ತೆಕ್ಕಲಕೋಟೆ
ತೆಕ್ಕಲಕೋಟ ಎಂದೂ ಕರೆಯಲ್ಪಡುವ ತೆಕ್ಕಲಕೋಟೆಯು ಒಂದು ಪಂಚಾಯತ್ ಪಟ್ಟಣವಾಗಿದೆ ಮತ್ತು ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿರುವ ಪೂರ್ವ-ಐತಿಹಾಸಿಕ ನವಶಿಲಾಯುಗದ ತಾಣವಾಗಿದೆ.
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]೨೦೦೧ ರ ಭಾರತದ ಜನಗಣತಿಯಂತೆ, ತೆಕ್ಕಲಕೋಟೆಯು ೨೩,೫೩೬ ಜನಸಂಖ್ಯೆಯನ್ನು ಹೊಂದಿತ್ತು[೧]. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ತೆಕ್ಕಲಕೋಟೆಯು ಸರಾಸರಿ ೩೦% ಸಾಕ್ಷರತೆಯನ್ನು ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಕಡಿಮೆಯಾಗಿದೆ. ಪುರುಷರು ಮತ್ತು ಮಹಿಳೆಯರ ಸಾಕ್ಷರತೆಯು ಕ್ರಮವಾಗಿ ೪೧% ಮತ್ತು ೨೫% ರಷ್ಟಿದೆ. ಪಟ್ಟಣದ ಸಾಕ್ಷರತೆ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ.
ಕೃಷಿ
[ಬದಲಾಯಿಸಿ]ತೆಕ್ಕಲಕೋಟೆ ಬಳ್ಳಾರಿ ಜಿಲ್ಲೆಯ ಪ್ರಮುಖ ಭತ್ತ ಬೆಳೆಯುವ ಪಟ್ಟಣಗಳಲ್ಲಿ ಒಂದಾಗಿದೆ. ಇದು ಮೂರು ಅಕ್ಕಿ ಗಿರಣಿಗಳನ್ನು ಹೊಂದಿದೆ.
ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಭತ್ತ ಮತ್ತು ಹತ್ತಿ, ನವಣೆ, ಮೆಣಸಿನಕಾಯಿ, ಬಾಜರ, ಮತ್ತು ಜೋಳವನ್ನು ಸಣ್ಣ ಬೆಳೆಗಳಾಗಿ ಬೆಳೆಯಲಾಗುತ್ತದೆ.
ಕೃಷಿ ಭೂಮಿಗಳು ನೀರಾವರಿ ಮತ್ತು ಮಳೆಯಾಶ್ರಿತವಾಗಿವೆ.
ಪ್ರಾಮುಖ್ಯತೆ
[ಬದಲಾಯಿಸಿ]ತೆಕ್ಕಲಕೋಟೆಯು ಪೂರ್ವ-ಐತಿಹಾಸಿಕ ನವಶಿಲಾಯುಗದ ತಾಣವಾಗಿದೆ ಮತ್ತು ವಿಸ್ತಾರವಾದ ಚಿನ್ನದ ಕಿವಿಯ ಆಭರಣಗಳ ಪುರಾವೆಗಳನ್ನು ಹೊಂದಿದೆ.
ತೆಕ್ಕಲಕೋಟೆ ಬೆಟ್ಟವು ಕುಪ್ಗಲ್, ಪಿಕ್ಲಿಹಾಲ್, ಲಖುಡಿಯಾರ್, ಭೀಮೇಟ್ಕಾ ಮತ್ತು ಜೋಗಿಮಾರ ಜೊತೆಗೆ ಭಾರತದಲ್ಲಿ ಪೂರ್ವ-ಐತಿಹಾಸಿಕ (ನವಶಿಲಾಯುಗ) ಶಿಲಾ ವರ್ಣಚಿತ್ರಗಳ ಪುರಾವೆಗಳನ್ನು ಹೊಂದಿದೆ. ನವಶಿಲಾಯುಗದ ಕಲ್ಲಿನ ರೇಖಾಚಿತ್ರಗಳ ವಿವಿಧ ಅವಶೇಷಗಳು ಸಹ ಇಲ್ಲಿ ಕಂಡುಬರುತ್ತವೆ.
ತೆಕ್ಕಲಕೋಟೆಯು 18ನೇ ಶತಮಾನದ ಚೌಕಾಕಾರದ ಕೋಟೆ ಎಂದೂ ಹೆಸರುವಾಸಿಯಾಗಿದೆ.
ಮೌರ್ಯ ಚಕ್ರವರ್ತಿ ಅಶೋಕನ ಸಣ್ಣ ಶಾಸನಕ್ಕೆ ಹೆಸರುವಾಸಿಯಾದ ನಿಟ್ಟೂರು ಗ್ರಾಮವು ಈ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿದೆ. ಪಟ್ಟಣವು ತನ್ನ ಸಿರುಗುಪ್ಪ ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಮತ್ತು ವಾಣಿಜ್ಯ ಸ್ಥಾನಮಾನವನ್ನು ಹೊಂದಿದೆ.
