ಡಿ.ರಾಜಾ
| ಡಿ.ರಾಜಾ | |
|---|---|
ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ | |
| ಹಾಲಿ | |
| ಅಧಿಕಾರ ಸ್ವೀಕಾರ 21 July 2019 | |
| ಪೂರ್ವಾಧಿಕಾರಿ | ಸುರವರಂ ಸುಧಾಕರ್ ರೆಡ್ಡಿ |
ಸಂಸತ್ತು ಸದಸ್ಯರು, ರಾಜ್ಯಸಭಾ | |
| ಅಧಿಕಾರ ಅವಧಿ 25 July 2007 – 24 July 2019 | |
| ಮತಕ್ಷೇತ್ರ | ತಮಿಳುನಾಡು |
| ವೈಯಕ್ತಿಕ ಮಾಹಿತಿ | |
| ಜನನ | 3 June 1949 ಚಿತ್ತಥೂರ್, ಉತ್ತರ ಆರ್ಕಾಟ್ ಜಿಲ್ಲೆ, ಮದ್ರಾಸ್ ಪ್ರಾಂತ್ಯ, ಭಾರತದ ಡೊಮಿನಿಯನ್ (ಈಗ ವೆಲ್ಲೂರು ಜಿಲ್ಲೆ, ತಮಿಳುನಾಡು, ಭಾರತ) |
| ಪೌರತ್ವ | ಭಾರತೀಯ |
| ರಾಜಕೀಯ ಪಕ್ಷ | |
| ಸಂಗಾತಿ(ಗಳು) | ಆನಿ ರಾಜಾ(m. ೧೯೯೦) |
| ಮಕ್ಕಳು | ಅಪರಾಜಿತಾ ರಾಜಾ |
| ತಂದೆ/ತಾಯಿ |
|
| ಅಭ್ಯಸಿಸಿದ ವಿದ್ಯಾಪೀಠ |
|
| ವೃತ್ತಿ | ರಾಜಕಾರಣಿ |
ಡಿ.ರಾಜಾ(ಜನನ 3 ಜೂನ್ 1949) ಒಬ್ಬ ಭಾರತೀಯ ರಾಜಕಾರಣಿ ಮತ್ತು ಜುಲೈ 2019 ರಿಂದ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ತಮಿಳುನಾಡಿನಿಂದ ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದಾರೆ[೧][೨] . ಅವರು 1994 ರಿಂದ 2019 ರವರೆಗೆ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು[೧][೩][೪]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ರಾಜಾ ಅವರು ತಮಿಳುನಾಡಿನ ಇಂದಿನ ವೆಲ್ಲೂರು ಜಿಲ್ಲೆಯ ಗುಡಿಯಾಟಮ್ ಬಳಿಯ ಚಿತ್ತತ್ತೂರ್ ಎಂಬ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದರು . ಅವರ ತಂದೆ ಪಿ. ದೊರೈಸಾಮಿ ಮತ್ತು ತಾಯಿ ನಾಯಗಮ್ ಭೂರಹಿತ ಕೃಷಿ ಕಾರ್ಮಿಕರಾಗಿದ್ದರು .
