ತಾರೇಕಾಯಿ

ವಿಕಿಪೀಡಿಯ ಇಂದ
Jump to navigation Jump to search

ತಾರೇಕಾಯಿ[ಬದಲಾಯಿಸಿ]

ತಾರೆಕಾಯಿ
ತಾರೆ ಮರ

ವಿಭೀತಕಿ ಎಂದು ಸಂಸ್ಕೃತದಲ್ಲಿ ಕರೆಯುವ,ಟರ್ಮಿನಾಲಿಯಾ ಬೆಲ್ಲಾರಿಕಾ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಬಹೆಡಾ ಎಂಬ ಇಂಗ್ಲೀಷ್ ಮತ್ತು ಹಿಂದಿ ಹೆಸರನ್ನು ಪಡೆದಿರುವ ತಾರೇ ಕಾಯಿಯು ತ್ರಿಫಲಾಯಲ್ಲಿ ಒಂದು. ಇದು ಭಾರತ ಎಲ್ಲೆಡೆ ಬೆಳೆಯುತ್ತದೆ. ಫೆಬ್ರವರಿ ಮಾಮರ್ಚ್ ನಲ್ಲಿ ಎಲೆ ಉದುರಿ ಹೋದರೆ ಮೇ ತಿಂಗಳಲ್ಲಿ ಕಾಯಿಗಳು ಉಂಟಾಗುತ್ತವೆ. ಇದು ೭೦-೯೦ ಅಡಿ ಬೆಳೆಯುವ ದೊಡ್ಡ ಮರ . ಇದರಲ್ಲಿರುವ ರಾಸಾಯನಿಕ ದ್ರವ್ಯಗಳೆಂದರೆ ಮ್ಯಾನಿಟಾಲ್, ಗ್ಯಾಲ್ಯಾಕ್ಟೋಸ್, ಫ್ರಕ್ಟೋಸ್, ಗ್ಯಾಲಿಕ್ ಆಸಿಡ್, ಟ್ಯಾನಿನ್, ಚೆಬ್ಯುಲ್ಯಾಸಿಕ್-ಇವೇ ಮೊದಲಾದವುಗಳು.

ಉಪಯೋಗ[ಬದಲಾಯಿಸಿ]

ಇದು ಹತ್ತು ಹಲವು ಕಾಯಿಲೆಗಳಲ್ಲಿ ಸುಲಭವಾಗಿ ಉಪಯೋಗಿಸಬಹುದಾದ ಮನೆಮದ್ದು.

  • ತಾರೇಕಾಯಿಯ ಹಣ್ಣಿನ ಒಳಗಿನ ತಿರುಳನ್ನು ಅರೆದು, ಎಳ್ಳೆಣ್ಣೆಯಲ್ಲಿ ಕುದಿಸಿ, ತೈಲಪಾಕ ಮಾಡಿದರೆ ಇದು ಕೂದಲು ಉದುರುವುವಿಕೆಯಲ್ಲಿ ಉತ್ತಮ.ಇದು ತಲೆ ಹೊಟ್ಟನ್ನೂ ಶಮನ ಮಾಡುತ್ತದೆ.
  • ತಾರೇಕಾಯಿಯ ಮರದ ತೊಗಟೆಯನ್ನು ಕುಟ್ಟಿ ಹುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ನೀಡಿದರೆ ಕೆಮ್ಮು ಕಫ ದಮ್ಮು ಮೊದಲಾದವುಗಳಲ್ಲಿ ಶಮನಕಾರಿ.
  • ತಾರೇಕಾಯಿಯ ಸಿಪ್ಪೆಯನ್ನು ತಿಂದರೆ ಗಂಟಲು ಕೆರೆತ, ಕೆಮ್ಮುಶಮನವಾಗುತ್ತದೆ.
  • ತಾರೇಕಾಯಿಯ ತಿರುಳನ್ನು ಹಾಲಲ್ಲಿ ಕುದಿಸಿ,ಸ್ವಲ್ಪ ಕಾಳುಮೆಣಸಿನ ಪುಡಿ, ಕಲ್ಲುಸಕ್ಕರೆ ಪುಡಿ ಮತ್ತು ಅರಸಿನ ಬೆರೆಸಿ ನಿತ್ಯ ಸೇವಿಸಿದರೆ, ದೀರ್ಘಕಾಲೀನ ನೆಗಡಿ,ಕೆಮ್ಮು,ಕಫ ಶಮನವಾಗುತ್ತದೆ.
  • ತಾರೇಕಾಯಿಯ ಹಣ್ಣಿನ ತಿರುಳು ರುಚಿಕಾರಕ ಹಾಗೂ ಶಕ್ತಿದಾಯಕ. ಇದನ್ನು ತುಪ್ಪ, ಜೇನುತುಪ್ಪ, ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಬಲವರ್ಧಕ ಔಷಧಿಯಾಗಿದೆ.