ಟಿ. ವಿ. ಶಂಕರನಾರಾಯಣನ್
| ತಿರುವಲಂಗಡು ವೆಂಬು ಅಯ್ಯರ್ ಶಂಕರನಾರಾಯಣನ್ | |
|---|---|
| ಹಿನ್ನೆಲೆ ಮಾಹಿತಿ | |
| ಅಡ್ಡಹೆಸರು | ಟಿ. ವಿ. ಎಸ್ |
| ಜನನ | ೭ ಮಾರ್ಚ್ ೧೯೪೫ ಮಯಿಲಾಡುದೂರು, ಮದರಾಸ್ , ಭಾರತ |
| ಮೂಲಸ್ಥಳ | ಭಾರತ |
| ಮರಣ | ಚೆನೈ |
| ಸಂಗೀತ ಶೈಲಿ | ಕರ್ನಾಟಕ ಶಾಸ್ತ್ರೀಯ ಸಂಗೀತ |
| ವೃತ್ತಿ | ಶಾಸ್ತ್ರೀಯ ಸಂಗೀತಗಾರ |
| ಸಕ್ರಿಯ ವರ್ಷಗಳು | ೧೯೬೮-೨೦೨೨ |
ಟಿ ವಿ ಶಂಕರನಾರಾಯಣನ್ ಅವರು ಒಬ್ಬ ಭಾರತೀಯ ಕರ್ನಾಟಕ ಸಂಗೀತ ಗಾಯಕರು (ದಕ್ಷಿಣ ಭಾರತದ ಶಾಸ್ತ್ರೀಯ ಗಾಯಕ). ಅವರ ಗುರು ಮತ್ತು ಮಾವ ಮಧುರೈ ಮಣಿ ಅಯ್ಯರ್. ಅವರ ಶೈಲಿಯಿಂದ ಬಂದ ಸಂಗೀತಕ್ಕೆ ಹೆಸರುವಾಸಿಯಾಗಿದ್ದಾರೆ. [೧] ೨೦೦೩ರಲ್ಲಿ ಟಿವಿಎಸ್ ಅವರಿಗೆ ಮದ್ರಾಸ್ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಲಾಯಿತು.
ಶಂಕರನಾರಾಯಣನ್ ಅವರು ಆರೋಹಣ ಸ್ವರಗಳನ್ನು ಸುಲಭವಾಗಿ ತಲುಪುವಲ್ಲಿ ವಿಶೇಷವಾಗಿ ಹೆಸರುವಾಸಿಯಾಗಿದ್ದರು.
ಅವರ ಕೆಲವು ಸಂಗೀತ ಶಿಷ್ಯರಲ್ಲಿ ಆರ್. ಸೂರ್ಯಪ್ರಕಾಶ್, ಅವರ ಮಗಳು ಅಮೃತಾ ಶಂಕರನಾರಾಯಣನ್ ಮತ್ತು ಅವರ ಮಗ ಮಹದೇವನ್ ಶಂಕರನಾರಾಯಣನ್ ಸೇರಿದ್ದಾರೆ.
ಆರಂಭಿಕ ಜೀವನ ಮತ್ತು ವೃತ್ತಿಜೀವನ
[ಬದಲಾಯಿಸಿ]

ಶಂಕರನಾರಾಯಣನ್ ಅವರು ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಮೈಲಾಡುತುರೈನಲ್ಲಿ ೭ನೇ ಮಾರ್ಚ್ ೧೯೪೫ರಲ್ಲಿ ಜನಿಸಿದರು. ಅವರ ತಂದೆ ವೆಂಬು ಅಯ್ಯರ್, ಗಾಯಕ ಮಧುರೈ ಮಣಿ ಅಯ್ಯರ್ ಅವರ ಶಿಷ್ಯರಾಗಿದ್ದರು. ಅವರ ತಾಯಿ ಮಣಿ ಅಯ್ಯರ್ ಅವರ ಸಹೋದರಿ. ಒಂಬತ್ತನೇ ವಯಸ್ಸಿನಲ್ಲಿ, ಶಂಕರನಾರಾಯಣನ್ ತಮ್ಮ ಮಾವನವರಾದ ಮಧುರೈ ಮಣಿ ಅಯ್ಯರ್ ಅವರಿಂದ ಸಂಗೀತ ಕಲಿಯಲು ಪ್ರಾರಂಭಿಸಿದರು. ಶಂಕರನಾರಾಯಣನ್ ತಮ್ಮ ತಂದೆಯಿಂದ ಕೂಡ ಸಂಗೀತ ಕಲಿತರು. [೨]
ಅವರು ೧೯೬೮ರಲ್ಲಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕ್ರಮೇಣ ಕರ್ನಾಟಕ ಸಂಗೀತ ಗಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು. ಅವರು ಭಾರತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹಲವಾರು ಆಲ್ಬಮ್‌ಗಳನ್ನು ಹೊಂದಿದ್ದಾರೆ. ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಪ್ರೊಫೈಲ್‌ನಲ್ಲಿ, ಸಂಗೀತ ವಿಮರ್ಶಕ ಸುಬ್ಬುಡು ಅವರು "ಉತ್ತಮ ಗಾಯಕರರು ಕಡಿಮೆಯಾಗುತ್ತಿರುವ ಕರ್ನಾಟಕ ಸಂಗೀತ ಜಗತ್ತಿಗೆ ಶಂಕರನಾರಾಯಣನ್ ನಿಜಕ್ಕೂ ಒಂದು ಆಸ್ತಿ." ಎಂದು ಬರೆದಿದ್ದಾರೆ.
