ವಿಷಯಕ್ಕೆ ಹೋಗು

ತುಳುಲಿಪಿಯ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tulu script.
Tulu script

ತುಳುಲಿಪಿಯ ಇತಿಹಾಸ ತುಳುನಾಡಿಗೆ ವಿಶೇಷವಾದ ಇತಿಹಾಸ ಇರುವಂತೆ ತುಳುಬಾಷೆಗೂ ಅದರದ್ದೇ ಆದ ವಿಶೇಷ ಇತಿಹಾಸ ಇದೆ. ಹಿಂದಿನಿಂದಲೂ ತುಳುವರಿಗೆ ಅವರದ್ದೇ ಆದ ಸ್ವಂತ ಬಾಷೆ ಇತ್ತು. ಆ ಭಾಷೆಗೆ ಕ್ರಿ.ಶ ಪೂರ್ವ ಅಂದರೆ ಸುಮಾರು ೩೦೦೦ ವರ್ಷ ಹಿಂದಿನ ಇತಿಹಾಸ ಇದ್ದು, ಅನೇಕ ಮೌಖಿಕ ಸಾಹಿತ್ಯಗಳು ರಚನೆಯಾಗಿ ಬಾಯಿಂದ ಬಾಯಿಗೆ ಹರಿದು ಬಂದ ಜನಪದ ಸಾಹಿತ್ಯ ಅನಿಸಿಕೊಂಡಿದೆ. ಇತ್ತೀಚೆಗೆ ದೊರೆತ ಕೆಲವು ಮಹಾಗ್ರಂಥಗಳು, ಶಾಸನಗಳು ಲಿಖಿತ ಸಾಹಿತ್ಯವಾಗಿದ್ದು ತುಳುವಿಗೆ ಲಿಪಿ ಇತ್ತು ಎನ್ನುವುದುಕ್ಕೆ ಸಾಕ್ಷಿಯಾಗಿದೆ

ತುಳುಲಿಪಿ

[ಬದಲಾಯಿಸಿ]

ತುಳುನಾಡಿನಲ್ಲಿ ದೊರೆತ ಜಾಸ್ತಿ ಓಲೆ ಗ್ರಂಥಗಳು ತುಳು ಲಿಪಿಯಲ್ಲಿಯೇ ಬರೆಯಲ್ಪಟ್ಟವುಗಳು. ಆರ್ಯ ಬಾಷೆಯಾದ ಸಂಸ್ಕೃತವನ್ನು ಬೆರೆಯಲು ಈ ಲಿಪಿಯನ್ನು ಉಪಯೋಗ ಮಾಡಿರುವ ಕಾರಣ ಆರ್ಯ ಎಳುತ್ತು ಎಂದು ಹಾಗೂ ತುಳುವನು ಬೆರೆಯಲು ಉಪಯೋಗ ಮಾಡಿರುವ ಕಾರಣ ತುಳು ಲಿಪಿ ಎಂಬುದಾಗಿ ಕರೆಯುತ್ತಾರೆ . ಆರ್ಯ ಎಳುತ್ತುವಲ್ಲಿ ಮಳೆಯಾಳಂನ್ನು ಬರೆಯಲು ಉಪಯೋಗ ಮಾಡುವ ಮೊದಲೇ ತುಳು ಭಾಷೆಯನ್ನು ಬರೆಯಲು ಉಪಯೋಗ ಮಾಡಿದ್ದಾರೆ ಎನ್ನುವುದಕ್ಕೆ ಈಗ ಸಿಕ್ಕಿರುವ ಶಾಸನಗಳು ಆಧಾರವಾಗಿದೆ. ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಕ್ಕಿರುವ ಶಾಸನದಲ್ಲಿ ಅಳುಪರ ಕಾಲದ ರಾಜೆ ಕುಲಶೇಖರೆ ದೇವಸ್ಥಾನಕ್ಕೆ ದಾನ ಕೊಟ್ಟ ಬಗ್ಗೆ ಉಲ್ಲೇಕ ಇದೆ. ಈ ಶಾಸನದ ಕಾಲ ಕ್ರಿ.ಶ ೧೧೭೫-೭೬ ಆಗಿದೆ. ೧೨ ನೇ ಶತಮಾನದ ಈ ಶಾಸನ ಬಹಳ ಹಿಂದಿನದ್ದು ಅದಕ್ಕೂ ಹಿಂದೆಯೇ ತುಳುನಾಡಲ್ಲಿ ತುಳುಲಿಪಿ ಚಾಲ್ತಿಯಲ್ಲಿ ಇತ್ತೆಂದು ಅಂದಾಜಿಸ ಬಹುದು . ಲಿಪಿ ಮತ್ತು ಭಾಷೆಯೊಂದಿಗೆ ಹೊಂದಾಣಿಕೆ ಹತ್ತಿಪ್ಪತ್ತು ವರ್ಷಗಳಲ್ಲಿ .ಆಗುವಂತದಲ್ಲ . ಯಾವುದೇ ಭಾಷೆಯಾದರೂ ಅದರಲ್ಲಿ ಒಂದು ಮಹಾಕಾವ್ಯ ರಚನೆ ಆಗಬೇಕಾದರೆ ಸಾಮಾನ್ಯ ಒಂದು ಎರಡು ಶತಮಾನವಾದರೂ ಭಾಷೆ ಬರಹದಲ್ಲಿ ಹದ ಬರಬೇಕಾಗುತ್ತದೆ [].

ಕೇರಳದಲ್ಲಿ ತುಳುಲಿಪಿ

[ಬದಲಾಯಿಸಿ]

೧೨ನೇ ಶತಮಾನಕ್ಕಿಂತ ಮೊದಲೇ ವೈದಿಕ ಸಾಹಿತ್ಯಗಳು ತುಳುಬ್ರಾಹ್ಮಣರಿಂದ ತುಳುವಿನಲ್ಲಿ ರಚನೆ ಆಗಿತ್ತು ಎಂಬ ಇತಿಹಾಸ ಇದೆ. ಕೇರಳಕ್ಕೆ ಅರ್ಹಕರಾಗಿ ಹೋದ ನಂತರ ಅದು ಅಲ್ಲಿ ಅವರ ಮುಖಾಂತರ ಚಾಲನೆಗೆ ಬಂತು. ಕೇರಳದಲ್ಲಿ ಸುಮಾರು ವರುಷಗಳಿಂದ ತುಳುನಾಡಿನ ಬ್ರಾಹ್ಮಣರು ವಲಸೆ ಹೋಗಿ ಅರ್ಚಕರಾಗಿರುವ ಬಗ್ಗೆ ಚರಿತ್ರೆಯಲ್ಲಿ ದಾಖಲೆ ಇದೆ.

ಉಲ್ಲೇಖ

[ಬದಲಾಯಿಸಿ]
  1. https://aatana.org/2020/01/02/tulu-lipi-history/