ಟ್ವೆಲ್ತ್ ಫೇಲ್ (ಚಲನಚಿತ್ರ)
| ಟ್ವೆಲ್ತ್ ಫೇಲ್ | |
|---|---|
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್ | |
| ನಿರ್ದೇಶನ | ವಿಧು ವಿನೋದ್ ಚೋಪ್ರಾ |
| ನಿರ್ಮಾಪಕ | ವಿಧು ವಿನೋದ್ ಚೋಪ್ರಾ ಯೋಗೇಶ್ ಈಶ್ವರ್ |
| ಲೇಖಕ | ವಿಧು ವಿನೋದ್ ಚೋಪ್ರಾ ಜಸ್‍ಕುನ್ವರ್ ಕೋಹ್ಲಿ |
| ಸಂಭಾಷಣೆ | ಅನಂತ್ ಜೋಶಿ |
| ಪಾತ್ರವರ್ಗ |
|
| ಸಂಗೀತ | ಶಾಂತನು ಮೋಯಿತ್ರಾ |
| ಛಾಯಾಗ್ರಹಣ | ರಂಗರಾಜನ್ ರಾಮಬದ್ರನ್ |
| ಸಂಕಲನ | ಜಸ್‍ಕುನ್ವರ್ ಕೋಹ್ಲಿ ವಿಧು ವಿನೊದ್ ಚೋಪ್ರಾ |
| ಸ್ಟುಡಿಯೋ |
|
| ವಿತರಕರು | ಜ಼ೀ ಸ್ಟೂಡಿಯೋಸ್ |
| ಬಿಡುಗಡೆಯಾಗಿದ್ದು |
|
| ಅವಧಿ | 146 ನಿಮಿಷಗಳು[೧] |
| ದೇಶ | ಭಾರತ |
| ಭಾಷೆ | ಹಿಂದಿ |
| ಬಂಡವಾಳ | ₹೨೦ ಕೋಟಿ[೨] |
| ಬಾಕ್ಸ್ ಆಫೀಸ್ | ಅಂದಾಜು ರೂ. 69.64 ಕೋಟಿ[೩] |
ಟ್ವೆಲ್ತ್ ಫೇಲ್ ೨೦೨೩ ರಲ್ಲಿ ಬಿಡುಗಡೆಯಾದ ಒಂದು ಭಾರತೀಯ ಹಿಂದಿ ಭಾಷೆಯ ಜೀವನಚರಿತ್ರ ನಾಟಕೀಯ ಚಿತ್ರವಾಗಿದ್ದು, ಇದನ್ನು ವಿಧು ವಿನೋದ್ ಚೋಪ್ರಾ ನಿರ್ದೇಶಿಸಿ, ನಿರ್ಮಿಸಿ, ಬರೆದಿದ್ದಾರೆ. ಇದು ೨೦೧೯ ರ ಇದೇ ಹೆಸರಿನ ಅನುರಾಗ್ ಪಾಠಕ್‍ರ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಶ್ರದ್ಧಾ ಜೋಶಿ ಶರ್ಮಾ (ಭಾರತೀಯ ಕಂದಾಯ ಸೇವಾ ಅಧಿಕಾರಿ) ಬಗ್ಗೆ ಬರೆದಿರುವ ಅಕಲ್ಪಿತ ವಸ್ತುಕೃತಿ ಪುಸ್ತಕವನ್ನು ಆಧರಿಸಿದೆ.[೪] ಈ ಚಿತ್ರದಲ್ಲಿ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮ್ಯಾಸಿ, ಜೊತೆಗೆ ಮೇಧಾ ಶಂಕರ್, ಅನಂತ್ ಜೋಶಿ, ಅಂಶುಮಾನ್ ಪುಷ್ಕರ್ ಮತ್ತು ಪ್ರಿಯಾಂಶು ಚಟರ್ಜಿ ನಟಿಸಿದ್ದಾರೆ.
27 ಅಕ್ಟೋಬರ್ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಟ್ವೆಲ್ತ್ ಫೇಲ್ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಸ್ಲೀಪರ್ ಹಿಟ್ ಆಗಿ ಹೊರಹೊಮ್ಮಿತು. ₹೨೦ ಕೋಟಿ (ಯುಎಸ್$೪.೪೪ ದಶಲಕ್ಷ) ಮೌಲ್ಯದ ಬಂಡವಾಳದಲ್ಲಿ ತಯಾರಾದ ಈ ಚಿತ್ರ ವಿಶ್ವಾದ್ಯಂತ ₹೬೯ ಕೋಟಿ (ಯುಎಸ್$೧೫.೩೨ ದಶಲಕ್ಷ) ಗಳಿಕೆ ಮಾಡಿತು.[೫][೬] 69 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ, ಇದು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ವಿಮರ್ಶಕರ ಅತ್ಯುತ್ತಮ ನಟ (ಮ್ಯಾಸಿ) ಸೇರಿದಂತೆ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.[೭] 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಈ ಚಿತ್ರವು 2 ಪ್ರಶಸ್ತಿಗಳನ್ನು ಗೆದ್ದುಕೊಂಡಿತು: ಅತ್ಯುತ್ತಮ ಚಲನಚಿತ್ರ ಮತ್ತು ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟ (ಮ್ಯಾಸಿ).[೮]
ಕಥಾವಸ್ತು
[ಬದಲಾಯಿಸಿ]ಡಕಾಯಿತರಿಂದ ತುಂಬಿರುವ ಚಂಬಲ್‌ನಲ್ಲಿ ಜನಿಸಿದ ಮನೋಜ್ ಕುಮಾರ್ ಶರ್ಮಾ ಒಬ್ಬ ಗುಮಾಸ್ತನ ಮಗ. ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವನ ತಂದೆಯನ್ನು ಭ್ರಷ್ಟ ಅಧಿಕಾರಿಯನ್ನು ಹೊಡೆದಿದ್ದಕ್ಕಾಗಿ ಅಮಾನತುಗೊಳಿಸಲಾಗುತ್ತದೆ. ಮನೋಜ್ ತನ್ನ 12 ನೇ ತರಗತಿ ಪರೀಕ್ಷೆಗಳಿಗೆ ವಂಚನೆ ಚೀಟಿಗಳನ್ನು ಸಿದ್ಧಪಡಿಸುತ್ತಾನೆ, ಹಾಗೆಯೇ ಅವನ ಎಲ್ಲಾ ಸಹಪಾಠಿಗಳು ಸಹ. ಸ್ಥಳೀಯ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ನಕಲು ಮಾಡಲು ಸಹಾಯ ಮಾಡುತ್ತಾರೆ. ಆದಾಗ್ಯೂ, ಹೊಸದಾಗಿ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿ ಡಿಎಸ್‌ಪಿ ದುಶ್ಯಂತ್ ಸಿಂಗ್ ಶಾಲೆಯಲ್ಲಿ ನಕಲು ಮಾಡುವುದನ್ನು ತಡೆಯುತ್ತಾರೆ. ಪರಿಣಾಮವಾಗಿ, ಮನೋಜ್ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ.
