ವಿಷಯಕ್ಕೆ ಹೋಗು

ಡಲ್ಗೋನಾ ಕಾಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಲ್ಗೋನಾ ಕಾಫಿ
ಮನೆಯಲ್ಲೇ ಮಾಡಿದ ಡಲ್ಗೋನಾ ಕಾಫಿ
ಮೂಲ ದೇಶದಕ್ಷಿಣ ಕೊರಿಯಾ
ಮೊದಲು ತಯಾರಾದುದು೨೦೨೦
ಬೇಕಾಗುವ ಪದಾರ್ಥಗಳುಕಾಫಿ, ಹಾಲು, ಸಕ್ಕರೆ

ಡಲ್ಗೋನಾ ಕಾಫಿ ಎಂಬ ಪಾನೀಯವನ್ನು ಸಕ್ಕರೆ ಮತ್ತು ನೀರು, ಹಾಲು ಎಲ್ಲವನ್ನೂ ಸಮಾನ ಪ್ರಮಾಣದಲ್ಲಿ ಸೇರಿಸುವ ಮೂಲಕ ತಯಾರಿಸಲಾಗುತ್ತದೆ.[೧] ಇದರ ಜೊತೆಗೆ ಇನ್ಸ್ಟಂಟ್ ಕಾಫಿ ಪುಡಿ ಅಥವಾ ಕೋಕೋ, ಬಿಸ್ಕತ್ತು ಪುಡಿ, ಜೇನುತುಪ್ಪವನ್ನು ಅಳವಡಿಸಲಾಗುತ್ತದೆ. ೨೦೨೦ ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಹಲವು ಜನರು ಈ ಕಾಫಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ತುಂಬಾ ಪ್ರಚಾರ ಮಾಡಿದರು. ದೇಶಕ್ಕೆ ಕಾಲಿಟ್ಟಿರುವ ಕೊರೋನಾ ಖಾಯಿಲೆಯಿಂದ ಜನರು ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ.ಮನೆಯ ಒಳಗೆ ಇದ್ದುಕೊಂಡೇ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಈ ಸಮಯದಲ್ಲಿ ಜನರು ಈ ಕಾಫಿಯನ್ನು ಮನೆಯಲ್ಲಿಯೇ ಕೈ ಬಳಸದೆ ಯಂತ್ರದ ಮೂಲಕ ಸುಲಭವಾಗಿ ತಯಾರಿಸಿಕೊಂಡು ಕುಡಿಯಬಹುದಾಗಿದೆ.[೨] ಕೊರಿಯನ್ ಸಕ್ಕರೆ ಸಿಹಿ, ರುಚಿಯ ಹೋಲಿಕೆ ಇದಕ್ಕಿದೆ. ಈ ಹೆಸರು ಒಂದು ಕೊರಿಯನ್ ಸಿಹಿತಿಂಡಿ ಡಲ್ಗೋನಾ ಎಂಬುದರಿಂದ ಬಂದಿದೆ.

ಇದು ಭಾರತದಲ್ಲಿ ತುಂಬಾ ಪ್ರಸಿದ್ಧವಾಗಿರುವುದು ಫೆಂಟಿ ಹ್ಯೂ ಕಾಫಿ ಎಂಬ ಹೆಸರಿನಿಂದ ಅಥವಾ ಇದನ್ನು ಬೀಟನ್ ಕಾಫಿ ಎಂದೂ ಕರೆಯಬಹುದು. ಸಾಮಾನ್ಯ ಕಾಫಿಗೂ ಫೆಂಟೀ ಕಾಫಿಗೂ ಇರುವ ವ್ಯತ್ಯಾಸವೆಂದರೆ ಕಾಫಿಯಲ್ಲಿ ಹಾಲು ಮಿಶ್ರಣ ಮಾಡುವ ಬದಲು ಮಿಶ್ರಣದ ನಂತರ ಹಾಲು ಹಾಕಲಾಗುತ್ತದೆ. ದಕ್ಷಿಣ ಕೊರಿಯಾದ ಒಂದು ಕೆಫೆಯಲ್ಲಿ ಡಲ್ಗೋನಾ ಕಾಫಿಯು ದೊರೆಯುತ್ತದೆ.[೩] ಈ ಡಲ್ಗೋನಾ ಕಾಫಿಯನ್ನು ಮಾಮೂಲಿ ಕಾಫಿ ಬೀಜಗಳನ್ನು ಹುರಿದು ಪುಡಿ ಮಾಡಿದ ಕಾಫಿ ಪುಡಿಯನ್ನು ಬಳಸಿ ಮಾಡಲು ಸಾಧ್ಯವಿಲ್ಲ. ಬದಲಿಗೆ ತಕ್ಷಣದ ಕಾಫಿ ಅಥವಾ ಇನ್ಸ್ಟಂಟ್ ಕಾಫೀಯಿಂದ ಮಾಡಲಾಗುತ್ತದೆ.

ಮಾಡಲು ಬೇಕಾಗುವ ಪದಾರ್ಥಗಳು

[ಬದಲಾಯಿಸಿ]
  • ಇನ್ಸ್ಟಂಟ್ ಕಾಫಿ
  • ಹಾಲು ಅಥವಾ ಹಾಲಿನ ಕೆನೆ
  • ಸಕ್ಕರೆ
  • ನೀರು

ಉಲ್ಲೇಖ

[ಬದಲಾಯಿಸಿ]
  1. "Dalgona coffee". Retrieved 2020-04-07. {{cite web}}: Cite has empty unknown parameter: |1= (help)
  2. "S Korea's Dalgona coffee is the new quarantine fad - Times of India". The Times of India (in ಇಂಗ್ಲಿಷ್). Retrieved 2020-04-14.
  3. "Why S. Korea's Dalgona coffee trend should remind India of its food-diplomacy potential". ThePrint. Retrieved 2020-04-07.