ಅವರು ಗುಡಿಯಾಟ್ಟಂನ ಜಿಟಿಎಂ ಕಾಲೇಜಿನಿಂದ ಬಿ.ಎಸ್ಸಿ. ಮತ್ತು ವೆಲ್ಲೂರಿನ ಸರ್ಕಾರಿ ಶಿಕ್ಷಕರ ಕಾಲೇಜಿನಿಂದ ಬಿ.ಎಡ್. ಪದವಿ ಪಡೆದರು. ಅವರು ದಲಿತರೇ ಹೆಚ್ಚಾಗಿ ವಾಸಿಸುತ್ತಿದ್ದ ಹಳ್ಳಿಯಲ್ಲಿ ಮೊದಲ ಪದವೀಧರರಾಗಿದ್ದರು. ಪ್ರಾಥಮಿಕ ಶಾಲೆ ಮುಗಿಸುವವರೆಗೂ, ರಾಜಾ ಮಧ್ಯಾಹ್ನದ ಊಟದ ಮೇಲೆ ಬದುಕುಳಿದರು ಆದರೆ ಪ್ರೌಢಶಾಲೆಯಲ್ಲಿ ಅವರ ತಾಯಿಗೆ ಊಟದ ಹಣ ಹೊಂದಿಸಲು ಸಾದ್ಯವಾಗಲಿಲ್ಲ[೫] ಮತ್ತು ಉಚಿತ ಊಟ ಇರಲಿಲ್ಲವಾದ್ದರಿಂದ ಅವರು ಆಗಾಗ್ಗೆ ಹಸಿವಿನಿಂದ ಬಳಲುತ್ತಿದ್ದರು. ಪಿಟಿ ಅವಧಿಗಳಲ್ಲಿ ಓದುವ ಕೊಠಡಿಗಳಲ್ಲಿ ಅವಕಾಶ ನೀಡಿದಾಗ ಪಿಟಿ ಶಿಕ್ಷಕರಿಗೆ ಅವರು ಆಗಾಗ್ಗೆ ಖಾಲಿ ಹೊಟ್ಟೆಯಲ್ಲಿರುತ್ತಾರೆಂದು ತಿಳಿದಿದ್ದರಿಂದ ಅವರು ಓದುವ ಅಭ್ಯಾಸವನ್ನು ಬೆಳೆಸಿಕೊಂಡರು ಎಂದು ರಾಜಾ ಹೇಳಿಕೊಂಡರು.
ಕಾಲೇಜಿನಲ್ಲಿದ್ದಾಗಲೇ, ಅವರು ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾದರು.
ವೈಯಕ್ತಿಕ ಜೀವನ
[ಬದಲಾಯಿಸಿ]ರಾಜಾ ಅವರು ತಮ್ಮ ಪತ್ನಿ ಆನಿ ರಾಜಾ ಅವರನ್ನು ಇಬ್ಬರೂ ಅಖಿಲ ಭಾರತ ಯುವ ಒಕ್ಕೂಟದಲ್ಲಿದ್ದಾಗ ಭೇಟಿಯಾದರು ಮತ್ತು ಅವರು ಜನವರಿ 7, 1990 ರಂದು ಸರಳವಾಗಿ ವಿವಾಹವಾದರು. ಅವರು ಈಗ ಸಿಪಿಐನ ಮಹಿಳಾ ವಿಭಾಗವಾದ ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಮತ್ತು ಅವರಿಗೆ ಅಪರಾಜಿತಾ ರಾಜಾ ಎಂಬ ಮಗಳಿದ್ದಾರೆ [೬] . ಅಪರಾಜಿತಾ ರಾಜಾ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಸ್ವತಃ ಕಾರ್ಯಕರ್ತೆಯಾಗಿದ್ದರು..[೭]
ಏಪ್ರಿಲ್ 2021 ರಲ್ಲಿ, ಚುನಾವಣಾ ಪ್ರಚಾರದಲ್ಲಿದ್ದಾಗ ರಾಜಾ ಅವರಿಗೆ COVID-19 ಸೋಂಕು ತಗುಲಿರುವುದು ಪತ್ತೆಯಾಯಿತು ಮತ್ತು ಅವರನ್ನು AIIMS ಗೆ ದಾಖಲಿಸಬೇಕಾಯಿತು[೮].
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]ಕಾಲೇಜು ದಿನಗಳಲ್ಲಿ ಅವರು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟಕ್ಕೆ ಸೇರಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾದರು. ನಂತರ ಅವರು ಅಖಿಲ ಭಾರತ ಯುವ ಒಕ್ಕೂಟದ ನಾಯಕರಾದರು ಮತ್ತು 1975 ರಿಂದ 1980 ರವರೆಗೆ ತಮಿಳುನಾಡು ಘಟಕದ ರಾಜ್ಯ ಕಾರ್ಯದರ್ಶಿಯಾಗಿದ್ದರು ಮತ್ತು ನಂತರ 1985 ರಿಂದ 1990 ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1994 ರಲ್ಲಿ ಅವರು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಷ್ಟ್ರೀಯ ಕಾರ್ಯದರ್ಶಿಯಾದರು ಮತ್ತು 2019 ರವರೆಗೆ ಸೇವೆ ಸಲ್ಲಿಸಿದರು. ಜುಲೈ 21, 2019 ರಂದು, ಸಿಪಿಐ ರಾಷ್ಟ್ರೀಯ ಮಂಡಳಿಯು ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು.[೯]
ರಾಜಾ ಅವರು ಜುಲೈ 2007 ರಲ್ಲಿ ತಮಿಳುನಾಡಿನಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 2013 ರಲ್ಲಿ ಮರು ಆಯ್ಕೆಯಾದರು.