ಏತನ್ಮಧ್ಯೆ, ಮನೋಜ್ ತಂದೆ ಮನೆ ಬಿಟ್ಟು ಗ್ವಾಲಿಯರ್‌ಗೆ ಹೋಗಿ ಹೈಕೋರ್ಟ್‌ನಲ್ಲಿ ತನ್ನ ಅಮಾನತನ್ನು ಪ್ರಶ್ನಿಸುತ್ತಾರೆ. ಕುಟುಂಬವನ್ನು ಪೋಷಿಸಲು, ಮನೋಜ್ ಮತ್ತು ಅವನ ಸಹೋದರ ರಿಕ್ಷಾ ನಡೆಸುತ್ತಾರೆ. ಆದಾಗ್ಯೂ, ಅಲ್ಲಿನ ಶಾಸಕನ ಪ್ರಯಾಣಿಕರನ್ನು ತನ್ನ ಬಸ್‌ನಲ್ಲಿ ಕರೆದೊಯ್ಯಲು ಪ್ರಯತ್ನಿಸಿದ ನಂತರ ಶಾಸಕನ ಸ್ಥಳೀಯ ಸಹಾಯಕನಿಗೆ ಹೊಡೆದಾಗ ಅವನ ಸಹೋದರನ ಮೇಲೆ ಮದ್ಯ ಕಳ್ಳಸಾಗಣೆ ಮಾಡಿದ ಆರೋಪ ಹೊರಿಸಲಾಗುತ್ತದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಅವನ ಸಹೋದರನ ಮೇಲೆ ಸುಳ್ಳು ಆರೋಪ ಸೃಷ್ಟಿಸುತ್ತಾರೆ. ಆದರೆ ಮನೋಜ್ ಡಿಎಸ್‍ಪಿ ದುಶ್ಯಂತ್ ಸಹಾಯದಿಂದ ಅವನಿಗೆ ಜಾಮೀನು ಕೊಡಿಸುತ್ತಾನೆ. ತಾನೂ ಅವನಂತೆ ಅಧಿಕಾರಿಯಾಗಬೇಕೆಂಬ ಬಯಕೆಯನ್ನು ಮನೋಜ್ ವ್ಯಕ್ತಪಡಿಸಿದಾಗ, ದುಶ್ಯಂತ್ ಅವನಿಗೆ "ಮೋಸ ಮಾಡುವುದನ್ನು ನಿಲ್ಲಿಸು" ಎಂದು ಸಲಹೆ ನೀಡುತ್ತಾನೆ.
ಒಂದು ವರ್ಷದ ನಂತರ, ಮನೋಜ್ ತನ್ನ ಪರೀಕ್ಷೆಯಲ್ಲಿ ನಕಲು ಮಾಡದೆ ಉತ್ತೀರ್ಣನಾಗಿ ಡಿಎಸ್‍ಪಿ ಆಗಲು ಬಿಎ ಪದವಿ ಪಡೆಯುತ್ತಾನೆ. ಗ್ವಾಲಿಯರ್‌ನಲ್ಲಿ ಅಧ್ಯಯನ ಮಾಡಲು ಹೊರಟಾಗ ಅವನ ಅಜ್ಜಿ ತನ್ನ ಎಲ್ಲಾ ಉಳಿತಾಯವನ್ನು ಅವನಿಗೆ ನೀಡುತ್ತಾಳೆ. ಆದರೆ ದಾರಿಯಲ್ಲಿ ಅವನು ಪ್ರಯಾಣಿಸುವ ಬಸ್ಸಿನಲ್ಲಿ ನಿದ್ರಿಸುತ್ತಿರುವಾಗ ಒಬ್ಬ ಮಹಿಳೆ ಅವುಗಳನ್ನು ಕದಿಯುತ್ತಾಳೆ. ನಂತರ ಸರ್ಕಾರವು ಮುಂದಿನ ಮೂರು ವರ್ಷಗಳ ಕಾಲ ಎಮ್‍ಪಿಎಸ್ಎಸ್‍ಸಿಗಾಗಿ ಗ್ರೂಪ್ I ಪರೀಕ್ಷೆಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಅವನಿಗೆ ತಿಳಿಯುತ್ತದೆ. ಇದು ಡಿಎಸ್‍ಪಿ ಆಗುವ ಅವನ ಕನಸನ್ನು ಹಾಳು ಮಾಡುತ್ತದೆ.
