ಥಾಮಸ್ ಚಾಮರ್ಸ್

ಥಾಮಸ್ ಚಾಮರ್ಸ್ (1780-1847) ಸ್ಕಾಟ್ಲೆಂಡಿನ ಒಬ್ಬ ಪಾದ್ರಿ, ದೇವತಾಶಾಸ್ತ್ರಜ್ಞ ಮತ್ತು ಮಾನವಪ್ರೇಮಿ. ಇವನನ್ನು ೧೯ನೇ ಶತಮಾನದ ಸ್ಕಾಟ್ಲೆಂಡಿನ ಅತ್ಯಂತ ಮಹಾನ್ ಪಾದ್ರಿ ಎಂದು ಕರೆಯಲಾಗಿದೆ.[೨]
ಜೀವನ, ಸಾಧನೆಗಳು
[ಬದಲಾಯಿಸಿ]ಫೈಫ್‌ನ ಅನ್‍ಸ್ಟ್ರುತರ್‌ನಲ್ಲಿ ಈತ ವ್ಯಾಪಾರಿಯೊಬ್ಬನ ಹದಿನಾಲ್ಕನೆಯ ಮಗನಾಗಿ ಹುಟ್ಟಿದ.[೩] ಸೇಂಟ್ ಆಂಡ್ರ್ಯೂಸ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಸ್ಕಾಟ್ಲೆಂಡಿನ ಕ್ರೈಸ್ತ ಬೋಧಕರ ಗುಂಪಿಗೆ ಸೇರಿದ. ಮೊದಲಿಗೆ ಪಾದ್ರಿಯಾಡಳಿತಕ್ಕೊಳಪಟ್ಟ ಕಿಲ್ಮನಿ ಪ್ರದೇಶದಲ್ಲಿ ನಿಂತ.[೪][೫] ಈತನ ಪ್ರತಿಭೆ ಮತ್ತು ವಾಗ್ಮಿತೆಯನ್ನು ಕಂಡು ಈತನನ್ನು ಗ್ಲ್ಯಾಸ್ಗೋ ನಗರಕ್ಕೆ ಕಳುಹಿಸಲಾಯಿತು. ಅಲ್ಲಿ ಈತ ಸ್ಕಾಟ್ಲೆಂಡಿನಲ್ಲೇ ಉತ್ತಮ ಕ್ರೈಸ್ತ ಬೋಧಕನೆಂದು ಪ್ರಸಿದ್ಧಿ ಗಳಿಸಿದ್ದಲ್ಲದೆ ಬಡಜನತೆಗೆ ಅನುಕೂಲವಾಗುವಂಥ ಅನೇಕ ಯೋಜನೆಗಳನ್ನು ರೂಪಿಸಿದ. 1823ರಲ್ಲಿ ಸೇಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ನೈತಿಕ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾದ. 1828ರಲ್ಲಿ ಎಡಿನ್‌ಬರೋ ಕಾಲೇಜಿನಲ್ಲಿ ದೇವತಾಶಾಸ್ತ್ರದ ಪ್ರಾಧ್ಯಾಪಕನಾದ. 1834ರಲ್ಲಿ ಚರ್ಚ್‌ಗಳ ವಿಸ್ತರಣ ಕಾರ್ಯಗಳ ಯೋಜನೆಯೊಂದನ್ನು ರೂಪಸಿದ. ತದಂಗವಾಗಿ 7 ವರ್ಷಗಳಲ್ಲಿ 3,00,000 ಪೌಂಡು ಹಣ ಕೂಡಿಸಿ 220 ಚರ್ಚುಗಳನ್ನು ಕಟ್ಟಲಾಯಿತು. ಅದೇ ವರ್ಷ, ದೇಶ ಮತ್ತು ಚರ್ಚಿಗಿರುವ ಸಂಬಂಧ ಮತ್ತು ಮಾನ್ಯತೆಯ ಬಗ್ಗೆ ವಾದವಿವಾದಗಳೆದ್ದವು. ಇದು 1843ರಲ್ಲಿ ಕೊನೆಗೊಂಡು ಚಾಮರ್ಸ್‌ನ ನೇತೃತ್ವದಲ್ಲಿ 470 ಚರ್ಚುಗಳ ಪಾದ್ರಿಗಳು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಮಹಾಸಭೆಯಿಂದ ದೂರ ಸರಿದು ಸ್ವಾಯತ್ತ ಚರ್ಚಿನ ಸ್ಥಾಪನೆಗೆ ಅನುವು ಮಾಡಿಕೊಟ್ಟರು. ಚಾಮರ್ಸ್ ಇದರ ಪ್ರಥಮ ಅಧ್ಯಕ್ಷನಾದ. ಅನಂತರ ಎಡಿನ್‌ಬರೋದ ವೇದಾಂತ ಕಾಲೇಜಿನ ಪ್ರಥಮ ನಿಯಂತ್ರಕ ಹಾಗೂ ಮುಖ್ಯಸ್ಥನಾಗಿ ನೇಮಕಗೊಂಡ. ತನ್ನ ಕೊನೆಯ ನಾಲ್ಕು ವರ್ಷಗಳನ್ನು ಚರ್ಚುಗಳ ಸಂಘಟನೆ ಮತ್ತು ಧರ್ಮಕಾರ್ಯಗಳಿಗಾಗಿ ಮೀಸಲಿರಿಸಿದ. ಈತನ ಮುಖ್ಯ ಬರಹಗಳನ್ನೆಲ್ಲ ಕಲೆಹಾಕಿ 34 ಸಂಪುಟಗಳಲ್ಲಿ ಹೊರತರಲಾಗಿದೆ. ಅವು-ಪ್ರಾಕೃತ ದೇವತಾಶಾಸ್ತ್ರ, ಕ್ರೈಸ್ತಧರ್ಮದ ಪ್ರಾಮಾಣ್ಯಗಳು, ರಾಜಕೀಯ ಅರ್ಥಶಾಸ್ತ್ರ ಮತ್ತು ಸಾಮಾನ್ಯ ದೇವತಾಶಾಸ್ತ್ರ ಮತ್ತು ವಿಜ್ಞಾನ-ಈ ವಿಷಯಗಳಿಗೆ ಸಂಬಂಧಿಸಿವೆ. ಈತನಿಗೆ ಹಲವಾರು ಡಾಕ್ಟರೇಟ್ ಪದವಿಗಳು ದೊರೆತವು.
ಈತನ ಧರ್ಮಬೋಧೆ ಹರಿತವಾದುದು. ಈತನ ಉಪದೇಶ ಹೆಚ್ಚಾಗಿ ಮಾನವ ಸಮಸ್ಯೆಗಳನ್ನು ಕುರಿತಾದುದೇ ಹೊರತು ದೇವರು ಮತ್ತು ಸೃಷ್ಟಿ ಮುಂತಾದ ಕ್ಲಿಷ್ಟವಾದ ಸಮಸ್ಯೆಗಳನ್ನಲ್ಲ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ಲೋಕೋದ್ಧಾರಕ್ಕೆ ನೀತಿಯುತ ಜೀವನವೇ ಮುಖ್ಯವೆಂದು ಈತನ ಅಭಿಮತ.
ಉಲ್ಲೇಖಗಳು
[ಬದಲಾಯಿಸಿ]- ↑ Annan, Thomas (1868). Illustrated catalogue of the exhibition of portraits on loan in the new galleries of art, Corporation buildings, Sauchiehall Street. Glasgow: Glasgow Art Gallery and Museum. pp. 24–25. Retrieved 4 December 2017.
- ↑ McKim, Donald K; Cheyne, Alec C. (1992). Encyclopedia of the Reformed Faith. Westminster John Knox Press. p. 61. ISBN 978-0-664-21882-9. Retrieved 7 November 2012.
- ↑ "Biographical Index of Former Fellows of the Royal Society of Edinburgh" (PDF). Royal Society of Edinburgh. Archived from the original (PDF) on 24 January 2013.
- ↑ Hanna & Macfadyen 1911, p. 809.
- ↑ Scott, Hew (1925). Fasti ecclesiae scoticanae; the succession of ministers in the Church of Scotland from the reformation. Vol. 5. Edinburgh: Oliver and Boyd. p. 162.
{{cite book}}: CS1 maint: publisher location (link)
ಗ್ರಂಥಸೂಚಿ
[ಬದಲಾಯಿಸಿ]
This article incorporates text from a publication now in the public domain: Hanna, William; Macfadyen, Dugald (1911). . In Chisholm, Hugh (ed.). Encyclopædia Britannica. Vol. 5 (11th ed.). Cambridge University Press. pp. 809–811. {{cite encyclopedia}}: Cite has empty unknown parameters:|HIDE_PARAMETER=and|separator=(help); Invalid|ref=harv(help)

- CS1 maint: publisher location
- Pages using duplicate arguments in template calls
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- Pages needing interwikilinks
- ಕ್ರೈಸ್ತಧರ್ಮ ಪ್ರಚಾರಕರು
- ದೇವತಾಶಾಸ್ತ್ರಜ್ಞರು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