ಟ್ಯಾಲೆಂಟ್ ಮ್ಯಾನೆಜ್‌ಮೆಂಟ್

ವಿಕಿಪೀಡಿಯ ಇಂದ
Jump to navigation Jump to search

ಒಂದು ಕಂಪನಿಯು(ಸಂಸ್ಥೆ) ಹೊಸ ನೌಕರರನ್ನು ಬೆಳಸುವ ಮತ್ತು ಅವರನ್ನು ಸಂಸ್ಥೆಯ ಭಾಗವಾಗಿಸಿಕೊಳ್ಳುವ; ಪ್ರಸ್ತುತ/ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನು ಉಳಿಸಿಕೊಂಡು ಅವರನ್ನು ಬೆಳಸುವ ಪ್ರಕ್ರಿಯೆ; ಹಾಗು ಹೆಚ್ಚಿನ ಕೌಶಲ್ಯವಿರುವ ನೌಕರರನ್ನು ಕಂಪನಿಗೆ ಕೆಲಸಮಾಡುವಂತೆ ಆಕರ್ಷಿಸುವ ಪ್ರಕ್ರಿಯೆಗಳೆಲ್ಲವೂ ಟ್ಯಾಲೆಂಟ್ ಮ್ಯಾನೆಜ್‌ಮೆಂಟ್‌ ಎಂದು ಕರೆಸಿಕೊಳ್ಳುತ್ತದೆ. ಈ ದೃಷ್ಟಿಕೋನದಲ್ಲಿ ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌[೧]ಮನೋರಂಜನೆಗಾರರನ್ನು (ಎಂಟರ್‌ಟೇನರ್‌) ನಿರ್ವಹಿಸುವುದರ ಕುರಿತಂತೆ ಇರುವುದಿಲ್ಲ. ಈ ಪದವನ್ನು ಸಾಪ್ಟ್‌ಸ್ಕೇಪ್[೨] ನ ಡೇವಿಡ್‌ ವಾಟ್ಕಿನ್ಸ್‌ 1998ರಲ್ಲಿ ಪ್ರಕಟಿಸಿದ ಒಂದು ಲೇಖನದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿದ.[೩] ಸಮರ್ಥ ಹಾಗು ದಕ್ಷ ನೌಕರರನ್ನು ಉಳಿಕೊಂಡು ಆಕರ್ಷಿಸುವ ಪ್ರಕ್ರಿಯೆಯನ್ನು "ವಾರ್ ಫಾರ್ ಟ್ಯಾಲೆಂಟ್‌" (ಸಾಮರ್ಥ್ಯಶಾಲಿಗಳನ್ನು ಸೆಳೆಯುವ ತಂತ್ರ) ಎಂದು ಕರೆಯಲಾಗುತ್ತಿದೆ, ಇದು ಸಂಸ್ಥೆಗಳ ನಡುವೆ ಇರುವ ಪೈಪೋಟಿಯಲ್ಲಿ ಮತ್ತು ವ್ಯವಹಾರಿಕ ತಂತ್ರಗಾರಿಕೆಯಲ್ಲಿ ಪ್ರಮುಖವಾಗಿದೆ.

ಇತಿಹಾಸ[ಬದಲಾಯಿಸಿ]

ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್ ಪ್ರಕ್ರಿಯೆಯು 1990ರ ದಶಕದಲ್ಲಿ ಶುರುವಾಯಿತು; ಹೆಚ್ಚಿನ ಸಂಸ್ಥೆಗಳಿಗೆ ನೌಕರರ ಕೌಶಲ್ಯ ಮತ್ತು ಸಾಮರ್ಥ್ಯವೂ ಸಂಸ್ಥೆಯು ಯಶಸ್ವಿಯಾಗಲು ಮುಖ್ಯವಾದ ಕಾರಣವೆಂದು ಮನದಟ್ಟಾಗುತ್ತಿರುವ ಹಿನ್ನಲೆಯಲ್ಲಿ ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ಅನ್ನು ಅನೇಕ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿವೆ. ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ಅನ್ನು ಆಳವಡಿಸಿಕೊಳ್ಳುತ್ತಿರುವ ಸಂಸ್ಥೆಗಳು ಇದನ್ನು ಎಂಪ್ಲಾಯೀ ರಿಟೆನ್ಷನ್‌ (ನೌಕರರನ್ನು ಉಳಿಸಿಕೊಳ್ಳುವ) ಸಮಸ್ಯೆ ಪರಿಹರಿಸಲು ಬಳಸಿಕೊಳ್ಳುತ್ತಿವೆ. ಆನೇಕ ಸಂಸ್ಥೆಗಳು ಇಂದು ಎದರಿಸುತ್ತಿರುವ ಮುಖ್ಯ ಸಮಸ್ಯೆಯೆಂದರೆ, ನೌಕರರನ್ನು ಆಕರ್ಷಿಸಲು ವ್ಯಾಪಕವಾದ ಪ್ರಯತ್ನಗಳನ್ನು ಮಾಡುತ್ತವೆ, ಆದರೆ ಹಾಲಿ ಇರುವ ನೌಕರರ ಕೌಶಲವನ್ನು ಬೆಳೆಸುವ ಮತ್ತು ನೌಕರರನ್ನು ಉಳಿಸಿಕೊಳ್ಳುವುದರ ಕಡೆಗೆ ಅತಿ ಕಡಿಮೆ ಸಮಯ ವ್ಯಯ ಮಾಡುತ್ತವೆ. ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ವ್ಯವಸ್ಥೆಯು ಯಾವುದೇ ಒಂದು ವ್ಯವಹಾರವನ್ನು ನಿರ್ವಹಿಸುವ ಕಾರ್ಯವಿಧಾನದ ಭಾಗವಾಗಬೇಕು, ಹಾಗು ಅದನ್ನು ಸಂಸ್ಥೆಯ ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಒಟ್ಟಾರೆಯಾಗಿ ಅನುಷ್ಠಾನಕ್ಕೆ ತರಬೇಕು. ನೌಕರರನ್ನು ಆಕರ್ಷಿಸುವ ಮತ್ತು ಉಳಿಸಕೊಳ್ಳುವ ಪ್ರಕ್ರಿಯೆಯನ್ನು ಕೇವಲ ಮಾನವ ಸಂಪನ್ಮೂಲ ಇಲಾಖೆಗೆ ಮಾತ್ರವೆ ಸೀಮಿತವಾಗಿರಿಸದೆ ಸಂಸ್ಥೆಯ ಎಲ್ಲಾ ಹಂತಗಳಲ್ಲಿಯೂ ಅಳವಡಿಸಿಕೊಳ್ಳಬೇಕು. ವ್ಯವಹಾರ ನಿರ್ವಹಿಸುವ ತಂತ್ರಗಾರಿಕೆಯಲ್ಲಿ ಲೈನ್‌ ಮ್ಯಾನೆಜರ್‌ಗಳು ಅವರ ನಂತರದ ಶ್ರೇಣಿಯ ಸಬಾರ್ಡಿನೆಟ್‌ಗಳಿಗೆ (ಹುದ್ದೆಗಳಿಗೆ) ಅಗತ್ಯವಿರುವ ಕೌಶಲ್ಯಗಳನ್ನು ಬೆಳಸಿಕೊಳ್ಳುವ ಜವಾಬ್ದಾರಿಯನ್ನು ಕೂಡ ಒಳಗೊಂಡಿರಬೇಕು. ಸಂಸ್ಥೆಗಳೊಳಗಿನ ವಿಭಾಗಗಳು ಮಾಹಿತಿಯನ್ನು ಪರಸ್ಪರವಾಗಿ ಮುಕ್ತವಾಗಿ ವಿನಿಮಯ ಮಾಡಿಕೊಳ್ಳಬೇಕು, ಇದರಿಂದಾಗಿ ನೌಕರರಿಗೆ ಸಂಸ್ಥೆಯ ಒಟ್ಟಾರೆ ಉದ್ದೇಶಗಳ ಬಗ್ಗೆ ಅರಿವಾಗುವ ಅವಕಾಶ ಒದಗುತ್ತದೆ. [೪] ನೌಕರರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನ ಕೊಡುವ ಸಂಸ್ಥೆಗಳು ನೌಕರರ ಸಾಮರ್ಥ್ಯವನ್ನು ನಿರ್ವಹಿಸುವ ಸಲುವಾಗಿ ಅನೇಕ ಯೋಚನೆ ಮತ್ತು ಪ್ರಕ್ರಿಯೆಗಳನ್ನು ಒಂದುಗೂಡಿಸುತ್ತಾರೆ. ಅವುಗಳು:

ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ಅನ್ನು HCM (ಹ್ಯೂಮನ್‌ ಕ್ಯಾಪಿಟಲ್‌‌ ಮ್ಯಾನೆಜ್‌ಮೆಂಟ್‌), HRIS (HR ಇನ್‌ಫೆರ್ಮೇಷನ್‌ ಸಿಸ್ಟಂ ) ಅಥವಾ HRMS (HR ಮ್ಯಾನೆಜ್‌ಮೆಂಟ್‌ ಸಿಸ್ಟಂ ), ಮತ್ತು HR ಮಾಡ್ಯೂಲ್ಸ್ ಎಂದು ಕೂಡ ಕರೆಯಲಾಗುತ್ತದೆ.Cite error: Invalid <ref> tag; invalid names, e.g. too many

ಹ್ಯೂಮನ್‌ ಕ್ಯಾಪಿಟಲ್‌ ಮ್ಯಾನೆಜ್‌ಮೆಂಟ್‌[ಬದಲಾಯಿಸಿ]

ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ (ಹ್ಯೂಮನ್‌ ಮಾನೆಜ್‌ಮೆಂಟ್) ಅಳವಡಿಸಿಕೊಂಡಿರುವ ಸಂಸ್ಥೆಗಳು ನೌಕರರನ್ನು ಹೇಗೆ ಹುಡುಕುತ್ತವೆ, ಆಕರ್ಷಿಸುತ್ತವೆ, ಆಯ್ಕೆ ಮಾಡುತ್ತವೆ, ಬೆಳಸುತ್ತವೆ, ಉಳಿಸಿಕೊಳ್ಳುತ್ತವೆ; ಅಲ್ಲದೇ ನೌಕರರನ್ನು ಹೇಗೆ ಸಂಸ್ಥೆಯ ವಿವಿಧ ಶ್ರೇಣಿಗೆ ವರ್ಗಾಯಿಸುತ್ತದೆ ಎಲ್ಲವೂ ಒಂದು ಕಾರ್ಯನಿವರ್ಹಣೆಯ ಕಾರ್ಯತಂತ್ರವಾಗಿದ್ದು ಉದ್ಧೇಶಪೂರ್ವಕವಾಗಿರುತ್ತದೆ. ಈ ವ್ಯವಸ್ಥೆಯನ್ನು ಆಳವಡಿಸಿಕೊಂಡ ಸಂಸ್ಥೆಗಳಲ್ಲಿ ಈ ವ್ಯವಸ್ಥೆಯ ಮೌಲ್ಯಗಳ ಕುರಿತು ನಡೆಸಲಾದ ಅಧ್ಯಯನವು ಈ ಕೆಳಕಂಡ ಪ್ರಮುಖ ಎಕನಾಮಿಕ್‌ (ಆರ್ಥಿಕ)ಏರಿಯಾಗಳಲ್ಲಿ ಉಪಯೋಗಗಳಾಗಿರುವುದಾಗಿ ಸೂಚಿಸುತ್ತದೆ: ಅದಾಯ (ರೆವೆನ್ಯೂ),ಗ್ರಾಹಕ ಸಂತೃಪ್ತಿ(ಕಸ್ಟಮರ್‌ ಸಾಟಿಸ್‌ಫಾಕ್ಷನ್‌), ಗುಣಮಟ್ಟ (ಕ್ವಾಲಿಟಿ), ಉತ್ಪಾದನಾ ಸಾಮರ್ಥ್ಯ (ಪ್ರೊಡೊಕ್ಟಿವಿಟಿ),ವೆಚ್ಚ(ಕಾಸ್ಟ್), ತೆಗೆದುಕೊಳ್ಳುವ ಅವಧಿ (ಸೈಕಲ್‌ ಟೈಮ್‌) ಮತ್ತು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌. Cite error: Invalid <ref> tag; invalid names, e.g. too many ಮಾನವ ಸಂಪನ್ಮೂಲಗಳ ವಿಷಯದಲ್ಲಿ ಹೆಚ್ಚಿನ ಆತ್ಮೀಯತೆಯಿಂದ ವ್ಯವಹರಿಸಬೇಕು, ಎನ್ನುವ ಚಿಂತನೆಯ ಹಿಂದೆ ಹೆಚ್ಚು ಸಾಮರ್ಥ್ಯಶಾಲಿಗಳು ಮತ್ತು ದಕ್ಷ ನೌಕರರನ್ನು ಸೇರಿಸಕೊಳ್ಳುವುದಷ್ಟಕ್ಕೆ ಅಲ್ಲದೆ ಅವರನ್ನು ಉಳಿಸಿಕೊಳ್ಳುವುದಕ್ಕೆ ಕೂಡ ಮಹತ್ವ ನೀಡುತ್ತದೆ.

