ಟೈಟಾನ್ ಕ೦ಪನಿ

ವಿಕಿಪೀಡಿಯ ಇಂದ
Jump to navigation Jump to search

ಟೈಟ್ಟಾನ್ ಕಂಪೆನಿ ಲಿ (ಸಹಜವಾಗಿ ಟೈಟಾನ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಟೈಟಾನ್ ಕೈಗಡಿಯಾರಗಳು ಲಿಮಿಟೆಡ್. ಎಂದು ಕರೆಯಲಾಗುತ್ತದೆ) ಗಡಿಯಾರಗಳು, ಒಡವೆಗಳು, ನಿಖರ ಎಂಜಿನಿಯರಿಂಗ್ ಘಟಕಗಳು ಮತ್ತು ಇತರ ಭಾಗಗಳು, ಇವಲ್ಲದೆ ಸನ್ಗ್ಲಾಸ್ಸ್, ತೊಗಲಿನ ಚೀಲಗಳು(ಪರ್ಸ್), ಚೀಲಗಳು , ಪಟ್ಟಿಗಳು, ಸುಗಂಧಳು ಮತ್ತು ಹೆಲ್ಮೆಟ್ ಗಳ ಡಿಸೈನರ್ ಮತ್ತು ತಯಾರಿಸುವ ಒಂದು ಭಾರತೀಯ ಕ೦ಪನಿ. ಇದು ಟಾಟಾ ಗ್ರೂಪ್ ಹಾಗೂ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ ಮದ್ಯೆ ಜಂಟಿ ಉದ್ಯಮವಾಗಿದೆ. ಟೈಟಾನ್ ವಿಶ್ವದ ಐದನೇ ಅತಿದೊಡ್ಡ ಕೈಗಡಿಯಾರ ಉತ್ಪಾದಕ ಮತ್ತು ವಿಶ್ವದಾದ್ಯಂತ ಸುಮಾರು ೩೨ ದೇಶಗಳಿಗೆ ಕೈಗಡಿಯಾರಗಳನ್ನು ರಫ್ತು ಮಡುತ್ತದೆ. ಟೈಟನ್ ನ ಪ್ರಸಿದ್ಧವಾದ ಬ್ರ್ಯಾಂಡ್ ಗಳೆ೦ದರೆ ಫಾಸ್ಟ್ರ್ಯಾಕ್, ಸೊನಾಟಾ, ರಾಗಾ, ಎಡ್ಜ್, ಆಕ್ಟೇನ್, ಕ್ಸೈಲಿಸ್, ನೆಬ್ಯೂಲಾ, ಜೂಪ್, ಟೈಟಾನ್ ಐ +, ತಾನಿಷ್ಕ್, ಗೋಲ್ದ್ ಪ್ಲಸ್, ಜೋಯಾ ಮತ್ತು ಸ್ಕಿನ್ ಸೇರಿವೆ.

ಟೈಟಾನ್ ೧೯೮೪ರಲ್ಲಿ ಬೆ೦ಗಳೂರಿನಲ್ಲಿ ಸ್ಥಾಪಿಸಲಾಯಿತು, ಎಚ್ಎಂಟಿ ಮತ್ತು ಆಲ್ವಿನ್ ನಂತರ ಮೂರನೇ ಭಾರತೀಯ ಗಡಿಯಾರ ತಯಾರಕ ಕ೦ಪನಿಯಾಯಿತು. ಟೈಟಾನ್ ಭಾರತದಾದ್ಯಂತ ಒಂದು ವಿತರಣಾ ಜಾಲ ಸ್ಥಾಪಿಸಲು ೧೯೯೮ ವರೆಗೆ ಟೈಮೆ‍‍‍‍‍ಕ್ಸ್ ಗ್ರೂಪ್ನೊ೦ದಿಗೆ ಜಂಟಿ ಉದ್ಯಮವಾಗಿದಡಿಯಲ್ಲಿ ಅಸ್ತಿತ್ವದಲ್ಲಿತ್ತು, ಈ ಜ೦ಟಿ ಒಪ್ಪ೦ದ ೧೯೯೮ರಲ್ಲಿ ಕೊನೆಗೊ೦ಡಿತು. ಟೈಟಾನ್ ವಿಶ್ವದ ೫ ನೇ ಅತಿದೊಡ್ಡ ಗಡಿಯಾರ ತಯಾರಕ ಕಂಪನಿಯಾಗಿದೆ.

ಟೈಟಾನ್ ಈಗ, ಟೈಟಾನ್ ಕಂಪೆನಿ ಲಿ., ಆಗಿ ಮಾರ್ಪಟ್ಟಿದೆ, ಇದು ಟಾಟಾ ಒಡೆತನದಲ್ಲಿದ್ದು ಮತ್ತು ಅದರಿ೦ದಲೆ ನಿರ್ವಹಿಸಲಾಗುತ್ತದೆ. ಕಂಪನಿಯು, ಗಡಿಯಾರಗಳು ಮತ್ತು ಭಾಗಗಳು, ಆಭರಣಗಳು, ಕನ್ನಡಕಗಳು ಮತ್ತು ನಿಖರ ಎಂಜಿನಿಯರಿಂಗ್ ಗಳ೦ತೆ ೪ ಭಾಗಳಾಗಿ ವಿಭಜನೆಮಾಡಲಾಗಿದೆ. ಇದರಿ೦ದ ಕ೦ಪನಿಯ ನಿರ್ವಹಣೆಯಲ್ಲಿ ಸುಲಭವಾಗುತ್ತದೆ.