ಡಿ.ಎನ್.ಕೃಷ್ಣಮೂರ್ತಿ
ಡಿ.ಎನ್.ಕೃಷ್ಣಮೂರ್ತಿ
[ಬದಲಾಯಿಸಿ]ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಹೆಸರು ಮಾಡಿರುವ ಶ್ರೀ ಡಿ. ಎನ್. ಕೃಷ್ಣಮೂರ್ತಿ ಅವರು 'ಡಿಎನ್ಕೆ' ಎಂದೇ ಚಿರಪರಿಚಿತರು. ಕಥೆ, ಕಾದಂಬರಿ, ಕಾವ್ಯ, ವಚನ, ಪ್ರಬಂಧ, ವ್ಯಕ್ತಿವಿಶೇಷ ಹಾಗೂ ಜೀವನ ಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ನಡೆಸಿರುವ ಇವರು ಹತ್ತು ಕಾದಂಬರಿಗಳು, ನಾಲ್ಕು ಕವನ ಸಂಕಲನಗಳೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಈ ನಾಡಿಗೆ ಅರ್ಪಿಸಿದ್ದಾರೆ. ಇವರು ರಾಜ್ಯದ ಅನೇಕ ಪತ್ರಿಕೆಗಳಿಗೆ ಕಥೆ, ಕವನ, ವಿಮರ್ಶೆ, ವ್ಯಕ್ತಿಚಿತ್ರಗಳೂ ಸೇರಿದಂತೆ ಬಹಳಷ್ಟು ಬಿಡಿ ಲೇಖನಗಳನ್ನು ಬರೆದಿರುವುದೇ ಅಲ್ಲದೆ ಅಂಕಣಕಾರರಾಗಿಯೂ ಗಮನ ಸೆಳೆದಿದ್ದಾರೆ. ಗ್ರಾಮೀಣ ಬದುಕಿನ ಹಿನ್ನೆಲೆಯಿಂದ ಬಂದಿರುವ ಇವರ ಬರವಣಿಗೆಯಲ್ಲಿ ಅಲ್ಲಿನ ದಟ್ಟವಾದ ಅನುಭವದ ಚಿತ್ರಣವಿದೆ. ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯಲ್ಲಿ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿರುವ ಇವರು ಈಗಲೂ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದು, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕನ್ನಡ ಮಾಧ್ಯಮ ಶಾಲೆ ಆರಂಭಿಸಿ ಸೇವಾ ಮನೋಭಾವನೆಯಿಂದ ದುಡಿಯುತ್ತಿದ್ದಾರೆ . ಸಮಾಜಮುಖಿ ಸಾಹಿತಿಯಾಗಿರುವ ಇವರ ಸಾಹಿತ್ಯದಲ್ಲಿ ಗ್ರಾಮದನಿ, ಗ್ರಾಮ್ಯ ಭಾಷೆಯ ಬನಿ ಅಡಕವಾಗಿದೆ. ಗ್ರಾಮೀಣ ಜನರ ನೋವು ನಲಿವುಗಳನ್ನು ಬಹಳ ಹತ್ತಿರದಿಂದ ಕಂಡಿರುವ ಇವರು ಹಳ್ಳಿಯ ಸೊಗಡನ್ನೇ ಅಕ್ಷರವನ್ನಾಗಿಸಿ ಗ್ರಾಮೀಣ ಶೈಲಿಯಲ್ಲೇ ಸೈ ಎನಿಸಿಕೊಂಡವರು. ಡಿ. ಎನ್. ಕೃಷ್ಣಮೂರ್ತಿಯವರು ಸಾಹಿತಿ ಮಾತ್ರವಲ್ಲದೇ ಸ್ವತಃ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಾರ್ಥಕ ಕೆಲಸಗಳನ್ನು ಮಾಡುತ್ತಿದ್ದು, ನಾಡಿನ ಅನೇಕ ಸಂಘ ಸಂಸ್ಥೆಗಳೊಡನೆ ನಿಕಟ ಸಂಪರ್ಕ ಹೊಂದಿದ್ದು, ಅವುಗಳ ಪ್ರೋತ್ಸಾಹಕರಾಗಿ, ಮಾರ್ಗದರ್ಶಕರಾಗಿ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರ ನೀಡುತ್ತಾ ನಾಡು ನುಡಿ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರರಂಗದೊಡನೆ ನಿಕಟ ಸಂಪರ್ಕ ಹೊಂದಿದ್ದು ಅನೇಕ ಕನ್ನಡ ಚಿತ್ರಗಳಿಗೆ ಸಹನಿರ್ದೇಶಕರಾಗಿ ದುಡಿದು ಚಿತ್ರರಂಗದ ಒಳಹೊರಗನ್ನು ಬಹಳ ಹತ್ತಿರದಿಂದ ಕಂಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಗೆಗೆ ಇವರು ಬರೆದಿರುವ ಅನೇಕ ಮಹತ್ವಪೂರ್ಣ ಲೇಖನಗಳು ಸಾಹಿತ್ಯ ಸಮ್ಮೇಳನಗಳ ಗ್ರಂಥಗಳಲ್ಲೂ ಪ್ರಕಟಗೊಂಡಿವೆ. ಗ್ರಾಮೀಣ ಪ್ರದೇಶದ ಅನೇಕ ಯುವ ಪ್ರತಿಭೆಗಳನ್ನು ಒಗ್ಗೂಡಿಸಿ ಹತ್ತು ಹಲವು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಗ್ರಾಮೀಣ ರಂಗಕಲೆಯನ್ನು ಜೀವಂತಗೊಳಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಮೈಸೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ. ಹೀಗೆ ಸಮಾಜದ ಹಲವು ದಿಕ್ಕುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಬಹುಮುಖ ಪ್ರತಿಭಾನ್ವಿತರು. ಇವರ ಕನ್ನಡ ಭಾಷಾ ಪ್ರೇಮ ಮತ್ತು ಕನ್ನಡ ಸಾಹಿತ್ಯಾಭಿಮಾನ ಇತರರಿಗೆ ಮಾದರಿ. ಹೀಗೆ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಡಿ. ಎನ್. ಕೃಷ್ಣಮೂರ್ತಿ ಅವರು ಈ ನೆಲದ ಪ್ರತಿಭೆ.[೧]
ಜನನ/ಜೀವನ
[ಬದಲಾಯಿಸಿ]ಮೈಸೂರು ಜಿಲ್ಲೆ ಹಾಗೂ ತಾಲ್ಲೂಕಿನ ದೊಡ್ಡಮಾರಗೌಡನ ಹಳ್ಳಿ ಗ್ರಾಮದಲ್ಲಿ 1963 ಜೂನ್ 28 ರಂದು ಸುಸಂಸ್ಕೃತ ಮನೆತನದ ಗಾಂಧೀವಾದಿ ಎಸ್ ನಂಜುಂಡಯ್ಯ ಹಾಗೂ ಶಾರದಮ್ಮ ದಂಪತಿಗಳ ಕಿರಿಯ ಮಗನಾಗಿ ಜನಿಸಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲೇ ಪೂರೈಸಿದರು. ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಹೆಚ್.ಡಿ. ಕೋಟೆ ತಾಲ್ಲೂಕಿನ, ಕ್ಯಾತನಹಳ್ಳಿ ಗ್ರಾಮದ ಸಾರ್ವಜನಿಕ ಶಿಕ್ಷಣ ಸಂಸ್ಥೆ ಯಲ್ಲಿ ಮುಗಿಸಿ, ಪಿ.ಯು.ಸಿ. ಶಿಕ್ಷಣವನ್ನು ಮೈಸೂರು ನಗರದ ಮಹಾರಾಜ ಜೂನಿಯರ್ ಕಾಲೇಜಿನಲ್ಲಿ ಹಾಗೂ ಆಟೋಮೊಬೈಲ್ ಡಿಪ್ಲೊಮಾ ಎಂಜಿನಿಯರಿಂಗ್ ಶಿಕ್ಷಣ ವನ್ನು ಸರ್ಕಾರಿ ಸಿ.ಪಿ.ಸಿ. ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಿದರು. ವಿದ್ಯಾರ್ಥಿ ದೆಸೆಯಲ್ಲೇ ಹಲವಾರು ಕಥೆ, ಕವಿತೆ ಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಕಾಲೇಜಿನಲ್ಲಿ ತಾವು ಬರೆದ ಪ್ರಬಂಧಕ್ಕೆ ಪ್ರಥಮ ಬಹುಮಾನ ಪಡೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ಅಲ್ಲಿಂದ ನಿರಂತರವಾಗಿ ಸಾಹಿತ್ಯವನ್ನೇ ಬದುಕಾಗಿಸಿಕೊಂಡು ಬಂದಿರುವ ಇವರು ಇಂದಿಗೂ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ.
ಸಾಹಿತ್ಯಾಸಕ್ತಿ
[ಬದಲಾಯಿಸಿ]ʼ ದತ್ತೂರಿ ಗಿಡʼ ಎಂಬ ಪಾಕೆಟ್ ಕಾದಂಬರಿಯ ಮೂಲಕ ಮೊದಲಿಗೆ ಕನ್ನಡ ಸಾರಸ್ವತ ಲೋಕಕ್ಕೆ ಹೆಜ್ಜೆಯಿರಿಸಿದ ಡಿ.ಎನ್. ಕೃಷ್ಣಮೂರ್ತಿಯವರು ʼ ಓಕುಳಿʼ ಎಂಬ ಕವನ ಸಂಕಲನದ ಮೂಲಕ ಕಾವ್ಯ ಪ್ರಾಕಾರಕ್ಕೂ ಅಡಿಯಿಟ್ಟರು. ಇದುವರೆಗೆ ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದನೆ, ಜೀವನ ಚರಿತ್ರೆ, ವಚನ, ಅಂಕಣಬರಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಬರೆದ ಪತ್ರಿಕೆಗಳು
[ಬದಲಾಯಿಸಿ]ಡಿ.ಎನ್. ಕೃಷ್ಣಮೂರ್ತಿಯವರು ನಾಡಿನ ಹಲವು ಪತ್ರಿಕೆಗಳಿಗೆ ವೈವಿಧ್ಯಮಯ ಲೇಖನಗಳು ಹಾಗೂ ವ್ಯಕ್ತಿಚಿತ್ರಗಳು , ಮೈಸೂರು ಮಿತ್ರ, ಪ್ರಜಾನುಡಿ, ಪರಿವರ್ತನ ಪ್ರಭಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಅಷ್ಟರ ಮಟ್ಟಿಗೆ ಇವರು ಬರವಣಿಗೆಯಲ್ಲಿ ಮುಳುಗಿದ್ದಾರೆ. ಜೀವನದಿ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರೂ ಸೇರಿದಂತೆ ನಾಡಿನ ಹಲವು ವಿಷಯಗಳ ಕುರಿತು ನೂರಾರು ಲೇಖನಗಳನ್ನು ಬರೆದು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಸಂಘ ಸಂಸ್ಥೆಗಳೊಡನೆ ನಿಕಟ ಸಂಪರ್ಕ
ಡಿ.ಎನ್. ಕೃಷ್ಣಮೂರ್ತಿ ಅವರು ಸ್ವತಃ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಾರ್ಥಕ ಕೆಲಸಗಳನ್ನು ಮಾಡುತ್ತಿದ್ದು, ನಾಡಿನ ಅನೇಕ ಸಂಘ ಸಂಸ್ಥೆಗಳೊಡನೆ ನಿಕಟ ಸಂಪರ್ಕ ಹೊಂದಿದ್ದು, ಅವುಗಳ ಪ್ರೋತ್ಸಾಹಕರಾಗಿ, ಮಾರ್ಗದರ್ಶಕರಾಗಿ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರ ನೀಡುತ್ತಾ, ನಾಡು ನುಡಿ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
[ಬದಲಾಯಿಸಿ]ದಿನಾಂಕ: 08: 05: 2011ರಂದು ಮೈಸೂರು ತಾಲ್ಲೂಕಿನ ಬರಡನಪುರ ಶ್ರೀ ಮಹಂತೇಶ್ವರ ಮಠದಲ್ಲಿ ನಡೆದ ಮೈಸೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಇವರ ಸಾಹಿತ್ಯ ಸಾಧನೆಗೆ ಸಂದ ಗೌರವ.
ವಿವಿಧ ಗೋಷ್ಠಿಗಳು
[ಬದಲಾಯಿಸಿ]ನಾಡಿನ ಹತ್ತು ಹಲವು ಕವಿಗೋಷ್ಠಿಗಳು, ಕೃಷಿ ಸಮಾವೇಶಗಳು, ಭಾವೈಕ್ಯ ಸಮ್ಮೇಳನಗಳು, ಆರೋಗ್ಯ, ಪರಿಸರ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ತಮ್ಮ ಉತ್ತಮ ಭಾಷಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
[
[ಕನ್ನಡ ಚಿತ್ರರಂಗ|ಚಲನಚಿತ್ರರಂಗ]]ದೊಡನೆ ಸಂಪರ್ಕ
[ಬದಲಾಯಿಸಿ]ಕಳೆದ ಹತ್ತು ಹಲವು ವರ್ಷಗಳಿಂದ ಇವರು ಕನ್ನಡ ಚಲನಚಿತ್ರರಂಗದೊಡನೆ ನಿಕಟ ಸಂಪರ್ಕ ಹೊಂದಿದ್ದು, ಅನೇಕ ಕನ್ನಡ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದು ಚಲನಚಿತ್ರರಂಗದ ಒಳಹೊರಗನ್ನು ಬಹಳ ಹತ್ತಿರದಿಂದ ಕಂಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಇವರು ಬರೆದ ಅನೇಕ ಮಹತ್ವಪೂರ್ಣ ಲೇಖನಗಳು ಸಾಹಿತ್ಯ ಸಮ್ಮೇಳನಗಳ ಗ್ರಂಥಗಳಲ್ಲೂ, ಅನೇಕ ಹಿರಿಯ ಸಾಹಿತಿಗಳ ಅಭಿನಂದನಾ ಗ್ರಂಥಗಳಲ್ಲೂ ಪ್ರಕಟಗೊಂಡಿವೆ. ಡಾ. ರಾಜ್ ಕುಮಾರ್, ಹುಣಸೂರು ಕೃಷ್ಣಮೂರ್ತಿ, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್, ಪುಟ್ಟಣ್ಣ ಕಣಗಾಲ್, ಕೆ. ಎಸ್. ಅಶ್ವತ್ಥ್ ಮೊದಲಾದವರ ಬಗೆಗೆ ಬರೆದಿರುವ ಲೇಖನಗಳು ಇವರ ಸಾಹಿತ್ಯದ ಹಿರಿಮೆಯನ್ನು ಜೀವಂತಗೊಳಿಸಿವೆ.
ಗ್ರಾಮೀಣ ಪ್ರದೇಶದ ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ, ಒಗ್ಗೂಡಿಸಿ, ಹತ್ತು ಹಲವು ಉತ್ತಮ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಗ್ರಾಮೀಣ ರಂಗಕಲೆಯನ್ನು ಜೀವಂತಗೊಳಿಸುವ ಮೂಲಕ ಕಲಾಸೇವೆಯನ್ನೂ ಮಾಡುತ್ತಿದ್ದಾರೆ. ಇವರು ನಿರ್ದೇಶಿಸಿದ ನಾಟಕಗಳನ್ನು ನೋಡಿ ಅಸಂಖ್ಯಾತ ಕಲಾಭಿಮಾನಿಗಳು ಮೆಚ್ಚಿ ಪ್ರಶಂಸಿಸಿದ್ದಾರೆ. ಕೆಲವು ಪೌರಾಣಿಕ ನಾಟಕಗಳಲ್ಲಿ ಸ್ವತಃ ಇವರೇ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರಕಟಗೊಂಡಿರುವ ಕೃತಿಗಳು
