ಣಮೊಕರ ಮಂತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಣಮೊಕರ ಮಂತ್ರ' (णमोकार मंत्र) ಜೈನ ಧರ್ಮದ ಪ್ರಾಥಮಿಕ ಮಂತ್ರ, ಇದನ್ನು ದಿನದ ಯಾವುದೇ ವೇಳೆ ಜಪಿಸಬಹುದು. ಈ ಮಂತ್ರವನ್ನು ಜಪಿಸುವಾಗ ಭಕ್ತರು ಗೌರವದಿಂದ ಅರಿಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ ಹಾಗು ಎಲ್ಲ ಗುರು ಮುನಿಗಳಿಗೆ ವಂದಿಸುತ್ತಾರೆ. ಇದರಿಂದ ಕೇವಲ ಒಂದು ವ್ಯಕ್ತಿಯ ಪೂಜೆ ಅಲ್ಲದೆ ಎಲ್ಲ ಸತ್ಪುರುಷರ ಸದ್ಗುಣವನ್ನು ಪುಜಿಸುವಂತಾಗುತ್ತದೆ. ಣಮೊಕರ ಮಂತ್ರದಲ್ಲಿ ತೀರ್ಥಂಕರನಾಗಲಿ ಅಥವಾ ಸಿದ್ಧರನ್ನಾಗಲೀ ಹೆಸರಿನಿಂದ ಜಪಿಸಲಾಗುವುದಿಲ್ಲ. ಜಪಿಸುವವೇಳೆ ಭಕ್ತರು ಸದ್ಗುಣಗಳನ್ನು ನೆನೆಯುತ್ತಾ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮಂತ್ರದಲ್ಲಿ ಜೈನರು ಸತ್ಪುರುಷರನ್ನು ನಮಸ್ಕರಿಸುವರು. ಆದ್ದರಿಂದ ಇದನ್ನು ನಮಸ್ಕಾರ ಮಂತ್ರವೆಂದು ಕರೆಯಲಾಗುತ್ತದೆ.

ಣಮೊಕರ ಮಂತ್ರ ವನ್ನು, ನವಕರ ಮಂತ್ರ ಅಥವಾ ನಮಸ್ಕಾರ ಮಂತ್ರ ಎಂದು ಕೂಡ ಹೇಳಲಾಗುತ್ತದೆ.

ಣಮೋ ಅರಿಹಂತಾನಂ
ಣಮೋ ಸಿದ್ದಾನಾಂ
ಣಮೋ ಅಯರಿಯನಾಂ
ಣಮೋ ಉವಜ್ಝಾಯನಾಂ
ಣಮೋ ಳೊಎ ಸವ್ವ ಸಾಹುನಾಂ
ಣಮೋ ಅರಿಹಂತಾನಂ ನಾನು ಅರಿಹಂತರಿಗೆ ನಮಸ್ಕರಿಸುತ್ತೇನೆ.
ಣಮೋ ಸಿದ್ದಾನಾಂ ನಾನು ಸಿದ್ಧರಿಗೆ ನಮಸ್ಕರಿಸುತ್ತೇನೆ.
ಣಮೋ ಅಯರಿಯನಾಂ ನಾನು ಆಚಾರ್ಯರಿಗೆ ನಮಸ್ಕರಿಸುತ್ತೇನೆ .
ಣಮೋ ಉವಜ್ಝಾಯನಾಂ ನಾನು ಉಪಾಧ್ಯಾಯರಿಗೆ ನಮಸ್ಕರಿಸುತ್ತೇನೆ.
ಣಮೋ ಳೊಎ ಸವ್ವ ಸಹುನಾಂ ನಾನು ಎಲ್ಲ ಸಾಧುಗಳಿಗೆ ನಮಸ್ಕರಿಸುತ್ತೇನೆ.


References[ಬದಲಾಯಿಸಿ]