ದೊಡ್ಡ ನಗರದಲ್ಲಿ ಊಟಕ್ಕೆ ಹಣವಿಲ್ಲದೆ ಕಷ್ಟಪಡುತ್ತಿರುವಾಗ ಗ್ವಾಲಿಯರ್ ರೈಲ್ವೆ ನಿಲ್ದಾಣದ ಬಳಿಯ ಸ್ಥಳೀಯ ಹೋಟೆಲ್ ಮಾಲೀಕರೊಬ್ಬರು ಅವನಿಗೆ ಉಚಿತ ಊಟ ನೀಡುತ್ತಾರೆ. ಅಲ್ಲಿ ಅವನು ಪಿಎಸ್‍ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಬಂದಿದ್ದ ಪ್ರೀತಮ್ ಪಾಂಡೆಯನ್ನು ಭೇಟಿಯಾಗುತ್ತಾನೆ. ಪಾಂಡೆಯ ತಂದೆ ಅವನಿಗೆ ಕರೆ ಮಾಡಿ ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುವಂತೆ ಹೇಳುತ್ತಾರೆ. ಮನೋಜ್ ಯುಪಿಎಸ್‍ಸಿ ಬಗ್ಗೆ ತಿಳಿದುಕೊಂಡು ಅಧ್ಯಯನ ಮಾಡಿ ಐಪಿಎಸ್ ಅಧಿಕಾರಿಯಾಗಲು ಪ್ರೀತಮ್ ಜೊತೆ ದೆಹಲಿಗೆ ಪ್ರಯಾಣಿಸುತ್ತಾನೆ. ಉತ್ತೀರ್ಣನಾಗಲು ಕೊನೆಯ ಪ್ರಯತ್ನದಲ್ಲಿರುವ ಸಹ ಆಕಾಂಕ್ಷಿ ಗೌರಿ ಭೈಯಾನನ್ನು ಭೇಟಿಯಾಗುತ್ತಾನೆ. ಅವನು ಮನೋಜ್‌ಗೆ ಕೆಲಸ ಮತ್ತು ಅಧ್ಯಯನ ಮಾಡಲು ಸ್ಥಳವನ್ನು ಒದಗಿಸುತ್ತಾನೆ. ಗೌರಿ ಭೈಯಾ ಅಂತಿಮ ಪ್ರಯತ್ನದಲ್ಲಿ ಉತ್ತೀರ್ಣನಾಗಲು ಸಾಧ್ಯವಾಗುವುದಿಲ್ಲ ಮತ್ತು "ರೀಸ್ಟಾರ್ಟ್" ಎಂಬ ಹೆಸರಿನ ಚಹಾ ಅಂಗಡಿಯನ್ನು ತೆರೆಯುತ್ತಾನೆ ಮತ್ತು ಇತರ ಯುಪಿಎಸ್‍ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಾನೆ.
ಮೊದಲ ಪ್ರಯತ್ನದಲ್ಲಿ ಮನೋಜ್ ಪ್ರಾಥಮಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಾನೆ. ಆದರೆ ಗೌರಿಯ ಸಹಾಯದಿಂದ, ಅವನು ಮತ್ತೆ ಪರೀಕ್ಷೆ ಬರೆದು ಮುಂದಿನ ವರ್ಷ ಅದರಲ್ಲಿ ಉತ್ತೀರ್ಣನಾಗುತ್ತಾನೆ. ಒಂದು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದಾಗ, ಅವನು ಯುಕೆಪಿಎಸ್‌ಸಿ ಆಕಾಂಕ್ಷಿ ಶ್ರದ್ಧಾ ಜೋಶಿಯನ್ನು ಭೇಟಿಯಾಗುತ್ತಾನೆ ಮತ್ತು ಅವಳನ್ನು ಪ್ರೀತಿಸತೊಡಗುತ್ತಾನೆ. ಅವನು ಒಬ್ಬ ಏರೋನಾಟಿಕಲ್ ಎಂಜಿನಿಯರ್ ಎಂದು ಅವಳು ಭಾವಿಸುತ್ತಾಳೆ, ಆದರೆ ಅವನು ವಾಸ್ತವವಾಗಿ ಸಾಹಿತ್ಯ ಪದವೀಧರನಾಗಿದ್ದು ಅವಳ ತಪ್ಪನ್ನು ತಿದ್ದುವುದಿಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ, ಮನೋಜ್ ಆ ವರ್ಷ ಒಂದು ಕ್ಷುಲ್ಲಕ ತಪ್ಪಿನಿಂದಾಗಿ ತನ್ನ ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ವಿಫಲನಾಗುತ್ತಾನೆ. ಶ್ರದ್ಧಾ ಅವನ ಪದವಿಯ ಬಗ್ಗೆ ಸತ್ಯವನ್ನು ತಿಳಿದಾಗ ಅವನೊಂದಿಗಿನ ಸಂಬಂಧವೂ ಹಾಳಾಗುತ್ತದೆ. ನಿರಾಶೆಗೊಂಡ ಮನೋಜ್, ಶ್ರದ್ಧಾಳಲ್ಲಿ ಕ್ಷಮೆಯಾಚಿಸಲು ಮತ್ತು ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಮಸ್ಸೂರಿಗೆ ಪ್ರಯಾಣಿಸುತ್ತಾನೆ. ಆದಾಗ್ಯೂ, ಅವಳು ಅವನಿಗೆ ದೆಹಲಿಗೆ ಹಿಂತಿರುಗೆಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾಳೆ.
ಮನೋಜ್ ಮನೆಗೆ ಭೇಟಿ ನೀಡಿದಾಗ ಅವನ ಅಜ್ಜಿ ತೀರಿಕೊಂಡಿರುವುದು ತಿಳಿಯುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ದೃಢನಿಶ್ಚಯದಿಂದ ಅವನು ದೆಹಲಿಗೆ ಹಿಂತಿರುಗುತ್ತಾನೆ. ಮನೋಜ್ ಮನೆಗೆ ಕಳುಹಿಸಲು ಮತ್ತು ಸ್ವಂತ ಖರ್ಚುಗಳನ್ನು ಪೂರೈಸಿಕೊಳ್ಳಲು ಹಣ ಸಂಪಾದಿಸಲು ಗಿರಣಿಯಲ್ಲಿ ಕೆಲಸ ಮಾಡುತ್ತಾನೆ. ಅವನು ಅಲ್ಲೇ ವಾಸಿಸುತ್ತಾನೆ. ಶ್ರದ್ಧಾ ದೆಹಲಿಯಲ್ಲಿ ತಮ್ಮ ಕೋಚಿಂಗ್ ತರಗತಿಗೆ ಆಗಮಿಸುತ್ತಾಳೆ ಮತ್ತು ಮನೋಜ್‍ನೊಡನೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಕ್ಷಮೆಯಾಚಿಸುತ್ತಾಳೆ. ಅವರು ರಾಜಿ ಮಾಡಿಕೊಳ್ಳುತ್ತಾರೆ ಮತ್ತು ಮತ್ತೆ ಹತ್ತಿರವಾಗುತ್ತಾರೆ. ಮನೋಜ್ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ, ಮತ್ತು ಅವನ ಮೇಲಿನ ತನ್ನ ಪ್ರೀತಿಯನ್ನು ಶ್ರದ್ಧಾ ವ್ಯಕ್ತಪಡಿಸುತ್ತಾಳೆ.
