ಟೀಮ್ ಇಂಡಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಗಲ್‍ನವರ ಲೂನಾರ್ ಎಕ್ಸ್ X ಮಿಷನ್ ಪ್ರಶಸ್ತಿ ಸ್ಪರ್ಧೆ[ಬದಲಾಯಿಸಿ]

ಅಪೋಲೊ 10ರಿಂದ ಚಂದ್ರನಲ್ಲಿ ಭೂಉದಯ (Apollo 10 earthrise)
  • Google Lunar X Prize mission:
  • ಟೀಮ್ ಇಂಡಸ್ (Team Indus) ಭಾರತದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ ಒಂದು ಲಾಭೋದ್ದೇಶ ಸಂಸ್ಥೆ. ಈ ತಂಡದ ನೇತೃತ್ವವನ್ನು ರಾಹುಲ್ ನಾರಾಯಣ್ ಹೊಂದಿದ್ದಾರೆ, ಇದು ಒಂದು ಐಟಿ ವೃತ್ತಿಪರ ದೆಹಲಿ ಮೂಲದ. ವಿವಿಧ ಹಿನ್ನೆಲೆಯ ವಿಜ್ಞಾನ, ತಂತ್ರಜ್ಞಾನ, ಹಣಕಾಸು ಮತ್ತು ಮಾಧ್ಯಮದ ವೃತ್ತಿಪರರ ತಂಡ. 2007 ವರ್ಷದಲ್ಲಿ “ಗೂಗಲ್ ಚಂದ್ರ (ಲೂನಾರ್) ಎಕ್ಸ್ ಪ್ರಶಸ್ತಿ ಮಿಷನ್” ಘೋಷಿಸಲ್ಪಟ್ಟಿತು. ಇದನ್ನು ಸಾಮಾನ್ಯವಾಗಿ "ಚಂದ್ರ 2.0" ("Moon 2.0") ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು ಗೆಲ್ಲಲು ಭಾರತದ ಈ ಪ್ರಮುಖ ಭಾರತೀಯ ತಂಡ ಸ್ಪರ್ಧೆಯನ್ನು ಒಂದು ಸವಾಲಾಗಿ ಸ್ವೀಕರಿಸಿದೆ.

ನಿಯಮಗಳು[ಬದಲಾಯಿಸಿ]

  • ಭಾಗವಹಿಸುವ ತಂಡಗಳು - ರೋಬೋಟ್ ವಿನ್ಯಾಸ ಮತ್ತು ಚಂದ್ರನ ಮೇಲೆ ರೋಬಾಟ್ ಭೂಸ್ಪರ್ಶ, ರೋಬೋಟ್ ಚಂದ್ರನ ಮೇಲ್ಮೈ ಮೇಲೆ 500 ಮೀಟರ್‍ಗೂ ಹೆಚ್ಚು ಪ್ರಯಾಣ, ಮತ್ತು ಭೂಮಿಗೆ ಪ್ರತಿಕ್ರಿಯೆಯನ್ನು ಕಳುಹಿಸುವ ಈಕ್ರಯೆ ಪೂರ್ಣಗೊಳಿಸುವ ಅಗತ್ಯವಿದೆ. ಸ್ಪರ್ಧೆಯ ಗಡುವು ಡಿಸೆಂಬರ್ 31, 2015. ಭಾರತದ ಸ್ಪರ್ಧಾ ತಂಡ "ಟೀಮ್ ಇಂಡಸ್"- ಅಮೇರಿಕ ಮೌಲ್ಯದ $20 ಮಿಲಿಯನ್ (ಡಾಲರ್) ಗ್ರ್ಯಾಂಡ್ ಪ್ರಶಸ್ತಿ ಮತ್ತು ಹೆಚ್ಚುವರಿ $5 ಮಿಲಿಯನ್ ಬಹುಮಾನವನ್ನು ಪಡೆಯುವರು. 17 ದೇಶಗಳ 29 ತಂಡಗಳ ವಿರುದ್ಧ ಪೈಪೋಟಿ ಮಾಡಬೇಕಿದೆ.
ಸೋವಿಯತ್ ಲುನೊಖೊಡ್ (Lunokhod) ಸ್ವಯಂಚಾಲಿತ ಚಂದ್ರನ ರೋವರ್ ಮಾದರಿ

