ತಡಿಕಾವಗಿಲು

ವಿಕಿಪೀಡಿಯ ಇಂದ
Jump to navigation Jump to search
ತಡಿಕವಾಗಿಲು
ಹಳ್ಳಿ
Country India
StateKarnataka
DistrictRamanagara District
Area
 • Total೪೯೩.೯೪
Population
 (೨೦೦೧)
ಭಾಷೆ
 • Officialಕನ್ನಡ
Time zoneUTC+5:30 (IST)
PIN
562159
Nearest cityRamanagara, Magadi
Literacy75%
Vidhan Sabha constituencyMagadi

ತಡಿಕವಾಗಿಲು ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಹಾಗೂ ರಾಮನಗರ ತಾಲ್ಲೂಕಿನ ಒಂದು ಗ್ರಾಮ. ಈ ಹಳ್ಳಿಯೂ ರಾಮನಗರದಿಂದ ೧೬ಕೀ.ಮಿ ಹಾಗೂ ಮಾಗಡಿಯಿಂದ ೨೬ಕೀ.ಮಿ ದೂರ

ಕಲೆ ಮತ್ತು ವಾಸ್ತು ಶಿಲ್ಪ: ತಡಿಕವಾಗಿಲು ಗ್ರಾಮದಲ್ಲಿ ಶಿವನ ದೇವಸ್ಥಾನವು ಚೋಳರು ನಿರ್ಮಿಸಿದರು ಎಂಬ ಪ್ರತೀತಿ ಇದೆ.

ಧಾರ್ಮಿಕ ಜೀವನ : ಈ ಗ್ರಾಮ ಪ್ರದೇಶದಲ್ಲಿ ಜನರು ಹಿಂದೂ ಧರ್ಮವನ್ನು ಆಚರಿಸುತ್ತಿದ್ದು, ಹಿಂದೂ ಧರ್ಮದ ಗ್ರಂಥಗಳಾದ ರಾಮಾಯಣ,ಮಹಾಭಾರತ, ಭಗವದ್ಗೀತೆಅನೇಕ ಗ್ರಂಥಗಳನ್ನು ಅಧ್ಯಾಯನ ಮಾಡುತ್ತಾರೆ. ಹಿಂದೂ  ದೇವತೆಯ ಆರಾಧಕರು ಆಗಿದ್ದಾರೆ. ಶಿವ, ಆಂಜನೇಯಸ್ವಾಮಿ, ಬಸವೇಶ್ವರ ಸ್ವಾಮಿ , ಮಾರಮ್ಮ ದೇವಿಯನ್ನು  ಮುಂತಾದ ದೇವರನ್ನು ಪೂಜಿಸುತ್ತಾರೆ. ಗ್ರಾಮದಲ್ಲಿ ಮಾರಿಹಬ್ಬ ಹಾಗೂ ಹಲವು ಉತ್ಸವನ್ನು ಕೂಡ ಆಚರಿಸುತ್ತಾರೆ.

ಸಾಂಸ್ಕೃತಿಕ ಜೀವನ : ಗ್ರಾಮದ ಜನರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಸುತ್ತಾ ಬಂದಿದ್ದಾರೆ. ರಾಷ್ಟ್ರೀಯ ಹಬ್ಬವನ್ನು ಒಗ್ಗಟ್ಟಿನಿಂದ ಪಾಲ್ಗೋಳುತ್ತಾರೆ. ಗಾಂಧಿಯ ತತ್ವಗಳನ್ನು  ಮೈಗೂಡಿಸಿಕೊಂಡಿದ್ದಾರೆ.

ಸಾಮಾಜಿಕ ಜೀವನ:  ಗ್ರಾಮ ವ್ಯಾಪ್ತಿಯ ಜನರು  ಆರ್ಥಿಕವಾಗಿ ಮುಖ್ಯ ಕಸುಬು ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿಯ ಮುಖ್ಯ ಬೆಳೆಗಳೆಂದರೆ ರಾಗಿ,ಮಾವು,ತೆಂಗು,ದ್ವಿದಳ ಧಾನ್ಯವನ್ನು ಬೆಳೆಯುತ್ತಾರೆ ಮತ್ತು ಸಾಕು ಪ್ರಾಣಿಗಳಾದ ಕುರಿ,ಮೇಕೆ,ಹಸುಗಳು,ಹೈನುಗಾರಿಕೆ,ಹಾಗೂ ಉಪಕಸುಬುಗಳನ್ನು ಅಳವಡಿಸಿಕೊಂಡಿದ್ದಾರೆ.

ಅನೇಕ ಸಂಘ ಸಂಸ್ಥೆಗಳು,ಸ್ತ್ರೀ ಸಂಘಗಳು,ಸಹಕಾರ ಸಂಘವು ಹಾಗೂ  ತಡಿಕವಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ನಿಗಮವು  ಬಡವರಿಗೆ ಸ್ವ ಸಹಾಯಧನವನ್ನು ನೀಡುತ್ತಿವೆ.ಇವರ ಆರ್ಥಿಕ ಮಟ್ಟವನ್ನು ಸುಧಾರಿಸುತ್ತಿದ್ದೆ.

ಶಿಕ್ಷಣ ವ್ಯವಸ್ಥೆ: ಈ ಗ್ರಾಮದಲ್ಲಿ ಸರಿಸುಮಾರು 1925 ರಲ್ಲಿ ಸ್ಥಾಪನೆಗೊಂಡ "ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ತಡಿಕವಾಗಿಲು" ಈ ಶಾಲೆಯಲ್ಲಿ  1 ರಿಂದ 7ನೇ ತರಗತಿಯನ್ನು ವಿದ್ಯಾಭ್ಯಾಸ ವನ್ನು ಮಾಡುವಂತಹ ಶಾಲೆ ಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಂದಾಜು  ಶೇ.70ರಷ್ಟು ವಿದ್ಯಾವಂತ ರಿಂದ ಕೂಡಿದ್ದು ಅನೇಕರು ಸರ್ಕಾರಿ ಕೆಲಸದಲ್ಲಿ ಇದ್ದು ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ವಿವಿಧ  ಕೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ.