ಬಿ.ಎಂ. ಗುರುನಾಥ

ವಿಕಿಪೀಡಿಯ ಇಂದ
(ಡಾ. ಬಿ.ಎಂ. ಗುರುನಾಥ ಇಂದ ಪುನರ್ನಿರ್ದೇಶಿತ)
Jump to navigation Jump to search

ಸಂಕ್ಷಿಪ್ತ ವ್ಯಕ್ತಿವಿವರ[ಬದಲಾಯಿಸಿ]

ಡಾ.ಬಿ.ಎಂ.ಗುರುನಾಥ ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಗ್ರಾಮದಲ್ಲಿ ೧೨.೦೭.೧೯೭೫ ಜನಿಸಿದರು, ತಮ್ಮ ಶಿಕ್ಷಣವನ್ನು ಬೆಳಗಟ್ಟ,ಚಿತ್ರದುರ್ಗ, ಮೈಸೂರು ವಿಶ್ವವಿದ್ಯಾಲಯ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಪೂರೈಸಿದ್ದಾರೆ. ಇವರ ಪೂರ್ಣ ವಿದ್ಯಾರ್ಹತೆ : ಎಂ.ಎ(ಕನ್ನಡ), ೬೫.೫% ಹಾಸನ ಸ್ನಾತಕೋತ್ತರ ಕೇಂದ್ರ, ಮೈಸೂರು ವಿ.ವಿ,೧೯೯೯,ಎಂ.ಫಿಲ್ (ಜನಪದ ಕಥೆಗಳಲ್ಲಿ ಹಾಸ್ಯ), ಕುವೆಂಪು ವಿಶ್ವವಿದ್ಯಾಲಯ, ೨೦೦೨,ಎನ್.ಇ.ಟಿ(ಕನ್ನಡ), ಯುಜಿಸಿ,ನವದೆಹಲಿ,೧೯೯೯,ಪಿಎಚ್.ಡಿ(ಚಿತ್ರದುರ್ಗ ಜಿಲ್ಲೆಯ ಬಯಲಾಟದ ಹಸ್ತಪ್ರತಿಗಳು),ಕುವೆಂಪು ವಿಶ್ವವಿದ್ಯಾಲಯ,೨೦೦೯ ಇವರು ಸದ್ಯ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.07 ವರ್ಷಗಳ ಸಂಶೋಧನಾನುಭವ, 10 ವರ್ಷಗಳ ಭೋಧನಾನುಭವ ಹೊಂದಿರುವ ಇವರು ಅಂತರಾಷ್ಟ್ರೀಯ-೦೧,ರಾಷ್ಟ್ರೀಯ - ೦2, ರಾಜ್ಯ/ಪ್ರಾದೇಶಿಕ-೦೨ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಸಿದ್ದಾರೆ. ೨೦ ವಿಶೇಷ ಉಪನ್ಯಾಸಗಳು,೦೨ ರೇಡಿಯೋ ಭಾಷಣಗಳು, ೦೩ ಕಾವ್ಯ ವಾಚನ ಮಾಡಿದ್ದಾರೆ.೨೩ ಅಂತರಾಷ್ಟ್ರೀಯ-೦೧, ರಾಷ್ಟ್ರೀಯ - ೦೪, ರಾಜ್ಯ/ಪ್ರಾದೇಶಿಕ-21 ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. 03 ಲೇಖನಗಳು, ೦೮ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪಾಠ-ಪ್ರವಚನ,ಓದು-ಬರೆಹಗಳ ಜೊತೆಗೆ ಸಂಘನೆ-ಹೋರಾಟಗಳಲ್ಲಿ ಆಸಕ್ತಿಹೊಂದಿದ್ದಾರೆ. ಇವರು ವಿವಿಧ ಸಂಘ ಸಂಸ್ಥೆಗಳ ಸದಸ್ಯತ್ವ ಹಾಗೂ ಸಹಭಾಗಿತ್ವಗಳನ್ನು ಹೊಂದಿದ್ದು ಅವುಗಳ ವಿವರ ಹೀಗಿದೆ. ಕನ್ನಡ ಸಾಹಿತ್ಯ ಪರಿಷತ್ ನ ಅಜೀವ ಸದಸ್ಯತ್ವ ೨೦೦೬ ರಿಂದ,ದಕ್ಷಿಣ ಭಾರತೀಯ ಭಾಷೆಗಳ ಜಾನಪದೀಯ ಸಂಘ(ಈossiಟs)ದ ಅಜೀವ ಸzಸ್ಯತ್ವ ೨೦೦೧ ರಿಂದ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ನ ಅಧ್ಯಕ್ಷ ೨೦೧೧ ರಿಂದ,ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆ, ಚಿತ್ರದುರ್ಗದ ಸಂಘಟನಾ ಕಾರ್ಯದರ್ಶಿ ೨೦೧೩ ರಿಂದ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಚಿತ್ರದುರ್ಗದ ಕಾರ್ಯದರ್ಶಿ ೨೦೧೧ ರಿಂದ