ತಿರುಮಲ ಮಾವಿನಕುಳಿ
ಗೋಚರ
ತಂದೆಯ ಹೆಸರು ರಾಮ ಭಟ್ಟರು, ತಾಯಿ ಸಾವಿತ್ರಮ್ಮ. ಸಾಗರ ತಾಲೂಕಿನ ಕರ್ಕಿಕೊಪ್ಪ ಇವರ ಹುಟ್ಟೂರು. ತಿರುಮಲ ಮಾವಿನಕುಳಿ ಅವರು ಸಾಗರದ ಲಾಲಬಹಾದುರ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ವೃತ್ತಿಯೊಂದಿಗೆ ಕೃಷಿಯನ್ನೂ ಮುಂದುವರೆಸುತ್ತಿದ್ದಾರೆ. ಹಾಗಾಗಿ ಇವರಿಗೆ ನಮ್ಮ ಕೃಷಿಕರ ಕೆಲವು ಸಮಸ್ಯೆಗಳೂ ಗೊತ್ತು, ಪರಿಹಾರಕ್ಕೂ ಶ್ರಮಿಸುತ್ತಿದ್ದಾರೆ. ಸ್ವತಃ ಅಡಿಕೆ ಬೆಳೆಗಾರರಾದ ಇವರು ಹಿಂದೆ 'ಮಲೆನಾಡು ಅಡಿಕೆ ಬೆಳೆಗಾರರ ಸಂಘ'ದ ನಿರ್ದೇಶಕರಾಗಿದ್ದರು.