ತಂತ್ರಾಂಶ ಕಾರ್ಯಕ್ಷಮತೆ ಪರೀಕ್ಷೆ (ಸಾಫ್ಟ್‌ವೇರ್ ಪರ್ಫಾರ್ಮೆನ್ಸ್‌ ಟೆಸ್ಟಿಂಗ್‌)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಫ್ಟ್‌ವೇರ್ (ತಂತ್ರಾಂಶ) ಎಂಜಿನಿಯರಿಂಗ್‌ನಲ್ಲಿ, ಕಾರ್ಯಕ್ಷಮತೆ ಪರೀಕ್ಷೆ ಎನ್ನುವುದು, ಒಂದು ದೃಷ್ಟಿಯಿಂದ, ಒಂದು ವ್ಯವಸ್ಥೆಯಲ್ಲಿರುವ ಯಾವುದೋ ಒಂದು ಅಂಶವು ಕೊಟ್ಟಿರುವ ಕಾರ್ಯಾಭಾರದಲ್ಲಿ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಮಾಡುವ ಪರೀಕ್ಷೆ. ಇದನ್ನು ಗುಣಮಟ್ಟದ ಅಂಶಗಳನ್ನು ಊರ್ಜಿತಗೊಳಿಸಲು ಮತ್ತು ಪ್ರಮಾಣೀಕರಿಸಲು ಬಳಸಬಹುದು, ಉದಾಹರಣೆಗೆ, ವಿಶ್ವಾಸಾರ್ಹತೆ, ಪ್ರಮಾಣವೃದ್ಧಿ ಸಾಮರ್ಥ್ಯ (ಸ್ಕೇಲೆಬಿಲಿಟಿ) ಮತ್ತು ಸಂಪತ್ತಿನ ಬಳಕೆ. ಕಾರ್ಯಕ್ಷಮತೆಯ ಪರೀಕ್ಷೆ ಎನ್ನುವುದು ಕಂಪ್ಯೂಟರ್ ವಿಜ್ಞಾನದಲ್ಲಿ ಕೋಡಿಂಗ್‌ ಕಾರ್ಯವನ್ನು ಪ್ರಾರಂಭಿಸುವ ಮೊದಲು ವಿನ್ಯಾಸ ಮತ್ತು ಶಿಲ್ಪದಲ್ಲಿಯೇ ಕಾರ್ಯಕ್ಷಮತೆಯನ್ನು ನಿರ್ಮಿಸಲು ಪ್ರಯತ್ನಿಸುವ, ಕಂಪ್ಯೂಟರ್ ವಿಜ್ಞಾನದಲ್ಲಿ ಬೆಳೆಯುತ್ತಿರುವ ರೂಢಿಯಾದ ಕಾರ್ಯಕ್ಷಮತೆ ಇಂಜಿನಿಯರಿಂಗ್‌ನ ಉಪವಿಭಾಗ.

ಕಾರ್ಯಕ್ಷಮತೆಯ ಪರೀಕ್ಷೆಯು ಹಲವಾರು ಕಾರ್ಯಗಳನ್ನು ಮಾಡಬಲ್ಲದು. ಇದು ವ್ಯವಸ್ಥೆಯು ಕಾರ್ಯಕ್ಷಮತೆ ಪರೀಕ್ಷಾಧಾರಗಳನ್ನು ಮುಟ್ಟುತ್ತದೆ ಎಂದು ತೋರಿಸಬಲ್ಲದು. ಎರಡು ವ್ಯವಸ್ಥೆಗಳಲ್ಲಿ ಯಾವುದು ಉತ್ತಮ ಎಂದು ಕಂಡುಹಿಡಿಯಲು ಹೋಲಿಕೆ ಮಾಡಬಲ್ಲದು. ಅಥವಾ ವ್ಯವಸ್ಥೆಯ ಯಾವ ಭಾಗ ಅಥವಾ ಕಾರ್ಯಾಭಾರ‍ ವ್ಯವಸ್ಥೆಯು ಕೆಟ್ಟದಾಗಿ ಕೆಲಸ ಮಾಡಲು ಕಾರಣವಾಗುತ್ತದೆ ಎಂಬುದನ್ನು ಅಳೆಯಬಹುದು. ಒಂದು ಚಿಕಿತ್ಸಕ ಪರಿಸ್ಥಿತಿಯಲ್ಲಿ, ತಂತ್ರಾಂಶ ಎಂಜಿನಿಯರ್‌ಗಳು, ಸಾಧಕದ ಯಾವ ಭಾಗ ಅಥವಾ ತಂತ್ರಾಂಶ ಕೆಟ್ಟ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂಬುದನ್ನು ಅಳೆಯಲು ಅಥವಾ ಒಪ್ಪಬಹುದಾದ ಪ್ರತಿಕ್ರಿಯೆ ಸಮಯಕ್ಕಾಗಿ ಥ್ರೋಪುಟ್‌ ಹಂತಗಳನ್ನು (ಮತ್ತು ’ಥ್ರೆಶೋಲ್ಡ್‌’ಗಳನ್ನು) ಸ್ಥಾಪಿಸಲು ಪ್ರೊಫೈಲರ್‌ಗಳಂತಹ ಉಪಕರಣಗಳನ್ನು ಬಳಸುತ್ತಾರೆ. ಒಂದು ಹೊಸ ವ್ಯವಸ್ಥೆಯ ಖರ್ಚು ಲಾಭದಾಯಕವಾಗಲು, ಪ್ರಾಜೆಕ್ಟ್‌ ಬೆಳವಣಿಗೆಯ ಹಂತದಲ್ಲಿಯೇ ಕಾರ್ಯಕ್ಷಮತೆಯ ಕೆಲಸ ಪ್ರಾರಂಭವಾಗುವುದು ಮತ್ತು ತಯಾರಾಗುವವರೆಗೂ ಮುಂದುವರೆಯುವುದು ಅತಿ ಮುಖ್ಯ. ಕಾರ್ಯಕ್ಷಮತೆಯ ದೋಷವನ್ನು ಕಂಡುಹಿಡಿಯುವುದು ನಿಧಾನವಾದಷ್ಟೂ ಸರಿಪಡಿಸುವ ಖರ್ಚು ಹೆಚ್ಚಾಗುತ್ತಾ ಹೋಗುತ್ತದೆ. ಇದು ಕಾರ್ಯದ ಪರೀಕ್ಷೆಯಲ್ಲಿ ನಿಜ, ಆದರೆ ಕಾರ್ಯಕ್ಷಮತೆಯ ವಿಷಯದಲ್ಲಿ ಅದರ ’ಮೊದಲಿಂದ-ಕೊನೆಯವರೆಗಿನ’ ಹರವಿನ ಕಾರಣ ಮತ್ತೂ ನಿಜ.

ಉದ್ದೇಶಗಳು[ಬದಲಾಯಿಸಿ]

  • ವ್ಯವಸ್ಥೆಯು ಕಾರ್ಯಕ್ಷಮತೆ ಪರೀಕ್ಷೆಯಾಧಾರಗಳನ್ನು ಮುಟ್ಟುತ್ತದೆ ಎಂದು ತೋರಿಸಲು.
  • ಯಾವುದು ಉತ್ತಮ ಎಂದು ಕಂಡುಹಿಡಿಯಲು ಎರಡು ವ್ಯವಸ್ಥೆಗಳನ್ನು ಹೋಲಿಸುವುದು.
  • ವ್ಯವಸ್ಥೆಯ ಯಾವ ಭಾಗ ಅಥವಾ ಕಾರ್ಯಾಭಾರ ಕೆಟ್ಟ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂದು ಅಳೆಯಲು.

ಕಾರ್ಯಕ್ಷಮತೆಯ ಪರೀಕ್ಷೆಯಲ್ಲಿ, ಪರೀಕ್ಷೆಯ ಪರಿಸ್ಥಿತಿಗಳನ್ನು ಬಳಕೆಯ ಯಥಾರ್ಥ ಪರಿಸ್ಥಿತಿಗಳಂತೆಯೇ ಇರುವಂತೆ ಮಾಡುವುದು ಬಹಳ ಮುಖ್ಯ (ಮತ್ತು ಹಾಗೆ ಅಣಿಮಾಡುವುದು ಬಹಳ ಕಷ್ಟ). ಆದರೆ, ರೂಢಿಯಲ್ಲಿ ಇದನ್ನು ಹಾಗೆಯೇ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಉತ್ಪತ್ತಿ ವ್ಯವಸ್ಥೆಗಳು ಯಾದೃಚ್ಛಿಕ ಗುಣವನ್ನು ಹೊಂದಿರುತ್ತವೆ, ಮತ್ತು ಪರೀಕ್ಷಾ ಕಾರ್ಯಾಭಾರಗಳು ಉತ್ಪತ್ತಿಯ ವ್ಯವಸ್ಥೆಯಲ್ಲಿ ಹೇಗಾಗಬಹುದೆಂಬುದನ್ನು ಅಣಕು ಮಾಡಲು ಸರ್ವಥಾ ಪ್ರಯತ್ನಿಸುತ್ತವಾದರೂ, ಈ ಕಾರ್ಯಾಭಾರದ ವ್ಯತ್ಯಯ ಗುಣವನ್ನು ಹಾಗೆಯೇ ಪುನಾರಚಿಸುವುದು ಅಸಾಧ್ಯ - ಅತ್ಯಂತ ಸುಲಭದ ವ್ಯವಸ್ಥೆಯನ್ನು ಹೊರತುಪಡಿಸಿ.

