ವಿಷಯಕ್ಕೆ ಹೋಗು

ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವ್ಯ-ಪದ್ಯಗಳನ್ನು ರಾಗವಾಗಿ ಓದುವಂತಹ ವಿಶಿಷ್ಟವಾದ ಕಲೆಯನ್ನು ಗಮಕ [] ಎನ್ನುತ್ತೇವೆ. ಓದುವವರನ್ನು ಗಮಕಿ[]ಗಳೆನ್ನುತ್ತೇವೆ. ಹಳೆಯ ಕಾವ್ಯಗಳನ್ನು ಈ ರೀತಿ ಓದುವ ಗಮಕಿಗಳಲ್ಲಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರೂ ಒಬ್ಬರು.[]

ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿನ ಕಾರಡ್ಕ ಗ್ರಾಮದ ತೆಕ್ಕೆಕೆರೆಯಲ್ಲಿ ೧೯೪೬ ರ ದಶಂಬರ ೧೦ ರಂದು ಜನಿಸಿದರು. ಕಡೆಂಗೋಡ್ಲು ಮೂಲದ ತೆಕ್ಕೆಕೆರೆ-ಪೈಕ್ಕಾನ ಶಂಭು ಭಟ್ಟ-ಗೌರಮ್ಮನವರು ಇವರ ಮಾತಾ-ಪಿತರು.

ವಿದ್ಯಾಭ್ಯಾಸ

[ಬದಲಾಯಿಸಿ]

ಏತಡ್ಕ ಏಡೆಡ್ ಎಲಿಮೆಂಟರಿ ಶಾಲೆ,ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಸಂಸ್ಕೃತ ಪ್ರೌಢಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ.

ಹಿಂದಿ ರಾಷ್ಟ್ರಭಾಷಾ ಪರೀಕ್ಷೆ (ದಕ್ಷಿಣ ಭಾರತದ ಹಿಂದೀ ಪ್ರಚಾರ ಸಭೆ) ಹಾಗೂ ಸಂಸ್ಕೃತ ರಾಷ್ಟ್ರ ಭಾಷಾ ಪರೀಕ್ಷೆ ( ಭಾರತೀಯ ವಿದ್ಯಾ ಭವನ ಮುಂಬಯಿ ) ಗಳಲ್ಲಿ ತೇರ್ಗಡೆಯಾಗಿರುತ್ತಾರೆ.

ಗಮಕ ಕಲಾವಿದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ

ವೃತ್ತಿ

[ಬದಲಾಯಿಸಿ]

ಭಾರತೀಯ ಅಂಚೆ ತಂತಿ ಇಲಾಖೆ/ಬಿ.ಎಸ್.ಎನ್.ಎಲ್. ಗಳಲ್ಲಿ ದೂರವಾಣಿ ತಂತ್ರಜ್ಞರಾಗಿಯೂ,ತಾಂತ್ರಿಕ ಮೇಲ್ವಿಚಾರಕರಾಗಿಯೂ, ಹಿರಿಯ ತಾಂತ್ರಿಕ ಸಹಾಯಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ೧೯೬೫ ರಿಂದ ೨೦೦೬ ರವರೆಗೆ ಸೇವೆ ಸಲ್ಲಿಸಿ, ೨೦೦೬ ರ ದಶಂಬರ ೩೧ ರಂದು ಬೆಳ್ತಂಗಡಿ ಯಲ್ಲಿ ನಿವೃತ್ತರಾದರು.

ಕನ್ನಡ ಗೌರವ ಪ್ರಾಧ್ಯಾಪಕರಾಗಿ ಸುಮಾರು ೧೨ ವರ್ಷಗಳ ಕಾಲ ಚಿತ್ರದುರ್ಗ ದಲ್ಲಿ ಸೇವೆಯನ್ನು ನೀಡಿದ್ದರು.

