ವಿಷಯಕ್ಕೆ ಹೋಗು

ತಮಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಬೆಂಗಳೂರಿನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿನ ತಮಟೆ ಭಾರಿಸುತ್ತಿರುವುದು

ತಮಟೆ ಅಥವಾ ಹಲಗೆ, ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ಅದರಲ್ಲೂ ಹಳೆಯ ಮೈಸೂರು ಪ್ರದೇಶದ ಚರ್ಮವಾದ್ಯ ಆಗಿದೆ. ಕಬ್ಬಿಣದ ಉಂಗುರದಿಂದ ಕಟ್ಟಿದ ವೃತ್ತಾಕಾರದ ಚೌಕಟ್ಟಿನ ಮೇಲೆ ಆಡಿನ ಚರ್ಮವನ್ನು ಕಟ್ಟಿ ತಯಾರಿಸಲಾಗುತ್ತದೆ. ತಮಟೆಯನ್ನು ಕರ್ನಾಟಕದಾದ್ಯಂತ ಮುಖ್ಯವಾಗಿ ಅಂತ್ಯಕ್ರಿಯೆಯ ಸಮಯದಲ್ಲಿ, ಹಳ್ಳಿಯ ಉತ್ಸವಗಳು ಮತ್ತು ಘೋಷಣೆಗಳ ಸಮಯದಲ್ಲಿ ಮಾತ್ರ ನುಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ, ಇದು ಸ್ವೀಕಾರವನ್ನು ಗಳಿಸಿದೆ ಮತ್ತು ಮದುವೆಗಳು, ಪ್ರತಿಭಟನಾ ಮೆರವಣಿ ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳ ಭಾಗವಾಗಿದೆ. ಇದು ಎಲ್ಲಾ ಸಮುದಾಯಗಳ ಮನ ಗೆದ್ದಿದೆ. ಹಳೆಯ ಮೈಸೂರು ಪ್ರದೇಶದಾದ್ಯಂತ ತಮಟೆ ತಂಡಗಳು ಅಸ್ತಿತ್ವದಲ್ಲಿವೆ.[]

ತಮಟೆಯ ರಚನೆ

ವೃತ್ತಾಕಾರವಾದ ಮರದ ಅಥವಾ ಕಬ್ಬಿಣದ ಬಳೆಯೊಂದಕ್ಕೆ ಬೆಂಕಿಯಲ್ಲಿ ಹದಗೊಳಿಸಿದ ಆಡು ಅಥವಾ ದನದ ಚರ್ಮವನ್ನು, ಚರ್ಮದ ಹಗ್ಗಗಳಿಂದ ಬಿಗಿದು ಕಟ್ಟುತ್ತಾರೆ. ಒಂದೂವರೆ ಅಡಿ ವ್ಯಾಸದಿಂದ ಎಂಟು ಅಡಿ ವ್ಯಾಸದವರೆಗೂ ಇರುವ ತಮಟೆಗಳು ಮಾಡಲ್ಪಡುತ್ತವೆ. ತಮಟೆ ಬಾರಿಸಲು ಒಂದು ತೆಳುವಾದ, ನುಣ್ಣನೆ ತುದಿಗಳಿರುವ ಕಡ್ಡಿಯನ್ನು ಬಳಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "612 Siddalingaiah, Village deities". www.india-seminar.com. Retrieved 2020-06-01.
"https://kn.wikipedia.org/w/index.php?title=ತಮಟೆ&oldid=1303478" ಇಂದ ಪಡೆಯಲ್ಪಟ್ಟಿದೆ