ಗೌರಿ ಮನೋಜ್‌ನನ್ನು ತನ್ನ ಸ್ವಂತ ಮನೆಗೆ ಸ್ಥಳಾಂತರಿಸಿ, ಸಣ್ಣಪುಟ್ಟ ಕೆಲಸಗಳನ್ನು ಬಿಟ್ಟು ಸಂಪೂರ್ಣವಾಗಿ ಅಧ್ಯಯನದತ್ತ ಗಮನಹರಿಸುವಂತೆ ಹೇಳುತ್ತಾನೆ. ಕೊನೆಗೆ ಅವನು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ. ಅದೇ ವೇಳೆ ಶ್ರದ್ಧಾ ಯುಕೆಪಿಎಸ್‌ಸಿ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾಗಿ ಉಪ ಕಲೆಕ್ಟರ್ ಆಗುತ್ತಾಳೆ. ಏತನ್ಮಧ್ಯೆ, ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಪ್ರೀತಮ್, ಶ್ರದ್ಧಾಳ ಕುಟುಂಬಕ್ಕೆ ಅವಳು ಮನೋಜ್ ಜೊತೆ ಮಲಗಿದ್ದಾಳೆಂದು ವದಂತಿಗಳನ್ನು ಹರಡುತ್ತಾನೆ. ಮನೋಜ್ ಪ್ರೀತಮ್ ಮೇಲೆ ಕೋಪಗೊಳ್ಳುತ್ತಾನೆ, ಆದರೆ ಪ್ರೀತಮ್ ನಿಜವಾಗಿಯೂ ವರದಿಗಾರನಾಗಲು ಬಯಸಿದ್ದಾನೆ ಎಂದು ಅರಿತುಕೊಳ್ಳುತ್ತಾನೆ, ಆದರೆ ಅವನ ತಂದೆ ಯುಪಿಎಸ್‌ಸಿ ಮಾಡಲು ಒತ್ತಡ ಹೇರಿದನೆಂದು ಗೊತ್ತಾಗುತ್ತದೆ. ತನ್ನ ತಂದೆಯನ್ನು ಎದುರಿಸುವಂತೆ ಮನೋಜ್ ಪ್ರೀತಮ್‌ಗೆ ಸಲಹೆ ನೀಡುತ್ತಾನೆ.
ಸಂದರ್ಶನದ ಸುತ್ತಿನಲ್ಲಿ, ಮನೋಜ್ ಪ್ರತಿಯೊಂದು ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುತ್ತಾನೆ. ಸಂದರ್ಶನದ ಮೊದಲು ಶ್ರದ್ಧಾ ಬರೆದು ಕೊಟ್ಟ ಪತ್ರವನ್ನು ಓದುತ್ತಾನೆ. ಸಂದರ್ಶನದ ಫಲಿತಾಂಶ ಏನೇ ಇರಲಿ, ತಾನು ಅವಳನ್ನು ಮದುವೆಯಾಗಬೇಕೆಂದು ಅದರಲ್ಲಿ ಕೇಳಿಕೊಂಡಿರುತ್ತಾಳೆ. ಎರಡು ತಿಂಗಳ ನಂತರ, ಫಲಿತಾಂಶಗಳನ್ನು ಘೋಷಿಸಲಾಗುತ್ತದೆ, ಮನೋಜ್ ಐಪಿಎಸ್ ಅಧಿಕಾರಿ ಹುದ್ದೆಗೆ ಅರ್ಹತೆ ಪಡೆಯುತ್ತಾನೆ. ಒಂದು ವರ್ಷದ ನಂತರ, ಈಗ ಐಪಿಎಸ್ ಅಧಿಕಾರಿಯಾಗಿರುವ ಮನೋಜ್, ತನ್ನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಡಿಎಸ್‍ಪಿಗೆ ಧನ್ಯವಾದ ಹೇಳಲು ಮಂಡ್‍ಸೌರ್‌ನ ಪೊಲೀಸ್ ಠಾಣೆಯಲ್ಲಿ ಡಿಎಸ್‍ಪಿ ದುಶ್ಯಂತ್ ಸಿಂಗ್‍ನನ್ನು ಭೇಟಿಯಾಗುತ್ತಾನೆ. ಮನೋಜ್ ಶ್ರದ್ಧಾಳನ್ನು ಮದುವೆಯಾಗುತ್ತಾನೆ ಮತ್ತು ಪ್ರೀತಮ್ ಸುದ್ದಿ ವರದಿಗಾರನಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]- ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮ್ಯಾಸಿ
- ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ಶಂಕರ್
- ಪ್ರೀತಮ್ ಪಾಂಡೆ ಪಾತ್ರದಲ್ಲಿ ಅನಂತ್ ವಿ ಜೋಶಿ
- ಗೌರಿ ಭೈಯಾ ಪಾತ್ರದಲ್ಲಿ ಅಂಶುಮಾನ್ ಪುಷ್ಕರ್
- ಡಿಎಸ್‍ಪಿ ದುಶ್ಯಂತ್ ಸಿಂಗ್ ಪಾತ್ರದಲ್ಲಿ ಪ್ರಿಯಾಂಶು ಚಟರ್ಜಿ
- ಮನೋಜ್‍ನ ತಾಯಿ ಪುಷ್ಪಾ ಶರ್ಮಾ ಪಾತ್ರದಲ್ಲಿ ಗೀತಾ ಅಗರ್ವಾಲ್ ಶರ್ಮಾ
- ಮನೋಜ್‍ನ ತಂದೆ ರಾಮ್‍ವೀರ್ ಶರ್ಮಾ ಪಾತ್ರದಲ್ಲಿ ಹರೀಶ್ ಖನ್ನಾ
- ಮನೋಜ್‍ನ ಅಜ್ಜಿ ಪಾತ್ರದಲ್ಲಿ ಸರಿತಾ ಜೋಶಿ
- ಮಿ. ಸೋಲಂಕಿ ಪಾತ್ರದಲ್ಲಿ ಡೇರಿಯಸ್ ಚಿನಾಯ್
- ತುತುಲ್ ಪಾತ್ರದಲ್ಲಿ ಅಭಿಷೇಕ್ ಸೇನ್‍ಗುಪ್ತಾ
- ನವಲ್ ಪಾತ್ರದಲ್ಲಿ ಸಂಜಯ್ ಬಿಷ್ಣೋಯಿ
- ಪೋಲಿಸ್ ಅಧಿಕಾರಿ ದಿಲಿಪ್ ತೋಮರ್ ಪಾತ್ರದಲ್ಲಿ ಸಲೀಮ್ ಸಿದ್ದೀಕಿ
- ತನ್ನದೇ ಪಾತ್ರದಲ್ಲಿ ವಿಕಾಸ್ ದಿವ್ಯಕೀರ್ತಿ
- ಸುಂದರ್ ಪಾತ್ರದಲ್ಲಿ ವಿಜಯ್ ಕುಮಾರ್ ಡೋಗ್ರಾ
- ಮನೋಜ್‍ನ ತಂಗಿ ರಜಿನಿ ಶರ್ಮಾ ಪಾತ್ರದಲ್ಲಿ ಪೆರಿ ಛಾಬ್ರಾ
- ಐಎಎಸ್ ದೀಪ್ ಮೋಹನ್ ಪಾತ್ರದಲ್ಲಿ ಸ್ಯಾಮ್ ಮೋಹನ್