ಸ್ಪರ್ಧೆಯ ನಿಯಮಗಳು[ಬದಲಾಯಿಸಿ]

  • 1.ಖಾಸಗಿ ಸಂಸ್ಥೆಗಳು ತಾವೇ ಲ್ಯಾಂಡರ್ ಮತ್ತು ರೋವರನ್ನು ಅಭಿವೃದ್ಧಿ ಪಡಿಸಬೇಕು.
  • 2.ರಾಕೆಟ್ ಮೂಲಕ ಲ್ಯಾಂಡರ್ ಅನ್ನು ಉಡಾವಣೆ ಮಾಡಬೇಕು.
  • 3.ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಯಶಸ್ವಿಯಾಗಿ ಇಳಿಯಬೇಕು.
  • 4.ರೋವರ್ ಚಂದ್ರನ ಮೇಲ್ಮೈನಲ್ಲಿ ಕನಿಷ್ಠ 500 ಮೀ. ಚಲಿಸಬೇಕು.
  • 5.ರೋವರ್ ತೆಗೆದ ಹೆಚ್ಚು ಸ್ಪಷ್ಟವಾದ ಚಿತ್ರಗಳು ಮತ್ತು ದೃಶ್ಯಾವಳಿಗಳು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ರವಾನೆ ಆಗಬೇಕು.

ಪ್ರಮುಖ ಸ್ಪರ್ಧಿಗಳು[ಬದಲಾಯಿಸಿ]

  • 1. ಸ್ಪೇಸ್ ಇಲ್ :-ಇಸ್ರೇಲ್.
  • 2.ಮೂನ್ ಎಕ್ಸಪ್ರೆಸ್ : ಅಮೆರಿಕ.
  • 3.ಸಿನರ್ಜಿ ಮೂನ್ : ಜಾಗತಿಕ ಸಂಸ್ಥೆ .
  • 4.ಟೀಂಮ್ ಇಂಡಸ್ : ಭಾರತ

ಕಂಪನಿ ಹೂಡಿಕೆದಾರರು[ಬದಲಾಯಿಸಿ]

  • ಈ ತಂಡ ಸುಬ್ರತಾ ಮಿತ್ರ & ಶೇಖರ್ ಕಿರಾನಿ ಆಕ್ಚೆಲ್ ಪಾರ್ಟ್ನರ್ಸ್, ಶರದ್ ಶರ್ಮಾ, ಮಾಜಿ ಯಾಹೂ ಇಂಡಿಯಾ ಆರ್ & ಡಿ ಮುಖ್ಯಸ್ಥ ವಿವೇಕ್ ರಾಘವನ್ ಯುಐಡಿಎಐ (ಆಧಾರ್ ಯೋಜನೆ), ಪಲ್ಲವ ಶರ್ಮಾ ಮೈಕ್ರೋಸಾಫ್ಟ್, ವಿಶ್ಲೇಷಣೆ ನಿರ್ದೇಶಕ, ಮುಖ್ಯ ಉತ್ಪಾದನಾ ವ್ಯವಸ್ಥಾಪಕ ಸೇರಿದಂತೆ ಹೂಡಿಕೆದಾರರಿಂದ ಸರಣಿ ವಾಣಿಜ್ಯೋದ್ಯಮಿ ಬಾಲ ಪಾರ್ಥಸಾರಥಿ ಮತ್ತು ಏಂಜೆಲ್ ಪ್ರೈಮ್ ಏಂಜೆಲ್ ಹೂಡಿಕೆದಾರ ಗುಂಪಿನ ಭಾಗಿದಾರ, ಸುನಿಲ್ ಕಲ್ರಾ, ಉದ್ಯಮಿ & ಹೂಡಿಕೆದಾರ, ಪಾರಸ್ ಚೋಪ್ರಾ ಮತ್ತು ಪಲ್ಲವ ನದಾನಿ ಇವರು ಡಿಸೆಂಬರ್, 2014 ರಲ್ಲಿ $ 35 ಮಿಲಿಯನ್ ಡಾಲರನ್ನು ಈ ಉದ್ದೇಶ ಹೂಡಿಕೆ ಮಾಡಿದರು [೧]
  • ಜನವರಿ 2015 ರಲ್ಲಿ ತಂಡ ಸಿಂಧೂ ಯಶಸ್ವಿಯಾಗಿ ತಮ್ಮ ಲ್ಯಾಂಡಿಂಗ್ ವ್ಯವಸ್ಥೆಯ ಒಂದು ಪರೀಕ್ಷಾರ್ಥಪ್ರಯೋಗ ಪೂರ್ಣಗೊಳಿಸಿದ ನಂತರ $ 1 ಮಿಲಿಯನ್ ನೀಡಲಾಯಿತು. [3] ಇದು 29 ತಂಡಗಳ ನಡುವೆ ಐದು ತಂಡಗಳಿಗೆ ನಿರ್ದಿಷ್ಟ ಪರೀಕ್ಷಾ ಯಶಸ್ವಿಗೊಳಿಸಿದ್ದಕ್ಕೆ ಲಭಿಸಿವೆ.[೨]