ಅವರು ೨ನೇ ಸೆಪ್ಟೆಂಬರ್ ೨೦೨೨ರಲ್ಲಿ ಮರಣ ಹೊಂದಿದ್ದಾರೆ.
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]- ೧೯೮೧ರಲ್ಲಿ ಭೈರವಿ, ಯು ಎಸ್ ಎ ಅವರಿಂದ ಗಾಯಕ ಸಿಖಾಮಣಿ ಬಿರುದು ಪಡೆದಿದ್ದಾರೆ.
- ೧೯೮೬ರಲ್ಲಿ ಋಷಿಕೇಶದ ಶ್ರೀ ವಿದ್ಯಾಶ್ರಮದ ರಾಮಕೃಷ್ಣಾನಂದ ಸರಸ್ವತಿ ಅವರಿಂದ ಸ್ವರ ಲಯ ರತ್ನಾಕರ ಪ್ರಶಸ್ತಿ ಪಡೆದಿದ್ದಾರೆ.
- ೧೯೮೭ರಲ್ಲಿ ಡಾ.ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಗಾನಕಲಾರತ್ನಂ ಪ್ರಶಸ್ತಿ ಪಡೆದಿದ್ದಾರೆ.
- ೧೯೮೭ರಲ್ಲಿ ಮದ್ರಾಸ್ ನಡಕನಲ್ ಅವರಿಂದ ನಡಕನಲ್ ಪ್ರಶಸ್ತಿ ಪಡೆದಿದ್ದಾರೆ.
- ೧೯೮೧ರಲ್ಲಿ ಟೊರೊಂಟೊದ ಭಾರತಿ ಕಲಾಮಂಡರಂ ಅವರಿಂದ ಇನ್ನಿಸೈ ಪೆರರಸುಪ್ರಶಸ್ತಿ ಪಡೆದಿದ್ದಾರೆ.
- ೧೯೭೫ರಲ್ಲಿ ವಾಸ್ಸರ್ ಕಾಲೇಜಿನಿಂದ ಸಂಗೀತ ರತ್ನಾಕರಪ್ರಶಸ್ತಿ ಪಡೆದಿದ್ದಾರೆ.
- ೧೯೯೭ರಲ್ಲಿ ಸ್ವರ ಯೋಗ ಶಿರೋನ್ಮಣಿ ಯೋಗ ಜೀವನ ಸತ್ಸಂಘದಿಂದ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
- ೧೯೯೦ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಪ್ರಶಸ್ತಿ ಪಡೆದಿದ್ದಾರೆ.
- ೨೦೦೩ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ [೩] ಪ್ರಶಸ್ತಿ ಪಡೆದಿದ್ದಾರೆ.
- ೨೦೦೩ ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದಿದ್ದಾರೆ.
- ೨೦೦೫ರಲ್ಲಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಿಂದ ಸಂಗೀತ ಕಲಾಶಿಖಾಮಣಿ ಪ್ರಶಸ್ತಿ ಪಡೆದಿದ್ದಾರೆ.
- ೨೦೧೨ರಲ್ಲಿ TAPAS ಕಲ್ಚರಲ್ ಫೌಂಡೇಶನ್‌ನಿಂದ ವಿದ್ಯಾ ತಪಸ್ವಿ ಪ್ರಶಸ್ತಿ ಪಡೆದಿದ್ದಾರೆ.
ಚಿತ್ರ ಗ್ಯಾಲರಿ
[ಬದಲಾಯಿಸಿ]ಸಂಗೀತ ಕಚೇರಿಯ ವೇದಿಕೆಗಳು
ಉಲ್ಲೇಖಗಳು
[ಬದಲಾಯಿಸಿ]- ↑ Ramakrishnan, H. (30 ಡಿಸೆಂಬರ್ 2021). "T.V. Sankaranarayan: As zestful as always". The Hindu (in Indian English).
- ↑ "the passing away of Naadakkanal Shri. T S Vembu Iyer". rasikas.org.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 ಜುಲೈ 2015.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ದಿ ಹಿಂದೂ ಪತ್ರಿಕೆಯಿಂದ ಸಂತೋಷದಾಯಕ ಸಂಗೀತ ಪ್ರಯಾಣದಲ್ಲಿ
- ನಲ್ಲಿ T. V. Sankaranarayanan