ಪ್ರವೃತ್ತಿ

[ಬದಲಾಯಿಸಿ]

ಸಾಹಿತಿ, ಕವಿ, ಗಮಕಿಯಲ್ಲದೆ, ಹರಿಕಥೆ-ಯಕ್ಷಗಾನ-ನಾಟಕಗಳಲ್ಲಿ ಪಾತ್ರಾಭಿನಯವನ್ನೂ ಮಾಡಿದ್ದಾರೆ. ಬಿಡಿ ಲೇಖನಗಳ ಹವ್ಯಾಸವೂ ಇವರಿಗಿದೆ. ವಿದ್ವಾನ್ ಕೈಂತಜೆ ನರಸಿಂಹ ಭಟ್ಟ ಮೊದಲಾದ ಗಮಕಿಗಳೊಡನೆ ವ್ಯಾಖ್ಯಾನವನ್ನೂ ಮಾಡಿದ್ದಾರೆ.

ಕಲಾಸೇವೆಗಳು

[ಬದಲಾಯಿಸಿ]
  • ೧೯೮೪-೮೫ ರಲ್ಲಿ ಗಮಕಿಗಳಾಗಿ ಗಮಕ ಕ್ಷೇತ್ರಕ್ಕೆ ಪ್ರವೇಶಗೈದ ಇವರ ಗುರುಗಳು ಚಿತ್ರದುರ್ಗಗಮಕ ಸಹೋದರರಾದ ಶ್ರೀ ಜಿ.ಶೇಷಾಚಲಯ್ಯ ( ವ್ಯಾಖ್ಯಾನ) ಹಾಗೂ ಶ್ರೀ ಜಿ. ಚಂದ್ರಶೇಖರಯ್ಯ (ಗಮಕ ವಾಚನ)
  • ೧೯೮೪ ರಿಂದ ಕರ್ನಾಟಕ ಗಮಕಕಲಾ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ.
  • ಕರ್ನಾಟಕ ಗಮಕಕಲಾ ಪರಿಷತ್ತಿನ ಗಮಕ ಪ್ರಥಮ, ಕಾಜಾಣ, ಪಾರೀಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ಕಾಜಾಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ೧೯೮೫ ರಲ್ಲಿ ಭೂಪಾಲಂ ದತ್ತಿ ನಿಧಿ ಯ ಗೌರವವನ್ನು ಪಡೆದಿದ್ದಾರೆ.
  • ೧೯೮೪ ರಿಂದ ೧೯೯೩ ರ ಅವಧಿಯಲ್ಲಿ ಚಿತ್ರದುರ್ಗ ಗಮಕಕ ಲಾಭಿಮಾನಿಗಳ ಸಂಘದಲ್ಲಿ ಗಮಕ - ವಾಚನ ವ್ಯಾಖ್ಯಾನವನ್ನು ಮಾಡಿದ್ದಾರೆ.
  • ಪರಿಷತ್ತಿನ ಗಮಕ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸಹಕಾರವನ್ನು ನೀಡುತ್ತಾರೆ.
  • ೧೯೯೩ ರಿಂದ೨೦೦೬ ರ ವರೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಕಾಸರಗೋಡಿನಿಂದ ಉತ್ತರ ಕರ್ಣಾಟಕದ ಬೈಂದೂರು ವರೆಗೆ ಗಮಕಕಲಾ ಪ್ರಚಾರವನ್ನು ಮಾಡಿದ್ದಾರೆ.
  • ೧೯೯೭ ರಿಂದ ೨೦೦೬ ರ ತನಕದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುನರೂರು, ಸುರತ್ಕಲ್, ಕುಕ್ಕೆ ಸುಬ್ರಹ್ಮಣ್ಯ, ಮುಳಿಯ, ಕಾಸರಗೋಡಿನ ಎಡನೀರು ಕ್ಷೇತ್ರದಲ್ಲಿ ಜಿಲ್ಲಾ ಸಮ್ಮೇಳನಗಳನ್ನು ನಡೆಸಿದ್ದಾರೆ.
  • ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಶ್ರೀಮದ್ವಾಲ್ಮೀಕಿ ರಾಮಾಯಣದ ವ್ಯಾಖ್ಯಾನಕ್ಕೆ ಹಾಗೂ ಎ.ಬಿ.ಎಲ್. ನಾಗರಾಜರ ದೇವೀಭಾಗವತ ವ್ಯಾಖ್ಯಾನಕ್ಕೆ ಸಂಸ್ಕೃತ ಶ್ಲೋಕಗಳ ಗಮಕ ವಾಚನವನ್ನು ಮಾಡಿದ್ದಾರೆ.
  • ಅಗ್ನಿ ಸೇವಾ ಟ್ರಸ್ಟ್ ಬೆಂಗಳೂರು ಇವರ ತುರಂಗ ಭಾರತ ದ ಪ್ರಚಾರ ಹಾಗೂ ಧ್ವನಿಸುರುಳಿಗೆ ವಾಚನವನ್ನು ಮಾಡಿದ್ದಾರೆ.