ಟೀಂ ಇಂಡಸ್‍ಗೆ ಇಸ್ರೋ ಸಹಕಾರ[ಬದಲಾಯಿಸಿ]

  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚಂದ್ರಯಾನ–2ಕ್ಕೆ ಸಿದ್ಧತೆ ನಡೆಸಿರುವ ಮಧ್ಯೆಯೇ ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ‘ಟೀಂ ಇಂಡಸ್’ ಚಂದ್ರನ ಮೇಲೆ ತನ್ನ ರೋವರ್‌ ನೌಕೆ ಇಳಿಸಲು ಸಿದ್ಧತೆ ನಡೆಸಿದೆ. ಗೂಗಲ್ ಲೂನಾರ್‌ ಎಕ್ಸ್‌ಪ್ರೈಸ್‌ ಸ್ಪರ್ಧೆಯ ಅಂಗವಾಗಿ ಟೀಂ ಇಂಡಸ್‌ ಈ ಸಾಹಸಕ್ಕೆ ಕೈಹಾಕಿದೆ. ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಸ್‌ ಸ್ಪರ್ಧೆಗೆ ಪ್ರವೇಶ 2010ರಲ್ಲೇ ಮುಗಿದಿದೆ. ಸ್ಪರ್ಧೆಗೆ ಪ್ರವೇಶ ಪಡೆದಿರುವ ಮೊದಲ ನಾಲ್ಕು ತಂಡಗಳಲ್ಲಿ ಟೀಂ ಇಂಡಸ್‌ ನಾಲ್ಕನೆಯದು. ಒಟ್ಟಾರೆ 16 ತಂಡಗಳು ಈ ಸ್ಪರ್ಧೆಗೆ ತಮ್ಮನ್ನು ನೋಂದಾಯಿಸಿಕೊಂಡಿವೆ. ಖಾಸಗಿ ಸಂಸ್ಥೆಗಳಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • 2017ರ ಡಿಸೆಂಬರ್‌ ಅಂತ್ಯದ ವೇಳೆಗೆ ಎಲ್ಲಾ ತಂಡಗಳೂ ತಮ್ಮ ನೌಕೆಗಳನ್ನು ಚಂದ್ರನ ಅಂಗಳದಲ್ಲಿ ಇಳಿಸಿರಬೇಕು. ಸಲಹೆಗಾರರು ಮತ್ತು ಪಾಲುದಾರರ ತಂಡದಲ್ಲಿ ನಂದನ್‌ ನಿಲೇಕಣಿ ಮತ್ತು ರತನ್‌ ಟಾಟಾರಂತಹ ದೈತ್ಯ ಉದ್ಯಮಿಗಳು ಇರುವುದು ನಮ್ಮ ತಂಡಕ್ಕೆ ಧೈರ್ಯ ತುಂಬಿದೆ ಎಂದು ನಾಯಕ ರಾಹುಲ್ ನಾರಾಯಣ್ ಹೇಳುತ್ತಾರೆ.

ಯೋಜನೆಗೆ ತಯಾರಿ[ಬದಲಾಯಿಸಿ]

  • ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಲು ಟೀಂ ಇಂಡಸ್ ಸಂಸ್ಥಾಪಕ ರಾಹುಲ್ ನಾರಾಯಣ್ ಭಾರಿ ಯೋಜನೆ ರೂಪಿಸಿದ್ದಾರೆ. ದೇಶದ ಎಲ್ಲೆಡೆ ತಿರುಗಿ, ಆಗ ತಾನೇ ಪದವಿ ಮುಗಿಸಿದ್ದ 100 ಎಂಜಿನಿಯರ್‌ಗಳನ್ನು ಕಲೆಹಾಕಿದ್ದಾರೆ. ಈ ಹೊಸ ತಂತ್ರಜ್ಞರಿಗೆ ನೆರವು ನೀಡಲು ಇಸ್ರೊದ ನಿವೃತ್ತ ವಿಜ್ಞಾನಿಗಳ ತಂಡ ಕಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಪ್ರಮುಖ ಉದ್ಯಮಿಗಳನ್ನು ತಮ್ಮ ಕಾರ್ಯಾಚರಣೆಗೆ ಸಲಹೆಗಾರರನ್ನಾಗಿ ಹಾಗೂ ಪಾಲುದಾರರನ್ನಾಗಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಸ್ರೊ ಜತೆ ಒಪ್ಪಂದ[ಬದಲಾಯಿಸಿ]

  • ನಿವೃತ್ತ ವಿಜ್ಙಾನಿ ವಿ ಆದಿಮೂರ್ತಿ, ಇಸ್ರೋ ಮಂಗಳ ಕಕ್ಷಾಗಾಮಿ ಮಿಷನ್ ಡಿಸೈನರ್,ಅವರು ಟೀಮ್ ಇಂಡಸ್‍ಗೆ ಬಿಡುಗಡೆ (ಉಡಾವಣೆ) ನೆಟ್ವರ್ಕ್ ಮತ್ತು ನೆಲದ ಸೇವೆಗಳನ್ನು ಒದಗಿಸಲು ಇಸ್ರೊಗೆ (ISRO) ಶಿಫಾರಸು ಮಾಡಿದ್ದಾರೆ. ಯೋಜನೆಯ ಸಿದ್ಧವಾಗಿದೆ, ಮತ್ತು ಮುಂಬರುವ ತಿಂಗಳುಗಳಲ್ಲಿ ಟೀಮ್ ಇಂಡಸ್‌ಗೆ ಉಡಾವಣೆಗೆ ಇಸ್ರೊದ ಸಹಾಯ ಅಗತ್ಯವಿದೆ ಮತ್ತು ಸಾಕಷ್ಟು ಹೆಚ್ಚಿನ ಹಣಕಾಸಿನ ವ್ಯವಸ್ಥೆ ಸಹ ಮಾಡಿಕೊಳ್ಳಬೇಕಿದೆ. ವಿಜ್ಙಾನಿ ವಿ ಆದಿಮೂರ್ತಿಯವರ ಸಲಹೆ ಸಹಕಾರಗಲನ್ನು ಈ ಟಿಮು ತೆಗೆದುಕೊಳ್ಳುತ್ತಿದೆ.
  • ಈಗ ತಮ್ಮ ಲ್ಯಾಂಡರ್‌ ಅನ್ನು ಉಡಾವಣೆ ಮಾಡಲು ಟೀಂ ಇಂಡಸ್‌ ಇಸ್ರೊ ಜತೆ ಒಪ್ಪಂದ ಮಾಡಿಕೊಂಡಿದೆ. ಇಸ್ರೊ ತನ್ನ ಖ್ಯಾತ ಧ್ರುವೀಯ ಉಪಗ್ರಹ ಉಡಾವಣಾ ವಾಹನ– ಪಿಎಸ್‌ಎಲ್‌ವಿಯ ಸೇವೆಯನ್ನು ಟೀಂ ಇಂಡಸ್‌ಗೆ ಒದಗಿಸಲಿದೆ. 2017ರ ಡಿಸೆಂಬರ್‌ 28ರಂದು ಪಿಎಸ್‌ಎಲ್‌ವಿ ಟೀಂ ಇಂಡಸ್‌ನ ನೌಕೆಗಳನ್ನು ಹೊತ್ತು ನಭಕ್ಕೆ ಜಿಗಿಯಲಿದೆ.
  • ಯೋಜನೆಗೆ ಕೊಡುವ ಬಹುಮಾನದ ಹಣ ಈ ಪ್ರಾಜೆಕ್ಟಿನ ಖರ್ಚು ವೆಚ್ಚಕ್ಕೆ ಏನೂ ಸಾಲದೆಂಬುದು ನಿರ್ವಾಕರ ಅಭಿಪ್ರಾಯ. [೩][೪]