[ಬದಲಾಯಿಸಿ]1. ದತ್ತೂರಿಗಿಡ (ಪಾಕೆಟ್ ಕಾದಂಬರಿ)
2. ಮರೀಚಿಕೆ (ಪಾಕೆಟ್ ಕಾದಂಬರಿ)
3. ಪರಿವರ್ತನೆ (ಪಾಕೆಟ್ ಕಾದಂಬರಿ)
4. ಕರ್ಪೂರದ ಗೊಂಬೆ (ಪಾಕೆಟ್ ಕಾದಂಬರಿ)
5. ಮುಳುಗಿದ ದೋಣಿ (ಪಾಕೆಟ್ ಕಾದಂಬರಿ)
6. ಜನಮನ (ಪ್ರಬಂಧ ಸಂಕಲನ)
7. ಓಕುಳಿ (ಕವನ ಸಂಕಲನ)
8. ಚೈತ್ಯ ಚೈತ್ರ (ಕವನ ಸಂಕಲನ)
9. ರಾಜಯೋಗಿ (ವಚನ ಸಂಕಲನ)
10. ಶಾಂತಿ ಭೂಮಿ (ಕಾದಂಬರಿ)
11. ಸೂರ್ಯಾಸ್ತಮ (ಕಾದಂಬರಿ)
12. ತಪಸಹನ (ಕಾದಂಬರಿ)
13. ಕಾವ್ಯ ಕುಸುಮಾಂಜಲಿ (ಕವನ ಸಂಕಲನ )
14. ಚೈತ್ರ ಯಾತ್ರೆ (ಕಾದಂಬರಿ)
15. ಗ್ರಾಮಾಂತರ (ಕಾದಂಬರಿ)
16. ಕರ್ಮಭೂಮಿ (ಕಾದಂಬರಿ)
17. ಸಂಘರ್ಷಣೆ (ಕಥಾಸಂಕಲನ)
18. ನೇಸರ (ಕವನ ಸಂಕಲನ)
19. ಬೆಳಕು (ಕವನ ಸಂಕಲನ)
20. ಜೀವನದಿ (ಲೇಖನಗಳು)
21. ಮಹಾಸಾಗರದ ಮುತ್ತುಗಳು (ವ್ಯಕ್ತಿ ವಿಶೇಷ ಸಂಪುಟ ೧)
22. ಭಾರತದ ಅನರ್ಘ್ಯ ರತ್ನಗಳು (ವ್ಯಕ್ತಿ ವಿಶೇಷ ಸಂಪುಟ ೨)
23. ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ವಿಶೇಷ ಸಂಪುಟ ೩)
24. ವಸುಂಧರ (ಕಾದಂಬರಿ)
25. ಮಣ್ಣಿನ ಋಣ (ಕಾದಂಬರಿ)
26. ಆಕ್ರಂದನ (ಕಾದಂಬರಿ)
27. ಹೃದಯವಂತ (ಕಾದಂಬರಿ)
28. ಪರಿಕ್ರಮಣ (ಕಾದಂಬರಿ)
29. ನ್ಯಾಯ ದರ್ಶನ (ಕಾದಂಬರಿ)
30. ಮಹಾನದಿ (ಕಾದಂಬರಿ)
31. ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ಜೀವನ ಚರಿತ್ರೆ - ಸಂಕ್ಷಿಪ್ತ)
32. ಬ್ರಹ್ಮಾಸ್ತ್ರ (ಪ್ರಧಾನ ಸಂಪಾದಕ)
33. ಕರ್ಮಯೋಗಿ (ಸರ್ ಎಂ.ವಿ. ಜೀವನ ಚರಿತ್ರೆ)
34. ವಿಮೋಚನೆ (ಕಾದಂಬರಿ)
35. ವಿಜಯಯಾತ್ರೆ (ಕಾದಂಬರಿ)
36. ಮಹಾಚೈತನ್ಯ ( ಮಾಸ್ತಿ ಜೀವನ ಚರಿತ್ರೆ - ಸಮಗ್ರ)
- ↑ "ಮೈಸೂರು ಮಿತ್ರ, ದಿನಪತ್ರಿಕೆ". ಮೈಸೂರು ಮಿತ್ರ, ದಿನಪತ್ರಿಕೆ 2015.
{{cite journal}}: Check date values in:|date=(help); Cite journal requires|journal=(help)