ಸಡಿಲವಾಗಿ ಜೋಡಿಸಿದ ಶಿಲ್ಪಕಲಾ ಸಲಕರಣೆಗಳು (ಉದಾ: ಎಸ್‌ಒ‌ಎ (SOA)) ಕಾರ್ಯಕ್ಷಮತೆಯ ಪರೀಕ್ಷೆಯನ್ನು ಇನ್ನೂ ಸಂಕೀರ್ಣಗೊಳಿಸಿವೆ. ನಿಜವಾಗಿಯೂ ಉತ್ಪತ್ತಿ ವ್ಯವಸ್ಥೆಯನ್ನು ಹೋಲುವ ಸ್ಥಿತಿಗಳನ್ನು ಪುನಾರಚಿಸಲು, (ಸಮಾನ ಸೌಕರ್ಯ ಮತ್ತು ವೇದಿಕೆಯನ್ನು ಹಂಚಿಕೊಳ್ಳುವ) ಉದ್ಯಮ ಸೇವೆಗಳು ಅಥವಾ ಆಸ್ತಿಗಳು (ಎಲ್ಲಾ ಗ್ರಾಹಕರು ಉತ್ಪತ್ತಿಯನ್ನು ಹೋಲುವ ವಹಿವಾಟು ಸಂಪುಟಗಳು ಮತ್ತು ಹಂಚಿಕೊಂಡ ಸೌಕರ್ಯ ಮತ್ತು ವೇದಿಕೆಯ ಮೇಲಿನ ಕಾರ್ಯಾಭಾರವನ್ನು ಸೃಷ್ಟಿಸುವುದರೊಂದಿಗೆ) ಸಹಕೃತ ಕಾರ್ಯಕ್ಷಮತೆಯನ್ನು ಬಯಸುತ್ತವೆ. ಈ ಚಟುವಟಿಕೆಯ ಸಂಕೀರ್ಣತೆ, ಹಣಕಾಸು ಮತ್ತು ಸಮಯದ ಆವಶ್ಯಕತೆಯ ಕಾರಣ, ಕೆಲವು ಸಂಸ್ಥೆಗಳು ಸಾಮರ್ಥ್ಯ ಮತ್ತು ಸಂಪತ್ತಿನ ಆವಶ್ಯಕತೆಗಳನ್ನು ತಿಳಿದುಕೊಳ್ಳಲು ಮತ್ತು ಗುಣಮಟ್ಟದ ಅಂಶಗಳನ್ನು ಪ್ರಾಮಾಣೀಕರಿಸಲು ಉತ್ಪತ್ತಿಯಂತಹ ಪರಿಸ್ಥಿಯನ್ನು ನಿರ್ಮಾಣ ಮಾಡುವ ಮತ್ತು ನಿಯಂತ್ರಿಸುವ ಸಾಧನಗಳನ್ನು ತಮ್ಮ ಕಾರ್ಯಕ್ಷಮತೆ ಪರೀಕ್ಷೆಯ ಪರಿಸರದಲ್ಲಿ ಬಳಸುತ್ತಾರೆ (ಈ ಸಾಧನಗಳನ್ನು "ನಾಯ್ಸ್‌ (noise)" ಎಂದು ಕೂಡ ಕರೆಯುತ್ತಾರೆ).


ಕಾರ್ಯಕ್ಷಮತೆಯ ಧ್ಯೇಯಗಳನ್ನು ರೂಪಿಸುವುದು[ಬದಲಾಯಿಸಿ]

ಕಾರ್ಯಕ್ಷಮತೆಯ ವಸ್ತುಸ್ಥಿತಿ ಧ್ಯೇಯಗಳಿಗೆ ಸರಿಯಾದ ಗಮನ ಕೊಡದೆಯೇ ಹಲವಾರು ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಒಂದು ವ್ಯವಹಾರದ ದೃಷ್ಟಿಯಿಂದ ಮೊದಲ ಪ್ರಶ್ನೆ ಯಾವಾಗಲೂ "ನಾವು ಕಾರ್ಯಕ್ಷಮತೆಯ ಪರೀಕ್ಷೆ ಏಕೆ ಮಾಡುತ್ತಿದ್ದೇವೆ?" ಎಂಬುದೇ ಆಗಿರಬೇಕು. ಉಪಯೋಗದ ತಂತ್ರಜ್ಞಾನ ಮತ್ತು ಉದ್ದೇಶಗಳಿಗೆ ಅನುಸಾರವಾಗಿ ಕಾರ್ಯಕ್ಷಮತೆಯ ಧ್ಯೇಯಗಳು ಬದಲಾಗುತ್ತವೆ. ಆದಾಗ್ಯೂ, ಅವು ಯಾವಾಗಲೂ ಇವುಗಳಲ್ಲಿ ಕೆಲವನ್ನು ಹೊಂದಿರಬೇಕು:-

ಕನ್‌ಕರೆನ್ಸಿ / ಥ್ರೋಪುಟ್‌[ಬದಲಾಯಿಸಿ]

ಒಂದು ಉಪಯೋಗವು ಯಾವುದಾದರೂ ಲಾಗಿನ್‌ ಪ್ರಕ್ರಿಯೆಯಿಂದ ಅಂತಿಮ ಬಳಕೆದಾರರನ್ನು ಕಂಡುಹಿಡಿಯುವುದಾದರೆ ಕನ್‌ಕರೆನ್ಸಿ ಧ್ಯೇಯವನ್ನು ಹೊಂದಿರುವುದು ಅತಿಮುಖ್ಯ. ವ್ಯಾಖ್ಯಾನದ ಪ್ರಕಾರ, ಯಾವುದೇ ನಿರ್ದಿಷ್ಟ ಸಮಯದಲ್ಲಿ ಬೆಂಬಲಿಸಬೇಕಾದ ಕನ್‌ಕರೆನ್ಸಿ‌ ಉಪಯೋಗವು ಕನ್‌ಕರೆನ್ಸಿ ಉಪಯೋಗಿಸುವ ಬಳಕೆದಾರರ ಅತಿದೊಡ್ಡ ಸಂಖ್ಯೆ ಇದೇ. ನೀವು ಬರೆದುಕೊಂಡ ಪ್ರಕ್ರಿಯೆಯು ನಿಜವಾದ ಉಪಯೋಗದ ಕನ್‌ಕರೆನ್ಸಿಯ ಮೇಲೆ ಪರಿಣಾಮ ಬೀರಬಹುದು, ವಿಶೇಷವಾಗಿ ಪುನರಾವರ್ತಿತ ಭಾಗವು ಲಾಗಿನ್‌ ಮತ್ತು ಲಾಗ್‌ಔಟ್‌ಗಳನ್ನು ಒಳಗೊಂಡಿದ್ದಾಗ.

ನಿಮ್ಮ ಉಪಯೋಗವು ಅಂತಿಮ-ಬಳಕೆದಾರರ ಪರಿಕಲ್ಪನೆಯನ್ನು ಹೊಂದಿಲ್ಲವಾದರೆ ನಿಮ್ಮ ಕಾರ್ಯಕ್ಷಮತೆಯ ಧ್ಯೇಯವು ಗರಿಷ್ಠ ಥ್ರೋಪುಟ್‌ ಅಥವಾ ಪ್ರಕ್ರಿಯೆಯ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಒಂದು ಸಾಮಾನ್ಯ ಉದಾಹರಣೆಯೆಂದರೆ ವಿಕಿಪೀಡಿಯಾದಂತಹ ಜಾಲತಾಣವನ್ನು ಲೋಕಾಭಿರಾಮವಾಗಿ ಬ್ರೌಸ್‌ ಮಾಡುವುದು.

ಸರ್ವರ್ ಪ್ರತಿಕ್ರಿಯೆ ಸಮಯ[ಬದಲಾಯಿಸಿ]

ಇದು ಒಂದು ಉಪಯೋಗ ಸಂಪಾತವು ಮತ್ತೊಂದು ಉಪಯೋಗದ ಕೋರಿಕೆಗೆ ಪ್ರತಿಕ್ರಿಯಿಸಲು ತೆಗೆದುಕೊಳ್ಳುವ ಸಮಯ. ಇದಕ್ಕೆ ಸರಳವಾದ ಉದಾಹರಣೆಯೆಂದರೆ ಬ್ರೌಸರ್‌ ಕ್ಲೈಂಟ್‌ನಿಂದ ಸರ್ವರ್‌ಗೆ ಎಚ್‌ಟಿಟಿಪಿ (HTTP)’ಜಿಇಟಿ’ (GET) ಕೋರಿಕೆ. ಪ್ರತಿಕ್ರಿಯೆ ಸಮಯದ ವಿಷಯದಲ್ಲಿ ಎಲ್ಲಾ ಕಾರ್ಯಾಭಾರ ಪರೀಕ್ಷಿಸುವ ಸಾಧನಗಳು ಅಳೆಯುವುದು ಇದನ್ನೇ. ಉಪಯೋಗದ ಹರವಿನಲ್ಲಿ ಎಲ್ಲಾ ಸಂಪಾತಗಳ ನಡುವೆಯೂ ಸರ್ವರ್‌ ಪ್ರತಿಕ್ರಿಯೆ ಸಮಯವನ್ನು ನಿಗದಿಪಡಿಸುವುದು ಸೂಕ್ತ.

ನಿರೂಪಣೆ ಪ್ರತಿಕ್ರಿಯೆ ಸಮಯ[ಬದಲಾಯಿಸಿ]

ಇದು ಕಾರ್ಯಭಾರ ಪರೀಕ್ಷೆ ಮಾಡುವ ಸಾಧನಗಳಿಗೆ ಕಷ್ಟವಾದ ಕೆಲಸ, ಏಕೆಂದರೆ ಅವುಗಳಿಗೆ ’ತಂತಿಯ ಮೇಲೆ’ ಯಾವುದೇ ಚಟುವಟಿಕೆ ಇಲ್ಲದ ಸಮಯವನ್ನು ಲೆಕ್ಕಹಾಕುವುದನ್ನು ಬಿಟ್ಟರೆ ಸಂಪಾತದ ಒಳಗೆ ಏನು ನಡೆಯುತ್ತದೆಂಬುದರ ಬಗ್ಗೆ ಯಾವ ಪರಿಕಲ್ಪನೆಯೂ ಇರುವುದಿಲ್ಲ. ನಿರೂಪಣೆ ಪ್ರತಿಕ್ರಿಯೆ ಸಮಯವನ್ನು ಅಳೆಯಲು ಸಾಮಾನ್ಯವಾಗಿ ಕಾರ್ಯದ ಪರೀಕ್ಷೆಯ ಸ್ಕ್ರಿಪ್ಟ್‌ಅನ್ನೂ ಕಾರ್ಯಕ್ಷಮತೆಯ ಪರೀಕ್ಷೆಯ ಭಾಗವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ, ಹಲವು ಕಾರ್ಯಾಭಾರ ಪರೀಕ್ಷೆಯ ಸಾಧನಗಳು ಇದನ್ನು ಹೊಂದಿರುವುದಿಲ್ಲ.