ಯಾವುದೇ ಸಂಸ್ಥೆಗೆ, ಒಬ್ಬ ವ್ಯಕ್ತಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಬಹಳ ವೆಚ್ಚ ತಗುಲುತ್ತದೆ, ಆದುದರಿಂದ ಕೆಲಸಕ್ಕೆ ಸೇರಿಸಿಕೊಂಡ ವ್ಯಕ್ತಿಗೆ ಅವನ ಕೌಶಲವನ್ನು ಸಕ್ಷಮವಾಗಿ ಬಳಸಿಕೊಳ್ಳುವಂತಹ ಸ್ಥಾನವನ್ನು(ಶ್ರೇಣಿ) ಕೊಡುವುದು ಮುಖ್ಯವಾಗುತ್ತದೆ.  

"ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌" ಎನ್ನುವ ಪದ ವಿವಿಧ ಸಂಸ್ಥೆಗಳಿಗೆ ವಿಭಿನ್ನ ಆರ್ಥಗಳನ್ನು ನೀಡುತ್ತದೆ. ಕೆಲವು ಸಂಸ್ಥೆಗಳಿಗೆ ಇದು ಕೆಲವು ಹೆಚ್ಚು-ಉಪಯುಕ್ತ ವ್ಯಕ್ತಿಗಳನ್ನು ಅಥವಾ "ಪ್ರತಿಭಾಶಾಲಿಗಳನ್ನು" ನಿರ್ವಹಣೆ ಮಾಡುವುದಾಗಿದ್ದರೆ, ಇನ್ನೂ ಕೆಲವು ಸಂಸ್ಥೆಗಳಿಗೆ ಇದು ಬಹುಮಟ್ಟಿಗೆ ಕೌಶಲವು ಹೇಗೆ ನಿರ್ವಹಿಸಲಾಗುತ್ತದೆ ಎನ್ನುವುದರ ಕುರಿತ ಆಗಿದೆ - ಅಂದರೆ ಎಲ್ಲರೂ ಯಾವುದಾದರೂ ಕೌಶಲವನ್ನು ಹೊಂದಿರುತ್ತಾರೆ, ಅದನ್ನು ಗುರುತಿಸಿ ಪ್ರೊತ್ಸಾಹಿಸಬೇಕು ಎನ್ನುವ ಮೂಲಭೂತ ಗುರಿಯಿರುತ್ತದೆ. ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ದೃಷ್ಟಿಕೋನದಿಂದ ನೋಡಿದಾಗ, ನೌಕರರ ಮೌಲ್ಯಮಾಪನ ಎರಡು ಪ್ರಮುಖ ವಿಷಯಗಳನ್ನು ಮಾನದಂಡವನ್ನಾಗಿ ಪರಿಗಣಿಸುತ್ತದೆ, ಅವು: ಕಾರ್ಯನಿರ್ವಹಣೆ ಮತ್ತು ಸಾಮರ್ಥ್ಯ .[೫] ಹಾಲಿ ನೌಕರರ ಒಂದು ನಿರ್ದಿಷ್ಟ ಕೆಲಸ ಕುರಿತಂತೆ ಕಾರ್ಯನಿರ್ವಹಣೆಯನ್ನು ಮಾಪನ ಮಾಡುವುದು, ನೌಕರರ ಉಪಯುಕ್ತತೆಯನ್ನು ಅಳೆಯುವ ಬಹಳ ಉತ್ತಮ ಮಾನದಂಡವಾಗಿದೆ. ಇಷ್ಟಲ್ಲದೆ, ಟ್ಯಾಲೆಂಟ್ ಮ್ಯಾನೆಜ್‌ಮೆಂಟ್‌ ಒಬ್ಬ ನೌಕರನ ಸಾಮರ್ಥ್ಯದ ಮೇಲೆ ಹೆಚ್ಚು ಗಮನಕೊಡುತ್ತದೆ, ಅಂದರೆ ನೌಕರನ ಭವಿಷ್ಯದ ಕಾರ್ಯನಿರ್ವಹಣೆಯು ಆತನ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಹೆಚ್ಚುವರಿ ಜವಾಬ್ದಾರಿಯನ್ನು ನೀಡುವುದರ ಮೇಲೆ ಅವಲಂಬಿತವಾಗಿರುತ್ತದೆ.

ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ನ ಪ್ರಕ್ರಿಯೆಯಲ್ಲಿ ಒಂದು ಸಂಸ್ಥೆ ಆಳವಡಿಸಿಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳೆಂದರೆ: [೬]

  • ಕಾರ್ಯನಿರ್ವಹಣೆಯ ನಿಯಂತ್ರಣ/ಆಡಳಿತ ನಿರ್ವಹಣೆ
  • ನಾಯಕತ್ವ ಗುಣಗಳ ಅಭಿವೃದ್ಧಿ
  • ಅಗತ್ಯವಿರುವ ನೌಕರ ಬಲವನ್ನು ಯೋಜಿಸುವುದು, /ಕೌಶಲಗಳ ಅಂತರವನ್ನು ಗುರುತಿಸುವುದು
  • ಹೊಸಬರನ್ನು ಸೇರಿಸಿಕೊಳ್ಳವುದು (ರಿಕ್ರೂಟ್‌‌ ಮಾಡಿಕೊಳ್ಳುವುದು)

"ಟ್ಯಾಲೆಂಟ್ ಮ್ಯಾನೆಜ್‌ಮೆಂಟ್‌" ಎನ್ನುವ ಪದವು ಸಾಮಾನ್ಯವಾಗಿ ಅರ್ಹತೆ ಅಧಾರದ ಮೇಲೆ ಮಾಡುವ ಮಾನವ ಸಂಪನ್ಮೂಲ ನಿರ್ವಹಣೆಯ ಅಳವಡಿಕೆಗಳ ಜೊತೆ ಸಂಬಂಧ ಹೊಂದಿರುತ್ತದೆ. ಸಾಮಾನ್ಯವಾಗಿ ಒಂದು ಸಂಸ್ಥೆಗೆ ಅಗತ್ಯವಿರುವ ಅರ್ಹತೆ/ಸಾಮರ್ಥ್ಯಗಳ ಹಾಗು ಒಂದು ನಿರ್ದಿಷ್ಟ ಹುದ್ದೆಗೆ ಅಗತ್ಯವಿರುವ ಆರ್ಹತೆ/ಸಾಮರ್ಥ್ಯ ಎರಡನ್ನೂ ಪರಿಗಣಿಸಿ ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಆರ್ಹತೆಯು ಜ್ಞಾನ, ಕೌಶಲ್ಯ, ಅನುಭವ ಮತ್ತು ಒಂದು ವ್ಯಕ್ತಿಗಿರುವ ವಿಶಿಷ್ಟ ಗುಣಗಳನ್ನು(ನಿರ್ದಿಷ್ಟ ನಡವಳಿಕೆಗಳಿಂದ ತಿಳಿಯುತ್ತದೆ)ಒಳಗೊಂಡಿರುತ್ತದೆ. ಅರ್ಹತೆಯನ್ನು ನಿರ್ಣಯಿಸುವ ಹಳೆಯ ಕಾಂಪಿಟೆನ್ಸಿ ಮಾಡಲ್‌ಗಳಲ್ಲಿ ಯಶಸ್ಸನ್ನು ಊಹಿಸುವ ಗುಣಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬಹುದು.(ಉದಾಹರಣೆಗೆ ಶಿಕ್ಷಣ, ಆಧಿಕಾರ-ಅವಧಿ ಹಾಗು ವಿವಿಧತೆಯ ಅನೇಕ ಅಂಶಗಳನ್ನು ಒಂದು ಕೆಲಸದ ಕಾರ್ಯನಿರ್ವಹಣೆಯ ಮಾನದಂಡವಾಗಿ ಪರಿಗಣಿಸುವುದು ಅನೇಕ ದೇಶಗಳಲ್ಲಿ ಕಾನೂನು ಬಾಹಿರವಾದರೆ, ಹಾಗು ಕೆಲವು ಸಂಸ್ಥೆಗಳು ಇದನ್ನು ಅನೈತಿಕ ಎಂದು ಪರಿಗಣಿಸುತ್ತವೆ).