ಚಂದ್ರಯಾನಕ್ಕೆ ಸಿದ್ಧತೆ[ಬದಲಾಯಿಸಿ]

  • 17 May, 2017
  • ಈಗ ಖಾಸಗಿ ಸಂಸ್ಥೆಯೊಂದು ಚಂದ್ರನಲ್ಲಿ ನೌಕೆ ಇಳಿಸುವ ಪ್ರಯತ್ನ ನಡೆಸುತ್ತಿದೆ. ಚಂದ್ರನಲ್ಲಿ ನೌಕೆ ಇಳಿಸುವ ನಾಲ್ಕನೇ ದೇಶ ಭಾರತವಾಗಿರಲಿದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. 6 ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಸಂಸ್ಥೆ ಈಗ ಕೊನೆಯ ಹಂತದ ಸಿದ್ಧತೆಗಳಲ್ಲಿ ತೊಡಗಿದೆ. ಕೆಲ ಅಂತರರಾಷ್ಟ್ರೀಯ ವಿಶ್ವ ಸಂಸ್ಥೆಯ ನಿಯಮಗಳ ಅನುಗುಣವಾಗಿಯೇ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಚಂದ್ರನ ‘ಮಾರೆ ಇಂಬ್ರಿಯಮ್‌’ ಎಂಬಲ್ಲಿ ಇರುವ ಒಣಗಿರುವ ಸಮುದ್ರದ ಮೇಲೆ ಈ ರೋವರ್‌ಇಳಿಯಲಿದೆ. ಇದು ಚೀನಾದ ನೌಕೆ ಇಳಿದ ಸ್ಥಳದಿಂದ 200 ಕಿ. ಮೀ ದೂರದಲ್ಲಿ ಇರಲಿದೆ. 85 ಯುವ ತಂತ್ರಜ್ಞರು ಮತ್ತು ‘ಇಸ್ರೊ’ದ 24 ನಿವೃತ್ತ ವಿಜ್ಞಾನಿಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇಸ್ರೊ’ದ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ ಅವರು ಈ ಯೋಜನೆಯ ಮುಖ್ಯ ಸಲಹೆಗಾರರಾಗಿದ್ದಾರೆ. ಶ್ರೀನಿವಾಸ್‌ ಹೆಗ್ಡೆ ಅವರು ಈ ಯೋಜನೆಯ ಮುಖ್ಯಸ್ಥರಾಗಿದ್ದಾರೆ.
  • ಪ್ರತಿ ಸೆಕೆಂಡ್‌ಗೆ 1.3 ಕಿ. ಮೀಟರ್‌ ವೇಗದಲ್ಲಿ ಸಾಗುವ ನೌಕೆ ಶೂನ್ಯ ವೇಗಕ್ಕೆ ತಲುಪಿ ಚಂದ್ರನ ಮೇಲ್ಮೈ ಸ್ಪರ್ಶಿಸುವ ಹಂತವೇ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಕೊನೆಯ ಹಂತದ ಈ 900 ಸೆಕೆಂಡುಗಳ ಪಯಣವೇ ಈ ಯೋಜನೆಯ ಮುಖ್ಯ ಜೀವಾಳ. ಈ ಹಂತದಲ್ಲಿ ನೌಕೆಯ ಮೇಲೆ ವಿಜ್ಞಾನಿಗಳ, ನಿಯಂತ್ರಣ ಕೇಂದ್ರದ ಯಾವುದೇ ಹತೋಟಿ ಇರುವುದಿಲ್ಲ. ನೌಕೆ ಇಳಿಯಲು ಎದುರಾಗುವ 5 ರಿಂದ 10 ಸಾವಿರದಷ್ಟು ಪ್ರತಿಕೂಲತೆಗಳನ್ನು ಜಕ್ಕೂರ್‌ನಲ್ಲಿನ ಕೇಂದ್ರದಲ್ಲಿ ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಇದರಲ್ಲಿ ಕನಿಷ್ಠ 5 ಸಾವಿರದಷ್ಟು ಸಾಧ್ಯತೆಗಳ ಪರೀಕ್ಷೆ ನಡೆಯಲಿವೆ. ಇಂತಹ ನೂರಾರು ತಾಲೀಮುಗಳ ಫಲಿತಾಂಶ ಆಧರಿಸಿ ವಿಜ್ಞಾನಿಗಳು ನೌಕೆಯು ಸುರಕ್ಷಿತವಾಗಿ ಇಳಿಯುವ ಬಗ್ಗೆ ಖಚಿತ ತೀರ್ಮಾನಕ್ಕೆ ಬರಲಿದ್ದಾರೆ. ರೂ.485 ಕೋಟಿ ಟೀಮ್‌ ಇಂಡಸ್‌ನ ಯೋಜನೆಯ ಒಟ್ಟು ವೆಚ್ಚ

