಲಿ)
  4. ಅಹಲ್ಯ -(ನಿರ್ದೇಶನ: ಕೆ.ವಿ.ಅಕ್ಷರ, ೧೯೯೮-೧೯೯೯ರಲ್ಲಿ)
  5. ಕಿಂಗ್ ಲಿಯರ್ -(ನಿರ್ದೇಶನ: ಸಿ.ಆರ್.ಜಂಬೆ, ೧೯೯೮-೧೯೯೯ರಲ್ಲಿ)
  6. ಲಂಕೇಶರ ಏಳು ನಾಟಕಗಳು -(ನಿರ್ದೇಶನ: ರಘುನಂದನ್, ೧೯೯೮-೧೯೯೯ರಲ್ಲಿ)
  7. ಸ್ಮಶಾನ ಕುರುಕ್ಷೇತ್ರ -(ನಿರ್ದೇಶನ: ಕೆ.ವಿ.ಅಕ್ಷರ, ೨೦೦೦-೨೦೦೧ರಲ್ಲಿ)
  8. ಭಗವದ್ದಜ್ಜುಕೀಯಂ -(ನಿರ್ದೇಶನ: ನಾರಾಯಣ ಪಣಿಕರ್, ೨೦೦೦-೨೦೦೧ರಲ್ಲಿ)
  9. ಥ್ರೀ ಸಿಸ್ಟರ್ಸ್ -(ನಿರ್ದೇಶನ: ಸಿ.ಆರ್.ಜಂಬೆ, ೨೦೦೦-೨೦೦೧ರಲ್ಲಿ)
  10. ಮಾನಿಶಾದ -(ನಿರ್ದೇಶನ: ರಾಜಗೋಪಾಲ, ೨೦೦೧ರಲ್ಲಿ)
  11. ಸ್ವಪ್ನಾಲಾಪ -(ನಿರ್ದೇಶನ: ಎನ್.ಮಂಗಲಾ, ೨೦೦೧ರಲ್ಲಿ)
  12. ಸಾಯೊ ಆಟ -(ನಿರ್ದೇಶನ: ರಾಜಗೋಪಾಲ, ೨೦೦೧ರಲ್ಲಿ)
  13. ಜುಂಡಿ ಶೀಶಾನಾಯಕ -(ನಿರ್ದೇಶನ: ಕಟ್ಟಿಮನಿ, ೨೦೦೧ರಲ್ಲಿ)
  14. ಅಭಿಜ್ಞಾನ ಶಾಕುಂತಲಾ -(ನಿರ್ದೇಶನ: ಶ್ರೀನಿವಾಸ, ೨೦೦೧ರಲ್ಲಿ)
  15. ಗೆಲಿಲಿಯೊ -(ನಿರ್ದೇಶನ: ರಘುಬನಂದನ, ೨೦೦೧-೨೦೦೨ರಲ್ಲಿ)
  16. ಪ್ರತಿಮಾ -(ನಿರ್ದೇಶನ: ಇಕ್ಬಾಲ್ ಅಹಮದ್, ೨೦೦೧-೨೦೦೨ರಲ್ಲಿ)
  17. ಬೂಟ್ ಪಾಲಿಶ್ (ಏಕವ್ಯಕ್ತಿ ಪ್ರಯೋಗ) -(ನಿರ್ದೇಶನ: ದಾಕ್ಷಾಯಿಣಿ ಭಟ್, ೨೦೦೨ರಲ್ಲಿ)
  18. ಗೋಕುಲ ನಿರ್ಗಮನ -(ನಿರ್ದೇಶನ: ಬಿ.ವಿ.ಕಾರಂತ, ೨೦೦೨ರಲ್ಲಿ)
  19. ಮರುವಿನ ಮಹಾಪುರುಷರು -(೨೦೦೩ರಲ್ಲಿ)
  20. ಬಿರುದಂತೆಂಬರ ಗಂಡ -(ನಿರ್ದೇಶನ: ಕೆ.ವಿ.ನಾಗರಾಜಮೂರ್ತಿ-ಪ್ರಯೋಗರಂಗ, ೨೦೦೪ರಲ್ಲಿ)
  21. ನೀ ನಾನಾದ್ರೆ ನಾ ನೀನೇನಾ? -(ನಿರ್ದೇಶನ: ನಾಗೇಂದ್ರ ಶಾಹ, ೨೦೦೪ರಲ್ಲಿ)
  22. ಸಿರಿ ಪುರಂದರ -(ನಿರ್ದೇಶನ: ವಿ.ರಾಮಮೂರ್ತಿ, ೨೦೦೫ರಲ್ಲಿ)
  23. ಮಂಟೆಸ್ವಾಮಿ ಕಥಾಪ್ರಸಂಗ -(ಪ್ರಯೋಗರಂಗ ತಂಡ, ೨೦೦೭ರಲ್ಲಿ)
  24. ಸಾಹೇಬರು ಬರುತ್ತಾರೆ -(ಹಂಪಿ ಉತ್ಸವಕ್ಕಾಗಿ, ೨೦೦೭)
  25. ಮೌನಿ -(ಪ್ರಯೋಗರಂಗ ತಂಡ, ೨೦೦೯ರಲ್ಲಿ)
  26. ರಾಣಿ ಕಿತ್ತೂರು ಚೆನ್ನಮ್ಮ -(ಮೈಸೂರಿನ ತಂಡ, ೨೦೦೯ರಲ್ಲಿ)
  27. ಸುಯೋಧನ -(ಡಿ ಡಿ ಎಮ್, ೨೦೦೯ರಲ್ಲಿ)
  28. ಸಿದ್ಧತೆ -(ಡಿ ಡಿ ಎಮ್, ೨೦೦೯ರಲ್ಲಿ)
  29. ಕೊಂದವರಾರು -(ಪ್ರಯೋಗರಂಗ ತಂಡ, ೨೦೧೦ರಲ್ಲಿ)

ಅಭಿನಯಿಸಿದ `ಕೆಲವು' ಪ್ರಮುಖ ಬೀದಿ ನಾಟಕಗಳು[ಬದಲಾಯಿಸಿ]