ದಕ್ಷಿಣ ಕ್ಯಾಲಿಫೋರ್ನಿಯದ ಭೂಕಂಪ

ವಿಕಿಪೀಡಿಯ ಇಂದ
Jump to navigation Jump to search

ಮಂಗಳವಾರ, ಜುಲೈ, ೨೯, ೨೦೦೮ ರ ಬಿಳಿಗ್ಯೆ ೧೧-೪೨ ಕ್ಕೆ, ಸಂಭವಿಸಿದ ಭೂಕಂಪ, ದಕ್ಷಿಣ ಕ್ಯಾಲಿಫೋರ್ನಿಯ ನಗರದ ಜನರನ್ನು ನಡುಗಿಸಿತು !

ಕ್ಯಾಲಿಫೋರ್ನಿಯದ ಜನ ಇಂತಹ ಭೂಕಂಪಗಳನ್ನು ಸಹಿಸುವ ತಂತ್ರಜ್ಞಾನವನ್ನು ಕಂಡುಹಿಡಿದ್ದಾರೆ[ಬದಲಾಯಿಸಿ]

ಮಂಗಳವಾರ, ಜುಲೈ,೨೦೦೮, ೨೯, ರ ಬಿಳಿಗ್ಯೆ ೧೧-೪೨ ಕ್ಕೆ ಭೂಕಂಪ ಸಂಭವಿಸಿತು. ಈ ತರಹದ ಕಂಪನವನ್ನು ಲಾಸ್ ಎಂಜಲೀಸ್ ಡೌನ್ ಟೌನ್ ತೀರದಿಂದ, ಸ್ಯಾನ್ ಡಿಯಾಗೊ, ಹಾಗೂ ಸ್ವಲ್ಪ ಪ್ರಮಾಣದಲ್ಲಿ ಲಾಸ್ ವೇಗಾಸ್ ಶಹರಿನ ಜನ ಅನುಭವಿಸಿದರು. ೨೩೦ ಮೈಲಿಯ ವರೆಗೆ ಅದರ ಪ್ರಭಾವ ಆಯಿತು.ಜನರೆಲ್ಲಾ ಕೂಡಲೇ ತಮ್ಮ ಆಫೀಸ್ ನ ಕೊಠಡಿಗಳಿಂದ ಹೊರಗೆ ಬಂದು ರಸ್ತೆಯಲ್ಲಿ ನಿಂತುಕೊಂಡರು. ೫.೪-ಮಟ್ಟದ ಭೂಕಂಪ ಅಷ್ಟು ಹೆಚ್ಚಿನ ಆಘಾತದ್ದಲ್ಲ ಎಂದು ಜನರ ಅಭಿಪ್ರಾಯ. ಇದಾದ ಸುಮಾರು ಸಮಯದವರೆಗೆ ೩೦ ಶಾಕ್ ನ್ನು ಎಲ್ಲರೂ ಅನುಭವಿಸಿದ್ದಾರೆ. ಅದರಲ್ಲಿ ಹೆಚ್ಚಿನದು ೩.೮. ಲಾಸ್ ಎಂಜಲೀಸ್ ಡೌನ್ ಟೌನ್ ಬಳಿ ಯ ೨೯ ಮೈಲಿ ದಕ್ಷಿಣ ಪೂರ್ವದಲ್ಲಿರುವ ಚೈನೊ ಹಿಲ್ಸ್ ನಲ್ಲಿ ಇದು ಉದ್ಭವಿಸಿತೆಂದು ತಜ್ಞರ ಅಭಿಪ್ರಾಯ. ಸ್ಯಾನ್ ಬರ್ನಾರ್ಡಿನೊ ಕೌಂಟಿ ಸಿಟಿಯ ಕಟ್ಟಡಗಳು ಇಂತಹ ಕಂಪನವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ೮೦,೦೦೦ ಜನಸಂಖ್ಯೆಯ ಈ ಊರಿನಕಟ್ಟಡಗಳು ೧೯೯೦ ರಲ್ಲಿ ನಿರ್ಮಿಸಲಾಯಿತು. ಅವೆಲ್ಲ ತಡೆದುಕೊಳ್ಳುವ ತಂತ್ರಜ್ಞಾನವನ್ನು ಹೊಂದಿವೆ.