ಕಾರ್ಯಕ್ಷಮತೆ ಪರೀಕ್ಷೆಯ ಉಪ-ಪ್ರಕಾರಗಳು[ಬದಲಾಯಿಸಿ]

  • ಕಾರ್ಯಾಭಾರ
  • ಒತ್ತಡ
  • ಧಾರಣಶಕ್ತಿ
  • ಶೀರ್ಷಕ
  • ಸಂಯೋಜನೆ
  • ಪ್ರತ್ಯೇಕತೆ

ಕಾರ್ಯಾಭಾರ ಪರೀಕ್ಷೆ[ಬದಲಾಯಿಸಿ]

ಇದು ಕಾರ್ಯಕ್ಷಮತೆ ಪರೀಕ್ಷೆಯ ಅತ್ಯಂತ ಸರಳ ವಿಧಾನ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ನಿರೀಕ್ಷಿತ ಕಾರ್ಯಾಭಾರದಲ್ಲಿ ಉಪಯೋಗವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಕಾರ್ಯಾಭಾರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಕಾರ್ಯಾಭಾರವು, ಒಂದು ನಿರ್ದಿಷ್ಟ ಸಮಯದಲ್ಲಿ ಉಪಯೋಗದ ಮೇಲೆ ಕೆಲಸ ಮಾಡುವ ಬಳಕೆದಾರರ ನಿರೀಕ್ಷಿತ ಕನ್‌ಕರೆನ್ಸಿ ಸಂಖ್ಯೆ ಮತ್ತು ಆ ಬಳಕೆದಾರರು ನಡೆಸುವ ನಿರ್ದಿಷ್ಟ ವಹಿವಾಟುಗಳೇ ಆಗಿರಬಹುದು. ಈ ಪರೀಕ್ಷೆಯು ಎಲ್ಲ ಪ್ರಮುಖ ವ್ಯವಹಾರ ವಹಿವಾಟುಗಳ ಪ್ರತಿಕ್ರಿಯೆ ಸಮಯವನ್ನು ಕೊಡುತ್ತದೆ. ದತ್ತಾಂಶ, ಉಪ್ಯೋಗ ಸರ್ವರ್‌ ಮುಂತಾದವುಗಳನ್ನೂ ನಿಯಂತ್ರಿಸಿದಲ್ಲಿ ಈ ಸರಳ ಪರೀಕ್ಷೆಯೇ ಉಪಯೋಗ ತಂತ್ರಾಂಶದಲ್ಲಿ ಯಾವುದೇ ಅಟಕಾವುಗಳಿದ್ದರೂ ತೋರಿಸಬಲ್ಲದು.

ಒತ್ತಡ ಪರೀಕ್ಷೆ[ಬದಲಾಯಿಸಿ]

ಸಾಮಾನ್ಯವಾಗಿ ಈ ಪರೀಕ್ಷೆಯನ್ನು ಉಪಯೋಗದ ಹರವಿನಲ್ಲಿ ಗರಿಷ್ಠ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಬಳಸಲಾಗುತ್ತದೆ. ಅತಿಯಾದ ಕಾರ್ಯಾಭಾರವಾದ ಸಮಯದಲ್ಲಿ ಉಪಯೋಗದ ದೃಢತೆಯನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಉಪಯೋಗದ ನಿರ್ವಾಹಕರು ’ಕಾರ್ಯಾಭಾರವು ನಿರೀಕ್ಷಿತ ಗರಿಷ್ಠ ಮಟ್ಟಕ್ಕಿಂತಲೂ ಹೆಚ್ಚಾದಾಗ ಉಪಯೋಗವು ತಕ್ಕಷ್ಟು ಕೆಲಸ ಮಾಡಬಲ್ಲುದೇ’ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಧಾರಣಶಕ್ತಿ ಪರೀಕ್ಷೆ (ಸೋಕ್‌ ಪರೀಕ್ಷೆ)[ಬದಲಾಯಿಸಿ]

ಉಪಯೋಗವು ನಿರೀಕ್ಷಿತ ಕಾರ್ಯಾಭಾರವನ್ನು ನಿರಂತರವಾಗಿ ತಡೆಯಬಲ್ಲದೇ ಎಂಬುದನ್ನು ತಿಳಿದುಕೊಳ್ಳಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಧಾರಣಶಕ್ತಿ ಪರೀಕ್ಷೆಯ ಸಮಯದಲ್ಲಿ, ಸಂಭವನೀಯ ಸೋರಿಕೆಯನ್ನು ಪತ್ತೆಹಚ್ಚಲು ಮೆಮೊರಿಯ ಬಳಕೆಯನ್ನು ನಿಯಂತ್ರಿಸಲಾಗುತ್ತದೆ. ಜೊತೆಗೇ ಮುಖ್ಯವಾದ, ಆದರೆ ಸಾಮಾನ್ಯವಾಗಿ ಉಪೇಕ್ಷಿಸಲ್ಪಡುವ ವಿಷಯವೆಂದರೆ ಕಾರ್ಯಕ್ಷಮತೆಯ ನಿಪಾತ. ಅಂದರೆ, ಥ್ರೋಪುಟ್‌ ಮತ್ತು/ಅಥವಾ ಪ್ರತಿಕ್ರಿಯೆ ಸಮಯಗಳು ಒಂದು ದೀರ್ಘಾವಧಿ ಚಟುವಟಿಕೆಯ ಸಮಯದ ನಂತರವೂ ಪರೀಕ್ಷೆಯ ಪ್ರಾರಂಭದಷ್ಟೇ ಇಲ್ಲವೇ ಅದಕ್ಕಿಂತ ಉತ್ತಮವಾಗಿದೆಯೇ ಎಂದು ತಿಳಿದುಕೊಳ್ಳಲು.

ಶೀರ್ಷಕ ಪರೀಕ್ಷೆ[ಬದಲಾಯಿಸಿ]

ಶೀರ್ಷಕ ಪರೀಕ್ಷೆಯು, ಹೆಸರೇ ಹೇಳುವಂತೆ ಅನೇಕ ಬಳಕೆದಾರರನ್ನು ಕೂಡಿಸಿ ಉಪಯೋಗದ ಚರ್ಯೆಗಳನ್ನು ತಿಳಿಯುವುದು; ಕಾರ್ಯಕ್ಷಮತೆಯು ಸೊರಗುವುದೋ, ಉಪಯೋಗವು ವಿಫಲವಾಗುವುದೋ, ಅಥವಾ ಕಾರ್ಯಾಭಾರದಲ್ಲಿ ಆಗುವ ನಾಟಕೀಯ ಬದಲಾವಣೆಗಳನ್ನು ನಿಯಂತ್ರಿಸಲು ಶಕ್ತವಾಗುವುದೋ ಎಂಬುದನ್ನು ಪರೀಕ್ಷಿಸಲು.

ಸಂಯೋಜನೆಯ ಪರೀಕ್ಷೆ[ಬದಲಾಯಿಸಿ]

ಸಾಂಪ್ರದಾಯಿಕ ಕಾರ್ಯಕ್ಷಮತೆ ಪರೀಕ್ಷೆಯ ಮತ್ತೊಂದು ರೂಪವೇ ಸಂಯೋಜನೆಯ ಪರೀಕ್ಷೆ. ಇಲ್ಲಿ, ಕಾರ್ಯಾಭಾರದ ದೃಷ್ಟಿಯಿಂದ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಬದಲು ಸಂಯೋಜನೆಯಲ್ಲಿ ಮಾಡಿದ ಬದಲಾವಣೆಗಳಿಂದ ಉಪಯೋಗದ ಹರವಿನಲ್ಲಿ ಕಾರ್ಯಕ್ಷಮತೆ ಮತ್ತು ಚರ್ಯೆಗಳಲ್ಲಿ ಆಗುವ ಪರಿಣಾಮಗಳನ್ನು ಪರೀಕ್ಷಿಸುತ್ತೀರಿ. ಇದಕ್ಕೊಂದು ಸಾಮಾನ್ಯ ಉದಾಹರಣೆಯೆಂದರೆ ಕಾರ್ಯಾಭಾರ- ದೊಂದಿಗೆ ವಿವಿಧ ವಿಧಾನಗಳನ್ನು ಪ್ರಯೋಗಿಸುವುದು.

ಪ್ರತ್ಯೇಕತೆ ಪರೀಕ್ಷೆ[ಬದಲಾಯಿಸಿ]

ಇದು ಕಾರ್ಯಕ್ಷಮತೆಯ ಪರೀಕ್ಷೆಗೇ ಮೀಸಲಾದುದೇನಲ್ಲ ಆದರೆ ಈ ಮಾತನ್ನು ಪದೇ ಪದೇ ಪರೀಕ್ಷೆ ಮಾಡಿದ ಫಲವಾಗಿ ಉಪಯೋಗಕ್ಕೆ ತೊಂದರೆ ಆದ ಸಂದರ್ಭವನ್ನು ವಿವರಿಸಲು ಬಳಸಲಾಗುತ್ತದೆ. ಇದನ್ನು ಬಹುತೇಕ ತಪ್ಪಾದ ಡೊಮೇನ್‌ಅನ್ನು ಪ್ರತ್ಯೇಕಿಸಲು ಮತ್ತು ದೃಢೀಕರಿಸಲು ಬಳಸಲಾಗುತ್ತದೆ.


ಕಾರ್ಯಕ್ಷಮತೆ ಪರೀಕ್ಷೆಯ ಪೂರ್ವಾಪೇಕ್ಷೆಗಳು[ಬದಲಾಯಿಸಿ]

ಉತ್ಪತ್ತಿಯ ಪರಿಸರವನ್ನು ಎಷ್ಟು ಹತ್ತಿರಕ್ಕೆ ಸಾಧ್ಯವೋ ಅಷ್ಟರಮಟ್ಟಿಗೆ ಹೋಲುವಂತೆ ಉಪಯೋಗದ ಸುಭದ್ರ ನಿರ್ಮಾಣ.

ಕಾರ್ಯಕ್ಷಮತೆ ಪರೀಕ್ಷೆಯ ಪರಿಸರವನ್ನು ಯುಎಟಿ (UAT) ಅಥವಾ ಅಭಿವೃದ್ಧಿ ಪರಿಸರದೊಂದಿಗೆ ಸೇರಿಸಬಾರದು. ಅದೇ ಪರಿಸರದಲ್ಲಿ ಯುಎಟಿ‍ ಅಥವಾ ಏಕೀಕರಣ ಪರೀಕ್ಷೆಯು ನಡೆಯುತ್ತಿದ್ದರೆ ಕಾರ್ಯಕ್ಷಮತೆಯ ಪರೀಕ್ಷೆಯಿಂದ ದೊರೆತ ಫಲಿತಾಂಶಗಳು ನಂಬಲರ್ಹವಾಗದೇ ಹೋಗಬಹುದು. ಅತ್ಯುತ್ತಮ ರೂಢಿ ಎಂದರೆ ಉತ್ಪತ್ತಿ ಪರಿಸರವನ್ನು ಸಾಧ್ಯವಾದಷ್ಟೂ ಹೋಲುವ ಒಂದು ಪ್ರತ್ಯೇಕ ಕಾರ್ಯಕ್ಷಮತೆ ಪರೀಕ್ಷೆಯ ಪರಿಸರವನ್ನು ಹೊಂದುವುದು.