- ಶ್ರದ್ಧಾಳ ತಂದೆ ಪ್ರಾಧ್ಯಾಪಕ ಪ್ರಭಾಕರ್ ಜೋಶಿ ಪಾತ್ರದಲ್ಲಿ ನೀರಜ್ ಕಾಲ್ರಾ
- ತಾನ್ಯಾ ಪಾತ್ರದಲ್ಲಿ ರಾಧಿಕಾ ಜೋಶಿ
- ಶ್ರದ್ಧಾಳ ಮನೆ ಸೇವಕ ಕಿಶನ್ ಪಾತ್ರದಲ್ಲಿ ಫಾಸಿ ಖಾನ್
- ಮನೋಜ್‍ನ ಯುಪಿಎಸ್‍ಸಿ ಸಂದರ್ಶಕ ಮಿ. ಮೆಹ್ತಾ ಪಾತ್ರದಲ್ಲಿ ರಾಹುಲ್ ದೇವ್ ಶೆಟ್ಟಿ
- ಸಂಸ್ಥೆಯ ಮಾಲೀಕನ ಮಗಳು ಜ಼ಯಿ ಅರೋರಾ ಪಾತ್ರದಲ್ಲಿ ಗುರ್ಲೀನ್ ಅರೋರಾ
ನಿರ್ಮಾಣ
[ಬದಲಾಯಿಸಿ]ಅಭಿವೃದ್ಧಿ
[ಬದಲಾಯಿಸಿ]ನವೆಂಬರ್ 2022 ರಲ್ಲಿ, ಚಲನಚಿತ್ರ ತಯಾರಕ ವಿಧು ವಿನೋದ್ ಚೋಪ್ರಾ ಅನುರಾಗ್ ಪಾಠಕ್‍ರ "ಟ್ವೆಲ್ತ್ ಫೇಲ್" ಕಾದಂಬರಿಯನ್ನು ಆಧರಿಸಿದ ಚಿತ್ರವನ್ನು ಘೋಷಿಸಿದರು.[೯] ಈ ಚಿತ್ರವು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ನಿಜ ಜೀವನದ ಕಥೆಯಿಂದ ಪ್ರೇರಿತವಾಗಿದೆ.[೧೦]
ಪಾತ್ರಗಳ ಹಂಚಿಕೆ
[ಬದಲಾಯಿಸಿ]ನವೆಂಬರ್ 2022 ರಲ್ಲಿ, ನಟ ವಿಕ್ರಾಂತ್ ಮ್ಯಾಸ್ಸಿ ನಾಯಕನಾಗಿ ನಟಿಸಲಿದ್ದಾರೆ ಎಂದು ಚೋಪ್ರಾ ಘೋಷಿಸಿದರು. ಇದು ಅವರಿಬ್ಬರ ನಡುವಿನ ಮೊದಲ ಸಹಯೋಗವಾಗಿತ್ತು.[೧೧] ಯುಪಿಎಸ್‍ಸಿ ತರಬೇತುದಾರ ವಿಕಾಸ್ ದಿವ್ಯಕೀರ್ತಿ ಅವರನ್ನು ಪರದೆಯ ಮೇಲೆ ಸ್ವತಃ ನಟಿಸಲು ಆಯ್ಕೆ ಮಾಡಲಾಯಿತು.[೧೨] ಅನೇಕ ನಿಜ ಜೀವನದ ಯುಪಿಎಸ್‍ಸಿ ಆಕಾಂಕ್ಷಿಗಳು ವಿವಿಧ ಪಾತ್ರಗಳಲ್ಲಿ ನಟಿಸಿದರು. ಮ್ಯಾಸ್ಸಿ ಪ್ರಕಾರ, ಇದು ಚಿತ್ರಕ್ಕೆ "ಪ್ರಾಮಾಣಿಕತೆ"ಯನ್ನು ಸೇರಿಸಿತು.[೧೩] ಶರ್ಮಾ ಮತ್ತು ಜೋಶಿ ಇಬ್ಬರೂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.[೧೪]
ಚಿತ್ರೀಕರಣ
[ಬದಲಾಯಿಸಿ]ಈ ಚಿತ್ರವನ್ನು ಮುಖ್ಯವಾಗಿ ಆಗ್ರಾ, ಚಂಬಲ್, ದೆಹಲಿ, ಮಸ್ಸೂರಿ ಮತ್ತು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗಾಗಿರುವ ಎರಡು ಶಿಕ್ಷಣ ಕೇಂದ್ರಗಳಾದ ರಾಜೇಂದ್ರ ನಗರ ಮತ್ತು ಮುಖರ್ಜಿ ನಗರದಲ್ಲಿ ಚಿತ್ರೀಕರಿಸಲಾಗಿದೆ.[೧೫][೧೬] ಚಿತ್ರೀಕರಣವು ಡಿಸೆಂಬರ್ 2022 ರಲ್ಲಿ ಮುಕ್ತಾಯಗೊಂಡಿತು.[೧೭]
ಬಿಡುಗಡೆ
[ಬದಲಾಯಿಸಿ]ಚಿತ್ರಮಂದಿರ
[ಬದಲಾಯಿಸಿ]ಟ್ವೆಲ್ತ್ ಫೇಲ್‍ನ ಟೀಸರ್ ಆಗಸ್ಟ್ 10, 2023 ರಂದು ಬಿಡುಗಡೆಯಾಯಿತು. ಅದರ ಟ್ರೇಲರ್ ಅಕ್ಟೋಬರ್ 3, 2023 ರಂದು ಬಿಡುಗಡೆಯಾಯಿತು. ಈ ಚಿತ್ರವು ಅಕ್ಟೋಬರ್ 27, 2023 ರಂದು ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.[೧೮][೧೯] ಹಿಂದಿಯಲ್ಲಿ ಯಶಸ್ವಿಯಾದ ನಂತರ, ಚಿತ್ರವನ್ನು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಲಾಗುವುದು ಎಂದು ತಯಾರಕರು ಘೋಷಿಸಿದರು ಮತ್ತು 3 ನವೆಂಬರ್ 2023 ರಂದು ಬಿಡುಗಡೆ ಮಾಡಲಾಯಿತು.[೨೦][೨೧]
ಹೋಮ್ ಮೀಡಿಯಾ
[ಬದಲಾಯಿಸಿ]ಈ ಚಿತ್ರವು ಡಿಸೆಂಬರ್ 29, 2023 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲು ಪ್ರಾರಂಭಿಸಿತು.[೨೨]
ಧ್ವನಿವಾಹಿನಿ
[ಬದಲಾಯಿಸಿ]ಈ ಚಿತ್ರದ ಸಂಗೀತವನ್ನು ಶಾಂತನು ಮೊಯಿತ್ರಾ ಸಂಯೋಜಿಸಿದ್ದಾರೆ ಮತ್ತು ಗೀತಸಾಹಿತ್ಯವನ್ನು ಸ್ವಾನಂದ್ ಕಿರ್ಕಿರೆ ಹಾಗೂ ರಫ್ತಾರ್ ಬರೆದಿದ್ದಾರೆ.[೨೩] ಸಿತಾರ್ ಮತ್ತು ಕೊಳಲಿನ ಬಳಕೆಯೊಂದಿಗೆ ಮೊಯಿತ್ರಾ ಅವರ ಹಿನ್ನೆಲೆ ಸಂಗೀತವು ಬಂಗಾಳಿ ಚಲನಚಿತ್ರ ಪಥೇರ್ ಪಾಂಚಾಲಿ (1955) ನಲ್ಲಿ ಪಂಡಿತ್ ರವಿಶಂಕರ್ ಅವರ ಸಂಗೀತದಿಂದ ಪ್ರೇರಿತವಾಗಿದೆ.[೨೪]
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
[ಬದಲಾಯಿಸಿ]12ನೇ ಫೇಲ್ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.[೨೫] ಮ್ಯಾಸ್ಸಿಯ ಅಭಿನಯವನ್ನು ವಿಶೇಷವಾಗಿ ಪ್ರಶಂಸಿಸಲಾಯಿತು. [೨೬] ವಿಮರ್ಶಾ ಸಂಗ್ರಾಹಕ ಜಾಲತಾಣ ರಾಟನ್ ಟೊಮೇಟೋಸ್‍ನಲ್ಲಿ, ೧೧ ವಿಮರ್ಶಕರ ೯೧% ವಿಮರ್ಶೆಗಳು ಧನಾತ್ಮಕವಾಗಿದ್ದು ಸರಾಸರಿ ರೇಟಿಂಗ್ ೬.೮/೧೦ ಇದೆ.
ಮಾರ್ಚ್ 12, 2024 ರಂದು ನಡೆದ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಸಮಾರಂಭದಲ್ಲಿ, ಟ್ವೆಲ್ತ್ ಫೇಲ್ "ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ"ಯನ್ನು ಗೆದ್ದುಕೊಂಡಿತು ಮತ್ತು ವಿಕ್ರಾಂತ್ ಮ್ಯಾಸಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಯಿತು.[೨೭]
ಪುರಸ್ಕಾರಗಳು
[ಬದಲಾಯಿಸಿ]| Award | Ceremony date | Category | Recipients | Result | Ref. |
|---|---|---|---|---|---|
| ಫಿಲ್ಮ್‌ಫೇರ್ ಪ್ರಶಸ್ತಿಗಳು | 28 ಜನವರಿ 2024 | ಅತ್ಯುತ್ತಮ ಚಲನಚಿತ್ರ | ವಿನೊದ್ ಚೋಪ್ರಾ ಫಿಲ್ಮ್ಸ್, ಜ಼ೀ ಸ್ಟೂಡಿಯೋಸ್ | ಗೆಲುವು | [೭][೨೮] |
| ವಿಮರ್ಶಕರ ಅತ್ಯುತ್ತಮ ಚಲನಚಿತ್ರ | ವಿಧು ವಿನೋದ್ ಚೋಪ್ರಾ | ನಾಮನಿರ್ದೇಶಿತ | |||
| ಅತ್ಯುತ್ತಮ ನಿರ್ದೇಶಕ | ಗೆಲುವು | ||||
| ಅತ್ಯುತ್ತಮ ಚಿತ್ರಕಥೆ | ಗೆಲುವು | ||||
| ಅತ್ಯುತ್ತಮ ಸಂಭಾಷಣೆ | ನಾಮನಿರ್ದೇಶಿತ | ||||
| ವಿಮರ್ಶಕರ ಅತ್ಯುತ್ತಮ ನಟ | ವಿಕ್ರಾಂತ್ ಮ್ಯಾಸಿ | ಗೆಲುವು | |||
| ಅತ್ಯುತ್ತಮ ಸಂಕಲನ | ಜಸ್‍ಕುನ್ವರ್ ಕೋಹ್ಲಿ, ವಿಧು ವಿನೋದ್ ಚೋಪ್ರಾ | ಗೆಲುವು | |||
| ಅತ್ಯುತ್ತಮ ನಿರ್ಮಾಣ ವಿನ್ಯಾಸ | ಪ್ರಶಾಂತ್ ಬಿಡ್ಕರ್ | ನಾಮನಿರ್ದೇಶಿತ | |||
| ಅತ್ಯುತ್ತಮ ಛಾಯಾಗ್ರಹಣ | ರಂಗರಾಜನ್ ರಾಮಬದ್ರನ್ | ನಾಮನಿರ್ದೇಶಿತ | |||
| ಅತ್ಯುತ್ತಮ ಧ್ವನಿ ವಿನ್ಯಾಸ | ಮಾನವ್ ಶ್ರೋತ್ರೀಯ | ನಾಮನಿರ್ದೇಶಿತ | |||
| ಅತ್ಯುತ್ತಮ ಹಿನ್ನೆಲೆ ಸಂಗೀತ | ಶಾಂತನು ಮೋಯಿತ್ರಾ | ನಾಮನಿರ್ದೇಶಿತ | |||
| ಅತ್ಯುತ್ತಮ ವಸ್ತ್ರ ವಿನ್ಯಾಸ | ಮಾಲ್ವಿಕಾ ಬಜಾಜ್ | ನಾಮನಿರ್ದೇಶಿತ | |||
| ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು | 28 ಸೆಪ್ಟೆಂಬರ್ 2024 | ಅತ್ಯುತ್ತಮ ಚಲನಚಿತ್ರ | ಟ್ವೆಲ್ತ್ ಫೇಲ್ | ನಾಮನಿರ್ದೇಶಿತ | [೨೯] [೩೦] [೩೧] |
| ಅತ್ಯುತ್ತಮ ನಿರ್ದೇಶಕ | ವಿಧು ವಿನೋದ್ ಚೋಪ್ರಾ | ಗೆಲುವು | |||
| ಅತ್ಯುತ್ತಮ ನಟ | ವಿಕ್ರಾಂತ್ ಮ್ಯಾಸಿ | ನಾಮನಿರ್ದೇಶಿತ | |||
| ಅತ್ಯುತ್ತಮ ಪೋಷಕ ನಟಿ | ಗೀತಾ ಅಗರ್ವಾಲ್ ಶರ್ಮಾ | ನಾಮನಿರ್ದೇಶಿತ | |||
| ಅತ್ಯುತ್ತಮ ಸಂಗೀತ ನಿರ್ದೇಶಕ | ಶಾಂತನು ಮೋಯಿತ್ರಾ | ನಾಮನಿರ್ದೇಶಿತ | |||
| ಅತ್ಯುತ್ತಮ ಪರಿವರ್ತಿತ ಕಥೆ | ವಿಧು ವಿನೋದ್ ಚೋಪ್ರಾ, ಜಸ್‍ಕುನ್ವರ್ ಕೋಹ್ಲಿ | ಗೆಲುವು | |||
| ಅತ್ಯುತ್ತಮ ಚಿತ್ರಕಥೆ | ವಿಧು ವಿನೋದ್ ಚೋಪ್ರಾ, ಜಸ್‍ಕುನ್ವರ್ ಕೋಹ್ಲಿ, ಅನುರಾಗ್ ಪಾಠಕ್, ಆಯುಷ್ ಸಕ್ಸೇನಾ, ವಿಕಾಸ್ ದಿವ್ಯಕೀರ್ತಿ | ಗೆಲುವು | |||
| ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | 1 ಆಗಸ್ಟ್ 2025 | ಅತ್ಯುತ್ತಮ ಕಥಾಚಿತ್ರ | ವಿನೋದ್ ಚೋಪ್ರಾ ಫಿಲ್ಮ್ಸ್, ಜ಼ೀ ಸ್ಟೂಡಿಯೋಸ್ | ಗೆಲುವು | [೮] |
| ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟ | ವಿಕ್ರಾಂತ್ ಮ್ಯಾಸಿ | ಗೆಲುವು |
ಭವಿಷ್ಯ
[ಬದಲಾಯಿಸಿ]ಅಕ್ಟೋಬರ್ 2024 ರಲ್ಲಿ, 2024 ರ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಆವೃತ್ತಿಯಲ್ಲಿ ಟ್ವೆಲ್ತ್ ಫೇಲ್‌ಗೆ ಸಂಬಂಧಿಸಿದ ಝೀರೋ ಸೆ ರೀಸ್ಟಾರ್ಟ್ ಎಂಬ ಚಲನಚಿತ್ರವನ್ನು ಅದೇ ವರ್ಷ ಡಿಸೆಂಬರ್ 13 ರಂದು ಬಿಡುಗಡೆ ಮಾಡಲಾಗುವುದು ಎಂದು ಚೋಪ್ರಾ ಘೋಷಿಸಿದರು; ಆರಂಭದಲ್ಲಿ ಪ್ರೀಕ್ವೆಲ್ ಎಂದು ವರದಿಯಾಗಿದ್ದು, ನಂತರ ಈ ಚಿತ್ರವು ನಿರ್ಮಾಣ ಸಾಕ್ಷ್ಯಚಿತ್ರ ಎಂದು ಬಹಿರಂಗವಾಯಿತು.[೩೨][೩೩]
ಉಲ್ಲೇಖಗಳು
[ಬದಲಾಯಿಸಿ]- ↑ "12th Fail (12A)". British Board of Film Classification. 3 November 2023. Archived from the original on 1 November 2023. Retrieved 3 November 2023.
- ↑ बॉलीवुड की इन कम बजट वाली फिल्मों में बॉक्स ऑफिस पर मचाया धमाल, मेकर्स हुए मालामाल. ABP News (in ಹಿಂದಿ). 1 November 2023. Archived from the original on 4 November 2023. Retrieved 4 November 2023.
विक्रांत मैसी की हालिया रिलीज फिल्म 12th फेल 28 अक्टूबर को रिलीज हुई है. ये फिल्म सिर्फ 20 करोड़ के बजट में बनी है लेकिन बॉक्स ऑफिस पर अच्छी कमाई हो रही है। फिल्म ने सिर्फ 21 दिन में करीब 50 करोड़ का कलेक्शन कर लिया है।
[Vikrant Massey's recent release film 12th Fail has been released on 27th October. This film has been made with a budget of only Rs 20 crore but is earning well at the box office. The film has collected around Rs 5 crore in just 5 days.] - ↑ "12th Fail Box Office Collection". Bollywood Hungama. 27 October 2023. Retrieved 8 February 2024.
- ↑ "Vikrant Massey and Vidhu Vinod Chopra on 12th Fail: It is an homage to bureaucrats of the country". Indian Express. Archived from the original on 4 October 2023. Retrieved 12 December 2022.
- ↑ "12th Fail box office collection: Vikrant Massey's film crosses ₹50 crore during 5th week in India". Hindustan Times. Archived from the original on 30 November 2023. Retrieved 29 November 2023.
- ↑ "From Jawan's Rs. 600+ crores to 21 films earning in Rs. 0-1 crore range, here are the MOST DEFINITIVE box office RECORDS of 2023". Bollywood Hungama (in ಇಂಗ್ಲಿಷ್). 2024-01-08. Retrieved 2024-01-10.