ಹುದ್ದೆಗಳು

[ಬದಲಾಯಿಸಿ]
  1. ೨೦೦೧ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ೧೨ ನೆಯ ಸಾಹಿತ್ಯ ಸಮ್ಮೇಳನದಲ್ಲಿ ಗಮಕಗೋಷ್ಠಿಯ ಅಧ್ಯಕ್ಷ ಸ್ಥಾನ.
    ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ
  2. ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಕರ್ನಾಟಕ ಗಮಕಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ೨೦೧೩ ರಿಂದ ೨೦೧೭ ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ.
  3. ೨೦೧೩ ರ ಜನವರಿಯಲ್ಲಿ ಮೂಡುಬಿದಿರೆ ಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ೬ ನೆಯ ಗಮಕ ಕಲಾ ಸಮ್ಮೇಳನದ ಅಧ್ಯಕ್ಷ ಸ್ಥಾನ.
  4. ೨೦೨೩ ರ ಏಪ್ರಿಲ್ ೧೬,೧೭ ರಂದು ಬೆಳಗಾವಿ ಯಲ್ಲಿ ನಡೆದ ೧೩ ನೆಯ ಅಖಿಲ ಕರ್ಣಾಟಕ ಗಮಕಕಲಾ ಸಮ್ಮೇಳನದ ಅಧ್ಯಕ್ಷ ಸ್ಥಾನ.
  5. ಅಖಿಲ ಹವ್ಯಕ ಮಹಾಸಭೆ ಹಾಗೂ ಶ್ರೀ ರಾಮಚಂದ್ರಾಪುರ ಮಠ ಇವರ ಸಂಯೋಜನೆಯಲ್ಲಿ ಗೋಕರ್ಣ ದಲ್ಲಿ ಜರುಗಲಿರುವ ( ೧೭-೦೮-೨೦೨೫ ) ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಸವಿಗನ್ನಡ ಗೋಷ್ಠಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಉಂಡೆಮನೆಯವರ ಉಂಡೆಮನೆ ಶಂಭುಭಟ್ಟ ಪ್ರಶಸ್ತಿ
  • ಅಗ್ನಿಸೇವಾ ಟ್ರಸ್ಟ್ ನವರ ಮಹಾಕವಿ ಪರಮದೇವ ಪ್ರಶಸ್ತಿ
  • ಅಖಿಲ ಹವ್ಯಕ ಮಹಾಸಭೆ_ಬೆಂಗಳೂರು ಇವರ ವಿದ್ವತ್ ಸನ್ಮಾನ
  • ಹಾಸನ ಜಿಲ್ಲಾ ಗಮಕ ಸಂಘದಿಂದ ಗಮಕ ಕಲಾ ತಪಸ್ವಿ ಪ್ರಶಸ್ತಿ
  • ಬೆಂಗಳೂರಿನಲ್ಲಿ ನಡೆದ ೩ ನೆಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ.
    ಹವ್ಯಕ ಸಾಧಕ ಪ್ರಶಸ್ತಿ
  • ಗಮಕ ಕಲಾ ಪರಿಷತ್ತು-ಬೆಂಗಳೂರು ಇವರಿಂದ ಸನ್ಮಾನ ಹೀಗೆ ಅನೇಕ ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳು ಲಭಿಸಿವೆ.