ಕಾರ್ಯಕ್ಷಮತೆ ಪರೀಕ್ಷೆಯ ಬಗೆಗಿನ ಕಲ್ಪನೆಗಳು[ಬದಲಾಯಿಸಿ]

ಕೆಲವು ಅತಿ ಸಾಮಾನ್ಯವಾದ ಕಲ್ಪನೆಗಳನ್ನು ಕೆಳಗೆ ಕೊಟ್ಟಿದೆ:
1. ವ್ಯವಸ್ಥೆಯನ್ನು ಒಡೆಯಲು ಕಾರ್ಯಕ್ಷಮತೆ ಪರೀಕ್ಷೆಯನ್ನು ಮಾಡಲಾಗುತ್ತದೆ.

ಒತ್ತಡದ ಪರೀಕ್ಷೆಯನ್ನು ವ್ಯವಸ್ಥೆಯ ಬ್ರೇಕ್‌ ಪಾಯಿಂಟ್‌ಅನ್ನು ತಿಳಿದುಕೊಳ್ಳಲು ಮಾಡಲಾಗುತ್ತದೆ. ಇಲ್ಲವಾದರೆ ಸಾಮಾನ್ಯ ಕಾರ್ಯಾಭಾರ ಪರೀಕ್ಷೆಯನ್ನು ಬಳಕೆದಾರನ ನಿರ್ದಿಷ್ಟ ನಿರೀಕ್ಷಿತ ಕಾರ್ಯಭಾರದಲ್ಲಿ ಉಪಯೋಗದ ಚರ್ಯೆಯನ್ನು ತಿಳಿದುಕೊಳ್ಳಲು ಮಾಡಲಾಗುತ್ತದೆ. ಇತರೆ ಉಪೇಕ್ಷೆಗಳನ್ನು ಅವಲಂಬಿಸಿ, ಉದಾಹರಣೆಗೆ ಕೂಡಿಸಿದ ಕಾರ್ಯಾಭಾರದ ನಿರೀಕ್ಷೆ, ವಿಸ್ತೃತ ಸಮಯಕ್ಕೆ ಕಾರ್ಯಾಭಾರ ಮುಂದುವರೆದಾಗ ಶೀರ್ಷಕ, ಧಾರಣಶಕ್ತಿ ಸೋಕ್‌ ಅಥವಾ ಒತ್ತಡ ಪರೀಕ್ಷೆ ಅನಿವಾರ್ಯವಾಗಬಹುದು.

2. ಕಾರ್ಯಕ್ಷಮತೆ ಪರೀಕ್ಷೆಯನ್ನು ವ್ಯವಸ್ಥೆ ಏಕೀಕರಣ ಪರೀಕ್ಷೆಯ ನಂತರವೇ ಮಾಡಬೇಕು

ಉದ್ಯಮದಲ್ಲಿ ಬಹುತೇಕ ಇದೇ ರೂಢಿಯಾದರೂ ಸಹ, ಉಪಯೋಗವನ್ನು ಅಭಿವೃದ್ಧಿಪಡಿಸುವ ಪ್ರಾರಂಭಿಕ ಹಂತದಲ್ಲಿಯೇ ಕಾರ್ಯಕ್ಷಮತೆಯ ಪರೀಕ್ಷೆಯನ್ನೂ ಮಾಡಬಹುದು. ಈ ರೀತಿಯನ್ನು ’ಪ್ರಾರಂಭಿಕ ಕಾರ್ಯಕ್ಷಮತೆ ಪರೀಕ್ಷೆ’ ಎಂದು ಕರೆಯುತ್ತಾರೆ. ಈ ಪದ್ಧತಿಯು ಕಾರ್ಯಕ್ಷಮತೆಯ ಅಳತೆಗೋಲುಗಳನ್ನು ಗಮನದಲ್ಲಿಟ್ಟುಕೊಂಡು ಉಪಯೋಗದ ಸಮಗ್ರ ಬೆಳವಣಿಗೆಯು ಸಾದ್ಯವಾಗುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಒಂದು ಉಪಯೋಗದಲ್ಲಿರುವ ದೋಷವನ್ನು ಇನ್ನೇನು ಬಿಡುಗಡೆಯಾಗಲಿದೆ ಎನ್ನುವಾಗ ಕಂಡುಹಿಡಿದರೆ, ಆಗ ಆ ದೋಷವನ್ನು ತಿದ್ದಲು ತಗುಲುವ ವೆಚ್ಚವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.

3 ಕಾರ್ಯಕ್ಷಮತೆಯ ಪರೀಕ್ಷೆಯು ಕೇವಲ ಸ್ಕ್ರಿಪ್ಟ್‌ಗಳನ್ನು ತಯಾರಿಸುವ ಕಾರ್ಯವನ್ನು ಒಳಗೊಂಡಿರುತ್ತದೆ ಮತ್ತು ಉಪಯೋಗದಲ್ಲಿ ಯಾವ ಬದಲಾವಣೆಯಾದರೂ ಸ್ಕ್ರಿಪ್ಟ್‌ನಲ್ಲಿ ಸರಳವಾಗಿ ಬದಲಾಯಿಸಿಬಿಡಬಹುದು.

ಕಾರ್ಯಕ್ಷಮತೆಯ ಪರೀಕ್ಷೆ ಎನ್ನುವುದೇ ತಂತ್ರಾಂಶ ಉದ್ಯಮದಲ್ಲಿ ಈಗ ತಾನೆ ಬೆಳಕಿಗೆ ಬರುತ್ತಿರುವ ಒಂದು ವಿಜ್ಞಾನ. ಪ್ರಮುಖ ಎನಿಸಿದರೂ, ಸ್ಕ್ರಿಪ್ಟ್‌ ಮಾಡುವುದು ಕಾರ್ಯಕ್ಷಮತೆ ಪರೀಕ್ಷೆಯ ಒಂದು ಭಾಗವಷ್ಟೇ. ಯಾವುದೇ ಕಾರ್ಯಕ್ಷಮತೆಯ ಪರೀಕ್ಷಕನಿಗೆ ಯಾವ ಪರೀಕ್ಷೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ಮತ್ತು ಕಾರ್ಯಕ್ಷಮತೆಯ ಅಟಕಾವುಗಳನ್ನು ಗುರುತಿಸಲು ವಿವಿಧ ಕಾರ್ಯಕ್ಷಮತೆ ಕೌಂಟರ್‌ಗಳನ್ನು ವಿಶ್ಲೇಷಿಸುವುದು ಬಹುದೊಡ್ಡ ಸವಾಲು.

ಈ ಕಲ್ಪನೆಯ ಮತ್ತೊಂದು ಭಾಗವು ಉಪಯೋಗದ ಬದಲಾವಣೆಗಳು ಸ್ಕ್ರಿಪ್ಟ್‌ನಲ್ಲಿ ಸರಳ ಬದಲಾವಣೆಗಳಲ್ಲಿ ಪರಿಣಮಿಸುತ್ತದೆ ಎಂದು ಹೇಳಿರುವುದೂ ನಿಜವಲ್ಲ, ಏಕೆಂದರೆ ಯುಐ‌ನಲ್ಲಿ, ವಿಶೇಷವಾಗಿ ವೆಬ್‌ ಶಿಷ್ಟಾಚಾರದಲ್ಲಿ ಆಗುವ ಬದಲಾವಣೆಗಳಿಂದ ಸ್ಕ್ರಿಪ್ಟ್‌ಅನ್ನೇ ಸಂಪೂರ್ಣವಾಗಿ ಮೊದಲಿಂದ ಅಭಿವೃದ್ಧಿಪಡಿಸಬೇಕಾಗಬಹುದು. ಈ ಶಿಷ್ಟಾಚಾರಗಳು ವೆಬ್‌ ಸೇವಗಳು, ಸೀಬಲ್‌, ವೆಬ್‌ ಕ್ಲಿಕ್‌ ಮತ್ತು ಸ್ಕ್ರಿಪ್ಟ್‌, ಸಿಟ್ರಿಕ್ಸ್‌, ಸ್ಯಾಪ್‌ ಮುಂತಾದವುಗಳನ್ನು ಒಳಗೊಂಡಿದ್ದರೆ ಈ ತೊಂದರೆಯು ಇನ್ನೂ ದೊಡ್ಡದಾಗುತ್ತದೆ.

ತಂತ್ರಜ್ಞಾನ[ಬದಲಾಯಿಸಿ]