ರಾಜಾ ಅವರು ಜುಲೈ 21, 2019 ರಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯವಾಹಿನಿಯ ಕಮ್ಯುನಿಸ್ಟ್ ಪಕ್ಷದಲ್ಲಿ ಈ ಸ್ಥಾನವನ್ನು ಅಲಂಕರಿಸಿದ ಮೊದಲ ದಲಿತ ರಾಜಾ. ಅವರ ಹೆಸರನ್ನು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿಯು ಸರ್ವಾನುಮತದಿಂದ ಪ್ರಸ್ತಾಪಿಸಿದರು. [೧೦]
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ ಬರೆಯುತ್ತಾ , ಅವರು "ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ, NATO ಅನ್ನು ವಿಸರ್ಜಿಸಬೇಕು" ಎಂದು ಬರೆದಿದ್ದಾರೆ."[೧೧]
ಗ್ರಂಥಸೂಚಿ
[ಬದಲಾಯಿಸಿ]- ದಲಿತ ಪ್ರಶ್ನೆ: ಮುಂದಕ್ಕೆ ಸಾಗುವ ದಾರಿ(Dalit Question: The Way Forward') (ನವದೆಹಲಿ, ಸಿಪಿಐ ಪ್ರಕಟಣೆ, 2007)
- ಡಿ. ರಾಜಾ, ಎನ್. ಮುತ್ತುಮೋಹನ್ ಅವರಿಂದ ಮಾರ್ಕ್ಸ್ ಮತ್ತು ಅಂಬೇಡ್ಕರ್: ಮುಂದುವರಿಕೆ ಸಂವಾದ (Marx and Ambedkar: Continuing the Dialogue) (ನ್ಯೂ ಸೆಂಚುರಿ ಬುಕ್ ಹೌಸ್, 2018)
- ರಾಜೀವ್ ಸುಮನ್ ಅವರಿಂದ ಸಂಸತ್ತಿನಲ್ಲಿ ಡಿ. ರಾಜಾ''(D. Raja in the Parliament') (ದಿ ಮಾರ್ಜಿನಲೈಸ್ಡ್ ಪಬ್ಲಿಕೇಶನ್, 2021)[೧೨]
ಉಲ್ಲೇಖಗಳು
[ಬದಲಾಯಿಸಿ]- 1 2 "Detailed Profile: Shri D. Raja". National Portal of India. Archived from the original on 10 May 2020. Retrieved 13 January 2018.
- ↑ "D. Raja". prsindia.org.
- ↑ "Tamil Nadu News : Doraisamy Raja, CPI candidate for RS polls". The Hindu. 2007-05-24. Archived from the original on 2007-05-25. Retrieved 2012-08-26.
- ↑ "CPI re-nominates D. Raja for Rajya Sabha". The Hindu (in Indian English). 16 June 2013.
- ↑ "King and queen of hearts". The Week (in ಇಂಗ್ಲಿಷ್). Archived from the original on 6 March 2023. Retrieved 2022-04-07.
- ↑ Paul, Cithara (22 December 2018). "King and queen of hearts". The Week (in ಇಂಗ್ಲಿಷ್). Archived from the original on 6 March 2023. Retrieved 22 July 2019.
- ↑ Saini, Shivam (2016-02-27). "Aparajitha Raja is in the eye of a 'patriotic' storm". Business Standard India. Retrieved 2021-06-18.
- ↑ "D. Raja admitted to AIIMS". The Hindu (in Indian English). 2021-04-12. ISSN 0971-751X. Retrieved 2021-04-11.
- ↑ "D. Raja takes over as CPI general secretary". The Hindu (in Indian English). 21 July 2019.
- ↑ "D. Raja takes over as CPI general secretary". The Hindu. 21 July 2019.
- ↑ "NATO is a danger to world peace. It must go". 6 April 2022.
- ↑ "CPI's D. Raja recalls humble beginnings at book release". The Hindu. 11 September 2021.