ಹಿಂದಿನ ದಾಕಲೆ[ಬದಲಾಯಿಸಿ]

  • 45- ವರ್ಷಗಳ ನಂತರ ಎರಡು ರೋವರ್‌ ಹೊತ್ತ ಬಾಹ್ಯಾಕಾಶ ನೌಕೆ ಚಂದ್ರನತ್ತ
  • 1972 - ಚಂದ್ರನಲ್ಲಿ ಮಾನವನನ್ನು ಇಳಿಸಿದ ಅಮೆರಿಕದ ಪ್ರಯತ್ನ
  • 1976 - ರಷ್ಯಾ ಯತ್ನ
  • 2013 - ಚೀನಾ ಕಾರ್ಯಕ್ರಮ
  • 2017–18- ಖಾಸಗಿ ಸಂಸ್ಥೆಯ ಮೊದಲ ಪ್ರಯತ್ನ. [೫]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. e-news, ibnlive. "ibnlive blog
  2. "The times of India E-newspaper". Archived from the original on 2013-12-13. Retrieved 2016-12-05.
  3. "ಚಂದ್ರನಲ್ಲಿ ನೌಕೆ ಇಳಿಸುವತ್ತ 'ಟೀಂ ಇಂಡಸ್'5 Dec, 2016". Archived from the original on 2016-12-08. Retrieved 2016-12-05.
  4. India's Team Indus goes for the moon shotShilpa Phadnis, Anshul Dhamija & Sujit John | Dec 12, 2014, 02.16PM IST
  5. "ಟೀಮ್ ಇಂಡಸ್‌ ಚಂದ್ರನಿಗೆ ಲಗ್ಗೆ ಯತ್ನ;17 May, 2017". Archived from the original on 2017-05-17. Retrieved 2017-05-17.