ಕಾರ್ಯಕ್ಷಮತೆ ಪರೀಕ್ಷೆ ತಂತ್ರಜ್ಞಾನವು ಒಂದು ಇಲ್ಲವೆ ಅದಕ್ಕಿಂತ ಹೆಚ್ಚು ಕಂಪ್ಯೂಟರ್‌ಗಳನ್ನು ಅಥವಾ ಯೂನಿಕ್ಸ್‌ ಸರ್ವರ್‌ಗಳನ್ನು ಇಂಜೆಕ್ಟರ್‌ಗಳನ್ನಾಗಿ ಬಳಸಿಕೊಳ್ಳುತ್ತವೆ – ಪ್ರತಿಯೊಂದೂ ಬಳಕೆದಾರರ ಸಂಖ್ಯೆಯ ಉಪಸ್ಥಿತಿಯನ್ನು ಅನುಕರಿಸುತ್ತಿರುತ್ತದೆ ಮತ್ತು ಸ್ವಯಂಚಾಲಿತ ವಹಿವಾಟು ಸರಣಿಯನ್ನು ನಡೆಸುತ್ತಿರುತ್ತದೆ (ವಿವಿಧ ರೀತಿಯ ಬಳಕೆದಾರರ ವಹಿವಾಟುಗಳನ್ನು ಅನುಕರಿಸುವುದಕ್ಕಾಗಿ ಇದನ್ನು ಸ್ಕ್ರಿಪ್ಟ್‌ ಅಥವಾ ಸ್ಕ್ರಿಪ್ಟ್‌ಗಳ ಸರಣಿಯನ್ನಾಗಿ ರೆಕಾರ್ಡ್‌ ಮಾಡಿರುತ್ತಾರೆ). ಸಾಮಾನ್ಯವಾಗಿ, ಒಂದು ಪ್ರತ್ಯೇಕ ಕಂಪ್ಯೂಟರ್‌ ಪರೀಕ್ಷಕನಾಗಿ ಕೆಲಸ ಮಾಡುತ್ತಿರುತ್ತದೆ, ಪ್ರತಿಯೊಂದು ಇಂಜೆಕ್ಟರ್‌ನೊಂದಿಗೆ ಸಹಕರಿಸುತ್ತ ಮೆಟ್ರಿಕ್‌ಗಳನ್ನು ಕಲೆಹಾಕುತ್ತದೆ ಮತ್ತು ವರದಿ ಮಾಡುವ ಕಾರ್ಯಕ್ಕಾಗಿ ಕಾರ್ಯಕ್ಷಮತೆ ಡೇಟಾಅನ್ನು ಒಟ್ಟುಗೂಡಿಸುತ್ತಿರುತ್ತದೆ. ಸಾಮಾನ್ಯವಾದ ಕ್ರಮವೆಂದರೆ – ಕೆಲವು ಕಾಲ್ಪನಿಕ ಬಳಕೆದಾರರೊಂದಿಗೆ ಪ್ರಾರಂಭಿಸುವುದು ಮತ್ತು ಕೆಲಕಾಲದ ನಂತರ ಸಂಖ್ಯೆಯನ್ನು ಒಂದು ಗರಿಷ್ಠಕ್ಕೆ ಏರಿಸುವುದು. ಕಾರ್ಯಭಾರದ ಜೊತೆಗೆ ಕಾರ್ಯಕ್ಷಮತೆಯು ಹೇಗೆ ಬದಲಾಗುತ್ತದೆ ಎಂಬುದನ್ನು ಪರೀಕ್ಷೆಯ ಫಲಿತಾಂಶವು ತಿಳಿಸುತ್ತದೆ, ಕೊಟ್ಟಿರುವ ಬಳಕೆದಾರರ ಸಂಖ್ಯೆಗೆ ಪ್ರತಿಕ್ರಿಯೆ ಸಮಯ ಎಷ್ಟು ಎಂಬ ಮಾದರಿಯಲ್ಲಿ. ಈ ರೀತಿಯ ಪರೀಕ್ಷೆಗಳನ್ನು ಮಾಡಲು ಹಲವಾರು ಸಲಕರಣೆಗಳು ಲಭ್ಯವಿದೆ. ಈ ವಿಭಾಗದಲ್ಲಿನ ಸಲಕರಣೆಗಳು ವ್ಯವಸ್ಥೆಯ ಎದುರಿಗೆ ನಿಜವಾದ ಬಳಕೆದಾರರನ್ನು ಅನುಕರಣೆಮಾಡುವ ಪರೀಕ್ಷೆಗಳನ್ನು ಜಾರಿಗೊಳಿಸುತ್ತವೆ. ಕೆಲವೊಮ್ಮೆ ಈ ಪರೀಕ್ಷೆಗಳು ವಿಲಕ್ಷಣಗಳನ್ನು ಬಹಿರಂಗಪಡಿಸಬಹುದು, ಉದಾಹರಣೆಗೆ ಸರಾಸರಿ ಪ್ರತಿಕ್ರಿಯೆ ಸಮಯವು ಒಪ್ಪಬಹುದಾದರೂ, ಕೆಲವು ಪ್ರಮುಖ ವಹಿವಾಟುಗಳು ಮುಗಿಯಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು – ಅಸಮರ್ಥ ಡೇಟಾನಿಧಿ ಪ್ರಶ್ನೆಗಳು, ಚಿತ್ರಗಳು ಮುಂತಾದವುಗಳಿಂದ ಆಗಬಹುದಾದ್ದು.

ಕಾರ್ಯಕ್ಷಮತೆ ಪರೀಕ್ಷೆಯು ಒತ್ತಡ ಪರೀಕ್ಷೆಯೊ೦ದಿಗೆ ಸೇರಿಕೊ೦ಡಿರಬಹುದಾಗಿದ್ದು, ಅ೦ಗೀಕೃತ ಭಾರವು ಅಧಿಕವಾದಾಗ ವ್ಯವಸ್ಥೆಯ ಘರ್ಷಣೆಯಾಗಬಹುದೇ? ಅಧಿಕ ಭಾರವನ್ನು ಕಡಿಮೆಗೊಳಿಸಿದಾಗ ಇದು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳಬಹುದು? ಇದು ಸಹಕಾರಿ ಹಾನಿಯಾಗುವ ರೀತಿಯಲ್ಲಿ ಇದು ವಿಫಲವಾಗಬಹುದೆ? ಎ೦ಬುದನ್ನು ನೋಡಬಹುದಾಗಿದೆ.

ವಿಮರ್ಶಾತ್ಮಕ ಕಾರ್ಯಕ್ಷಮತಾ ವಿನ್ಯಾಸವು ಸ್ಪ್ರೆಡ್‌ಶೀಟ್‌ನಲ್ಲಿಯ ಒಂದು ಅಪ್ಲಿಕೇಶನ್‌ನ ಚರ್ಯೆಯನ್ನು ವಿನ್ಯಾಸಗೊಳಿಸುವ ವಿಧಾನ.

ಈ ವಿನ್ಯಾಸವು ನಿರ್ವಹಣಾ ಸಂಪನ್ಮೂಲ ಕೋರಿಕೆಗಳ ಮಾಪನ (ಸಿಪಿಯು, ಡಿಸ್ಕ್ I/O, ಎಲ್‌ಎಎನ್, ಡಬ್ಲ್ಯುಎಎನ್ )ಗಳಿ೦ದ ತು೦ಬಿದ್ದು, ನಿರ್ವಹಣಾ-ಮ್ಯಾಕ್ಸ್ ನಿ೦ದ ತೂಕ ಮಾಡಲ್ಪಟ್ಟಿದೆ.(ಪ್ರತಿ ಒಂದು ಘ೦ಟೆಯ ಲೆಕ್ಕದಲ್ಲಿ ವ್ಯವಹಾರ ನಿರ್ವಹಣೆ) ತೂಕಗೊಳಿಸಲ್ಪಟ್ಟ ನಿರ್ವಹಣಾ ಸಂಪನ್ಮೂಲ ಕೋರಿಕೆಗಳು ಪ್ರತಿ ಘ೦ಟೆಯ ಸಂಪನ್ಮೂಲ ಕೋರಿಕೆಗಳ ಗಳಿಕೆಗಾಗಿ ಸೇರಿಸಲ್ಪಟ್ಟಿದ್ದು, ಸ೦ಪನ್ಮೂಲ ಭಾರದ ಗಳಿಕೆಗಾಗಿ ತಾಸಿನ ಸ೦ಪನ್ಮೂಲ ಸಾಮರ್ಥ್ಯದಿ೦ದ ವಿಭಾಗಿಸಲ್ಪಟ್ಟಿದೆ. ಪ್ರತಿಕ್ರಿಯಾ ಸಮಯ ವಿಧಾನವನ್ನು ಬಳಸಿ (R=S/(1-U), R= ರೆಸ್ಪಾನ್ಸ್ ಟೈಮ್, S= ಸರ್ವೀಸ್ ಟೈಮ್,U= ಲೋಡ್ )ಪ್ರತಿಕ್ರಿಯಾ ಸಮಯವು ಕಾರ್ಯನಿರ್ವಹಣಾ ಪರೀಕ್ಷೆಗಳಿ೦ದ ಕ್ಯಾಲಿಬ್ರೇಟ್ ಹಾಗೂ ಲೆಕ್ಕಹಾಕಲ್ಪಟ್ಟಿರಬಹುದಾಗಿದೆ. ವಿನ್ಯಾಸ ಆಯ್ಕೆಗಳ ಪರಿಮಾಣ ನಿರ್ಧರಿಸುವಿಕೆಗೆ ವಿಮರ್ಶಾತ್ಮಕ ಕಾರ್ಯಕ್ಷಮತಾ ವಿನ್ಯಾಸವು ಅವಕಾಶ ನೀಡುತ್ತದೆ ಹಾಗೂ ಸಿಸ್ಟಮ್ ಗಾತ್ರವು ನಿರ್ದಿಷ್ಟ ಅಥವಾ ನಿರೀಕ್ಷಿತ ವ್ಯವಹಾರ ಬಳಕೆಯ ಮೇಲೆ ನಿರ್ಧರಿತವಾಗಿದೆ. ಹೀಗಿದ್ದರೂ ಇದು ಹಾರ್ಡ್‌ವೇರ್ ಪ್ಲಾಟ್‌ಫಾರ್ಮ್‌ಗಳ ಕೂಲಂಕಷ ತಿಳುವಳಿಕೆಯನ್ನು ಬಯಸುತ್ತಾದರೂ, ಇದು ಕಾರ್ಯಕ್ಷಮತೆ ಪರೀಕ್ಷೆಗಿ೦ತ ಹೆಚ್ಚು ವೇಗವುಳ್ಳದ್ದು ಹಾಗೂ ಕಡಿಮೆ ಬೆಲೆಯದ್ದೂ ಆಗಿದೆ.

ಕಾರ್ಯಕ್ಷಮತೆಯ ನಿರ್ದಿಷ್ಟತೆಗಳು[ಬದಲಾಯಿಸಿ]

ಯಾವುದೇ ಕಾರ್ಯಕ್ಷಮತೆ ಪರೀಕ್ಷೆಯ ಯೋಜನೆಯಲ್ಲಿ ಕಾರ್ಯಕ್ಷಮತೆಯ ನಿರ್ದಿಷ್ಟತೆಗಳನ್ನು (ಅವಶ್ಯಕತೆಗಳನ್ನು) ವಿವರಿಸುವುದು ಬಹಳ ಮುಖ್ಯ. ಇದನ್ನು ಯಾವುದೇ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ, ವಿನ್ಯಾಸದ ಕೆಲಸಗಳನ್ನು ಪ್ರಾರಂಭಿಸುವ ಮೊದಲು, ಅವಶ್ಯಕತೆಗಳನ್ನು ಅಭಿವೃದ್ಧಿಪಡಿಸುವ ಹಂತದಲ್ಲಿ ಇದನ್ನು ಮಾಡುವುದು ಆದರ್ಶನೀಯ. ಹೆಚ್ಚಿನ ವಿವರಗಳಿಗಾಗಿ ಕಾರ್ಯಕ್ಷಮತೆ ಎಂಜಿನಿಯರಿಂಗ್‌‌ಅನ್ನು ನೋಡಿ.

