ತಾರ್ಲೆ ಕುಣಿತ
ತಾರ್ಲೆ ಕುಣಿತವು ಹಾಲಕ್ಕಿ ಒಕ್ಕಲಿಗರು ಮಳೆ ಬಾರದಿದ್ದಾಗ ಅಲ್ಲಿನ ಹೆಣ್ಣುಮಕ್ಕಳು ಪ್ರದರ್ಶನಾತ್ಮಾಕ ಕಲೆಯನ್ನು ಪ್ರದರ್ಶಿಸುವ ಒಂದು ಕಲೆ. ಕುಮಟಾ,ಕಾರಾವಾರ ಮತ್ತು ಗೋಕರ್ಣಗಳಲ್ಲಿ ಇದನ್ನು ನಡೆಸುತ್ತಾರೆ.[೧][೨]
ಉಡುಗೆ ತೊಡುಗೆ
[ಬದಲಾಯಿಸಿ]ಜಡೆ ಹೆಣೆದು ಮತ್ತೆ ಕಟ್ಟಿದ ಜಡೆಯ ಚಕ್ರತುರುಬಿಗೆ ವಿವಿಧ ಬಣ್ಣದ ಹೂವುಗಳು, ರಂಗುರಂಗಿನ ಹತ್ತಾರು ಮಣಿಸರ ಮಾಲೆಯನ್ನು ಕುಪ್ಪಸವಿಲ್ಲದ ಎದೆಗೆ ಇಳಿಬಿಟ್ಟು,[೩]ತೋಳುಗಳಿಗೆ ನಾಲ್ಕಾರು ತೋಳುಬಂದಿಗಳ ಜೋಡಣೆ, ಬೆಳ್ಳಿ ಖಡಗವು ಮುಂಗೈಗೆ,ಕಾಲಿಗೂ ಖಡ್ಗ,ಕಿವಿಗಳಿಗೆ ಕಡಕು,ಮೂಗಿಗೆ ಮೂಗುತಿ,ಹಾಲಕ್ಕಿ ಹೆಣ್ಣುಮಕ್ಕಳ ಉಡುಗೆ ತೊಡುಗೆಗಳು ಮತ್ತು ಹಣೆಗೆ ಕೆಂಪು ಬಣ್ಣದ ತಿಲಕವನ್ನು ಇಡುವುದು ಸಾಂಪ್ರದಾಯಿಕವಾಗಿದೆ. ಇಲ್ಲಿನ ಹೆಣ್ಣುಮಕ್ಕಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳು ನಿತ್ಯದ ಉಡುಗೆಯಾದ ಬಣ್ಣದ ಸೀರೆಯ ನೆರಿಗೆಯನ್ನು ಹಿಂದಕ್ಕೆ ಬಿಟ್ಟು ಅಲಂಕೃತವಾಗಿ ಇವರು ಕುಣಿಯುವಾಗ ನವಿಲಿನ ನೃತ್ಯ ಕಣ್ಣೆದುರಿಗೆ ಬಂದಂತೆ ಭಾಸವಾಗುತ್ತದೆ. ಕೇರಿಯ ಹೆಂಗಸರು, ಹುಡುಗಿಯರು ಬಿತ್ತಿಗೆಯ ಸ್ಥಳಕ್ಕೆ ಆಗಮಿಸಿ ವೃತ್ತಾಕಾರವಾಗಿ ನಿಂತುಕೊಂಡು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಮಂಡಲಾಕಾರದಲ್ಲಿ ಸುತ್ತ ತೊಡಗುತ್ತಾರೆ. ಹಾಡುವ ಹಾಡುಗಾತಿ ಒಬ್ಬಳು ಹಾಡಿನ ಮೊದಲ ಸಾಲೊಂದನ್ನು ಹೇಳುತ್ತಾಳೆ, ಕೂಡಲೇ ಉಳಿದವರು ಮುಂದಕ್ಕೆ ಬಾಗಿ ಪುನಃ ಹಿಂದಕ್ಕೆ ಜಿಗಿನಿಂತು ತಾರ್ಲೆಂದು ಸಾಮೂಹಿಕವಾಗಿ ಹೇಳುತ್ತಾರೆ. ಒಂದು ಹಾಡನ್ನು ಈ ರೀತಿ ಹಾಡುತ್ತಾರೆ.