ಟ್ಯಾಲೆಂಟ್‌ ಮಾರ್ಕಟ್‌ಪ್ಲೇಸ್‌[ಬದಲಾಯಿಸಿ]

ಯಾವುದೆ ಸಂಸ್ಥೆ ಅದರ ನೌಕರರ ತರಬೇತಿ ಮತ್ತು ಅಭಿವೃದ್ಧಿಗಾಗಿ ಅಳವಡಿಸಿಕೊಳ್ಳುವ ಕಾರ್ಯತಂತ್ರಗಳಲ್ಲಿ ಟ್ಯಾಲೆಂಟ್‌ ಮಾರ್ಕಟ್‌ಪ್ಲೇಸ್‌ ಕೂಡ ಒಂದು. ಹೆಚ್ಚು ಸಾಮರ್ಥ್ಯಶಾಲಿಗಳಾದ ನೌಕರರು ಅವರಿಗೆ ಸೂಕ್ತವಾದ ನಿರ್ದಿಷ್ಟ ಪ್ರಾಜೆಕ್ಟ್‌(ಕಾರ್ಯಕ್ರಮ) ಮತ್ತು ಅಸೈನ್‌‌ಮೆಂಟ್‌ಗಳನ್ನು(ಕಾರ್ಯಭಾರ) ಆಯ್ಕೆ ಮಾಡಿಕೊಳ್ಳುವ ಆವಕಾಶವಿರುವ ಈ ವ್ಯವಸ್ಥೆಯು ಸಂಸ್ಥೆಗಳಿಗೆ ಹೆಚ್ಚು ಉಪಯುಕ್ತವಾಗಿದೆಯೆಂದು ಕಂಡು ಬಂದಿದೆ. ಒಂದು ಉತ್ಕೃಷ್ಟ ವಿಧಾನವೆಂದರೆ ಉತ್ಪಾದನಾ ಸಾಮರ್ಥ್ಯವು ನೌಕರ ಕೇಂದ್ರಿತವಾಗಿದ್ದು, ಕೆಲಸಗಳನ್ನು ನಿರ್ಣಯಗಳ ಅಧಾರದ ಕೆಲಸಗಳೆಂದು ಸೂಚಿಸುವುದು, ಉದಾಹರಣೆಗೆ ಕೋರ್ಟು ಕಟ್ಟಲೆ, ಕಾನೂನಿನ ವಿಷಯಗಳಲ್ಲಿ ಕಾರ್ಯನಿರ್ವಹಿಸುವ ಒಂದು ಲಾ (ಕಾನೂನು)ಸಂಸ್ಥೆ. ಒಂದು ಇಲಾಖೆಯಲ್ಲಿ ಟ್ಯಾಲೆಂಟ್‌ ಮಾರ್ಕೆಟ್‌ಪ್ಲೇಸ್‌ ಅನ್ನು ಅನುಷ್ಠಾನಗೊಳಿಸುವ ಹಂತ ಒಂದು ಕೆಲಸಕ್ಕೆ ಅನುಗುಣವಾಗಿ ಒಬ್ಬ ವ್ಯಕ್ತಿಯ ನಿರ್ದಿಷ್ಟವಾದ ಅನೇಕ ಕೌಶಲ್ಯಗಳನ್ನು (ಪ್ರಾಜೆಕ್ಟ್‌ ನಿರ್ವಹಿಸುವುದು ಅಥವಾ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ವ್ಯಾಪಕ ಜ್ಞಾನ) ಸೇರಿಸಿ ಅವುಗಳನ್ನು ಉತ್ತೇಜಿಸುವುದಾಗಿರುತ್ತದೆ. ಟ್ಯಾಲೆಂಟ್‌ ಮಾರ್ಕೆಟ್‌ಪ್ಲೇಸ್‌ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಉದಾಹರಣೆ ಎಂದರೆ ಅಮೇರಿಕನ್‌ ಎಕ್ಸ್‌ಪ್ರೆಸ್‌ ಮತ್ತು IBM(ಐ.ಬಿ.ಎಂ).[೭] [೮]

