ದರ್ಶನ್ ತೂಗುದೀಪ್
ದರ್ಶನ್ ತೂಗುದೀಪ್ | |
---|---|
![]() Darshan filming Saarathi in 2011 | |
ಹುಟ್ಟು | ಹೇಮಂತ್ ಕುಮಾರ್ ೧೬ ಫೆಬ್ರವರಿ ೧೯೭೭ |
ಇತರೆ ಹೆಸರುಗಳು | ಚಾಲೆಂಜಿಂಗ್ ಸ್ಟಾರ್, ದಾಸ ದರ್ಶನ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ಕಲಿಯುಗ ಕರ್ಣ, ಬಾಕ್ಸ್ ಆಫೀಸ್ ಚಕ್ರವರ್ತಿ.......... |
ವೃತ್ತಿ | ನಟ, ಚಲನಚಿತ್ರ ನಿರ್ಮಾಪಕ, ವಿತರಕ |
ಕ್ರಿಯಾಶೀಲ ವರ್ಷಗಳು | 1997–ಪ್ರಸ್ತುತ |
ಜೀವನ ಸಂಗಾತಿ(ಗಳು) | ವಿಜಯ್ ಲಕ್ಷ್ಮಿ (ವಿವಾಹ 2003) |
ಮಕ್ಕಳು | 1 ವಿನೀಶ್ ದರ್ಶನ್ |
ಪೋಷಕರು |
|
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಿದ್ದರು. ಇವರು ಸ್ಯಾಂಡಲ್ವುಡ್ನನ ಡಿ ಬಾಸ್ಆಗಿದ್ದರು.
ಕರಿಯಾ (2003) ,ನಮ್ಮ ಪ್ರೀತಿಯ ರಾಮು (2003),ಕಲಾಸಿಪಾಳ್ಯ (2005),ಗಜ (2008), ಸಾರಥಿ (2011) ಮತ್ತು ಬುಲ್ ಬುಲ್ (2013) ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ (2012) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ . ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.
ದರ್ಶನ್ ತೂಗುದೀಪ್ ಕುಟುಂಬ[ಬದಲಾಯಿಸಿ]
ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು. . ಈಗ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ಸೋ ಅಡಿಯಲ್ಲಿ ಚಿತ್ರ ವಿತರಕರಾಗಿದ್ದಾರೆ. ತಮ್ಮದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ.
ವೈಯಕ್ತಿಕ ಜೀವನ[ಬದಲಾಯಿಸಿ]
ದರ್ಶನ್ 2000ರಲ್ಲಿ ವಿಜಯಲಕ್ಷ್ಮೀ ಅವರನ್ನು ವಿವಾಹವಾದರು. ಅವರಿಗೆ 'ವಿನೇಶ್' ಹೆಸರಿನ ಒಂದು ಗಂಡು ಮಗು ಇದೆ.
ದರ್ಶನ್ ಅಭಿನಯದ ಕನ್ನಡ ಚಿತ್ರಗಳು[ಬದಲಾಯಿಸಿ]
ವಿಶೇಷ ಪಾತ್ರಗಳಲ್ಲಿ ದರ್ಶನ್[ಬದಲಾಯಿಸಿ]
ದರ್ಶನ್ ಕೆಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ.
ಕ್ರಮ ಸಂಖ್ಯೆ | ಚಿತ್ರ | ಪಾತ್ರ | ||||||||||||||||||||||||||||||||||||||||||||||||||||||||||||||||||||||||
೧ | ಮಹಾಭಾರತ | ಖಳನಟ | ||||||||||||||||||||||||||||||||||||||||||||||||||||||||||||||||||||||||
೨ | ದೇವರ ಮಗ | ಪೋಷಕ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೩ | ಭೂತಯ್ಯನ ಮಕ್ಕಳು | ಪೋಷಕ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೪ | ಕುಶಲವೇ ಕ್ಷೇಮವೆ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೫ | ದಿಲ್ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೬ | ಮೊನಾಲಿಸಾ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೭ | ಅರಸು | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೮ | ಮೇಸ್ತ್ರಿ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೯ | ಸ್ನೇಹಿತರು | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
೧೦ | ಮುಮ್ತಾಜ್ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
11 | ಅಗ್ರಜ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
12 | ನಾಗರಹಾವು | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
13 | ಚೌಕ | ಅತಿಥಿ ಪಾತ್ರ | ||||||||||||||||||||||||||||||||||||||||||||||||||||||||||||||||||||||||
14 | ಇನ್ಸ್ಪೆಕ್ಟರ್ ವಿಕ್ರಮ್ | ಅಥಿತಿ ಪಾತ್ರ
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
|