ಲೇಖಕರಾಗಿ

[ಬದಲಾಯಿಸಿ]
ಗುರುಚರಿತಾಮೃತಮ್ ಪುಸ್ತಕ ಬಿಡುಗಡೆ
  1. ನೇಮಿಚಂದ್ರ ನ [ ೧೨ ನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಜೈನ ಕವಿ] ಕಥೆಗಳು ( ಸಂಗ್ರಹ)
  2. ಶ್ರೀ ರಾಘವೇಶ್ವರ ಕೀರ್ತನ ಶತಕಂ ( ಕೀರ್ತನೆಗಳು)
  3. ವಿಶ್ವವಂದ್ಯ ಗೋಮಾತೆ ( ಗೋ ಕೀರ್ತನೆಗಳು)
  4. ಶ್ರೀ ಕೃಷ್ಣ ಚೈತನ್ಯ ( ಜೀವನ ಚರಿತ್ರೆ)
  5. ಗಮಕ ಕೋಗಿಲೆ ಪಂ. ಮುಳಿಯ ತಿಮ್ಮಪ್ಪಯ್ಯ ( ವ್ಯಕ್ತಿ ಪರಿಚಯ)
  6. ಕಲಾ ದರ್ಶನ ( ಗಮಕ ಕಲೆಯ ಲೇಖನಗಳು)
  7. ಶ್ರೀ ಶರಾವತಿ ಮಹಾತ್ಮ ( ಪದ್ಯಶಃ ಭಾವಾನುವಾದ)
  8. ಪರಂಪರೆ ( ಲೇಖನ ಸಂಗ್ರಹ)
  9. ವಂದೇ ಗುರೂಣಾಮ್ ( ಗುರುಗಳ ಬಗ್ಗೆ ಲೇಖನಗಳು)
  10. ಪುರಾಣ ಪ್ರಪಂಚ -- ಭಾಗ ೧ ( ಶ್ರೀ ರಾಮಚಂದ್ರಾಪುರ ಮಠದ ಮಾಸ ಪತ್ರಿಕೆ-ಧರ್ಮ ಭಾರತೀ ಯಲ್ಲಿ ಧಾರಾವಾಹಿಯಾಗಿ ಬಂದುದು, ಈಗ ಪುಸ್ತಕ ರೂಪದಲ್ಲಿ)
  11. ಪುನರ್ನವ ( ಲೇಖನಗಳ ಸಂಗ್ರಹ)
    ಕೃತಿ ಬಿಡುಗಡೆ
  12. ವಿದ್ವಾನ್ ಟಿ.ಕೇಶವ ಭಟ್ಟರ ಗುರುಚರಿತ್ರಾಮೃತಮ್ ಕಾವ್ಯದ ಭಾವಾನುವಾದ.
  13. ಸಂಗಮ, ಸಮಾಗಮ, ಶ್ರೀಗಂಧ, ಭೂರಮೆ. ( ಕವನ ಸಂಗ್ರಹಗಳು)

ಉಲ್ಲೇಖಗಳು

[ಬದಲಾಯಿಸಿ]

https://www.upayuktha.com/2023/04/Form-seperate-academy-for-Gamaka-Kala-.html

https://vijaykarnataka.com/news/vijayapura/-/articleshow/46078984.cms

https://pragativahini.com/13th-all-karnataka-gamaka-kala-sammelna-at-belagavi-on-16th-and-17th/

https://vijaykarnataka.com/news/chikkamagaluru/-/articleshow/30690119.cms

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. https://www.upayuktha.com/2023/04/Form-seperate-academy-for-Gamaka-Kala-.html
  2. https://vijaykarnataka.com/news/vijayapura/-/articleshow/46078984.cms
  3. https://pragativahini.com/13th-all-karnataka-gamaka-kala-sammelna-at-belagavi-on-16th-and-17th/
  4. https://vijaykarnataka.com/news/chikkamagaluru/-/articleshow/30690119.cms