ಸಾರಿಗೆ
[ಬದಲಾಯಿಸಿ]ತೆಕ್ಕಲಕೋಟೆ ಬಳ್ಳಾರಿ ಮತ್ತು ಸಿರುಗುಪ್ಪ ನಡುವೆ ಇದೆ. ಇದು ಬಳ್ಳಾರಿಯಿಂದ ೪೫ ಕಿ.ಮೀ. ದೂರ ಮತ್ತು ಸಿರುಗುಪ್ಪದಿಂದ ೧೧ ಕಿ.ಮೀ. ದೂರದಲ್ಲಿದೆ. ತೆಕ್ಕಲಕೋಟೆಯು ಕರ್ನಾಟಕ ರಾಜ್ಯ ಹೆದ್ದಾರಿ ೧೯ ರಲ್ಲಿದೆ. ಈ ಪಟ್ಟಣವು ಬೆಂಗಳೂರು, ಗುಲ್ಬರ್ಗಾ, ಹೈದರಾಬಾದ್ ಮತ್ತು ಇತರ ಪ್ರಮುಖ ನಗರಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವು ಬಳ್ಳಾರಿಯ ವಿದ್ಯಾನಗರದಲ್ಲಿದೆ, ಪ್ರಸ್ತುತ ಇದು ಬೆಂಗಳೂರು ಮತ್ತು ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುತ್ತದೆ.
ದೂರದ ಬಸ್ ಮಾರ್ಗಗಳು
[ಬದಲಾಯಿಸಿ]ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ) ಇತರ ನಗರಗಳು ಮತ್ತು ಹಳ್ಳಿಗಳಿಗೆ ಬಸ್ ಸೇವೆಗಳನ್ನು ನಡೆಸುತ್ತದೆ. ಖಾಸಗಿ ಸಾರಿಗೆ ಸೌಲಭ್ಯವೂ ಲಭ್ಯವಿದೆ.
ರೈಲ್ವೆಗಳು
[ಬದಲಾಯಿಸಿ]ಈ ಪಟ್ಟಣದಿಂದ ೪೫ ಕಿ.ಮೀ. ದೂರದಲ್ಲಿರುವ ಬಳ್ಳಾರಿ ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ
ಭಾಷೆಗಳು
[ಬದಲಾಯಿಸಿ]ಕನ್ನಡ, ಹಿಂದಿ ಮತ್ತು ತೆಲುಗು ಜನರಿಗೆ ತಿಳಿದಿರುವ ಸಾಮಾನ್ಯ ಭಾಷೆಗಳು.
ದೇವಾಲಯಗಳು
[ಬದಲಾಯಿಸಿ]ತೆಕ್ಕಲಕೋಟೆ ಸಿರುಗುಪ್ಪ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದು ನೂರಾರು ವರ್ಷಗಳಷ್ಟು ಹಳೆಯ ಅನೇಕ ದೇವಾಲಯಗಳನ್ನು ಹೊಂದಿದೆ. ಇವು ತೆಕ್ಕಲಕೋಟೆಯಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳು ( ದೇವಸ್ಥಾನ ).
ವರವಿನ ಮಲ್ಲೇಶ್ವರ ದೇವಸ್ಥಾನ (ಮಲ್ಲಯ್ಯನ ಗುಡಿ ಎಂದು ಜನಪ್ರಿಯವಾಗಿದೆ)
ಕಾಡಸಿದ್ದೇಶ್ವರ ದೇವಸ್ಥಾನ
ನೆಲ ಅಮರೇಶ್ವರ ದೇವಸ್ಥಾನ
ಜಡೆ ಶಂಕರಲಿಂಗ ದೇವಸ್ತಾನ
ನಗರೇಶ್ವರ ದೇವಸ್ಥಾನ
ನೀಲಕಂಠೇಶ್ವರ ದೇವಸ್ಥಾನ
ಸಿದ್ದರಾಮೇಶ್ವರ ದೇವಸ್ಥಾನ
ಕಾಳಮ್ಮ ದೇವಸ್ತಾನ
ದ್ಯಾವಮ್ಮ ದೇವಸ್ಥಾನ
ಪೇಟೆ ಬಸವೇಶ್ವರ ಗುಡಿ
ಶರಣ ಬಸವೇಶ್ವರ ಕಲ್ಯಾಣ ಮಂಟಪ
ಬೀರಲಿಂಗೇಶ್ವರ ದೇವಸ್ಥಾನ
ಕೋಟೆ ಈಶ್ವರ ದೇವಸ್ಥಾನ
ಹುಚ್ಚಿರಪ್ಪ ದೇವಸ್ಥಾನ
ಆಸ್ಪತ್ರೆಗಳು
[ಬದಲಾಯಿಸಿ]ತೆಕ್ಕಲಕೋಟ ಮುಖ್ಯ ಹೆದ್ದಾರಿ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಇದೆ. ಪಟ್ಟಣವು ಅನೇಕ ಖಾಸಗಿ ವೈದ್ಯರು ಮತ್ತು ವೈದ್ಯಕೀಯ ಮಳಿಗೆಗಳನ್ನು ಹೊಂದಿದೆ.
ತೆಕ್ಕಲಕೋಟೆಯು ಆಯುರ್ವೇದ ಚಿಕಿತ್ಸೆಗೆ ಸಹ ಪ್ರಸಿದ್ಧವಾಗಿದೆ. ಕೆಲವು ಆಯುರ್ವೇದ ವೈದ್ಯರು ಈ ಕ್ಷೇತ್ರದಲ್ಲಿ ತಮ್ಮ ತಂದೆ-ತಾಯಿ ಮತ್ತು ಪೂರ್ವಜರಿಂದ ಪಡೆದ ಅನುಭವದ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಿದ್ದಾರೆ.
ರಾಜಕೀಯ ಪಕ್ಷಗಳು
[ಬದಲಾಯಿಸಿ]ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) ಮತ್ತು ಜನತಾ ದಳ.