ತರ್ಪಣ

ವಿಕಿಪೀಡಿಯ ಇಂದ
Jump to navigation Jump to search
ಅರ್ಘ್ಯ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಬೆಲೆ ಲೇಖನಕ್ಕಾಗಿ ಇಲ್ಲಿ ನೋಡಿ.
ತರ್ಪಣ ಕೊಡುತ್ತಿರುವುದು

ತರ್ಪಣ ವೈದಿಕ ಆಚರಣೆಯಲ್ಲಿನ ಒಂದು ಪದ ಮತ್ತು ಇದು ದೈವಿಕ ಜೀವಿಗಳಿಗೆ ಮಾಡಲಾದ ಅರ್ಪಣೆಯನ್ನು ಸೂಚಿಸುತ್ತದೆ. ಇದು ಅರ್ಪಣೆಯ ಕ್ರಿಯೆ ಮತ್ತು ಜೊತೆಗೆ ಅರ್ಪಣೆಯಲ್ಲಿ ಬಳಸಲಾದ ವಸ್ತುವನ್ನೂ ಸೂಚಿಸುತ್ತದೆ. ತಿಲತರ್ಪಣ ಒಂದು ಭಿನ್ನ ಆದರೆ ಸಂಬಂಧಿತ ಪದ ಮತ್ತು ಕೆಲವೊಮ್ಮೆ ತರ್ಪಣ ಪದದೊಂದಿಗೆ ತಪ್ಪುತಿಳಿಯಲಾಗುತ್ತದೆ. ತಿಲತರ್ಪಣ ತರ್ಪಣದ ಒಂದು ನಿರ್ದಿಷ್ಟ ರೂಪ ಮತ್ತು ಪಿತೃ ಪಕ್ಷದ ಅವಧಿಯಲ್ಲಿ ಅಥವಾ ಸಾವಿನ ವಿಧಿಯಾಗಿ ನೀರು ಹಾಗೂ ಎಳ್ಳನ್ನು ಬಳಸಿ ಪಿತೃಗಳಿಗೆ (ಅಗಲಿದ ಪೂರ್ವಜರು) ಅರ್ಪಿಸಲಾದ ಎರೆತಗಳನ್ನು ಒಳಗೊಳ್ಳುತ್ತದೆ.[೧]

(i) ತರ್ಪಣ ಅಂದರೆ ಅರ್ಘ್ಯ, ಒಂದು ಅರ್ಪಣೆ. ಅದನ್ನು ಎಲ್ಲ ದೇವರಿಗೆ, ಜೊತೆಗೆ ಜಪವಾಗಿ ಮೂಲಮಂತ್ರವನ್ನು ಪಠಿಸಿದಾಗ ನವಗ್ರಹಗಳಿಗೆ ಅರ್ಪಿಸಲಾಗುತ್ತದೆ. (ii) ಸ್ವಾಗತ ತರ್ಪಣಗಳ ನಿದರ್ಶನಗಳು:

(a) ಲಕ್ಷ್ಮಿಗೆ, “आर्द्रां ज्वलंतीम् तृप्ताम् तर्पयन्तीम् “ ಆರ್ದ್ರಾಂ ಜ್ವಲಂತೀಮ್ ತೃಪ್ತಾಮ್ ತರ್ಪಯಂತೀಮ್ (ಶ್ರೀ ಸೂಕ್ತ 4), "ತೃಪ್ತಿಹೊಂದಿದವಳು ಮತ್ತು ಅವಳಿಗೆ ತರ್ಪಣ ನೀಡುವವರನ್ನು ತೃಪ್ತಿಪಡಿಸುವವಳು"
(b) ತ್ರಿಪುರ ಸುಂದರಿಗೆ, “बिंदु तर्पण संतुष्टाम् पूर्वजा त्रिपुराम्बिका” ಬಿಂದು ತರ್ಪಣ ಸಂತುಷ್ಟಾಮ್ ಪೂರ್ವಜಾ ತ್ರಿಪುರಾಂಬಿಕಾ (ಲಲಿತಾ ಸಹಸ್ರನಾಮ 178, 974), "ತರ್ಪಣದ ಕೇವಲ ಒಂದು ಬಿಂದುವಿನಿಂದ ತೃಪ್ತಿಹೊಂದಿದವಳು"

(iii) ಅಗತ್ಯಗಳ ಪ್ರಕಾರ ಆಕಳ ಹಾಲು (ಹಸಿ, ಬಿಸಿಮಾಡದ, ಪಾಶ್ಚೀಕರಿಸದ), ನೀರು, ಸಕ್ಕರೆ, ಕೇಸರಿ, ಏಲಕ್ಕಿ, ಕರ್ಪೂರ, ಇತ್ಯಾದಿಗಳನ್ನು ಮಿಶ್ರಣಮಾಡಿ ಅರ್ಪಣೆಯಾಗಿ ಉಪಯೋಗಿಸಲಾಗುತ್ತದೆ.

(iv) ಪ್ರತಿ ಹತ್ತು ಮೂಲಮಂತ್ರಗಳ ಪಠನಕ್ಕೆ ಒಂದು ತರ್ಪಣವನ್ನು (ಅಥವಾ ಅರ್ಘ್ಯ) ಕೊಡಲಾಗುತ್ತದೆ ಮತ್ತು ಅದರ ಭಾಗಕ್ಕೆ ಒಂದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ತರ್ಪಣ&oldid=801723" ಇಂದ ಪಡೆಯಲ್ಪಟ್ಟಿದೆ