ಟ್ಯಾಲೆಂಟ್‌ ಮ್ಯಾನೆಜ್‌ಮೆಂಟಿನ ಪ್ರಸ್ತುತ ಉಪಯೋಗಗಳು[ಬದಲಾಯಿಸಿ]

ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅನೇಕ ಸಂಸ್ಥೆಗಳು ವೆಚ್ಚವನ್ನು ಕಡಿತಗೊಳಿಸಬೇಕು ಎನ್ನುವ ಮನೋಭಾವ ಹೊಂದಿವೆ. ಇಂತಹ ವಾತಾವರಣವು ಯಾವುದೇ ಸಂಸ್ಥೆ ತನ್ನ ಪ್ರತಿಯೊಬ್ಬ ನೌಕರನ ಸಾಮರ್ಥ್ಯವನ್ನು ಹೆಚ್ಚು ಪ್ರಶಸ್ತವಾಗಿಸುವ ಸಲುವಾಗಿ ಅಳವಡಿಸಿಕೊಳ್ಳಲಾಗುವ ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ವ್ಯವಸ್ಥೆಗೆ ಅನುಕೂಲಕರವಾಗಿದೆ. ಆದರೆ, ಅನೇಕ ಸಂಸ್ಥೆಗಳಲ್ಲಿ ಹ್ಯೂಮನ್‌ ಕ್ಯಾಪಿಟಲ್‌ ಮ್ಯಾನೆಜ್‌‌ಮೆಂಟ್‌ ಎನ್ನುವ ಚಿಂತನೆಯು ಇದೀಗ ತಾನೆ ಬೆಳೆಯುತ್ತಿದೆ. "ವಾಸ್ತವದಲ್ಲಿ, ಕೇವಲ ಶೇಕಡಾ 5ರಷ್ಟು ಸಂಸ್ಥೆಗಳು ಮಾತ್ರ ಟ್ಯಾಲೆಂಟ್‌ ಮ್ಯಾನೆಜ್‌ಮೆಂಟ್‌ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಪ್ರೊಗ್ರಾಮುಗಳನ್ನು ಹಾಲಿಯಾಗಿ ಅನುಷ್ಠಾನಗೊಳಿಸಿವೆ,ಎಂದು ಹೇಳಿವೆ."[೯]

ಅಕರಗಳು[ಬದಲಾಯಿಸಿ]