ಒಬ್ಬಳು-ಉಳಿದವರು
ಚಂಡಪ್ಪರಾಯರು..... ತಾರ್ಲೆ
ಚಂಡಾಡಕ್ಕೋದರು..... ತಾರ್ಲೆ
ಚಂಡ್ಡೋಗಿ ಬಿದ್ದೇ..... ತಾರ್ಲೆ
ಚಣ್ಣ ನೀರಿಗೆ ಬೈಲಲ್ಲಿ.... ತಾರ್ಲೆ
ಚಂಡ ಕಾಣಮ್ಮ.... ತಾರ್ಲೆ
ಚಂಡ ಕಾಣೇ ನಾರಿ.... ತಾರ್ಲೆ
ದುಮ್ ಸಾಲ್ಯೋ
[ಬದಲಾಯಿಸಿ]ಕೆಲವಡೆ ತಾರ್ಲೆಯ ಕುಣಿತದ ಬದಲಿಗೆ ' ದುಮ್ ಸಾಲ್ಯೋ,ದುಮ್ ಸಾಲೆ' ಎಂದು ಹೇಳುತ್ತಾರೆ. ಬಹಳ ಹಿಂದಿನ ದಿನಗಳಲ್ಲಿ ಅಲ್ಲಿನ ಹೆಣ್ಣು ಮಕ್ಕಳು ನಿರ್ಜನವಾದ ಬೆಟ್ಟಕ್ಕೆ ಹೋಗಿ ಬೆತ್ತಲಾಗಿ ನಿಂತು ತಾರ್ಲೆ ಕುಣಿತ ಸಂಪ್ರದಾಯವನ್ನು ಆಚರಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇವಾಗಿನ ಕಾಲದಲ್ಲಿ ಆ ಸಾಂಪ್ರದಾಯಕ ಕುಣಿತವು ಕಣ್ಮರೆಯಾಗಿದೆ.
ಈ ಕುಣಿತದ ಒಟ್ಟು ಸ್ವರೂಪವನ್ನು ಗಮನಿಸಿದರೆ ಅದರ ಹಿಂದೆ ಫಲ ಸಮೃದ್ಧಿಯ ಕಲ್ಪನೆ ಇರುವುದು ವೈದ್ಯವಾಗುತ್ತದೆ. ತಾರ್ಲೆ ಕುಣಿತದ ಕೆಲವೊಂದು ಸಾಲುಗಳು ಹೀಗಿವೆ,
ಚಡಮಾಲೆ ಹೊಯ್ಯಾಲೆ ಚಣಕೆರೆ ತುಂಬಲೆ
ಬಯ್ದೀಗೊಳೆಲ್ಲ ಹಯ್ನಾದೋ! ತಾರ್ಲೆ
ಚಾಂಜೀಯ ಬೇರೊ ತಳಮಳಗೊಂಡೇ
ದೇವತ್ತಗೋಳಾ ಮದವೀಯೋ|| ತಾರ್ಲೆ
ಈ ಕುಣಿತದ ಸಂಪ್ರದಾಯದ ಮತ್ತೊಂದು ವಿಶೇಷವೆಂದರೆ 'ಅಣುಕು ಮದುವೆ' ಹಾಗೂ 'ಬಿದಿರು ಹಿಂಡು ನಡುವೆ'ಎಂಬ ಎರಡು ಆಚರಣೆಗಳನ್ನು ಮಾಡುತ್ತಾರೆ.[೪] ಅಣುಕು ಮದುವೆ ಭೂಮಿ ಮತ್ತು ಆಕಾಶಗಳ ಮಿಲನದ ಹಾಗೂ ಅದರ ಮೂಲಕ ಭೂಮಿಗೆ ಮಳೆಯ ಸ್ಪರ್ಶದ ಸಂಕೇತವಾಗಿದೆ, ಉತ್ತದೇ ಬಿತ್ತದೇ ದೈತ್ಯವಾಗಿ ಬೆಳೆಯುವ 'ಬಿದಿರು' ಸಮೃದ್ಧಿಯ ಸಂಕೇತವಾಗಿರಬಹುದು ಎಂದು ಅಲ್ಲಿನ ಜನರ ಅಭಿಪ್ರಾಯ ಮತ್ತು ನಂಬಿಕೆ.