ಆದರೂ, ಕಾರ್ಯಕ್ಷಮತೆಯ ಪರೀಕ್ಷೆಯನ್ನು ಸಾಮಾನ್ಯವಾಗಿ ಒಂದು ನಿರ್ದಿಷ್ಟತೆಗಾಗಿ ಮಾಡುವುದಿಲ್ಲ ಅಂದರೆ ಒಂದು ಕೊಟ್ಟಿರುವ ಬಳಕೆದಾರರ ಸಂಖ್ಯೆಗೆ ಗರಿಷ್ಠ ಒಪ್ಪಬಹುದಾದ ಪ್ರತಿಕ್ರಿಯೆ ಸಮಯ ಏನಿರಬೇಕು ಎಂಬುದನ್ನು ಯಾರೊಬ್ಬರೂ ಹೇಳಿರುವುದಿಲ್ಲ. ಕಾರ್ಯಕ್ಷಮತೆ ಪರೀಕ್ಷೆಯನ್ನು ಅನೇಕ ವೇಳೆ ಕಾರ್ಯಕ್ಷಮತೆಯ ರೂಪವನ್ನು ಹೊಂದಿಸಲು ಬಳಸಲಾಗುತ್ತದೆ. “ಅತ್ಯಂತ ದುರ್ಬಲ ಕೊಂಡಿ”ಯನ್ನು ಕಂಡುಹಿಡಿಯುವುದು ಇದರ ಉದ್ದೇಶ – ನಿಸ್ಸಂದೇಹವಾಗಿ ವ್ಯವಸ್ಥೆಯ ಒಂದು ವಿಶೇಷ ಭಾಗವಿರುತ್ತದೆ, ಅದನ್ನು ಶೀಘ್ರವಾಗಿ ಪ್ರತಿಕ್ರಿಯಿಸುವಂತೆ ಮಾಡಿದರೆ, ಸಂಪೂರ್ಣ ವ್ಯವಸ್ಥೆಯೇ ಶೀಘ್ರವಾಗಿ ಕೆಲಸ ಮಾಡಲು ತೊಡಗುತ್ತದೆ. ಕೆಲವೊಮ್ಮೆ ಈ ಮುಖ್ಯ ರೀತಿಯನ್ನು ವ್ಯವಸ್ಥೆಯ ಯಾವ ಭಾಗವು ಪ್ರತಿನಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಕೆಲವು ಪರೀಕ್ಷಾ ಸಾಧನಗಳು ಸರ್ವರ್‌ನ (ದಳ್ಳಾಳಿಯ) ಮೇಲೆ ಕೆಲಸ ಮಾಡುತ್ತಾ, ವಹಿವಾಟುಗಳ ಸಂಖ್ಯೆ, ಡೇಟಾನಿಧಿಯನ್ನು ಎಷ್ಟು ಬಾರಿ ಸಂಪರ್ಕಿಸಿದ್ದಾರೆ ಎಂಬ ವಿಷಯ, ನೆಟ್‌ವರ್ಕ್‌ ಮೇಲುವೆಚ್ಚ ಮುಂತಾದುವನ್ನು ವರದಿ ಮಾಡುವ ಸಲಕರಣೆಗಳನ್ನು (ಅಥವಾ ಅಂತಹ ಸಲಕರಣೆಗಳನ್ನು ಒದಗಿಸುವ ಮೇಲು-ಸಾಧನಗಳನ್ನು) ಹೊಂದಿರುತ್ತವೆ, ಮತ್ತು ಕಾರ್ಯಕ್ಷಮತೆಯ ಕಚ್ಚಾ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಬಹುದಾದ ಇತರೆ ಸರ್ವರ್‌ ನಿಯಂತ್ರಕಗಳನ್ನು ಹೊಂದಿರುತ್ತವೆ. ಈ ರೀತಿಯ ಸಲಕರಣೆಗಳಿಲ್ಲದಿದ್ದ ಪಕ್ಷದಲ್ಲಿ, ಒಬ್ಬರು ’ವಿಂಡೋಸ್‌ ಟಾಸ್ಕ್‌ ಮ್ಯಾನೇಜರ್‌’ಗೆಯೇ ಅಂಟಿಕೊಂಡು ಕಾರ್ಯಕ್ಷಮತೆ ಪರೀಕ್ಷೆಯು ಎಷ್ಟು ಸಿಪಿಯೂ ಲೋಡ್‌ಅನ್ನು ಉತ್ಪತ್ತಿ ಮಾಡುತ್ತಿದೆ ಎಂಬುದನ್ನು ನೋಡುತ್ತಿರಬೇಕಾಗುತ್ತದೆ (ಒಂದು ವಿಂಡೋಸ್‌ ವ್ಯವಸ್ಥೆ ಪರೀಕ್ಷೆಗೊಳಗಾಗುತ್ತಿದೆ ಎಂದುಕೊಂಡರೆ).

ತಮ್ಮ ತೊಂದರೆಯ ಬಗ್ಗೆ ಸರಿಯಾದ ವಿಶ್ಲೇಷಣೆಯನ್ನೇ ಮಾಡದೆ ತಂತ್ರಾಂಶವನ್ನು ಅತ್ಯುತ್ತಮ ಗೊಳಿಸಲು ಹೋದ ಕಂಪನಿಯೊಂದರ ಬಗ್ಗೆ ಕಾಲ್ಪನಿಕ ಕಥೆಯೊಂದಿದೆ. ಅವರ ವ್ಯವಸ್ಥೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದ ‘ಐಡಲ್‌ ಲೂಪ್‌’ಅನ್ನು ಅವರು ಪುನಾರಚಿಸಿದರು, ಆದರೆ ಅತ್ಯಂತ ಸಮರ್ಥ ಐಡಲ್‌ ಲೂಪ್‌ ಹೊಂದಿದ್ದರೂ ಸಹ ಒಟ್ಟಾರೆ ಕಾರ್ಯಕ್ಷಮತೆಯನ್ನು ಒಂದು ಬಿಂದುಮಾತ್ರದಷ್ಟೂ ಸುಧಾರಿಸಲಾಗಲಿಲ್ಲ!

ಕಾರ್ಯಕ್ಷಮತೆ ಪರೀಕ್ಷೆ ಯನ್ನು ಅಂತರ್ಜಾಲದಲ್ಲಿಯೇ ಮಾಡಬಹುದು, ಮತ್ತು ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಮಾಡಬಹುದು, ಏಕೆಂದರೆ ಅಂತರ್ಜಾಲದ ಪ್ರತಿಕ್ರಿಯೆ ಸಮಯವೂ ಪ್ರಾದೇಶಿಕವಾಗಿ ಬದಲಾಗುತ್ತದೆ ಎಂಬುದು ಗೊತ್ತಿದೆ. ಸಾಮಾನ್ಯ ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಆಗಬಹುದಾದ ನಿಧಾನವನ್ನು ಒಳತರುವುದಕ್ಕಾಗಿ ಸಂಯೋಜನೆ ಮಾಡಿ, ಸ್ವಸ್ಥಳದಲ್ಲಿಯೂ ಈ ಪರೀಕ್ಷೆಯನ್ನು ಮಾಡಬಹುದು. ನೈಜತೆಯ ದೃಷ್ಟಿಯಿಂದ ಈ ವ್ಯವಸ್ಥೆಗಳಿಗೆ ಕಾರ್ಯಾಭಾರವನ್ನು ಕೊಡಬೇಕು. ಉದಾಹರಣೆಗೆ, ವ್ಯವಸ್ಥೆಯ 50% ಬಳಕೆದಾರರು 56ಕೆ ಮೊಡೆಮ್‌ ಸಂಪರ್ಕದಿಂದ ಮತ್ತು ಉಳಿದರ್ಧ ಬಳಕೆದಾರರು ಟಿ1ನಿಂದ ವ್ಯವಸ್ಥೆಯನ್ನು ಸಂಪರ್ಕಿಸುತ್ತಿದ್ದರೆ, ಆಗ ಕಾರ್ಯಾಭಾರದ ಇಂಜೆಕ್ಟರ್‌ಗಳು (ನಿಜವಾದ ಬಳಕೆದಾರರನ್ನು ಮರುಸೃಷ್ಟಿಸುವ ಕಂಪ್ಯೂಟರ್‌ಗಳು) ಅವೇ ಸಂಪರ್ಕಗಳಿಂದ ಕಾರ್ಯಾಭಾರವನ್ನು ಕೊಡಬೇಕು (ಆದರ್ಶನೀಯ) ಅಥವಾ ಅದೇ ಬಳಕೆದಾರನ ರೂಪವನ್ನು ಪಾಲಿಸುತ್ತ, ಕೃತಕವಾಗಿ ಆ ಸಂಪರ್ಕಗಳ ನೆಟ್‌ವರ್ಕ್‌ ಗುಪ್ತತೆಯನ್ನು ಸೃಷ್ಟಿಸಬೇಕು.

ಯಾವಾಗಲೂ, ಪ್ರಮುಖ ಸಮಯಗಳಲ್ಲಿ ವ್ಯವಸ್ಥೆಯನ್ನು ಬಳಸುವ ನಿರೀಕ್ಷಿತ ಬಳಕೆದಾರರ ಗರಿಷ್ಠ ಸಂಖ್ಯೆಯನ್ನು ಹೊಂದಿರುವುದು ಅತಿ ಮುಖ್ಯ. ಗರಿಷ್ಠ ಅನುಮತಿಸತಕ್ಕ 95 ಶೇಕಡಾ ಪ್ರತಿಕ್ರಿಯೆ ಸಮಯವು ಯಾವ ಯಾವ ಅಂಶಗಳಿಂದ ಆಗಿದೆ ಎನ್ನುವ ಹೇಳಿಕೆಯೂ ಇದ್ದರೆ, ಆಗ ಪ್ರಸ್ತಾಪಿಸಿದ ವ್ಯವಸ್ಥೆಯು ನಿರ್ದಿಷ್ಟತೆಗಳನ್ನು ಮುಟ್ಟಿದೆಯೋ ಇಲ್ಲವೋ ಎಂಬುದನ್ನು ಇಂಜೆಕ್ಟರ್‌ ಸಂಯೋಜನೆಯ ಸಹಾಯದಿಂದ ಪರೀಕ್ಷಿಸಬಹುದು.