- 1 2 "Winners of the 69th Filmfare Awards 2024". Filmfare. 28 January 2024. Retrieved 29 January 2024. ಉಲ್ಲೇಖ ದೋಷ: Invalid
<ref>tag; name "ff69won" defined multiple times with different content - 1 2 "71st National Film Awards: Vikrant Massey Bags Best Actor For 12th Fail; All Winners Announced". News18 (in ಇಂಗ್ಲಿಷ್). Retrieved 2025-08-01. ಉಲ್ಲೇಖ ದೋಷ: Invalid
<ref>tag; name ":1" defined multiple times with different content - ↑ "Vidhu Vinod Chopra's next titled '12th Fail': Story of aspiring IAS, IPS students". ANI News. Archived from the original on 24 November 2022. Retrieved 27 November 2022.
- ↑ "Vidhu Vinod Chopra announces new film 12th Fail. Vikrant Massey to play the lead". India Today. Archived from the original on 28 November 2022. Retrieved 29 November 2022.
- ↑ "Vikrant Massey shares how he prepared for his role in '12th Fail'". Times of India. Retrieved 27 September 2023.
- ↑ "12th Fail: Real UPSC professor Vikas Divyakirti on acting in Vidhu Vinod Chopra's film: "For the first time, Hindi cinema has tried..."". Bollywood Hungama. Archived from the original on 10 October 2023. Retrieved 7 October 2023.
- ↑ "Vikrant Massey on shooting 12th Fail with junior-artists-cum-UPSC-aspirants: This really did add further authenticity". Bollywood Hungama. Archived from the original on 28 September 2023. Retrieved 28 September 2023.
- ↑ "Vikrant Massey Confirms IPS Manoj Sharma-IRS Shraddha Joshi's Cameo in 12th Fail". The Quint. 3 January 2024. Retrieved 4 January 2024.
- ↑ "Vidhu Vinod Chopra shot major chunk of Vikrant Massey starrer '12th Fail' in Delhi's old Rajendra Nagar". Times of India. Archived from the original on 3 January 2024. Retrieved 22 September 2023.
- ↑ "Vikrant Massey shares picture with Vidhu Vinod Chopra from '12th Fail' sets". ThePrint. Archived from the original on 4 October 2023. Retrieved 26 September 2023.
- ↑ "Vidhu Vinod Chopra and Vikrant Massey's 12th Fail wraps up shoot". Cinema Express. Archived from the original on 4 October 2023. Retrieved 20 December 2022.
- ↑ "12th Fail teaser: Vikrant Massey and Vidhu Vinod Chopra chronicle the struggles of UPSC students". Filmfare. Archived from the original on 24 December 2023. Retrieved 12 September 2023.
- ↑ "12th Fail Trailer". Archived from the original on 27 October 2023. Retrieved 9 October 2023.
- ↑ "Vikrant Massey starrer 12th Fail to release in Tamil and Telugu tomorrow". Bollywood Hungama. 2 November 2023. Archived from the original on 14 November 2023. Retrieved 3 November 2023.
- ↑ "After surprise success at box office, Vidhu Vinod Chopra's Vikrant Massey-starrer 12th Fail to release in Tamil, Telugu". Daily News and Analysis. 2 November 2023. Archived from the original on 3 November 2023. Retrieved 3 November 2023.
- ↑ "Vikrant Massey starrer 12th Fail to release on THIS OTT platform". Bollywood Hungama. Archived from the original on 31 December 2023. Retrieved 24 December 2023.
- ↑ "12th Fail (Original Motion Picture Soundtrack)". Apple Music. Archived from the original on 24 December 2023. Retrieved 24 December 2023.
- ↑ "Vidhu Vinod Chopra's 12th Fail passes with flying colours". The Telegraph. 27 October 2023. Archived from the original on 4 January 2024. Retrieved 4 January 2024.
As both the filmmaker and composer admitted, Pather Panchali was indeed an inspiration behind the score..
- ↑ "'12th Fail' box office collection Day 2: Vikrant Massey's film gets a thumbs up". India Today (in ಇಂಗ್ಲಿಷ್). 29 October 2023. Archived from the original on 31 October 2023. Retrieved 30 October 2023.
- ↑ "Vikrant Massey on National Award buzz: I'm already in a good club, so I'm happy with that". Hindustan Times. Archived from the original on 25 February 2025. Retrieved 25 February 2025.
The biographical film garnered positive reviews and Massey's portrayal of IPS officer Manoj Kumar Sharma, amassed immense love from fans and critics alike.
- ↑ "12th Fail Movie Review- Vidhu's Vinod Chopra Magical Story Telling - Bolly Movie Review Tech" (in ಅಮೆರಿಕನ್ ಇಂಗ್ಲಿಷ್). 2024-01-04. Retrieved 2024-05-03.
- ↑ "Nominations for the 69th Hyundai Filmfare Awards 2024 with Gujarat Tourism: Full list out". Filmfare. 15 January 2024. Retrieved 15 January 2024.
- ↑ "IIFA Awards Announces It's [sic] Highly Anticipated 2024 Nominations". IIFA (in ಇಂಗ್ಲಿಷ್). Retrieved 2024-10-02.
- ↑ "IIFA 2024: Shah Rukh Khan Wins Best Actor, Rani Mukerji Bags Best Actress Award. Check Out Full List Of Winners". www.ndtv.com (in ಇಂಗ್ಲಿಷ್). Retrieved 2024-10-02.
- ↑ "IIFA Unveils 2024 Technical Awards Winners: Honouring the Trailblazers of Indian Cinema!". IIFA (in ಇಂಗ್ಲಿಷ್). Retrieved 2024-10-02.
- ↑ "Vidhu Vinod Chopra announces 12th Fail prequel, Zero se Restart, at IIFA". India Today (in ಇಂಗ್ಲಿಷ್). 2024-09-29. Retrieved 2024-10-01.
- ↑ "Zero Se Restart teaser: Vidhu Vinod Chopra's 12th Fail documentary invites us to pause and reflect on life choices". The Indian Express. 13 November 2024. Retrieved 19 November 2024.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಟ್ವೆಲ್ತ್ ಫೇಲ್ at IMDb
- 12th Fail at Bollywood Hungama