ಅಣುಕು ಮದುವೆ
[ಬದಲಾಯಿಸಿ]ಅಣುಕು ಮದುವೆಯ ಹಾಡನ್ನು ಹೇಳುವುದಕ್ಕಿಂತ ಮೊದಲು ಹಾರೈಕೆ ನೃತ್ಯ ಮತ್ತು ಕಥಾ ನೃತ್ಯವನ್ನು ಮಾಡುತ್ತಾರೆ.[೫] ಅಣುಕು ಮದುವೆ ಪ್ರಾರಂಭವಾದ ನಂತರ ಅಲ್ಲಿನ ತಂಡ ಎರಡು ಗುಂಪಾಗಿ ನಿಲ್ಲುತ್ತಾರೆ. ಎರಡು ತಂಡಗಳು ಒಂದು ಹೆಣ್ಣಿನ ತಂಡ ಹಾಗೂ ಮತ್ತೊಂದು ಗಂಡಿನ ತಂಡವಾಗಿ ವಿಭಾಗವಾಗುತ್ತದೆ. ತಮ್ಮ ತಮ್ಮ ಗುಂಪಿನ ಜನರು ಒಬ್ಬರ ಕೆನ್ನೆ ಒಬ್ಬರಿಗೆ ಸ್ಪರ್ಶವಾಗುವಂತೆ ನಿಂತುಕೊಂಡು ಹಾಡನ್ನು ಹಾಡುತ್ತಾರೆ. ಹಾಡುಗಳಲ್ಲಿ ಹೆಣ್ಣು ಕೇಳು, ಗಂಡು ಕೇಳು, ಎಂದು ವರ್ಣಿಸುವುದು ಇತ್ಯಾದಿಯನ್ನು ಮದುವೆ ಹಾಡಿನ ದಾಟಿಯಲ್ಲಿ ಹಾಡುತ್ತಾ ಹಾಡಿನಲ್ಲಿಯೇ ಒಬ್ಬರನ್ನೊಬ್ಬರು ಸಂಭಾಷಣೆ ಮಾಡುತ್ತಾರೆ. ಹಾಗೆ ಹಾಡನ್ನು ಅಲ್ಲಿನ ಸಂಪ್ರದಾಯದ ಪ್ರಕಾರ ಹಾಡುತ್ತಾ, ಅಲ್ಲಿನ ಗಂಡಿನ ಪಕ್ಷದ ತಂಡವು ನಾವು ಹೆಣ್ಣು ಗೆದ್ದೆವೆಂದು ಹೇಳಿ ಅಲ್ಲಿನ ಹೆಣ್ಣನ್ನು ತನ್ನ ತಂಡಕ್ಕೆ ಎಳೆದುಕೊಂಡು ಮದುವೆಯಾಯಿತೆಂದು ಮತ್ತೆ ಹಾಡನ್ನು ಹೇಳುತ್ತಾರೆ.
ಅಂಕೋಲದ ಉತ್ತರಕ್ಕಿರುವ ಹಾರವಾಡೇ ಎಂಬ ಹಳ್ಳಿಯಲ್ಲಿ ನೃತ್ಯವನ್ನು ಮುಗಿದ ಮೇಲೆ ಇಬ್ಬರು ಗಂಡು ಮಕ್ಕಳು ವಧು ವರರಂತೆ ಸಿಂಗರಿಸುತ್ತಾರೆ. ಅವರ ಕೈಗೆ ಕಾಯನ್ನು ಕೊಡುತ್ತಾರೆ ಹಾಗೂ ವಧುವಿಗೆ ಕಾಡಿಗೆ ಹಚ್ಚುತ್ತಾರೆ. ನಂತರ ವಧು-ವರರನ್ನು ದಿಬ್ಬಣದ ವಾದ್ಯ ದೊಂದಿಗೆ ಕರೆದುಕೊಂಡು ಊರ ಗೌಡರ ಮನೆಗೆ ಅಲ್ಲಿಂದ ಬುದ್ವಂತನ ಮನೆಗೆ ಹೋಗಿ ನರ್ತಿಸುತ್ತಾರೆ.[೬] ನಂತರ ತಮ್ಮ ತಮ್ಮ ಮನೆಯ ಬಾವಿಯ ಬಳಿ ಬಂದು ಅಲ್ಲಿನ ಕಲ್ಲನ್ನು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ ಕಾಯಿಯನ್ನು ಕಾಯಿಸುಳಿ, ಬೆಲ್ಲ ಅಥವಾ ಬೆಲ್ಲದ ಅವಲಕ್ಕಿಯನ್ನು ಪ್ರಸಾದವನಾಗಿ ಹಂಚುತ್ತಾರೆ. ಬಲೀಂದ್ರನನ್ನು ಕಳುಹಿಸುವ ದಿನವೂ ಇದೇ ರೀತಿ ನೃತ್ಯದ ಆಚರಣೆಯನ್ನು ನಡೆಸುತ್ತಾರೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ ಗೊ.ರು.ಚನ್ನಬಸಪ್ಪ.ಕರ್ನಾಟಕ ಜನಪದ ಕಲೆಗಳು.ಕನ್ನಡ ಸಾಹಿತ್ಯ ಪರಿಷತ್ತು.೧೯೭೭.
- ↑ ಹಿ.ಚಿ.ಬೋರಲಿಂಗಯ್ಯ.ಕರ್ನಾಟಕ ಜನಪದ ಕಲೆಗಳ ಕೋಶ.ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ ಹಂಪಿ,೧೯೯೬.
- ↑ https://xn--3rc7bwa7a5hpa.xn--2scrj9c/dictionary/kannada/%E0%B2%AE%E0%B2%A3%E0%B2%BF+%E0%B2%B8%E0%B2%B0
- ↑ "ಆರ್ಕೈವ್ ನಕಲು". Archived from the original on 2025-03-18. Retrieved 2025-10-12.
- ↑ "ಆರ್ಕೈವ್ ನಕಲು". Archived from the original on 2025-09-14. Retrieved 2025-10-12.
- ↑ https://www.vijayavani.net/tag/%E0%B2%A6%E0%B2%BF%E0%B2%AC%E0%B3%8D%E0%B2%AC%E0%B2%A3
- ↑ https://udayavani.com/news_menu/vaividya-diversity/685541acd3279fb061cfd913?lang=kn