ಕಾರ್ಯಕ್ಷಮತೆಯ ನಿರ್ದಿಷ್ಟತೆಗಳು ಕನಿಷ್ಠವೆಂದರೆ ಈ ಪ್ರಶ್ನೆಗಳನ್ನು ಕೇಳಬೇಕು:

  • ಸವಿವರವಾಗಿ ಕಾರ್ಯಕ್ಷಮತೆ ಪರೀಕ್ಷೆಯ ಸಾಧ್ಯತೆ ಎಷ್ಟು? ಯಾವ ಉಪವ್ಯವಸ್ಥೆಗಳು, ಇಂಟರ್‌ಫೇಸ್‌ಗಳು, ಭಾಗಗಳು ಮುಂತಾದುವು ಪರೀಕ್ಷೆಯ ಸಾಧ್ಯತೆಯ ಒಳಗೆ ಅಥವಾ ಹೊರಗೆ ಇರಬಹುದು?
  • ಬಳಕೆದಾರರ ಇಂಟರ್‌ಫೇಸ್‌ಗಳು ಇದ್ದಲ್ಲಿ, ಅಂತಹ ಪ್ರತಿಯೊಂದಕ್ಕೆ ಎಷ್ಟು ಕನ್‌ಕರೆನ್ಸಿ ಬಳಕೆದಾರರನ್ನು ನಿರೀಕ್ಷಿಸಬಹುದು (ಅತಿಹೆಚ್ಚು ಮತ್ತು ಸಾಮಾನ್ಯ ಸಂಖ್ಯೆಯನ್ನು ತಿಳಿಸಬೇಕು)?
  • ವ್ಯವಸ್ಥೆಯು (ಯಂತ್ರಾಂಶ) ನೋಡಲು ಹೇಗಿದೆ (ಎಲ್ಲ ಸರ್ವರ್‌ ಮತ್ತು ನೆಟ್‌ವರ್ಕ್‌ ಸಾಧನಗಳ ಸಂಯೋಜನೆಗಳನ್ನು ತಿಳಿಸಿ)?
  • ಉಪಯೋಗದ ಪ್ರತಿಯೊಂದು ಅಂಶದ ಕಾರ್ಯಾಭಾರ ಮಿಶ್ರಣ ಎಷ್ಟು? (ಉದಾಹರಣೆಗೆ: 20% ಲಾಗಿನ್‌, 40% ಹುಡುಕಾಟ, 30% ಆಯ್ಕೆ, 10% ಚೆಕ್‌ಔಟ್‌).
  • ವ್ಯವಸ್ಥೆಯ ಕಾರ್ಯಾಭಾರ ಮಿಶ್ರಣ ಎಂಥದ್ದು? [ಅನೇಕ ಕಾರ್ಯಾಭಾರಗಳನ್ನು ಒಂದು ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ನಕಲು ಮಾಡಬಹುದು] (ಉದಾಹರಣೆಗೆ: 30% ಕಾರ್ಯಾಭಾರ ಎ, 20% ಕಾರ್ಯಾಭಾರ ಬಿ, 50% ಕಾರ್ಯಾಭಾರ ಸಿ)
  • ಎಲ್ಲಾ/ಅಥವಾ ಯಾವುದಾದರೂ ಹಿನ್ನೆಲೆ ಬ್ಯಾಚ್‌ ಪ್ರಕ್ರಿಯೆಗಳಿಗೆ ಬೇಕಾಗುವ ಸಮಯವೆಷ್ಟು? (ಸಾಮಾನ್ಯ ಮತ್ತು ಅತ್ಯಂತ ಹೆಚ್ಚಿನ ಸಮಯಗಳನ್ನು ತಿಳಿಸಬೇಕು)?

ಕೈಗೊಳ್ಳಬೇಕಾದ ಕಾರ್ಯಗಳು[ಬದಲಾಯಿಸಿ]

ಅಂತಹ ಒಂದು ಪರೀಕ್ಷೆಯನ್ನು ನಡೆಸಲು ಕೈಗೊಳ್ಳಬೇಕಾದ ಕೆಲಸಗಳೆಂದರೆ:

  • ಹೊರಗಿನ ಸಂಪತ್ತನ್ನು ಬಳಸಬೇಕೋ ಅಥವಾ ಒಳಗಿನ ಸಂಪತ್ತನ್ನು ಬಳಸಬೇಕೋ ಎಂದು ನಿರ್ಧರಿಸುವುದು, ತಮ್ಮಲ್ಲಿ ಇರುವ ಪರಿಣತಿಯನ್ನು ಅವಲಂಬಿಸಿ (ಹಾಗೆಯೇ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು)
  • ಕಾರ್ಯಕ್ಷಮತೆಯ ಆವಶ್ಯಕತೆಗಳನ್ನು (ನಿರ್ದಿಷ್ಟತೆಗಳನ್ನು), ಬಳಕೆದಾರರಿಂದ ಮತ್ತು/ಅಥವಾ ವ್ಯವಹಾರ ವಿಶ್ಲೇಷಕರಿಂದ ಸಂಗ್ರಹಿಸಿ ಅಥವಾ ನಿರ್ಧರಿಸಿ.
  • ಆವಶ್ಯಕತೆಗಳು, ಸಂಪತ್ತು, ಸಮಯದ ಗಡುವು ಮತ್ತು ಮೈಲಿಗಲ್ಲುಗಳನ್ನು ಒಳಗೊಂಡ ಒಂದು ಉನ್ನತ ಮಟ್ಟದ ನಕಾಶೆಯನ್ನು (ಅಥವಾ ಯೋಜನೆ ಚಾರ್ಟರ್‌ಅನ್ನು) ಅಭಿವೃದ್ಧಿಪಡಿಸಿ.
  • ಒಂದು ಸವಿವರ ಕಾರ್ಯಕ್ಷಮತೆ ಪರೀಕ್ಷೆಯ ಯೋಜನೆಯನ್ನು ಅಭಿವೃದ್ಧಿಪಡಿಸಿ(ಸವಿವರ ಚಿತ್ರಣಗಳು ಮತ್ತು ಪರೀಕ್ಷಾ ಪರಿಸ್ಥಿತಿಗಳು, ಕಾರ್ಯಾಭಾರಗಳು, ಪರಿಸರದ ವಿಷಯ ಮುಂತಾದವು ಸೇರಿರಲಿ)
  • ಪರೀಕ್ಷೆಯ ಸಲಕರಣೆ(ಗಳ)ನ್ನು ಆಯ್ದುಕೊಳ್ಳಿ
  • ಬೇಕಾದ ಪರೀಕ್ಷಾ ಡೇಟಾವನ್ನು ಗುರುತಿಸಿಕೊಳ್ಳಿ ಮತ್ತು ಚಾರ್ಟರ್‌ (ಇದನ್ನು ಸಾಮಾನ್ಯವಾಗಿ ಉಪೇಕ್ಷಿಸಲಾಗುತ್ತದೆ, ಆದರೆ ಅನೇಕ ವೇಳೆ ಹಾಗೆ ಮಾಡುವುದರಿಂದ ಒಂದು ಕಾರ್ಯಕ್ಷಮತೆ ಪರೀಕ್ಷೆಯೇ ಸಾಯುತ್ತದೆ)
  • ಪರೀಕ್ಷೆಗೊಳಪಡುವ ಪ್ರತಿಯೊಂದು ಉಪಯೋಗ/ಭಾಗಕ್ಕೆ, ಪರೀಕ್ಷೆಯ ಆಯ್ದ ಸಾಧನಗಳು ಮತ್ತು ನೀತಿಯನ್ನು ಬಳಸಿಕೊಂಡು ಸಾರಾಂಶ ಸ್ಕ್ರಿಪ್ಟ್‌ಗಳನ್ನು ಅಭಿವೃದ್ಧಿಪಡಿಸುವುದು.
  • ಎಲ್ಲ ಅಧೀನ ವಿಷಯಗಳು ಮತ್ತು ಸಂಬಂಧಪಟ್ಟ ಸಮಯದ ಗಡುವುಗಳನ್ನೊಳಗೊಂಡ ಸವಿವರ ಕಾರ್ಯಕ್ಷಮತೆ ಪರೀಕ್ಷೆಯ ಯೋಜನೆ ನಕಾಶೆಯನ್ನು ಅಭಿವೃದ್ಧಿಪಡಿಸುವುದು.
  • ಇಂಜೆಕ್ಟರ್‌/ನಿಯಂತ್ರಕಗಳನ್ನು ಸ್ಥಾಪಿಸುವುದು ಮತ್ತು ಸಂಯೋಜಿಸುವುದು
  • ಪರೀಕ್ಷಾ ಪರಿಸರವನ್ನು ಸಂಯೋಜಿಸಿ (ಉತ್ಪಾದನಾ ಸ್ಥಳಕ್ಕೆ ಸಮಾನವಾದ ಯಂತ್ರಾಂಶಗಳ ಸಂಯೋಜನೆ ಇರುವುದು ಆದರ್ಶನೀಯ), ರೂಟರ್‌ ಸಂಯೋಜನೆ, ನಿಶ್ಯಬ್ದ ನೆಟ್‌ವರ್ಕ್‌ (ಬೇರೆ ಬಳಕೆದಾರರು ಫಲಿತಾಂಶಗಳನ್ನು ಕಲುಷಿತಗೊಳಿಸುವುದನ್ನು ತಪ್ಪಿಸಲು), ಸರ್ವರ್‌ ಸಲಕರಣೆಗಳನ್ನು ಸಿದ್ಧಪಡಿಸುವುದು, ಡೇಟಾನಿಧಿ ಪರೀಕ್ಷೆಯ ಸೆಟ್‌ಗಳನ್ನು ಅಭಿವೃದ್ಧಿಪಡಿಸುವುದು ಮುಂತಾದುವು.
  • ಪರೀಕ್ಷೆಗಳನ್ನು ನಡೆಸುವುದು – ಬಹುಶಃ‌ ಮತ್ತೆ ಮತ್ತೆ ಮಾಡಬೇಕಾಗಬಹುದು, ಯಾವುದಾದರೂ ಕೈಬಿಟ್ಟುಹೋದ ಅಂಶಗಳಿಂದ ಫಲಿತಾಂಶದ ಮೇಲೆ ಪ್ರಭಾವವಾಗುತ್ತದೆಯೇ ಎಂದು ನೋಡಲು.
  • ಫಲಿತಾಂಶವನ್ನು ವಿಶ್ಲೇಷಿಸುವುದು - ಸಫಲವೋ/ಇಲ್ಲವೋ ಎಂದು, ಅಥವಾ ಮುಖ್ಯವಾದ ರೀತಿಯನ್ನು ಹುಡುಕುವುದು ಮತ್ತು ಸರಿಪಡಿಸುವ್ ಅ ಕ್ರಮವನ್ನು ಶಿಫಾರಸು ಮಾಡುವುದು.

ಕಾರ್ಯವಿಧಾನ[ಬದಲಾಯಿಸಿ]

ಕಾರ್ಯಕ್ಷಮತೆ ಪರೀಕ್ಷೆಯ ವೆಬ್‌ ಉಪಯೋಗಗಳ ಕಾರ್ಯವಿಧಾನ[ಬದಲಾಯಿಸಿ]

ಮೈಕ್ರೊಸಾಫ್ಟ್‌ ಡೆವೆಲಪರ್‌ ನೆಟ್‌ವರ್ಕ್‌ನ ಪ್ರಕಾರ ಕಾರ್ಯಕ್ಷಮತೆ ಪರೀಕ್ಷೆಯ ಕಾರ್ಯವಿಧಾನ ವು ಇವುಗಳನ್ನು ಒಳಗೊಂಡಿರುತ್ತದೆ:

  • ಕಾರ್ಯ 1. ಪರೀಕ್ಷೆಯ ಪರಿಸರವನ್ನು ಗುರುತಿಸಿಕೊಳ್ಳಿ ಭೌತಿಕ ಪರೀಕ್ಷಾ ಪರಿಸರವನ್ನು ಮತ್ತು ಉತ್ಪಾದನಾ ಪರಿಸರವನ್ನು ಹಾಗೆಯೇ ಪರೀಕ್ಷಾ ತಂಡಕ್ಕೆ ದೊರಕಬಹುದಾದ ಸಲಕರಣೆಗಳು ಮತ್ತು ಸಂಪತ್ತನ್ನು ಗುರುತಿಸಿಕೊಳ್ಳಿ. ಭೌತಿಕ ಪರಿಸರವು ತಂತ್ರಾಂಶ, ಯಂತ್ರಾಂಶ, ಮತ್ತು ನೆಟ್‌ವರ್ಕ್‌ ಸಂಯೋಜನೆಗಳನ್ನು ಹೊಂದಿರುತ್ತವೆ. ಸಂಪೂರ್ಣ ಪರೀಕ್ಷಾ ಪರಿಸರವನ್ನು ತಿಳಿದುಕೊಂಡಿದ್ದಲ್ಲಿ ಸಮರ್ಥ ಪರೀಕ್ಷಾ ವಿನ್ಯಾಸ ಮತ್ತು ಕಾರ್ಯಯೋಜನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಯೋಜನೆಯ ಮೊದಲಿನಲ್ಲಿಯೇ ಸವಾಲುಗಳನ್ನು ಕಂಡುಕೊಳ್ಳಲು ಸಹಕರಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಯೋಜನೆಯ ಜೀವನ ಚಕ್ರ ಮುಗಿಯುವವರೆಗೂ ಆಗಾಗ್ಗೆ ಈ ಹಂತಕ್ಕೆ ಬರುತ್ತಿರಬೇಕಾಗುತ್ತದೆ.
  • ಕಾರ್ಯ 2. ಕಾರ್ಯಕ್ಷಮತೆಯನ್ನು ಒಪ್ಪಿಕೊಳ್ಳುವ ಅಳತೆಗೋಲುಗಳನ್ನು ಕಂಡುಹಿಡಿಯಿರಿ. ಪ್ರತಿಕ್ರಿಯೆ ಸಮಯ, ಥ್ರೋಪುಟ್‌, ಸಂಪತ್ತು ಬಳಕೆ ಗುರಿ ಮತ್ತು ಅಡೆತಡೆಗಳನ್ನು ಗುರುತಿಸಿಕೊಳ್ಳಿ. ಸಾಮಾನ್ಯವಾಗಿ, ಪ್ರತಿಕ್ರಿಯೆ ಸಮಯವು ಬಳಕೆದಾರರು ಕಾಳಜಿ ವಹಿಸಬೇಕಾದ ವಿಷಯ, ಥ್ರೋಪುಟ್‌ ವ್ಯವಹಾರ ಸಂಬಂಧಪಟ್ಟ ವಿಷಯ, ಮತ್ತು ಸಂಪತ್ತಿನ ಬಳಕೆ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯ. ಜೊತೆಗೆ, ಆ ಧ್ಯೇಯ ಮತ್ತು ಅಡೆತಡೆಗಳಲ್ಲಿ ಗುರುತಿಸಿರದ ಯಶಸ್ಸಿನ ಅಳತೆಗೋಲುಗಳನ್ನೂ ಗುರುತಿಸಿ; ಉದಾಹರಣೆಗೆ, ಕಾರ್ಯಕ್ಷಮತೆ ಪರೀಕ್ಷೆಯನ್ನು ಬಳಸಿಕೊಂಡು ಸಂಯೋಜನೆಯ ಯಾವ ಸಂಧಿಯಿಂದ ಕಾರ್ಯಕ್ಷಮತೆಯ ಅತ್ಯುಚ್ಛ ಲಕ್ಷಣಗಳು ಹೊರಬರುತ್ತವೆ ಎಂಬುದನ್ನು ಗುರುತಿಸುವುದು.
  • ಕಾರ್ಯ 3. ಯೋಜನೆ ಮತ್ತು ವಿನ್ಯಾಸ ಪರೀಕ್ಷೆ. ಪ್ರಮುಖ ಸನ್ನಿವೇಶಗಳನ್ನು ಕಂಡುಹಿಡಿದುಕೊಳ್ಳಿ, ಪ್ರತಿನಿಧಿ ಬಳಕೆದಾರರ ಪೈಕಿ ವ್ಯತ್ಯಯಗಳನ್ನು ಮತ್ತು ಆ ವ್ಯತ್ಯಯಗಳನ್ನು ಪುನಾರಚಿಸುವುದು ಹೇಗೆಂಬುದನ್ನೂ ನಿರ್ಧರಿಸಿಕೊಳ್ಳಿ, ಪರೀಕ್ಷಾ ಡೇಟಾವನ್ನು ವ್ಯಾಖ್ಯಾನಿಸಿ, ಮತ್ತು ಸಂಗ್ರಹಿಸಬೇಕಾದ ಮೆಟ್ರಿಕ್‌ಗಳನ್ನು ನಿಯಮಿಸಿಕೊಳ್ಳಿ. ಈ ಮಾಹಿತಿಯನ್ನು, ಮಾಡುವ, ಜಾರಿಗೊಳಿಸುವ ಮತ್ತು ವಿಶ್ಲೇಷಿಸುವ ವ್ಯವಸ್ಥೆಯ ಒಂದು ಅಥವಾ ಹೆಚ್ಚಿನ ನಮೂನೆಗಳನ್ನಾಗಿ ಮಾಡಿಕೊಳ್ಳಿ.
  • ಕಾರ್ಯ 4. ಪರೀಕ್ಷಾ ಪರಿಸರವನ್ನು ಸಂಯೋಜಿಸಿ. ಪರೀಕ್ಷೆಗೆ ಬೇಕಾದ ಲಕ್ಷಣಗಳು ಮತ್ತು ಸಲಕರಣೆಗಳು ದೊರಕುತ್ತಾ ಹೋದಂತೆ ಪ್ರತಿಯೊಂದು ನೀತಿಯನ್ನು ಜಾರಿಗೊಳಿಸಲು ಬೇಕಾದ ಪರಿಸರ, ಸಲಕರಣೆಗಳು ಮತ್ತು ಸಂಪತ್ತನ್ನು ಸಂಯೋಜಿಸಿಕೊಳ್ಳಿ.
  • ಕಾರ್ಯ 5. ಪರೀಕ್ಷಾ ವಿನ್ಯಾಸವನ್ನು ಅಳವಡಿಸಿ. ಪರೀಕ್ಷಾ ವಿನ್ಯಾಸದ ಪ್ರಕಾರ ಕಾರ್ಯಕ್ಷಮತೆ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿ.
  • ಕಾರ್ಯ 6. ಪರೀಕ್ಷೆಯನ್ನು ನಡೆಸಿ . ನಿಮ್ಮ ಪರೀಕ್ಷೆಯನ್ನು ನಡೆಸಿ ಮತ್ತು ನಿಯಂತ್ರಿಸಿ. ಪರೀಕ್ಷೆಗಳು, ಪರೀಕ್ಷಾಡೇಟಾ, ಮತ್ತು ಫಲಿತಾಂಶ ಸಂಗ್ರಹಣೆಯನ್ನು ಸ್ಥಿರೀಕರಿಸಿ. ಪರೀಕ್ಷೆಗಳನ್ನು ಮತ್ತು ಪರೀಕ್ಷಾ ಪರಿಸರವನ್ನು ನಿರ್ವಹಿಸುತ್ತಲೇ ಸ್ಥಿರೀಕೃತ ಪರೀಕ್ಷೆಗಳನ್ನು ವಿಶ್ಲೇಷಣೆಗೆ ಒಳಪಡಿಸಿ.
  • ಕಾರ್ಯ 7. ಫಲಿತಾಂಶವನ್ನು ವಿಶ್ಲೇಷಿಸಿ, ತಿದ್ದಿ, ಮತ್ತು ಮರುಪರೀಕ್ಷಿಸಿ. ಫಲಿತಾಂಶ ಡೇಟಾವನ್ನು ವಿಶ್ಲೇಷಿಸಿ, ಸರಿಪಡಿಸಿ ಮತ್ತು ಹಂಚಿಕೊಳ್ಳಿ. ಬದಲಾವಣೆಯನ್ನು ಮಾಡಿ ಮತ್ತು ಮರುಪರೀಕ್ಷಿಸಿ. ಸುಧಾರಿಸಿದೆಯೋ ಅಥವಾ ಮತ್ತೂ ಹಾಳಾಗಿದೆಯೋ? ಮಾಡಿದ ಪ್ರತಿಯೊಂದು ಸುಧಾರಣೆಯೂ ಹಿಂದಿನ ಸುಧಾರಣೆಗಿಂತ ಸಣ್ಣದೊಂದು ಸುಧಾರಣೆಯನ್ನು ನೀಡುತ್ತದೆ. ಹಾಗಾದರೆ ನಿಲ್ಲಿಸುವುದು ಯಾವಾಗ? ಮುಂದೆ ದಾರಿಯೇ ಇಲ್ಲ ಎಂದಾಗ, ಆಗ ಆಯ್ಕೆಗಳು ಎರಡೇ ಇರುತ್ತವೆ ಕೋಡ್‌ ಅನ್ನು ಸುಧಾರಿಸುವುದು ಅಥವಾ ಇನ್ನೂ ಸಿಪಿಯೂಗಳನ್ನು ಸೇರಿಸುವುದು.

ಇವನ್ನೂ ನೋಡಿ[ಬದಲಾಯಿಸಿ]

ಸುದ್ದಿಗುಂಪುಗಳು[ಬದಲಾಯಿಸಿ]

ಆಕರಗಳು/ಉಲ್ಲೇಖಗಳು[ಬದಲಾಯಿಸಿ]